ಧರ್ಮ ಎಂದರೇನು ? ಸಂಸ್ಕೃತಿ ಎಂದರೇನು? ಸಂಪ್ರದಾಯ ಹಾಗೂ ಸಂಸ್ಕಾರ ಎಂದರೇನು? ಇವುಗಳಲ್ಲಿನ ವ್ಯತ್ಯಾಸವೇನು?

ಜೀವನ ಮೌಲ್ಯಗಳ ಒಟ್ಟು ಸಾರವೇ ಧರ್ಮ ವಾಗಿದೆ. ಈ ಮೌಲ್ಯಗಳ ಪ್ರಚಾರಕ್ಕಾಗಿ ಪ್ರತಿಪಾದನೆಗಾಗಿ ಹಾಗೂ ರಕ್ಷಣೆಗಾಗಿ ಸುಲಭವಾಗಿ ಎಲ್ಲ ವಿಧದ ಜನರಿಗೂ ಅರಿವು ಮೂಡಿಸುವುದಕ್ಕಾಗಿ ಆಚರಿಸಿಕೊಂಡು ಬಂದ ನಡವಳಿಕೆಗಳೇ ಸಂಸ್ಕೃತಿ ಯಾಗಿದೆ. ಕಾಲಕ್ಕೆ ತಕ್ಕಂತೆ ಮೌಲ್ಯಗಳ ರಕ್ಷಣೆಗಾಗಿ ರೂಪಿಸಿಕೊಂಡು ಬಂದ ಕಾನೂನು ಕಟ್ಟಳೆಗಳೇ ಧರ್ಮ ಶಾಸ್ತ್ರಗಳಾಗಿವೆ. ಧರ್ಮವು ಆತ್ಮ ವಾದರೆ ಸಂಸ್ಕೃತಿಯನ್ನು ದೇಹ ಎನ್ನಬಹುದು. ಧರ್ಮ ಶಾಸ್ತ್ರಗಳನ್ನು ಸಂವಿಧಾನಕ್ಕೆ ಹೋಲಿಸಬಹುದು. ಹೀಗೆ ಪರಿಶುದ್ಧ ಆತ್ಮ ಹಾಗೂ ಬಲಿಷ್ಠ ದೇಹ ಇರುವವನು ಹೇಗೆ ಮಾನವ ಶ್ರೇಷ್ಠನೆನಿಸಿ ಕೊಳ್ಳುತ್ತಾನೋ ಹಾಗೆಯೇ ಶ್ರೇಷ್ಠ ಮೌಲ್ಯ ಹಾಗೂ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ ದೇಶವು ವಿಶ್ವ ಶ್ರೇಷ್ಠ ವೆನಿಸಿ ಕೊಳ್ಳುತ್ತದೆ. ಇಂತಹ ಉದಾತ್ತ ಧರ್ಮ ಹಾಗೂ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ ಜಗತ್ತಿನ ಏಕೈಕ ದೇಶ ಭಾರತವಾಗಿದೆ. ಇಂತಹ ಧರ್ಮ ಹಿಂದೂ ಧರ್ಮ ವಾಗಿದ್ದರೆ ಇಂತಹ ದೇಶ ಹಿಂದೂಸ್ಥಾನ ಅಥವಾ ಭಾರತ ದೇಶವಾಗಿದೆ ಹಾಗೂ ಇದನ್ನು ಹೇಳಿಕೊಳ್ಳಲು ಹಿಂದೂ ಗಳು ಹೆಮ್ಮೆ ಪಡಬೇಕಾಗಿದೆ. ಹಿಂದೂ ಗಳಾಗಿ ಹುಟ್ಟಿದ್ದಕ್ಕೆ ಹಾಗೂ ಇಂದೂ ಹಿಂದೂಸಂಸ್ಕೃತಿಯ ಪ್ರತಿನಿಧಿಗಳಾಗಿ ನಾವು ಬದುಕುತ್ತಿರುವುದು ಭಗವಂತನ ದಯೆಯಿಂದಲೇ ಸಾಧ್ಯವಾಗಿದೆ. ಭಾತದ ಪ್ರಾಚೀನ ಜ್ಞಾನರಾಶಿ ಶ್ರೀಮಂತಿಕೆ ಹಾಗೂ ಸಾಂಸ್ಕೃತಿಕ ಶ್ರೇಷ್ಠತೆ ವಿಶ್ವದ ಬೇರಾವ ನೆಲದಲ್ಲಿಯೂ ಕಾಣಸಿಗುವುದಿಲ್ಲ. ಇದು ನಮ್ಮ ದೇಶದ ಹಾಗೂ ಧರ್ಮದ ಹೆಮ್ಮೆಯ ದ್ಯೋತಕವಾಗಿದೆ.

ಧರ್ಮವು ವಿಶ್ವದ ಎಲ್ಲಾಕಡೆಯಲ್ಲಿಯೂ ಒಂದೇ ರೂಪದಲ್ಲಿ ಅನ್ವಯವಾಗುತ್ತದೆ. ಅಂದರೆ ಧರ್ಮದಲ್ಲಿನ ಜೀವನ ಮೌಲ್ಯಗಳು ವಿಶ್ವವ್ಯಾಪಿ, ಧರ್ಮಕ್ಕೆ ಜನನ ಮರಣಗಳಿಲ್ಲ, ಆದಿ ಅಂತ್ಯ ಎಂಬುದಿಲ್ಲ, ಆದರೆ ಸಂಸ್ಕೃತಿಯು ಸ್ಥಳ, ಜನರ ಸ್ವಭಾವ, ಅಲ್ಲಿನ ಭೌಗೋಳಿಕ ಸನ್ನಿವೇಶ, ಪರಿಸರ, ಮುಂತಾದವುಗಳ ಪ್ರಭಾವದಿಂದ ಭಿನ್ನವಾಗಿರಬಹುದು ಆದರೂ ಆ ಸಂಸ್ಕೃತಿಯು ಪ್ರತಿಪಾದಿಸುವ ಸಾಮಾನ್ಯ ಸಾಮಾಜಿಕ ಧಾರ್ಮಿಕ ಸಕಾರಾತ್ಮಕ ಮೌಲ್ಯಗಳ ಒಟ್ಟು ಸಾರವೇ ಧರ್ಮವಾಗಿರುತ್ತದೆ. ಯಾವುದೇ ಜನಾಂಗದ ಸಂಸ್ಕೃತಿ ಧರ್ಮವನ್ನು ಪೋಷಿಸುವಂತಿರಬೇಕೇ ಹೊರತು ಧರ್ಮವನ್ನು ನಾಶಮಾಡುವಂತಿರಬಾರದು, ಹಾಗೆಯೇ ಸನಾತನ ಧರ್ಮದ ಆಚರಣೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವಿವಿಧ ಆಯಾಮಗಳಲ್ಲಿ ವಿವಿಧ ಸಂಸ್ಕೃತಿಗಳಲ್ಲಿ ಭಿನ್ನ ವಿಭಿನ್ನ ವಾಗಿದ್ದರೂ ಎಲ್ಲದರ ತತ್ವ ಹಾಗೂ ಮೌಲ್ಯ ಉದಾತ್ತವಾಗಿದೆ ಮತ್ತು ಅಖಂಡವಾಗಿದೆ. ಇದೇ ಧರ್ಮ ಹಾಗೂ ಸಂಸ್ಕೃತಿಯ ಬೆಸೆತವಾಗಿದೆ ವಾಗಿದೆ. ಇಲ್ಲಿ ಸಾಮಾನ್ಯ ಲಕ್ಷಣ ಗಳೆಂದರೆ ಎಲ್ಲಾವಿಧದ ಆಚರಣೆಯಲ್ಲಿಯೂ ದೇವರ ಅಸ್ತಿತ್ವ ನಂಬಲಾಗುತ್ತದೆ. ವಿಭಿನ್ನ ರೂಪದಲ್ಲಿ ವಿಭಿನ್ನ ನಾಮದಲ್ಲಿ ಆರಾಧಿಸಿದರೂ ಇಡೀ ದೇಶದ ಜನರು ಭಗವಂತನಿಗೆ ಕೃತಜ್ಞರಾಗಿದ್ದಾರೆ. ಇದು ಮಾನಸಿಕ ಏಕತೆ ಯಾಗಿದೆ. ಪೂಜೆ, ಭಜನೆ, ಧ್ಯಾನ, ಉತ್ಸವ, ನೈವೇದ್ಯ, ತೀರ್ಥ, ಯಾತ್ರೆ ಮುಂತಾದುವು ಎಲ್ಲಾ ಕಡೆ ಇದೆ ಇವೆಲ್ಲವೂ ಭಗವಂತನಿಗೆ ಸಮರ್ಪಿತವಾಗುತ್ತದೆ. ಗಂಗೆ ಇಡೀ ದೇಶಕ್ಕೆ ಪವಿತ್ರವಾಗಿದ್ದು ಪೂಜನೀಯವಾಗಿದೆ, ಹಿಮಾಲಯ ಇಡೀ ದೇಶಕ್ಕೆ ಪವಿತ್ರವಾಗಿದೆ. ಗೋವು ಇಡೀ ದೇಶಕ್ಕೆ ಪವಿತ್ರವಾಗಿದೆ , ಶಂಖ ಶಾಲಿಗ್ರಾಮಗಳು ಎಲ್ಲರಿಗೂ ಪವಿತ್ರವಾಗಿದೆ, ಸಿಂಧೂರ ಮಾಂಗಲ್ಯ ಇಡೀ ಭಾರತಕ್ಕೆ ಪವಿತ್ರವಾಗಿದೆ. ತುಳಸಿ ಗಿಡ, ಅಶ್ವಥ್ಥ ವೃಕ್ಷ ಇಡೀ ದೇಶಕ್ಕೆ ಪವಿತ್ರವಾಗಿದೆ ಆರತಿ , ಘಂಟೆ, ಮುಂತಾದ ಪೂಜಾ ಪರಿಕರ ಎಲ್ಲಾಕಡೆ ಸಾಮಾನ್ಯವಾಗಿದೆ. ಇದೇ ಸಂಸ್ಕೃತಿಯ ಬೆಸುಗೆ ಯಾಗಿದೆ. ಯಾವುದೇ ಜಾಗದಲ್ಲಿಯೂ ಇದು ಭಾರತದಲ್ಲಿ ಪೂಜ್ಯವೇ ಆಗಿದೆ, ಇದೆಲ್ಲವೂ ಹಿಂದೂ ಧರ್ಮದ ಸಂಸ್ಕೃತಿಯಾಗಿದೆ. ಹಿಂದೂ ಧರ್ಮಒಂದೇ ಮಾನವತೆಯನ್ನು ಸರ್ವರಲ್ಲಿಯೂ ಸಾರುವ ಕಾಣುವ ಏಕೈಕ ವಿಶ್ವಧರ್ಮವಾಗಿದೆ ಸತ್ಯ, ಅಹಿಂಸೆ, ಜ್ಞಾನ, ದಯೆ, ಶಕ್ತಿ, ಭಕ್ತಿ, ದಾನ, ಕರುಣೆ, ಪ್ರೀತಿ, ತ್ಯಾಗ, ಯೋಗ ಇವೆಲ್ಲವೂ ಹಿಂದೂ ಧರ್ಮದ ಮರ್ಮವಾಗಿದೆ.

ಸನಾತನ ಹಿಂದೂ ಧರ್ಮಾಚರಣೆಯ (ಸಂಸ್ಕೃತಿಯ) ಮುಖ್ಯ ಲಕ್ಷಣಗಳು

ಸನಾತನ ಧರ್ಮದ ಮೂಲಬೇರು ವೇದಗಳಾಗಿವೆ ಇವು ಯಾವುದೇ ಜಾತಿ ಮತ ಪಂಥ ದೇಶಕ್ಕೆ ಸೀಮಿತವಾಗಿರದೆ ಸಮಸ್ತ ಮಾನವ ಕೋಟಿಗೆ ಜ್ಞಾನ ನೀಡುವ ಅಪೂರ್ವ ಪ್ರಾಚೀನ ಸಾಹಿತ್ಯವಾಗಿದೆ. ವೇದ ವೆಂದರೆ ಜ್ಞಾನ ಎಂಬುದಾಗಿಯೇ ಅರ್ಥವಾಗಿದೆ. ಅತ್ಯಂತ ಪರಿಶುದ್ದ ಜ್ಞಾನವನ್ನು ಸಮಗ್ರ ಜಗತ್ತಿಗೆ ನೀಡುವುದೇ ವೇದದ ಉದ್ದೇಶವಾಗಿದೆ. ಇದು ಯಾವುದೇ ಮತಾಚಾರ್ಯರಿಂದ ಬೋಧಿಸಲ್ಪಟ್ಟಿದ್ದಲ್ಲ ವೇದ ಜ್ಞಾನವು ಸಾವಿರಾರು ವರ್ಷಗಳಿಂದ ಬಂದ ನೂರಾರು ಮಹರ್ಷಿಗಳ ತಪಸ್ಸಿನ ಜ್ಞಾನದ ಫಲವಾಗಿದೆ. ವೇದದ ಹಿನ್ನೆಲೆಯಲ್ಲಿ ಧರ್ಮಾದಾರಿತ ಹಿಂದು ಸಂಸ್ಕೃತಿಯ ಲಕ್ಷಣಗಳನ್ನು ನೋಡೋಣ

1) ದೇವರನ್ನು ನಂಬುವುದು. 2) ಪುನರ್ಜನ್ಮದಲ್ಲಿ ನಂಬಿಕೆ. 3) ಕರ್ಮ ಸಿದ್ದಾಂತದಲ್ಲಿ ನಂಬಿಕೆ. 4) ಪ್ರಕೃತಿ ಆರಾಧನೆ 5) ಮೋಕ್ಷಸಾಧನೆಗಾಗಿ ಪ್ರಯತ್ನ

  1. ಈ ಜಗತ್ತು ಒಬ್ಬ ಸೃಷ್ಟಿಕರ್ತನಿಂದ ನಿರ್ಮಿಸಲ್ಪಟ್ಟಿದೆ. ಆತನು ಸರ್ವ ವ್ಯಾಪಿಯೂ ಸರ್ವ ಶಕ್ತನೂ ನಿರಾಕಾರನೂ ಆಗಿದ್ದಾನೆ. ಅವನ ನಿಯಮದಂತೆ ಜಗತ್ತು ನಡೆಯುತ್ತಿದೆ. ಈತನನ್ನು ಈಶ್ವರ , ಭಗವಂತ, ಪರಮಾತ್ಮ , ಪರಭ್ರಹ್ಮ , ಮುಂತಾಗಿ ಕರೆಯುತ್ತೇವೆ.
  2. ಮಾನವನು ವಿಶ್ವದ ಜೀವರಾಶಿ ಗಳಲ್ಲಿ ಶ್ರೇಷ್ಟನಾಗಿದ್ದಾನೆ ಅವನಿಗೆ ಜ್ಞಾನ ಬುದ್ದಿ ತಿಳುವಳಿಕೆ ಇರುವುದರಿಂದ ಅವನಿಗೆ ಸರಿ ತಪ್ಪು ಪಾಪ ಪುಣ್ಯಗಳ ಪ್ರಜ್ಞೆ ಇದೆ ಅದರಂತೆ ಸಮಾಜದಲ್ಲಿ ಸಜ್ಜನರಾದ ಯಾರಿಗೂ ನೋವುಂಟಾಗದಂತೆ ಸಮಾಜಕ್ಕೆ ಪ್ರಕೃತಿಗೆ ಆದರ್ಷವಾಗಿ ಆತನು ಬದುಕುವುದೇ ಧರ್ಮವಾಗಿದೆ.
  3. ಹಿಂದುಗಳಿಗೆ ಪುನರ್ಜನ್ಮದಲ್ಲಿ ನಂಬಿಕೆ ಇದೆ. ತಾನು ಪಡುವ ಕಷ್ಟಗಳನ್ನು ಹಿಂದಿನ ಜನ್ಮದ ತಾನು ಮಾಡಿದ ಪಾಪದ ಫಲವೆಂದೂ ಇಂದು ಮಾಡುವ ಪುಣ್ಯ ಮುಂದಿನ ಜನ್ಮದ ಸುಖಕ್ಕೆ ಕಾರಣವೆಂದೂ ನಂಬುತ್ತಾನೆ. ಆದುದರಿಂದ ಉತ್ತಮವಾದ ಬದುಕನ್ನು ಬದುಕಲು ಪ್ರಯತ್ನಿಸುತ್ತಾನೆ. ಇದನ್ನೆ ಕರ್ಮ ಸಿದ್ದಾಂತ ಎನ್ನುತ್ತೇವೆ. ಕರ್ಮ ಫಲದಿಂದ ಬಿಡುಗಡೆಯೇ ಮೋಕ್ಷ.
  4. ಜೀವನದ ಅಂತಿಮ ಗುರಿ ಮೋಕ್ಷವಾಗಿದೆ – ಮೋಕ್ಷ ಎಂದರೆ ಬಿಡುಗಡೆ ಅಂದರೆ ಐಹಿಕ ಸುಖದುಃಖ ಗಳಿಂದ ಬಿಡುಗಡೆ ಹೊಂದುವುದೇ ಮೋಕ್ಷವಾಗಿದೆ. ಧರ್ಮದಲ್ಲಿ ಜೀವನ ನಡೆಸಿ ಯಾವುದೇ ಮೋಹ ಆಸೆಗಳಿಲ್ಲದೆ ಸಂಪೂರ್ಣ ಭಗವಂತನನ್ನೇ ಸೇರಬೇಕೆಂಬ ಮನೋಭಾವದಲ್ಲಿ ಸಾಧನೆಮಾಡಿ ಅಂತಿಮವಾಗಿ ಜೀವ ತ್ಯಾಗಮಾಡುವವನು ಭಗವಂತನಲ್ಲಿ ಐಕ್ಯನಾಗುತ್ತಾನೆ ಇಲ್ಲವೇ ಅವನ ಅನುಗ್ರಹಕ್ಕೆ ಪಾತ್ರನಾಗಿ ಜೀವ್ನಮುಕ್ತ ನಾಗುತ್ತಾನೆ ಅಥವಾ ಈ ಹುಟ್ಟು ಸಾವುಗಳ ಬಂಧನದಿಂದ ಬಿಡುಗಡೆ ಹೊಂದುತ್ತಾನೆ ಎಂಬುದೇ ಮೋಕ್ಷದ ನಂಬಿಕೆ. ಅಂತಹವರು ನಿರಂತರ ಸಂತೋಶ ಲೋಕವನ್ನು ಪಡಯುವುದನ್ನೇ ಸದ್ಗತಿ ಎನ್ನುತ್ತಾರೆ.
  5. ಪ್ರಕೃತಿ ಭಗವಂತನ ದೇಹವಾಗಿದೆ. ಭಗವಂತ ನಿರಾಕಾರ ಚೈತನ್ಯ ಸ್ವರೂಪಿ, ಅದೃಷ್ಯರೂಪಿ ಭಗವಂತನು ವಿಶ್ವದ ಆತ್ಮ ಆದರೆ ಪ್ರಕೃತಿ ಭಗವಂತನ ಸಾಕಾರ ರೂಪ, ಗೋಚರರೂಪ, ವಿಶ್ವವು ಭಗವಂತನ ದೇಹವಾಗಿದೆ, ಅಣು ಅಣುವಿನಲ್ಲಿಯೂ ಭಗವಂತನಿದ್ದಾನೆ ಎನ್ನುವುದು ಹಿಂದೂ ಧರ್ಮದ ಸಾರವಾಗಿದೆ, ಇದನ್ನು ಸ್ಪಷ್ಠವಾಗಿ ಅರಿತಿರುವ ಸನಾತನ ಋಷಿಮುನಿಗಳು ನಿರಾಕಾರ ಹಾಗೂ ಸಾಕಾರ ಎರಡೂ ಬಗೆಯ ಆರಾಧನೆಯನ್ನೂ ಮಾಡುತ್ತಾ ಸನಾತನ ಸಂಸ್ಕೃತಿಯನ್ನು ಶ್ರೀಮಂತ ಗೊಳಿಸಿದ್ದಾರೆ, ತಮ್ಮ ಕಲ್ಪನೆಗಳಿಂದಾಗಿ ಭಗವಂತನಿಗೆ ರೂಪಕೊಟ್ಟು ಆತನನ್ನು ಸಾಕಾರ ರೂಪದಲ್ಲಿ ಪೂಜಿಸಿ ನೆಮ್ಮದಿಯನ್ನು ಆನಂದವನ್ನು ಮನಶ್ಯಾಂತಿಯನ್ನು ಹೊಂದುತ್ತಿದ್ದಾರೆ, ಸಕಾರಾತ್ಮಕ ಸದ್ಗುಣವಂತರನ್ನು ಭಗವಂತನ ಅವತಾರವೆಂದು ಪೂಜಿಸಿ ಗೌರವಿಸಿಕೊಂಡು ಬಂದಿದ್ದಾರೆ, ಅಂತಹ ಸದ್ಗುಣ ಸಂಪನ್ನರನ್ನು ಅವರ ಬದುಕನ್ನು ಆದರ್ಷವಾಗಿಸಿಕೊಂಡು ಅನುಸರಿಸಿ ಅಂತೆಯೇ ಬದುಕುವ ಪ್ರಯತ್ನ ಮಾಡಿ ಗುಣಪೂರ್ಣರಾಗಿ ವಿಶ್ವಮಾನ್ಯರಾಗಿದ್ದಾರೆ, ಇಂತಹ ಶ್ರೇಷ್ಠ ವ್ಯಕ್ತಿಗಳ ಜೀವನ ಚರಿತ್ರೆ ಹಾಗೂ ಬದುಕಿನ ಘಟನೆಗಳಿಂದ ಕೂಡಿದ ಕಥೆಗಳಿಂದ ಮಕ್ಕಳನ್ನು ಗುಣವಂತರನ್ನಾಗಿಯೂ ನೀತಿವಂತರನ್ನಾಗಿಯೂ ಬೆಳೆಸಿ ಸಜ್ಜನ ಪ್ರಜೆಗಳಾಗಿ ರೂಪಿಸುತ್ತಾ ಈ ದೇಶವನ್ನು ನಿರ್ಮಿಸಿದ ಕೀರ್ತಿ ನಮ್ಮ ಹಿರಿಯರದ್ದಾಗಿದೆ, ಮುಸಲ್ಮಾನ ಹಾಗೂ ಕ್ರೈಸ್ಥ ಆಕ್ರಮಣಕಾರರು ನಮ್ಮ ಸಂಸ್ಕೃತಿಯ ನಾಶಕ್ಕೆ ಬಹುವಾಗಿ ಪ್ರಯತ್ನಿಸಿ ಬಹಳಷ್ಠು ಹಾನಿ ಉಂಟು ಮಾಡಿದ್ದಾರೆ, ಇಂತಹ ಉಗ್ರಗಾಮಿಗಳಿಂದ ಸಂಸ್ಕೃತಿ ಹಂತಕರಿಂದ ಹಿಂದು ಸಂಸ್ಕೃತಿಯನ್ನು ರಕ್ಷಿಸಲು ನಾವಿಂದು ಜಾಗ್ರತರಾಗಿ ಕಾರ್ಯಪ್ರವೃತ್ತರಾಗುವ ಅನಿವಾರ್ಯತೆ ಇದೆ.
  6. ಸಂಸ್ಕೃತಿ ಎಂದರೆ ಏನು? ಹಿಂದೂ ಸಂಸ್ಕೃತಿಯ ಮೂಲ ಸ್ವರೂಪವೇನು?

ಧರ್ಮವು ಬದುಕುವ ಶ್ರೇಷ್ಟ ವಿಧಾನವಾದರೆ ಸಂಸ್ಕೃತಿಯು ಧರ್ಮದ ರಕ್ಷಣೆಗಾಗಿ ಧರ್ಮದ ಮರ್ಮದ ತಿಳುವಳಿಕೆಗಾಗಿ ಜಾಗ್ರತೆಗಾಗಿ ಹಾಗೂ ಧರ್ಮ ಸೂಕ್ಷ್ಮಗಳ ಸರಳ ಪ್ರಚಾರಕ್ಕಾಗಿ ಹಾಗೂ ಸುಭಧ್ರ ಅಸ್ಥಿತ್ವಕ್ಕಾಗಿ ಆಯಾ ಕಾಲ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ಸಮಾಜದಲ್ಲಿ ಅಳವಡಿಸಿಕೊಂಡ ಆಚಾರ ವಿಚಾರಗಳಾಗಿವೆ ಇವುಗಳನ್ನು ಸಂಸ್ಕೃತಿ ಎಂದು ಕರೆಯಲಾಗಿದೆ. ಧರ್ಮವು ಎಲ್ಲಾಕಡೆಯೂ ಏಕರೀತಿಯ ಮಾನದಂಡವನ್ನೇ ಹೊಂದಿದ್ದರೂ ಸಂಸ್ಕೃತಿಯು ಜನರಿಂದ ಜನರಿಗೆ ಜಾಗದಿಂದ ಜಾಗಕ್ಕೆ ಅವರವರ ಸ್ವಭಾವ ಜೀವನ ಪದ್ದತಿ ಬೌಗೋಳಿಕ ಹಿನ್ನಲೆ ಜ್ಞಾನ ಪರಿಸರ ಮುಂತಾದುವುಗಳ ಆಧಾರದ ಮೇಲೆ ಭಿನ್ನತೆಯನ್ನು ಹೊಂದಿದೆ, ಆದರೂ ಇವೆಲ್ಲಾ ಸಂಸ್ಕೃತಿಗಳ ಅಂತರಾತ್ಮ ಹಾಗೂ ಗುರಿ ಉದ್ದೇಶ ಒಂದೇ ಆಗಿದೆ. ಭಾರತೀಯ (ಹಿಂದೂ) ಸಂಸ್ಕೃತಿಯಲ್ಲಿ ಪ್ರಮುಖ ಅಂಶಗಳೆಲ್ಲಾ ಏಕತೆಯನ್ನು ಹೊಂದಿದ್ದು ಪೂರಕ ಅಂಶಗಳು ಪ್ರಾಕೃತಿಕ ಭಿನ್ನತೆಯನ್ನು ಹೊಂದಿವೆ, ಆದರೂ ಇವಾವುವೂ ಮೂಲ  ಉದ್ದೇಶಕ್ಕೆ ವಿರುದ್ಧವಾಗಿ ಇಲ್ಲ ಅಧರ್ಮವನ್ನು ಪ್ರೋತ್ಸಾಹಿಸುವುದಿಲ್ಲ. ಧರ್ಮದ ಉಳಿವಿಗಾಗಿ ರೂಪುಗೊಂಡ ಆಚಾರ ವಿಚಾರಗಳೇ ಸಂಸ್ಕೃತಿಯಾಗಿದೆ. ಸಂಸ್ಕೃತಿಯು ಬಾಹ್ಯಾಚರಣೆಗೆ ಸಂಬಂಧಿಸಿದ್ದಾದರೆ ಅದರ ಅಂತರಾತ್ಮ ಅಥವಾ ಆತ್ಮಸಾಕ್ಷಿ ಧರ್ಮವಾಗಿದೆ. ಹಿಂದೂ ಧರ್ಮ ಶಾಸ್ತ್ರದಲ್ಲಿ ಹದಿನಾರು ಸಂಸ್ಕಾರಗಳನ್ನು ಹೇಳಿದ್ದಾರೆ ಅವುಗಳನ್ನು ಶೋಢಷ ಸಂಸ್ಕಾರಗಳು ಎನ್ನುತ್ತಾರೆ, ಇವು ಮನುಷ್ಯನ ಬದುಕನ್ನು ಅರ್ಥಪೂರ್ಣವಾಗಿ ರೂಪಿಸಲು ಬಹಳಷ್ಟು ಸಹಕಾರಿಯಾಗಿವೆ

ಧರ್ಮ ಹಾಗೂ ಸಂಸ್ಕೃತಿಗೆ ಇರುವ ವ್ಯತ್ಯಾಸವೇನು?

ಧರ್ಮವನ್ನು ಆತ್ಮ ಎನ್ನಬಹುದಾಗಿದ್ದರೆ ಸಂಸ್ಕೃತಿಯನ್ನು ದೇಹ ಎನ್ನಬಹುದು. ಆತ್ಮಕ್ಕೆ ಹುಟ್ಟು ಸಾವುಗಳಿಲ್ಲ ಆತ್ಮವು ಬದಲಾಗುವುದಿಲ್ಲ ಅದು ನಿತ್ಯ ಚಿರಂತನ ಆದರೆ ಆತ್ಮದ ಅಸ್ಥಿತ್ವದ ಅರಿವಿಗೆ ದೇಹವು ಅಗತ್ಯವೇ ಆಗಿದೆ. ದೇಹವು ಆತ್ಮದ ಅಸ್ಥಿತ್ವಕ್ಕೆ ಒಂದು ಸ್ಥಳವನ್ನು ಕಲ್ಪಿಸುತ್ತದೆ. ದೇಹವಿಲ್ಲದ ಆತ್ಮಕ್ಕೆ ಯಾವುದೇ ಮಹತ್ವ ಇಲ್ಲವಾಗಿದೆ ಆತ್ಮ ದೇಹದಹೊರತಾಗೀ ಏನೂಮಾಡಲಾರದು ಅದರ ಅಸ್ಥಿತ್ವವನ್ನು ಪ್ರಚುರ ಪಡಿಸಲು ದೇಹ ಬೇಕೇ ಬೇಕು ಹಾಗೆಯೇ ಧರ್ಮದ ಅಸ್ಥಿತ್ವಕ್ಕೆ ಸಂಸ್ಕೃತಿಯೂ ಅನಿವಾರ್ಯವಾಗಿದೆ. ಪೂರಕವಾಗಿದೆ. ಉತ್ತಮ ದೇಹ ಪಡೆದ ಆತ್ಮಕ್ಕೆ ಸಾಧನೆಮಾಡಲು ಹೆಚ್ಚು ಅನುಕೂಲತೆಗಳಿದ್ದರೆ ದುರ್ಬಲ ದೇಹ ಪಡೆದ ಆತ್ಮಕ್ಕೆ ಅಷ್ಟೇ ಅನಾನುಕೂಲತೆಗಳಿರುತ್ತದೆ. ಎರಡು ಆತ್ಮಗಳ ಉದ್ದೇಶ ಸಾಮರ್ಥ್ಯ ಒಂದೇ ಆಗಿದ್ದರೂ ಅವು ಧರಿಸಿದ ದೇಹದ ಭಿನ್ನತೆಯಿಂದ ಒಂದು ಇನ್ನೊಂದಕ್ಕಿಂತ ದುರ್ಬಲವಾಗಿಯೋ ವಿಕಾರವಾಗಿಯೂ ವಿಕೃತವಾಗಿಯೋ ಗುರುತಿಸಿ ಕೊಳ್ಳುತ್ತದೆ. ಹಾಗೆಯೇ ಬದುಕಿನಲ್ಲಿ ಧರ್ಮಾಚರಣೆಗೆ ನಮ್ಮ ಸಂಸ್ಕೃತಿಯೇ ಪೂರಕವಾಗಿರುತ್ತದೆ ಉತ್ತಮ ಸಂಸ್ಕೃತಿಯಿಂದ ಉತ್ತಮ ಧರ್ಮಾಚರಣೆಯೂ ಕೆಟ್ಟ ಸಂಸ್ಕೃತಿ ಸಂಸ್ಕಾರದಿಂದ ಕನಿಷ್ಠ ಧರ್ಮವೂ ಆಚರಿಸಲ್ಪಡುತ್ತದೆ. ಹೀಗೆ ಉತ್ಕೃಷ್ಠ ಧರ್ಮಾಚರಣೆಗೆ ಪೂರಕವಾಗಿರುವ ಶ್ರೀಮಂತ ಸಂಸ್ಕೃತಿ ಭಾರತೀಯ ಸನಾತನ ಸಂಸ್ಕೃತಿಯಾಗಿದೆ. ಹಾಗೂ ಇದು ವಿಶ್ವಮಾನ್ಯವಾಗಿದೆ. ವಿದೇಶಿಯರ ಆಕ್ರಮಣ ದುರ್ಮತಗಳ ಪ್ರಭಾವ ಹಾಗೂ ಅನಿಷ್ಟ ವಿದೇಶೀ ಸಂಸ್ಕೃತಿಗಳ ಪ್ರಭಾವದಿಂದ ಹಿಂದೂ ಸಂಸ್ಕೃತಿ ಇಂದು ಕಲುಷಿತಗೊಂಡಿದ್ದು ವಿಕೃತವಾಗಿದೆ. ಸಮಾಜ ಅನೈತಿಕತೆಯತ್ತ ಜಾರುತ್ತಿದೆ ಅದರಿಂದ ಹೊರಬರಲು ನಮ್ಮ ಸನಾತನ ಶ್ರೇಷ್ಠ ಸಂಸ್ಕೃತಿಯನ್ನು ಸ್ವಾಭಿಮಾನದಿಂದ ಅಪ್ಪಿಕೊಳ್ಳುವ ಕಾಲ ಈಗ ಬಂದಿದೆ. ವಿದೇಶೀ ಮತಗಳ ಸಂಸ್ಕೃತಿಯು ರೋಗಿಷ್ಟ ದೇಹದಂತಿದ್ದು ಅದು ಸಮಾಜದ ಸ್ವಾಸ್ತ್ಯಯವನ್ನು ಹಾಳುಗೆಡವುದನ್ನು ನಾವು ಇಂದು ಸಮಾಜದಲ್ಲಿ ನೋಡಬಹುದಾಗಿದೆ.

. ಧರ್ಮ ಹಾಗೂ ಸಂಸ್ಕೃತಿಯ ನಡುವಿನ ವ್ಯತ್ಯಾಸ ಹಿಗೂ ತಿಳಿಯಬಹುದು

ಬಹುದೇವತಾರಾಧನೆ ಮೂರ್ತಿಪೂಜೆ ಪ್ರಕೃತಿ ಪೂಜೆ ಇವುಗಳು ಹಿಂದೂ ಧರ್ಮದ ಸಂಸ್ಕೃತಿಯಾಗಿದೆ. ವೇದ ಉಪನಿಷತ್ತುಗಳು ಧರ್ಮದ ತಿರುಳಾದರೆ ನಮ್ಮ ಪುರಾಣಗಳು ಸಂಸ್ಕೃತಿಯ ತಿರುಳಾಗಿದೆ ಧರ್ಮವನ್ನು ಅರಿಯಲು ವೇದ ಉಪನಿಷತ್ತು ಬ್ರಹ್ಮಸೂತ್ರಗಳನ್ನು ತಿಳಿಯಬೇಕು. ಅಧ್ಯಯನ ಮಾಡಬೇಕು. ಸಂಸ್ಕೃತಿಯನ್ನು ಅರಿಯಲು ಪುರಾಣಗಳು ಹಾಗೂ ಇತಿಹಾಸಗಳು ರಾಮಾಯಣ ಮಹಾಭಾರತದಂತಹ ಮಹಾ ಕಾವ್ಯಗಳು ಸಹಕಾರಿಯಾಗುತ್ತವೆ. ಧರ್ಮ ಜೀವವಾದರೆ ಸಂಸ್ಕೃತಿ ದೇಹವಾಗಿದೆ. ಧರ್ಮ ಅಂತರಂಗದ ತಿರುಳಾಗಿದ್ದು ಆತ್ಮಸಾಕ್ಷಿಗೆ ಪ್ರಾಮುಖ್ಯತೆ ಕೊಡುವ  ಜ್ಞಾನ ಪ್ರಧಾನ ಅಂಶವಾಗಿದ್ದು ಇಡೀಜೀವನದಲ್ಲಿ ನಾವು ಬದುಕಬೇಕಾದ ನೀತಿಯನ್ನು ತಿಳಿಸುತ್ತದೆ. ಆದರೆ ಸಂಸ್ಕೃತಿಯು ಬಾಹ್ಯ ಆಚರಣೆಯಾಗಿದ್ದು ಮನಸ್ಸಿನ ನೋವಿಗೆ ಹತಾಶೆಗೆ ಬೇಸರಕ್ಕೆ ತಾತ್ಕಾಲಿಕ ಮುದನೀಡುವ ರಂಜನೀಯ ಆಚರಣೆಗಳಾಗಿವೆ. ಹಾಗೂ ಇವು ಧಾರ್ಮಿಕ ಆಸಕ್ತಿಯೆಡೆಗೆ ಶ್ರದ್ಧೆಯೆಡೆಗೆ ಜಿಜ್ಞಾಸೆ ಎಡೆಗೆ ಪ್ರಾಥಮಿಕವಾಗಿ ಮನಸ್ಸನ್ನು ಪ್ರೇರೇಪಿಸುವ ಶ್ರಧ್ಧಾ ತಾಣಗಳಾಗಿವೆ. ಇಂತಹ ಶ್ರಧ್ಧಾಕೇಂದ್ರಗಳಿಂದ ಪ್ರಭಾವಿತನಾಗಿ ಮನುಷ್ಯ ಧರ್ಮವನ್ನು ಅರಿಯುವ ಪ್ರಯತ್ನಕ್ಕೆ ಮುಂದಾಗುವುದು ಸಂಸ್ಕೃತಿ ಗಳ ಮೂಲ ಉದ್ದೇಶವಾಗಿದೆ. ಸಂಸ್ಕೃತಿಯೇ ಧರ್ಮದ ಜೀವಾಳವಾಗಿದೆ. ಎಲ್ಲಿ ಸಂಸ್ಕೃತಿ ವಿಕಾರವಾಗಿದೆಯೋ ಅಲ್ಲೆಲ್ಲಾ ಅಸಭ್ಯತೆ ಕ್ರೌರ್ಯ ಹಾಗೂ ಅಧರ್ಮ ನೆಲೆನಿಂತಿದೆ. ಇದಕ್ಕೆ ವಿದೇಶೀ ಅನಿಷ್ಠ ಮತಗಳ ಜೀವನ ಪದ್ದತಿಗಳೇ ಸಾಕ್ಷಿ. ಇಂದು ದುರ್ದೈವ ವಶಾತ್ ಭಾರತ ದೇಶ ಹಾಗೂ ಶ್ರೇಷ್ಠ ಹಿಂದೂ ಧರ್ಮ, ಭೋಗ ಮತ ಹಾಗೂ ಅಸುರ ಮತಾನುಯಾಯಿಗಳ ದಾಳಿಯಿಂದ ಎಂಟುನೂರು ವರುಷಗಳಿಗೂ ಹೆಚ್ಚು ದಾಸ್ಯದಲ್ಲಿ ಬದುಕುವ ದುರ್ದೆಶೆಗೆ ಬಂದುದರಿಂದ ಕ್ಲಿಷ್ಠಕರವಾದ ಸಾಧನೆಯ ಅಗತ್ಯ ಇರುವ ಧರ್ಮಶಾಸ್ತ್ರಗಳ ಅಧ್ಯಯನಗಳಿಗೆ ಸೂಕ್ತ ರಾಜಮನ್ನಣೆ ದೊರೆಯದೆ ಆಚರಣೆಗೆ ಸುಲಭ ಸಾದ್ಯವಾದ ಸಂಸ್ಕೃತಿಗಳೇ ವೈಭವೀಕರಣ ಗೊಂಡು ಸಂಸ್ಕೃತಿಯನ್ನೇ ಜನ ಧರ್ಮ ಎನ್ನಲು ಆರಂಭಿಸಿ ಅವಾಂತರ ಮಾಡಿಕೊಂಡು ಸಮಾಜದಲ್ಲಿ ಗೊಂದಲ ಏರ್ಪಟ್ಟಿದೆ. ಬಹುಸಂಖ್ಯಾತ ಹಿಂದುಗಳಿಗೆ ಇತರ ಮತಗಳಲ್ಲಿರುವ ಹೆಚ್ಚಿನ ಜನರಿಗೆ ಧರ್ಮದ ತಿಳುವಳಿಕೆ ಇಲ್ಲ. ತಿಳಿದಕೆಲವರೂ ಸತ್ಯವನ್ನು ಹೇಳುತ್ತಿಲ್ಲ. ಧಾರ್ಮಿಕ ಶ್ರಧ್ಧಾಕೇಂದ್ರಗಳು ಇಂದು ಮತಪ್ರಚಾರಕರ ವ್ಯಾವಹಾರಿಕ  ಕೇಂದ್ರಗಳಾಗಿದ್ದು ಪ್ರಾಮಾಣಿಕ ಧರ್ಮಪ್ರಚಾರ ನಿಂತು ಹೋಗಿದೆ. ದೇವರು ದೇವಸ್ಥಾನಗಳು ವ್ಯಾಪಾರೀಕೇಂದ್ರಗಳಾಗಿವೆ. ಇವುಗಳು ಸಂಸ್ಕೃತಿಯನ್ನೇ ವೈಭವೀಕರಿಸಿ ಧರ್ಮವನ್ನು ಅವನತಿಗೆ ದೂಡಿ ಜನರನ್ನು ತಪ್ಪುಹಾದಿಗೆ ಎಳೆಯುತ್ತಿವೆ. ಇಂದು ಪುನಃ ನಿಜವಾದ ಧರ್ಮದ ಪ್ರಚಾರ ಅರ್ಥಾತ್ ಜ್ಞಾನದ ಪ್ರಚಾರ ಅಗತ್ಯವಾಗಿದೆ ಹಾಗೂ ಅವುಗಳು ದೇವಸ್ಥಾನಗಲ್ಲಿ ನಡೆಯಬೇಕಿದೆ. ಇಂದು ದೇವಸ್ಥಾನಗಳು ಕುತಂತ್ರಿ ಹಿಂದೂವಿರೋಧಿ ಜಾತ್ಯಾತೀತ ಎನ್ನುವ ಡೋಂಗಿ ರಾಜಕೀಯದ ಕೈಯಲ್ಲಿ ನರಳುತ್ತಿದ್ದು ಹಿಂದೂ ಧರ್ಮವನ್ನು ಹೊಸಕಿ ಹಾಕುವ ಪ್ರಯತ್ನ ಷಡ್ಯಂತ್ರ ಭೋಗ ಹಾಗೂ ಅಸುರ ಮತದವರಪ್ರಬಾವದಿಂದ ನಡೆಯುತ್ತಿದೆ ಆದುದರಿಂದ ನಾವು ನಿಜವಾದ ಪೂರ್ವಾಗ್ರಹ ಇಲ್ಲದ ನಿಸ್ವಾರ್ಥ ಧರ್ಮ ಪ್ರಚಾರಕರನ್ನು ಬೇಳೆಸಬೇಕಿದೆ ಹಾಗೂ ಸಂಸ್ಕೃತಿ ಹಾಗೂ ಧರ್ಮಕ್ಕೆ ಸಮನ್ವಯತೆ ತರಬೇಕಿದೆ ಸಂಸ್ಕೃತಿಗಳು ಇಂದು ಅನರ್ಥವಾಗಿ ಅರ್ಥ  ಅರಿಯದೆ ಆಚರಿಸುವ ಅಜ್ಞಾನೀ ಸಮಾಜ ಸೃಷ್ಠಿಯಾಗಿದೆ ಇಂತಹ ಸಮಾಜಕ್ಕೆ ಮಾರ್ಗದರ್ಷನ ಕೊಡಬೇಕಿದೆ.

ಸಂಪ್ರದಾಯ ಎಂದರೇನು?

ಅಜ್ಞಾನದಿಂದ ಆಚರಿಸಿಕೊಂಡು ಬಂದ ಸಂಸ್ಕೃತಿಯೇ ಸಂಪ್ರದಾಯವಾಗಿದೆ, ಅರ್ಥ ತಿಳಿಯದೆ ಹಿಂದಿನವರಿಂದ ನಡೆದುಬಂದ ಶಾಸ್ತ್ರದ ಅಂಧಾನುಕರಣೆಯನ್ನು ಸಂಪ್ರದಾಯ ಎನ್ನಲಾಗುತ್ತದೆ, ಮಾಡುವ ಕ್ರಿಯೆ ಅರ್ಥ ಅರಿತುಮಾಡಿದರೆ ಅದು ಶಾಸ್ತ್ರ ಸಂಸ್ಕಾರ.  ಸಂಸ್ಕಾರ ದಿಂದ ಬಂದ ಸಂಪ್ರದಾಯ ನಂಬಿಕೆ ಎನ್ನಬಹುದು,  ಅರ್ಥ ಅರಿಯದೆ ಹಿಂದಿನವರನ್ನು ಅನುಸರಿಸಿ, ಅನುಕರಿಸಿ ಕೊಂಡು ಬಂದಿದ್ದರೆ ಅದು ಸಂಪ್ರದಾಯ ಎನಿಸಿಕೊಳ್ಳುತ್ತದೆ ಸಂಪ್ರದಾಯವು ಅದರ ಮಹತ್ವ ತಿಳಿಯುವವರೆಗೂ ಮೂಢ ನಂಬಿಕೆ ಅಥವಾ ಮುಗ್ಧ ನಂಬಿಕೆ ಯಾಗಿರುತ್ತದೆ, ಇಂತಹ ಸಂಪ್ರದಾಯಗಳು ಬೇರೆಯ ಸಜ್ಜನರ ಮನಸ್ಸನ್ನು ನೋಯಿಸುವಂತಿದ್ದರೆ, ಆಚರಣೆಗೆ ಅಸಂಭದ್ಧವಾಗಿದ್ದರೆ, ಅಪಾಯಕಾರಿಯಾಗಿದ್ದರೆ, ಹಿಂಸೆಯಿಂದ ಕೂಡಿದ್ದರೆ, ಇವುಗಳನ್ನು ಇಂದಿನ ಕಾಲಕ್ಕೆ ಸರಿಯಾಗಿ ಪರಿಷ್ಕರಣೆ ಮಾಡಿಕೊಳ್ಳುವುದಕ್ಕೆ ಹಿಂಜರಿಯ ಬಾರದು.

  1. ಸಂಸ್ಕಾರ ಎಂದರೆ ಏನು?

ಧರ್ಮ ಸಂರಕ್ಷಣೆಗಾಗಿ ತಂದೆತಾಯಿಗಳಿಂದ  ಮಕ್ಕಳಿಗೆ ನೀಡುವ ಅಥವಾ ಕಲಿಸುವ ಅಥವಾ ವಿನಿಮಯ ಮಾಡುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಭ್ಯತೆಯ ಶಿಷ್ಟಾಚಾರದ ಶಿಕ್ಷಣವೇ ಸಂಸ್ಕಾರ ವಾಗಿದೆ. ಸುಸಂಸ್ಕೃತಿಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಹಸ್ತಾಂತರಿಸುವ ಪ್ರಕ್ರಿಯೆಯೇ ಸಂಸ್ಕಾರ ವಾಗಿದೆ, ಒಬ್ಬ ಉತ್ತಮ ಪ್ರಜೆಯಾಗಲು ಉತ್ತಮ ಸಂಸ್ಕಾರದ ಅವಷ್ಯಕತೆ ಇದೆ. ಉತ್ತಮ ಸಂಸ್ಕಾರ ಹೊಂದಿದವನು ಉತ್ತಮ ವ್ಯಕ್ತಿಯಾಗಿಯೂ ಉತ್ತಮ ಸಂಸ್ಕಾರ ಸಿಗದವನು ಕೆಟ್ಟ ಪ್ರಜೆಯಾಗಿಯೂ ಸಮಾಜದಲ್ಲಿ ಬೆಳೆಯುತ್ತಾರೆ. ಈ ದೃಷ್ಟಿಯಿಂದಲೇ ಅಹಿಂದು ಮತಗಳು ಇಂದು ವಿಶ್ವವ್ಯಾಪೀ ಅನಾಚಾರ ಕೊಲೆ ಯುಧ್ಧ ಭಯೋತ್ಪಾದನೆ ಮಾಡುತ್ತಿರುವುದನ್ನು ನಾವು ಸಮಾಜದಲ್ಲಿ ನೋಡಬಹುದಾಗಿದೆ. ಇವರಿಗೆ ಅವರ ಮತದಲ್ಲಿರುವ ಸಂಸ್ಕಾರ ಹೀನತೆಯೇ ಇಂತಹ ಅನಿಷ್ಠ ಆಚರಣೆಗೆ ಕಾರಣ ವಾಗಿದೆ. ಆದುದರಿಂದ ಹಿಂದೂ ಧರ್ಮದ ಸಂಸ್ಕಾರ ಸಂಸ್ಕೃತಿ ಇಂದು ಜಗತ್ತಿನ ಶಾಂತಿಗೆ ಅನಿವಾರ್ಯವೂ ಅಗತ್ಯವೂ ಆಗಿದ್ದು ವಿಶ್ವ ಶಾಂತಿಗೆ ಭಾರತವೊಂದೇ ಉತ್ತರ ನೀಡುವ ಆಶಾಕಿರಣ ವಾಗಿದೆ ಹಿಂದುತ್ವ ವಿಶ್ವ ವ್ಯಾಪಿಯಾಗ ಬೇಕಿದೆ. ಇಂದಿನ ಯುವಜನತೆ ಹೆತ್ತವರ ಅಜ್ಞಾನ ಹಾಗೂ ಆಲಸ್ಯದಿಂದ ಪಾಶ್ಚಾತ್ಯ ವಿಕೃತಿಗಳತ್ತ ಆಕರ್ಷಿತರಾಗಿ ನಮ್ಮ ಸಂಸ್ಕೃತಿಯಿಂದ ದೂರವಾಗುತ್ತಾ ಜೀವನದಲ್ಲಿ ಅಧಃಪತನ ಹೊಂದುತ್ತಿರುವುದನ್ನು ನಾವು ನೋಡಬಹುದಾಗಿದೆ. ಆದುದರಿಂದ ಸಂಸ್ಕೃತಿಯಬಗ್ಗೆ ಅಭಿಮಾನ ತಾಳುವ ಸಂಸ್ಕೃತಿಯನ್ನು ಉಳಿಸುವ ಆಚರಿಸುವ ಅವಶ್ಯಕತೆ ಇಂದು ಹಿಂದಿಗಿಂತಲೂ ಹೆಚ್ಚಾಗಿ ಹಿಂದುಗಳಿಗೆ ಅವಶ್ಯವಾಗಿದೆ. ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿ ಉತ್ತಮ ಸಂಸ್ಕಾರನೀಡುವುದು ಹೆತ್ತವರ ಪ್ರಮುಖ ಕರ್ತವ್ಯ ವಾಗಿದೆ. ಹುಟ್ಟಿನಿಂದ ಮನುಷ್ಯನು ಪಶುರೂಪಿಯಾಗಿರುತ್ತಾನೆ ಸಂಸ್ಕಾರದಿಂದ ಮನುಷ್ಯನಾಗಿ ಸಾಧನೆಯಿಂದ ಮಹಾತ್ಮನಾಗಲು ಸಾಧ್ಯವಿದೆ, ಮನುಷ್ಯನ ಉನ್ನತಿಗೆ ಸಂಸ್ಕಾರ ಅತ್ಯಂತ ಮುಖ್ಯವಾಗಿದೆ,  ಸಂಸ್ಕಾರದ ವ್ಯತ್ಯಾಸದಿಂದ ಒಂದೇತಾಯಿಯ ಮಕ್ಕಳಲ್ಲಿ ವಿಭಿನ್ನ ವ್ಯಕ್ತಿತ್ವ ಉಂಟಾಗುವುದಕ್ಕೆ ಎರಡು ಗಿಣಿಯ ಕಥೆಯನ್ನು ಪಂಚತಂತ್ರ ಹೇಳುತ್ತದೆ, ಒಂದು ಕಟುಕನ ಮನೆಯಲ್ಲಿಯೂ ಒಂದು ಸಾಧುವಿನ ಆಶ್ರಮದಲ್ಲಿಯೂ ಬೆಳೆಯುವ ಎರಡು ಗಿಣಿ ಮರಿಗಳು ಅಥಿತಿ ಬಂದಾಗ ಹೇಗೆ ಮಾತಾಡುತ್ತವೆಂಬುದು ಸಂಸ್ಕಾರದ ಪ್ರಭಾವದ ಸ್ಪಷ್ಠ ಉದಾಹರಣೆ ಯಾಗಿದೆ, ಆಶ್ರಮದ ಗಿಣಿ ಬನ್ನಿ ಕುಳಿತುಕೊಳ್ಳಿ ಹಾಲು ಕುಡಿಯಿರಿ ಎಂದರೆ ಕಟುಕನ ಗಿಣಿ  ಹಿಡಿಯಿರಿ, ಕಟ್ಟಿ ಹಾಕಿ, ಕೊಲ್ಲಿ ಎಂಬುದಾಗಿ ಮಾತಾಡುತ್ತದೆ,  ಹಿಂದೂ ಸಂಸ್ಕೃತಿಯಲ್ಲಿ ಮನುಷ್ಯನಿಗೆ ಹದಿನಾರು ಸಂಸ್ಕಾರಗಳನ್ನು ಹೇಳಿದ್ದಾರೆ. ಇದು ಕ್ರಮಬದ್ಧವಾಗಿ ನಡೆಯಬೇಕಾದ ಷೋಡಶ ಸಂಸ್ಕಾರಗಳಾಗಿವೆ.

  • ಶ್ರೀಜಿ

.