ಧರ್ಮಕ್ಕೆ ವಿಶಾಲವಾದ ಅನಂತ ವಾದ ಅರ್ಥ ಇದೆ. ಅದರಲ್ಲಿ ಕೆಲವು ನಾವು ತಿಳಿಯುವ ಪ್ರಯತ್ನ ಮಾಡೋಣ
ಧರ್ಮ ಎನ್ನುವುದು ಒಂದು ಶ್ರೇಷ್ಟ ಜೀವನ ವಿಧಾನ ವಾಗಿದೆ. ಅದರ ಮೂಲ ನೆಲೆ ನಮ್ಮ ಪವಿತ್ರ ಹಿಂದೂಸ್ಥಾನ (ಭಾರತ ದೇಶ). ವಿಶ್ವದಲ್ಲಿಯೇ ಅತೀಪ್ರಾಚೀನ ನಾಗರಿಕತೆ ಭಾರತೀಯ ನಾಗರಿಕತೆ. ವಿಶ್ವದಲ್ಲಿಯೇ ಅತೀಪ್ರಾಚೀನ ಸುಸಂಸ್ಕೃತ ಜನ ವಾಸಿಸಿದ ನೆಲ ಭಾರತ, ವಿಶ್ವದಲ್ಲಿಯೇ ಅತೀ ಪ್ರಾಚೀನ ಸಾಹಿತ್ಯ ವೇದಗಳು, ವಿಶ್ವದಲ್ಲಿಯೇ ಅತೀ ಪ್ರಾಚೀನ ವೈಜ್ಞಾನಿಕ ಜ್ಞಾನ ಭಂಡಾರದ ಭಾಷಾ ಕಣಜ ಸಂಸ್ಕೃತ. ಇಂದಿನ ಕಂಪ್ಯೂಟರ್ ಗಳಿಗೆ ಅತ್ಯಂತ ಸೂಕ್ತ ಭಾಷೆ ಎಂಬುದಾಗಿ ಇಂದು ಅಮೇರಿಕಾ ಶೋಧಿಸಿ ಘೋಷಿಸಿದ ಭಾಷೆ ಸಂಸ್ಕೃತ. ಜಗತ್ತಿಗೆ ಜ್ಞಾನ , ಆರೋಗ್ಯ, ರಾಜಕೀಯ , ಅರ್ಥಶಾಸ್ತ್ರ, ಯುಧ್ಧಕಲೆ, ಗಣಿತ ಭೂಗೋಳ , ಬಾಹ್ಯಾಕಾಶ ಸಂಶೋಧನೆ, ಎಲ್ಲವನ್ನೂ ಬೋಧೀಸಿದ ದೇಶ ಭಾರತ , ಹಾಗೂ ಹಿಂದೂ ಸಂಸ್ಕೃತಿ, ಸಾವಿರಾರು ವರ್ಷಗಳ ಹಿಂದೆ ಇಂದಿನ ಅನ್ಯ ಮತಗಳ ಜನರು ಕಾಡುಮನುಷ್ಯರಂತೆ ಬದುಕುತ್ತಿದ್ದಾಗ ವಿಶ್ವ ಆಳಿದ, ವಿಶ್ವ ಬೆಳಗಿದ, ವಿಶ್ವಕ್ಕೆ ಜ್ಞಾನ ನೀಡಿದ ದೇಶ ಭಾರತ. ಹಾಗೂ ಇಲ್ಲಿನ ಹಿಂದೂಧರ್ಮ, ನೆಲ ಜಲ ವಾಯುಗಳಲ್ಲಿ ಮೊದಲು ಸಂಚರಿಸಿದ ಮಾನವರು ಹಿಂದೂಗಳು, ದೂರ ದರ್ಷನ, ದೂರ ಶ್ರವಣ, ದೂರಗಮನ , ವನ್ನು ಜಗತ್ತಿಗೆ ತೋರಿಸಿದವರು ಭಾರತೀಯರು. ಯೋಗ ಸಾಧನೆಯಿಂದ ಸಾವಿರಾರು ವರುಷ ಬದುಕುವ ಕಲೆ ಅರಿತವರು ಭಾರತೀಯರು, ಶ್ರೇಷ್ಟ ಜೀವನ ಎಂದರೆ ಏನು ? ಮನುಷ್ಯ ಹೇಗೆ ಬದುಕಬೇಕು , ರಾಜ ಹೇಗೆ ರಾಜ್ಯ ಆಳಬೇಕು, ಕ್ಷತ್ರಿಯನ ಗುಣಧರ್ಮ ಹೇಗಿರಬೇಕೆಂದು , ವಿಶ್ವಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟವರು. ಬಾಳಿಬದುಕಿದವರು ಭಾರತೀಯರು. ದೇವರೇ ಜನ್ಮತಳೆದ ಅವತಾರ ವೆತ್ತಿದ ಜಗತ್ತಿನ ಒಂದೇ ಒಂದು ಭೂಮಿ ಇದ್ದರೆ ಅದು ಭಾರತ. ವಿಶ್ವಗುರು ಭಾರತ , ಜ್ಞಾನ ದೀಪ ಭಾರತ, ಶೌರ್ಯ ಪರಾಕ್ರಮಗಳ ದೇಶ ಭಾರತ, ಧರ್ಮರಾಜ್ಯ ಭಾರತ, ಇಂತಹ ಭಾರತನೆಲವೇ ವಿಶ್ವ ಧರ್ಮದ ನೆಲೆವೀಡು. ಜಗತ್ತಿನಲ್ಲಿರುವ ಶ್ರೇಷ್ಠ ವಾದ ಒಂದೇ ಒಂದು ಧರ್ಮ ಸನಾತನ ಹಿಂದೂ ಧರ್ಮ ಅದರ ಮಾತೃಭೂಮಿ ಭಾರತ. ನಾನು ಹಿಂದು ಗುರುತಿಸಿಕಪಳ್ಳಲು ಹೆಮ್ಮೆಪಡೋಣ. ಹಿಂದೂ ಎನ್ನುವುದು ಶ್ರೇಷ್ಠಜೀವನ ವಿಧಾನ ಆ ದಾರಿಯಲ್ಲಿ ನಾವು ಬದುಕೋಣ ನಡೆಯೋಣ ಸಂಘಟಿತರಾಗೋಣ. ನಾವೆಲ್ಲಾ ಒಂದು ನಾವೆಲ್ಲಾ ಹಿಂಧು ಎನ್ನುವುದು ನಮ್ಮ ಅಂತರಂಗದ ಮಾತಾಗಲಿ, ಭೋಲೋ ಭಾರತ್ ಮಾತಾಕಿ ಜೈ.
ಧಾರಯತಿ ಇತಿ ಧರ್ಮಃ – ಅಂದರೆ ಧರಿಸಿರುವುದೇ ಧರ್ಮ ಎಂದು ಅರ್ಥ , ಧರಿಸಿದ್ದು ಏನು? ಪ್ರಶ್ಞೆ ? ನಾನು ಎಂದರೆ ಸತ್ ಅದು ಅದು ಪರಮಾತ್ಞನ ಚೈತನ್ಯ ಸ್ವರೂಪ. ಅದೆಲ್ಲಿದೆ? ಅದು ನಮ್ಮ ಅಂತರಂಗದಲ್ಲಿ ಇದೆ. ಹೃದಯದಲ್ಲಿದೆ, ಇದನ್ನು ಧಾರೆಣೆ ಮಾಡಿರುವುದು ದೇಹ ಅಂತಹ ನಮ್ಮ ಆತ್ಮಚೇತನವನ್ನು ಧಾರಣೆ ಮಾಡಿರುವ ದೇಹವೇ ಧರ್ಮ, ಅಂದರೆ ಅಂತಹ ದೇಹದ ರಕ್ಷಣೆಯೇ ಧರ್ಮ. ಮೊದಲನೆಯದಾಗಿ ನಮ್ಮದೇಹದ ರಕ್ಷಣೆ ಇನ್ನು ಈದೇಹವನ್ನು ಧರಿಸಿರುವುದು ಧರಿತ್ರಿ. ಅದು ನಮ್ಮ ಜನ್ಮಭೂಮಿ. ಅದು ಭಾರತ ಮಾತೆ ಇದನ್ನು ರಕ್ಷಿಸುವುದೇ ಧರ್ಮ, ಆತ್ಮಧಾರಕ ಶರೀರವನ್ನು ದೇಹದಾರಕ ಮಾತೃಭೂಮಿಯನ್ನೂ ರಕ್ಷಿಸುವುದೇ ಧರ್ಮವಾಗಿದೆ, ಇದು ಇದ್ದರೇ ಉಳಿದ ಅರ್ಥ ಕಾಮ ಮೋಕ್ಷಕ್ಕೆ ಅವಕಾಶಗಳು. ಆದುದರಿಂದಲೇ ಚತುರರ್ವಿಧ ಪುರುಷಾರ್ಥಗಳಲ್ಲಿ ಧರ್ಮವನ್ನು ಮೊದಲು ಹೇಳಿದ್ದಾರೆ, ಅದೇ ನಮ್ಮ ಭವಿಶ್ಯದ ಬುನಾದಿ, ಆದುದರಿಂದಲೇ ಧರ್ಮವನ್ನು ನೀನು ರಕ್ಷಣೆಮಾಡು ನಿನ್ನನ್ನು ಧರ್ಮ ರಕ್ಷಣೆಮಾಡುತ್ತದೆ ಎಂದು ಭಗವಂತ ಗೀತೆಯಲ್ಲಿ ಹೇಳಿದ್ದು, ಅಂದರೆ ನೀನು ನಿನ್ನ ದೇಹ ನಿನ್ನಕುಟುಂಬ ನಿನ್ನ ಊರು ಹಾಗೂ ನಿನ್ನ ನಾಡನ್ನು ರಕ್ಷಿಸು ಸರ್ವರಿಗೂ ಅನ್ನ ನೀಡುವ ಪ್ರಕೃತಿ ಪರಿಸರವನ್ನು ರಕ್ಷಿಸು, ಇದನ್ನು ನೀನು ರಕ್ಷಿಸಿದರೆ ಅದು ನಿನ್ನನ್ನು ರಕ್ಷಿಸುತ್ತದೆ. ಎಂದು ಅರ್ಥ, ಆದರೆ ಇಂದು ನಾವು ಧರ್ಮದತ್ತ ಪ್ರಕೃತಿಯತ್ತ ಉದಾಸೀನರಾಗಿ ಅರ್ಥ ಕಾಮಗಳಲ್ಲಿ ಮುಳುಗಿದ್ದೇವೆ. ಭೋಗ ಮತದ ಅನಿಷ್ಟಆಚರಣೆ ಹಾಗೂ ಜೂಜು ಮದ್ಯಗಳಲ್ಲಿ ನಮ್ಮ ದೇಹವನ್ನು ಹಾಳುಮಾಡಿಕೊಳ್ಳುತ್ತಾ ದುರ್ಬಲ ಗೊಳಿಸಿ ಕೊಳ್ಳುತ್ತಿದ್ದೇವೆ, ಧರ್ಮ ಬೋಧನೆ ಜಾಗ್ರತೆ ಮಾಡಬೇಕಾದವರು ಅವಿವೇಕಿಗಳಂತೆ ಮೋಕ್ಷ ಬೋಧಿಸುತ್ತಿದ್ದಾರೆ. ಧರ್ಮವು ಮನುಕುಲದ ಜೀವಜಗತ್ತಿನ ಉಳಿವಿಗೆ ತಳಪಾಯವಾಗಿದೆ. ಧರ್ಮದ ಬಲವಿಲ್ಲದ ತೋರಿಕೆಯ ಆಧ್ಯಾತ್ಮ ಅಥವಾ ಭಕ್ತಿಯ ತಳಪಾಯದಲ್ಲಿ ಕಟ್ಟಿದ ಮನೆ ಸಧೃಢವಾಗಿನಿಲ್ಲಲಾರದು, ಧರ್ಮ ರಕ್ಷಣೆಗೆ ಬೇಕಿರುವುದು ಕ್ಷಾತ್ರ ಮತ್ತು ತೇಜ , ಅಂದರೆ ಬಲ ಹಾಗೂ ಬುದ್ದಿ , ಈ ಎರಡು ಅಂಶಗಳು ಇಂದಿನ ನಮ್ಮ ತುರ್ತು ಅಗತ್ಯವಾಗಿದೆ. ಇವೆರಡೂ ಏಕೀಕರಣ ಗೊಂಡರೆ ಮಾತ್ರ ನಮ್ಮ ದೇಶ ಹಾಗೂ ಧರ್ಮ ಉಳಿಯಲು ಸಾಧ್ಯ. ದೇಹರಕ್ಷಣೆಗೆ ಬೇಕಿರುವುದು ಶ್ರಮ ಹಾಗೂ ವಾಣಿಜ್ಯ ಇವೆರಡನ್ನು ಬೇರೆಯಾಗಿಸಿ ದೇಶ ಒಡೆಯುವ ಧರ್ಮ ನಾಶಮಾಡುವ ಷಡ್ಯಂತ್ರ ಜಾತಿ ವರ್ಣಗಳ ಹೆಸರಿನಲ್ಲಿ ವ್ಯವಸ್ಥಿತವಾಗಿ ವಿದೇಶಿ ಭೋಗ ಹಾಗೂ ಅಸುರ ಮತಾವಲಂಭಿ ವಂಚಕ ಹಾಗೂ ಕ್ರೂರಿಗಳಿಂದ ಹಾಗೂ ಜಾತ್ಯಾತೀತ ರಾಕ್ಷಸರು ಹಾಗೂ ಬುದ್ದಿಜೀವಿಗಳೆಂಬ ಎಡಬಿಡಂಗಿ ಪಿಶಾಚಿಗಳಿಂದ ವ್ಯವಸ್ಥಿತ ವಾಗಿ ನಡೆಯುತ್ತಿದೆ, ಇದಕ್ಕೆ ವಿದೇಶಿನೆರವು ಸರಾಗ ಹರಿದುಬರುತ್ತಿದೆ. ಹಿಂದುಗಳ ದೇಹವನ್ನು ಬಾಂಬಿಟ್ಟು ಕೊಲ್ಲಲಾಗುತ್ತಿದೆ, ಹಿಂದು ಹೆಣ್ಣುಮಕ್ಕಳನ್ನು ಲೌಜಿಹಾದ್ ಮಾಡಲಾಗುತ್ತಿದೆ, ದಲಿತರು ಗುಡ್ಡಗಾಡು ಹಿಂದು ಜನರನ್ನು ಮತಾಂತರ ಮಾಡಲಾಗುತ್ತಿದೆ, ಕಾಶ್ಮೀರದ ಹಿಂದುಗಳನ್ನು ದೇಶಭ್ರಷ್ಟರನ್ನಾಗಿ ಮಾಡಲಾಗಿದೆ, ಬಾಂಗ್ಲಾ ಪಾಕಿಸ್ಥಾನದಲ್ಲಿ ಹಿಂದುಗಳನ್ನು ಕೊಲ್ಲುವುದು ಅತ್ಯಾಚಾರ ಮಾಡುವುದು ನಿರಂತರ ನಡೆಯುತ್ತಿದೆ, ಕಾರಾವಳಿಯಲ್ಲಿಯೇ ಉಗ್ರಗಾಮಿಗಳು ತಲೆಎತ್ತುತ್ತಿದ್ದಾರೆ, ಇಂತಹ ಅಸುರರ ಅಟ್ಟಹಾಸದಲ್ಲಿ ಧರ್ಮರಕ್ಷಣೆಗೆ ಮಾರ್ಗ ದರ್ಷನ ಮಾಡಬೇಕಾದ ಬೌಧ್ದಿಕ ವರ್ಗ ಅರ್ಥ ಕಾಮದ ಹಿಂದೆ ಬಿದ್ದು ಬ್ರಷ್ಟವಾಗುತ್ತಿದೆ, ಗುರು ಸ್ಥಾನದಲ್ಲಿರುವ ಹೆಚ್ಚಿನವರು ವರ್ತಮಾನದ ಅಗತ್ಯಅರಿಯದೆ, ಅಂತಿಮವಾದ ಮೋಕ್ಷ ಬೋಧಿಸುತ್ತ ಕೇವಲ ಪೂಜೆಉತ್ಸವಗಳಲ್ಲಿ ಮಘ್ನರಾಗಿ ಅವಿವೇಕಿಗಳಂತೆ ವರ್ಥಿಸುತ್ತಿದ್ದಾರೆ, ಇವರಿಗೆ ಹೊರಗಿನ ಜ್ಞಾನದ ಅರಿವಿಲ್ಲವಾಗಿದೆ, ಕೂಪಮಂಡೂಕದಂತೆ ಇನ್ನೂ ಪುರಾಣಗಳಲ್ಲಿನ ಸಮಗ್ರ ಜ್ಞಾನದ ಕೊರತೆಯಿಂದ ಧರ್ಮರ್ಕ್ಷಣೆಗೆ ಮಹತ್ವ ಕೊಡದೆ ಮೋಕ್ಷಪ್ರಧಾನ ವೈರಾಗ್ಯ ಬೋಧನೆ ಹೇಳುತ್ತಾ ಕೂತಿದ್ದಾರೆ, ಧರ್ಮ ನಾಶವಾಗುತ್ತಾ ಅಧರ್ಮ ಮಿತಿಮೀರಿದಾಗ ಮಹಾಪುರುಷರು ಜನ್ಮತಾಳಿ ಹಿಂದೂ ಧರ್ಮವನ್ನು ರಕ್ಷಿಸುತ್ತಾ ಬಂದಿದ್ದಾರೆ, ಎಲ್ಲೆಲ್ಲಾ ಕ್ಷಾತ್ರ ತೇಜ ಒಂದಾಗಿ ಕೆಲಸ ಮಾಡಿದೆಯೋ, ಅಲ್ಲೆ ಲ್ಲಾ ಹಿಂದೂ ಧರ್ಮ ಪ್ರಜ್ವಲಿಸಿದೆ ಇಂದು ಕ್ಷಾತ್ರ ಹಾಗೂ ತೇಜ ಮಧ್ಯೆ ಜಾತ್ಯಾತೀತ ರಾಕ್ಷಸರು ಕಂದಕ ನಿರ್ಮಿಸಿದ್ದಾರೆ ಒಂದಾಗಲು ಬಿಡುತ್ತಿಲ್ಲ ಒಬ್ಬರನ್ನೊಬ್ಬರು ದ್ವೇಷಿಸುವಂತೆ ಮಾಡುತ್ತಿದ್ದಾರೆ ಇಂದು ನಾವು ನಮ್ಮ ಸಂಘಟನೆ ಇದರ ಮಧ್ಯೆ ಸೇತುವೆ ಕಟ್ಟುವ ಕೆಲಸ ಮಾಡಬೇಕಿದೆ ಎರಡು ದಡದವರನ್ನು ಒಂದು ಸೇರಿಸಬೇಕಿದೆ, ನಾಲ್ಕು ವರ್ಣಗಳೂ ಒಂದೇದೋಣಿಯಲ್ಲಿ ಪಯಣಿಸಬೇಕಿದೆ ಇಲ್ಲವಾದಲ್ಲಿ ನಾಲ್ವರೂ ನಾಶವಾಗುವುದು ನಿಶ್ಚಿತ.
ರಾಮನಿಗೆ ವಸಿಷ್ಟರೂ, ಅರ್ಜುನನಿಗೆ ಕೃಷ್ಣನೂ, ಚಂದ್ರಗುಪ್ತನಿಗೆ ಚಾಣಕ್ಯನೂ, ಶಿವಾಜಿಗೆ ರಾಮದಾಸರೂ, ಹಕ್ಕಬುಕ್ಕರಿಗೆ ವಿದ್ಯಾರಣ್ಯರೂ ವಿವೇಕಾನಂದರಿಗೆ ರಾಮಕೃಷ್ಣ ಪರಮಹಂಸರೂ ಗುರು ಹಾಗೂ ಮಾರ್ಗದರ್ಷಕರಾಗಿದ್ದರು, ಅಲ್ಲೆಲ್ಲಾ ಈಜೋಡಿಯ ಸಮ್ಮಿಲನ ಹಿಂದೂ ಸಾಮ್ರಾಜ್ಯದ ವೈಭವವನ್ನು ಮೆರೆದಿದೆ, ಆದರೆ ಇಂದು ಅಂತಹ ಗುರುಗಳು ಹಾಗೂ ಮಾರ್ಗ ದರ್ಷಕರ ಕೊರತೆ ಹಿಂದೂ ಸಮಾಜದಲ್ಲಿ ಎದ್ದು ಗೋಚರಿಸುತ್ತಿದೆ. ಪ್ರತೀ ವರ್ಷ 8 ಲಕ್ಷ ಹಿಂದೂಗಳ ಮತಾಂತರ ಆಗುತ್ತಿದೆ. ಆದುದರಿಂದಲೇ ಇಂದು ಬಹುಸಂಖ್ಯಾತ ಹಿಂದುಗಳ ಶೋಷಣೆಯಾಗುತ್ತಿದೆ, ಗೋಮಾತೆ ಹತ್ಯೆ ಭಕ್ಷಣೆ ಆಗುತ್ತಿದೆ, ಅಸುರಶಕ್ತಿ ವಿಜೃಂಬಿಸುತ್ತಿದೆ, ನಾವು ಜಡದಿಂದ ಏಳಬೇಕಿದೆ ಒಂದಾಗ ಬೇಕಿದೆ, ಹಿಂದೂ ಸಂಸ್ಕಾರ ಸಂಸ್ಕೃತಿಯನ್ನು ಯುವಜನರಲ್ಲಿ ಜಾಗ್ರತೆ ಮಾಡಬೇಕಿದೆ.
ಇನ್ನೊಂದು ವಿಧದಲ್ಲಿ ಧರ್ಮವನ್ನು ಹೀಗೂ ಹೇಳಬಹುದು ದುಷ್ಟರಾಗಿರದ ನಮಗಿಂತ ದುರ್ಬಲರಲ್ಲಿ ತೋರುವ ದಯೆ ಹಾಗೆಯೇ ಸಜ್ಜನರಾಗಿರುವ ಹಿರಿಯರಿಗೆ ತೋರುವ ಗೌರವವೇ ಧರ್ಮ. ಶಿಷ್ಟರಕ್ಷಣ ದುಷ್ಟಶಿಕ್ಷಣವೇಧರ್ಮ ದುಷ್ಟರಲ್ಲಿತೋರುವ ದಯೆ ಅಧರ್ಮವೇ ಆಗಿದೆ. ಗಾಂಧಿ ಅಂತ್ಯ ಕಾಲದಲ್ಲಿ ತೋರಿದ್ದು ಇಂತಹ ಅವಿವೇಕವನ್ನು ಇದರಿಂದಾಗಿ ಅನೇಕ ಅಮಾಯಕರ ಕ್ರಾಂತಿಕಾರಿಗಳ ಹತ್ಯೆಯೂ ದೇಶ ವಿಭಜನೆಯೂ ಆಗುವಂತಾಯಿತು ಇದು ಧರ್ಮದ ಕೊಲೆಯೇ ಆಗಿದೆ. ಗಾಂಧೀಜಿಯ 50% ಚಿಂತನೆ ಮನುಕುಲಕ್ಕೆ ಆದರ್ಷವಾಗಿದ್ದರೆ ಉಳಿದ 50% ಚಿಂಯನೆ ಅವಿವೇಕದಿಂದ ಕೂಡಿದೆ, ನಾವು ವಿವೇಕದ ಭಾಗವನ್ನು ಮಾತ್ರ ಅನುಸರಿಸಬೇಕು ಹಾಗೂ ಅವಿವೇಕವನ್ನು ಯಾವುದೇ ಮುಲಾಜಿಲ್ಲದೆ ತಿರಸ್ಕರಿಸಿ ತ್ಯಜಿಸಿ ಮುನ್ನಡೆಯಬೇಕು, ಬ್ರಿಟಿಶರು ಭಾರತ ತೊರೆದದ್ದು ನೇಯಾಜಿಯಿಂದಲೇ ಹೊರತು ಗಾಂಧಿಜಿಯ ಅಹಿಂಸೆ ಯಿಂದಲ್ಲ ಎನ್ನುವುದು ವಾಸ್ತವ ಸತ್ಯ ವಾಗಿದೆ.
ದರ್ಮದ ರಕ್ಷಣೆ ಯಾರಹೊಣೆ ಎನ್ನುವ ಪ್ರಶ್ನೆಬಂದಾಗ ಅದು ರಾಜನ ಹೊಣೆ ಆಗುತ್ತದೆ ಅರ್ಥಾತ್ ಕ್ಷತ್ರಿಯನ ಹೊಣೆ , ಬ್ರಾಹ್ಮಣನ ಹೊಣೆ ಧರ್ವನ್ನು ಪ್ರಚಾರಮಾಡುವುದು , ಪ್ರಜೆಗಳಹೊಣೆ ಅದನ್ನು ಆಚರಣೆಮಾಡುವುದು ಕ್ಷತ್ರಿಯನ ಹೊಣೆ ದರ್ಮದ್ರೋಹಮಾಡಿದವರನ್ನು ಕಠಿಣವಾಗಿ ಶಿಕ್ಷಸುವ ಮೂಲಕ ಧರ್ಮದ ರಕ್ಷಣೆ ಮಾಡುವುದು. ಈ ಮೂರರಲ್ಲಿ ಮೊದಲೆರಡರಲ್ಲಿ ಯಾವುದು ದುರ್ಬಲವಾದರೂ ದೇಶ ದುರ್ಬಲವಾಗಿ ಅರಾಜಕತೆ ಅಧರ್ಮ ದೇಶದಲ್ಲಿ ವ್ಯಾಪಿಸಿ ಕ್ಷೋಭೆ ಉಂಟಾಗುತ್ತದೆ. ಅದಕ್ಕೆ ಪೂರಕವಾಗಿ ರಾಜ್ಯ ಸಂಪದ್ಭರಿತವಾಗಿರಬೇಕಿದ್ದರೆ ಶ್ರಮಿಕರ ಶ್ರಮ ಹಾಗೂ ವಾಣಿಜ್ಯ ವಹಿವಾಟು ಧರ್ಮ ಮಾರ್ಗದಲ್ಲಿ ದೇಶದಲ್ಲಿ ನಡೆಯುವ ಅಗತ್ಯವೂ ಇದೆ. ಆದುದರಿಂದ ಸಮಾಜದ ನಾಲ್ಕುವರ್ಗಗಳು ಕರ್ತವ್ಯವನ್ನು ಹೊಂದಾಣಿಕೆಯಿಂದ ಸಹೋದರ ಭಾವದಲ್ಲಿ ಮಾಡುವುದು ಧರ್ಮ ಕರ್ತವ್ಯವಾಗಿದೆ. ದೇಶದ ಅಗತ್ಯವಾಗಿದೆ.
ಧರ್ಮ ಆದಿಅಂತ್ಯಗಳಿಲ್ಲದ್ದು ಬದಲಾಯಿಸಲು ಸಾಧ್ಯವಿಲ್ಲದ್ದು. ಒಬ್ಬವ್ಯಕ್ತಿ ಧರ್ಮ ತಪ್ಪಿದರೆ ಆತ ಅಧರ್ಮದ ದಾರಿ ಹಿಡಿದಂತಾಗುತ್ತದೆ. ಆದರೆ ಮತ ಬದಲಾವಣೆಗೆ ಹೊಂದುವಂತಹುದಾಗಿದೆ. ಹೀಗೆ ಮತವನ್ನು ವ್ಯಕ್ತಿ ಬದಲಾಯಿಸ ಬಹುದು ಹೀಗೆ ಬದಲಾಯಿಸುವಾಗ ಆತ ಅದರ ತಿಳುವಳಿಕೆ ಹೊಂದಿರಬೇಕು. ತಾನು ಬೆಂಬಲಿಸುವ ಆಚರಿಸುವ ಮತ ಎಷ್ಟು ಧರ್ಮಸಮ್ಮತವಾಗಿದೆ ಎನ್ನುವುದನ್ನು ಅರಿಯಬೇಕು. ಅಧರ್ಮಬೋಧನೆಯ ಮತ ಅಧಃಪತನಕ್ಕೆ ಮಾರ್ಗ ತೋರುವುದೇ ಹೊರತು ಉನ್ನತಿಯ ದಾರಿಯನ್ನಲ್ಲ. ಆದುದರಿಂದ ಅನಕ್ಷರಸ್ತರು ಮತಾಂತರವಾದರೆ ಅದು ಅಜ್ಞಾನ ಹಾಗೂ ಮೋಸದ ಮತಾಂತರ ವಾಗುತ್ತದೆ, ಜ್ಞಾನವಿದ್ದವರು ಯಾರೂ ಹಿಂದೂ ಧರ್ಮದಿಂದ ಮತಾಂತರವಾಗುವುದಿಲ್ಲ ವಿವೇಕಿಗಳು ವಿದ್ಯಾವಂತರು ಜಿಜ್ಞಾಸುಗಳು ಇಂದು ಪಾಶ್ಚಿಮಾತ್ಯ ದೇಶಗಳಲ್ಲಿಯೂ ಹಿಂದುತ್ವವನ್ನು ಸ್ವೀಕರಿಸುತ್ತಿದ್ದಾರೆ. ಅಲ್ಲದೆ ಧರ್ಮದ ತಿಳುವಳಿಕೆ ಇರುವವರು ಯಾರೂ ಭೋಗ ಮತ ಹಾಗೂ ಅಸುರ ಮತದಲ್ಲಿ ಜೀವನ ಸಾಗಿಸುವುದಿಲ್ಲ. ಇದೇ ಹಿಂದೂ ಧರ್ಮದ ಹಿರಿಮೆ. ನಾವು ನಮ್ಮ ಕಣ್ಣುತೆರೆದು ನಮ್ಮ ಹಿರಿಮೆಯನ್ನು ನೋಡುವ ಅರಿಯುವ ಕೆಲಸ ಮಾಡಬೇಕಿದೆ, ಕತ್ತಲೆಯಿಂದ ಬೆಳಕಿಗೆ ಬರಬೇಕಿದೆ. ಧರ್ಮ ಜಾಗ್ರತಿ ಹಾಗೂ ಧರ್ಮಾಚರಣೆಯೊಂದಿಗೆ ಹಿಂದೂಸ್ಥಾನವನ್ನು ವಿಶ್ವಗುರುವಾಗಿಸೋಣ.
-ಶ್ರೀಜಿ