ಧಾರ್ಮಿಕ ಸ್ವಾತಂತ್ರ್ಯ ಮತ್ತು ಧರ್ಮ

ವಿದೇಶಿ ಮತಗಳು ಸಂಕುಚಿತ ಮನೋಭಾವದಿಂದ ಕೂಡಿದ್ದು ಅವುಗಳು ಸೀಮಿತ ಸಿದ್ದಾಂತಗಳನ್ನು ಜನರಮೇಲೆ ಹೇರುತ್ತವೆ ಆದರೆ ಭಾರತೀಯ ಸಂಸ್ಕೃತಿಯಲ್ಲಿ ಮಾತ್ರ ಅನಿವಾರ್ಯವಾಗಿ ಹೇರಲ್ಪಡುವ ನಿರ್ದಿಷ್ಟ ಕಟ್ಟು ಪಾಡುಗಳಿಲ್ಲ. ಸ್ವತಂತ್ರ ವಿಚಾರಗಳಿಗೆ ಟೀಕೆ ಟಿಪ್ಪಣಿಗಳಿಗೆ ಸ್ವಾಗತ ಇದೆ. ಆಧ್ಯಾತ್ಮ ಹಾಗೂ ಸಾಮಾಜಿಕ ಉನ್ನತಿಯೇ ಧರ್ಮದ ಉದ್ದೇಶವಾಗಿದೆ. ಆಧ್ಯಾತ್ಮಿಕ ಎನ್ನುವುದು ವೈಯುಕ್ತಿಕ ಸ್ತರದ ಸಾಧನೆ ಹಾಗೂ ಉನ್ನತಿಯ ದಾರಿಯನ್ನು ತೋರಿಸುವ ಮಾರ್ಗ ವಾದರೆ, ಧಾರ್ಮಿಕ ಎನ್ನುವುದು ಸಮಾಜದ ಉನ್ನತಿಗಾಗಿ ಬದುಕಬೇಕಾದ ಮಾರ್ಗದರ್ಷಕ ವಾಗುವ ಆದರ್ಷ ಮಾರ್ಗ ವಾಗಿದೆ. ಆಧ್ಯಾತ್ಮವು  ಅಂತರಂಗದಿಂದ ಕ್ರಮಿಸುವ ವಿಚಾರವೇ ಹೊರತು ಬೇರೆಯವರಿಂದ ಕೊಡುವುದು. ಉಪದೇಶಿಸುವುದು ಅಥವಾ ಬೋಧಿಸುವುದರಿಂದ ಸಿಗುವಂತಹುದಲ್ಲ. ಆದುದರಿಂದ ಗುರು ಆಧ್ಯಾತ್ಮಿಕ ದಾರಿ ತೋರಿಸಿ ಮಾರ್ಗದರ್ಷನ ನೀಡಬಲ್ಲನೇ ಹೊರತು ಆತ ಗುರಿಮುಟ್ಟಿಸಲಾರನು ಅದು ಸಾಧನೆಯಿಂದಲೇ ಅರಿಯ ಬೇಕಾದ ಕ್ರಿಯೆ. ಹಾಗೂ ಸಾಧನೆ ಮಾತ್ರದಿಂದಲೇ ಕ್ರಮಿಸಬೇಕಾದ ದಾರಿ ಯಾಗಿದೆ. ಆದುದರಿಂದ ಹಿಂದೂ ಧರ್ಮಕ್ಕೆ ಒಂದು ಕೇಂದ್ರ ಸ್ಥಾನವಾಗಲಿ ಅಥವಾ ಒಂದು ಧಾರ್ಮಿಕ ಚೌಕಟ್ಟಾಗಲೀ ಅಥವಾ ಅಧಿಕಾರ ವ್ಯವಸ್ಥೆ ಯಾಗಲೀ ಇಲ್ಲ. ಏಕೆಂದರೆ ಪ್ರತಿಯೊಬ್ಬರ ಜ್ಞಾನದ ಅನುಭವವೂ ಭಿನ್ನ ವಾಗಿರುವುದರಿಂದ. ಇದಕ್ಕೆ ಚೌಕಟ್ಟಿನೊಳಗೆ ಬಂಧಿಸಿಡಲು ಸಾಧ್ಯವಿಲ್ಲ. ಒಂದು ವೇಳೆ ಬಂಧಿಸಿಟ್ಟರೂ ಅದು ಅದರೊಳಗೆ ಉಳಿಯುವುದಿಲ್ಲ ಯಾಕೆಂದರೆ ಆಧ್ಯಾತ್ಮದ ಅರಿವಿನ ಫಲಿತಾಂಶ ಎಲ್ಲರಲ್ಲಿಯೂ ಒಂದೇ ರೀತಿ ಇರುವುದಿಲ್ಲ. ಆದುದರಿಂದಲೇ ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬರ ಸ್ವತಂತ್ರ ಆಚರಣೆ ಅನುಭವ ಅಭಿಪ್ರಾಯಗಳಿಗೆ ಸ್ವಾತಂತ್ರ್ಯವಿದೆ. ಯಾವುದೇ ಮಾರ್ಗದಲ್ಲಿಯೂ ಆಧ್ಯಾತ್ಮ ಉನ್ನತಿಯನ್ನು ಸಾಧಿಸಬಹುದಾಗಿದೆ. ಹಲವು ಮಾರ್ಗಗಳಲ್ಲಿ ಕ್ರಮಿಸಿ ಒಂದೇ ಗುರಿಯನ್ನು ಸೇರುವ ಅವಕಾಶ ಹೀಂದೂ ಸಂಸ್ಕೃತಿಯ ವಿಷೇಷತೆಗಳಲ್ಲೊಂದಾಗಿದೆ. ಇದನ್ನೇ ರಾಮಕೃಷ್ಣ ಪರಮ ಹಂಸರು ಸಾಧಕರಿದ್ದಷ್ಟು ಸಾಧನಾ ಮಾರ್ಗ ಎಂದಿದ್ದಾರೆ.

ಇದನ್ನು ಪಾಶ್ಚಾತ್ಯರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ ಏಕೆಂದರೆ ಅವರದ್ದು ಮತವಾಗಿದೆ (religion)  ಆ  ನೆಲೆಯಲ್ಲಿ ಪಾಶ್ಚಾತ್ಯರು ಸನಾತನ ಧರ್ಮವನ್ನು ಸಂಸ್ಕೃತಿಯನ್ನು ವಿಮರ್ಷೆ ಮಾಡಲು ಹೋಗಿ ಸೋಲುತ್ತಾರೆ. ಅವರು ಹೋಲಿಕೆಮಾಡಲು ಸಾಧ್ಯವಿರುವುದು ಇಲ್ಲಿ ಉದ್ಭವವಾದ ಮತಗಳನ್ನು ಪ್ರಯತ್ನಿಸಿದರೆ ಅವರಿಗೆ ಬೌದ್ಧ, ಜೈನ, ಅದ್ವೈತ, ದ್ವೈತ, ಸಿಖ್, ಮುಂತಾದ ಮತಗಳಲ್ಲಿ ಅವರಿಗೆ ಹೊಂದಾಣಿಕೆ ಹುಡುಕ ಬಹುದೇ ಹೊರತು ಇವೆಲ್ಲದರ ಹೃದಯ ಭಾಗವಾದ ಸನಾತನ ಧರ್ಮವನ್ನು ಅರಿಯುವುದು ಅವರಿಗೆ ಸಾಧ್ಯವಿಲ್ಲ. ಏಕೆಂದರೆ ಅವರು ಅರಿತಿರುವ religion ನಮ್ಮ ಧರ್ಮ ಅಲ್ಲ. ರಿಲಿಜಿಯನ್ ನಲ್ಲಿ ಆಡಳಿತ ವ್ಯವಸ್ಥೆ ಇರುತ್ತದೆ. ಹಾಗೂ ಸಮಾಜದ ಮೇಲೆ ನಿಯಂತ್ರಣ ಇರುತ್ತದೆ ಆದರೆ ಧರ್ಮದಲ್ಲಿ ಈ ವ್ಯವಸ್ಥೆ ಇರುವುದಿಲ್ಲ ಆದರೂ ಇದು ಹೃದಯದಿಂದ ಬೆಸೆಯಲ್ಪಟ್ಟಿರುತ್ತದೆ. ಒಂದು ಅಗೋಚರ ಆತ್ಮದ ಬಂಧನದಲ್ಲಿ ಸನಾತನ ಧರ್ಮ ನಿಂತಿದೆ. ಅದು ಜೀವನ ಧರ್ಮವಾಗಿದೆ.

ಮತ ಹಾಗೂ ಧರ್ಮದ ವ್ಯತ್ಯಾಸದ ಸ್ಪಷ್ಟಅರಿವು ಜಗತ್ತಿಗೆ ಆದಾಗ ಮತಗಳು ನಾಶವಾಗಿ ಧರ್ಮವು ನೆಲೆ ನಿಲ್ಲುತ್ತದೆ. ಅದಕ್ಕೇ ಜ್ಞಾನದ ಅವಶ್ಯಕತೆ ಇದೆ. ಇಂದು ಅಜ್ಞಾನದಿಂದ ಮತಗಳು ಜನರಮೇಲೆ ಪ್ರಭಾವ ಬೀರುತ್ತಿವೆ, ಮತಗಳಿಂದ ಎಂದಿಗೂ ಮನಶ್ಯಾಂತಿ ಲಭಿಸಲಾರದು ಸಮಾಜ ಸಾತ್ವಿಕತೆಯತ್ತ ನಡೆಯಲಾರದು. ಉತ್ತಮ ಸಮಾಜಕ್ಕೆ ಧರ್ಮದ ಅವಶ್ಯಕತೆ ಇದೆ ಧರ್ಮ ನೆಲೆಸಬೇಕಾದಲ್ಲಿ ಮತ ಅಳಿಯಬೇಕಾಗುತ್ತದೆ. ಮತಗಳ ದುಷ್ಪರಿಣಾಮ ಅತಿಯಾದಾಗ ಜನರು ಮತಗಳಿಂದ ಹೊರಬಂಧು ಧರ್ಮದ ಸರಪಣಿಯೊಂದಿಗೆ ತಮ್ಮನ್ನು ಬೆಸೆದುಕೊಳ್ಳಲು ಆರಂಭಿಸುತ್ತಾರೆ. ಆಗ ಪುನಃ ಜಗತ್ತು ಶಾಂತಿಯತ್ತ ಹೊರಳುತ್ತದೆ.

ಯೋಚಿಸಲು ಸ್ವಾತಂತ್ರ್ಯ ಪೂಜಿಸಲು ಸ್ವಾತಂತ್ರ್ಯ ಅನುಸರಿಸಲು ಸ್ವಾತಂತ್ರ ಇದೇ ಸನಾತನ ಧರ್ಮದ ವಿಶೇಷ. ಇದರಿಂದಾಗಿಯೇ ರಾಮಕೃಷ್ಣ ಪರಮಹಂಸರು ಭಕ್ತರಿದ್ದಷ್ಟು ಭಗವದ್ರೂಪಗಳು  ಹಾಗೂ ಸಾಧಕರಿದ್ದಷ್ಟು ಸಾಧನಾಮಾರ್ಗಗಳು ಎಂದು ಹೇಳಿದ್ದಾರೆ ಇಂತಹಾ ಸ್ವತಂತ್ರ ಆರಾಧನಾ ಸಂಸ್ಕೃತಿಯನ್ನು ಸಹಜ ಧರ್ಮವನ್ನು ಕೆಲವು ಮತಾಂಧರು ತಮ್ಮ ಮತಗ್ರಂಥದ ಪಾಶದಲ್ಲಿ ಬಿಗಿದಿಟ್ಟು ಅದನ್ನು ಅಜ್ಞಾನಿ ಸಜ್ಜನರ ಕುತ್ತಿಗೆಗೆ ಬಿಗಿಯುತ್ತಿದ್ದಾರೆ, ಹಾಗೂ ತಮ್ಮ ಕುಮತ ಪ್ರಚಾರದಿಂದ ಹಾಗೂ ಮತಾಂಧತೆಯ ಪಾಶದಿಂದ ಬಂಧಿಸಿ ಸಜ್ಜನರನ್ನು ಅಮಾಯಕರನ್ನು ಬಲಾತ್ಕಾರ, ಆಮಿಶ, ಸೇವೆ ಮುಂತಾದ ವಂಚಕ ಮಾರ್ಗಗಳಿಂದ ಹಾದಿತಪ್ಪಿಸಿದ್ದಾರೆ ಹಾಗೂ ಹಾದಿ ತಪ್ಪಿಸುತ್ತಿದ್ದಾರೆ  ಇಂತಹ ದುರ್ಮತಿಗಳಿಂದ ಧರ್ಮವನ್ನು ರಕ್ಷಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.  ಆಮೂಲಕ ಮತಾಂತರಗೊಂಡು ಮನೆತೊರೆದ  ನಮ್ಮ ಸಹೋದರ ಸಹೋದರಿಯರಿಗೆ ಮರಳಿಮನೆಯ ದಾರಿ ತೋರಿಸುವ ಅಗತ್ಯವಿದೆ. ತಮಸೋಮಾ ಜ್ಯೋತಿರ್ಗಮಯ ಎನ್ನುವುದು ಮತಗಳಿಂದ ಮತಾಂಧತೆಯಿಂದ ಸತ್ಯ¸ ಸನಾತನ ಧರ್ಮಕ್ಕೆ ಬನ್ನಿ ಎನ್ನುವ ಕರೆಗೆ ಪೂರಕವಾಗಿದೆ. ಧರ್ಮಮಾರ್ಗದಲ್ಲಿ ಧರ್ಮ ಯೋಧರಂತೆ ನಡೆಯೋಣ.

ಧರ್ಮ

ಭಾರತೀಯ ತತ್ವಶಾಸ್ತ್ರದಲ್ಲಿ ಧರ್ಮಕ್ಕೆ ವಿಶೇಷವಾದ ಅರ್ಥವನ್ನು ಕೊಡಲಾಗಿದೆ, ಯಾವುದೇ ಒಬ್ಬ ವ್ಯಕ್ತಿಗೆ ಆತನ ಜ್ಞಾನದಿಂದ ಉತ್ತಮವಾದುದನ್ನು ತಿಳಿಯುವ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಹಿಂದೂ ಧರ್ಮದಲ್ಲಿದೆ. ಸ್ವಧರ್ಮೇ ನಿಧನಂ ಶ್ರೇಯಃ ಎಂದು ಗೀತೆಯಲ್ಲಿ ಹೇಳಿದೆ. ಹಿಂದೆ ಪರಮತಿಯರ ದುರಾಕ್ರಮಣದ ಸಮಯದಲ್ಲಿ ಧರ್ಮತ್ಯಜಿಸುವ ಅನಿವಾರ್ಯತೆ ಬಂದಾಗ ದುರ್ಮತ ಸಹವಾಸಕ್ಕಿಂತ ಸಾವೇ ಮೇಲೆಂದು ಸ್ವಧರ್ಮದಲ್ಲೇ ಸಾಯಲುಸಿದ್ಧರಾಗಿ ಲಕ್ಷಾಂತರ ಜನರು ಧರ್ಮಕ್ಕಾಗಿ ಪ್ರಾಣವನ್ನು ಅರ್ಪಿಸಿದರು. ಆಸಮಯದಲ್ಲಿ ಸಾವಿಗೆ ಹೆದರಿದವರು ಮತಾಂತರವಾಗಿ ಜೀವ ಉಳಿಸಿಕೊಳ್ಳ ಬೇಕಾಯಿತು. ಅಂದು ಅನಿವಾರ್ಯವಾಗಿ ಅನ್ಯಮತವನ್ನು ಅನುಸರಿಸಿದವರು. ಅಂದು ಬೇರೆದಾರಿ ಇಲ್ಲದೆ ಪ್ರಾಣ ಭಯದಿಂದ ಧರ್ಮ ತೊರೆದು ಮತಾಂತರ ಗೊಂಡು ವಿದೇಶೀ ಮತಾನುಯಾಯಿಗಳಾದವರಿಗೆ ಇಂದು ಪುನಃ ಸರಿದಾರಿಗೆ ಬರುವ ಅವಕಾಶವಿದೆ. ಇಂದು ಯಾವುದು ಉತ್ತಮ ಸಂಸ್ಕೃತಿ ಯಾವುದು ಅಸುರ ಸಂಸ್ಕೃತಿ ಎಂದು ತಿಳಿಯುವ ಮುಕ್ತ ಅವಕಾಶ ಇದೆ. ಆದ್ದರಿಂದ ಆಮದು ಸಂಸ್ಕೃತಿ ಹಾಗೂ ಭಾರತೀಯ ಸಂಸ್ಕೃತಿ ಯಲ್ಲಿನ ವ್ಯತ್ಯಾಸ ಶ್ರೇಷ್ಠತೆಯನ್ನು ತುಲನೆ ಮಾಡಿ ತಾವು ತಮ್ಮ ಹಾಗೂ ದೇಶದ ಭವಿಷ್ಯದ ಉನ್ನತಿಗಾಗಿ ಮಾತ್ರೃಧರ್ಮಕ್ಕೆ ಮರಳುವ ಅವಕಾಶವನ್ನು ಬಳಸಿಕೊಂಡಲ್ಲಿ ವಿಶ್ವಶಾಂತಿಗೆ ದೊಡ್ಡ ಕೊಡುಗೆ ಕೊಟ್ಟಂತಾಗುವುದು, ಭಾರತವನ್ನು ವಿಶ್ವ ಸಂಸ್ಕೃತಿಯ ಮ್ಯೂಸಿಯಂ ಎನ್ನಲಾಗುವುದು ಅಂತಹ ವಿಶಾಲ ಮನೋಭಾವದ ವೈವಿಧ್ಯತೆಯ ಜನರಿಂದಲೂ ಶಾಂತಿ ನೆಮ್ಮದಿಯಿಂದ ಸಾಮರಸ್ಯದಿಂದ ಇರುವ ಮನಸ್ಥಿತಿಗೆ ಭಾರತೀಯ ಸನಾತನ ಧರ್ಮದ ಮೌಲ್ಯಗಳೇ ಕಾರಣವಾಗಿದೆ, ಆದರೆ ಇಂತಹ ಶ್ರೇಷ್ಟಧರ್ಮವನ್ನು ಅವಹೇಳನ ಮಾಡುವ ಹಾಗೂ ಜನರಿಂದ ದೂರಮಾಡುವ ಷಡ್ಯಂತ್ರಗಳು ಧರ್ಮದ್ರೋಹೀ ಹಾಗೂ ಆಮದು ಮತಾವಲಂಬೀ ಒಡೆತನದ ಜಾತ್ಯಾತೀತ ಎನ್ನುವ ಎಡಬಿಡಂಗಿ ರಾಜಕೀಯ ಪಕ್ಷಗಳಿಂದ ನಿರಂತರವಾಗಿ ನಡೆಯುತ್ತಾಬಂದಿದ್ದು. ಗುಲಾಮೀ ಮನಸ್ಥಿತಿಯ ಕುಟುಂಬ ಕೇಂದ್ರಿತ ರಾಜಕೀಯ ಹಾಗೂ ಸ್ವಾರ್ಥ ಭ್ರಷ್ಟ ಆಡಳಿತದಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ. ಅಲ್ಲದೆ ಈ ಮೂರೂಬಿಟ್ಟ ಜಾತ್ಯಾತೀತರು ತಮ್ಮ ಅಧಿಕಾರ ವ್ಯಾಮೋಹಕ್ಕಾಗಿ ಭಾರತೀಯರ ಮನಸ್ಸಿನಲ್ಲಿ ಒಡಕನ್ನು ಬಿತ್ತಿ ಪೋಷಿಸುತ್ತಿದ್ದಾರೆ, ಜಾತಿ ಜಾತಿ ಗಳ ಮಧ್ಯೆ ಧರ್ಮ ಧರ್ಮಗಳ ಮಧ್ಯೆ ವಿಷಬಿತ್ತುತ್ತಿದ್ದಾರೆ, ಅಲ್ಪಸಂಖ್ಯಾತರನ್ನು ಅತಿಯಾಗಿ ಓಲೈಸುತ್ತಾ ಬಹುಸಂಖ್ಯಾತರ ಮೇಲೆ ದೌರ್ಜನ್ಯ ಮಾಡುತ್ತಾ ಹಿಂದುಳಿದವರನ್ನು ಮೇಲ್ವರ್ಗದ ವಿರುದ್ದ ಎತ್ತಿಕಟ್ಟುತ್ತಾ ಸಮಾಜ ಒಡೆಯುವ ಕೆಲಸವನ್ನು ವಿದೇಶ ಮಿಶನರಿಗಳು ಹಾಗೂ ಬಹುರಾಷ್ಟ್ರೀಯ ಕಂಪೆನಿಗಳ ನೆರವಿನಿಂದ ನಿರಂತರ ವಾಗಿ ಮಾಡಲಾಗುತ್ತಿದೆ. ಇದರಿಂದ ದೇಶ ಛಿದ್ರವಾಗುತ್ತಿದೆ ಶಿಕ್ಷಣದಲ್ಲಿ ಪಾಶ್ಚಾತ್ಯ ಸಂಸ್ಕೃತಿ, ಮಾಧ್ಯಮದಲ್ಲಿ ಅಶ್ಲೀಲತೆ, ಇವುಗಳನ್ನೇ ಸಂಸ್ಕೃತಿ ಎಂಬಂತೆ ಬಿಂಬಿಸಲಾಗುತ್ತಿದೆ. ಸನಾತನ ಧರ್ಮದ ಶಿಕ್ಷಣದಿಂದ ಯುವ ಜನಾಂಗವನ್ನು ವಂಚಿಸಲಾಗುತ್ತಿದೆ. ಇದರದುಷ್ಪರಿಣಾಮ ಇಂದು ಸಮಾಜದಲ್ಲಿ ಗೋಚರವಾಗುತ್ತಿದೆ ಅಸುರ ಶಿಕ್ಷಣದಿಂದ ಅಸುರ ಸಂಸ್ಕೃತಿ ರಾರಾಜಿಸುತ್ತಿದೆ, ಅತ್ಯಾಚಾರ ದರೋಡೆ ಲಂಚ ಭ್ರಷ್ಟತೆ ಇವೆಲ್ಲಾ ಈ ಅನೀತಿಯ ವಿದೇಶಿ ವಿದ್ಯೆ ಹಾಗೂ ವಿದೇಶೀ ಮತದ ಬಳುವಳಿಯಾಗಿದೆ, ಅಶ್ಲೀಲತೆ ಸ್ವಚ್ಚಂದ ಕಾಮ, ಕ್ರೌರ್ಯ ಹಿಂಸೆ ಆಕ್ರಮಣ ಮತಾಂತರ ಮುಂತಾದ ಅನಿಷ್ಟಗಳೆಲ್ಲಾ ಆಮದು ಮತಗಳಲ್ಲಿ ಹುಲುಸಾಗಿ ಹುದುಗಿ ಕೊಂಡಿದೆ. ಇದರಿಂದ ಈದೇಶ ಮೊದಲಿನಂತೆ ಇನ್ನೂ ಸಾವಿರಾರು ವರುಷ ಬಾಳಬೇಕಾದರೆ ಸನಾತನ ಧರ್ಮದ ಮೌಲ್ಯಗಳು ಎಲ್ಲಾಜನರಲ್ಲೂ ಬರಬೇಕು, ಪ್ರತಿಯೊಬ್ಬಭಾರತೀಯ ಸ್ವದೇಶ ಹಾಗೂ ಸ್ವಧರ್ಮಪ್ರೇಮವನ್ನು ಹೊಂದಿ ಆಚರಿಸಬೇಕು ಆಮದು ಮತದಲ್ಲಿ ಬಲವಂತದಿಂದ ಹೋದವರು ಅದೇ ಪರಮಧರ್ಮ ಎಂದು ಅಂಧರಾಗದೆ ಅದರಲ್ಲಿಯ ಒಳ್ಳೆಯಗುಣಗಳೊಂದಿಗೆ ಮೂಲಧರ್ಮವಾದ ಸ್ವಧರ್ಮದ ಮೌಲ್ಯಆಚಾರವಿಚಾರಗಳನ್ನೂ ಗೌರವಿಸುವ ಕ್ರಮಗಳನ್ನು ಅನುಸರಿಸಿಕೊಂಡೆರೆ ಸಾಮರಸ್ಯಕ್ಕೆ ಹೇತುವಾದೀತು ಪ್ರತ್ಯೇಕತೆಯನ್ನು ತೋರಿಸುತ್ತಾ  ಬೇರೆಯಾಗಿಗುರುತಿಸಿಕೊಳ್ಳುತ್ತಾ  ಪ್ರತ್ಯೇಕತೆಗೆ ಜೋತುಬಿದ್ದರೆ ಪುನಃ ಈದೇಶ ಸಾಮರಸ್ಯರಹಿತವಾಗಿ ಅಶಾಂತಿಯ ಕೊಂಪೆಯಾದೀತು, ಯಾರು ಯಾವುದೇಮತವನ್ನೂ ಆಚರಿಸಲು ಈದೇಶದಲ್ಲಿ ಮುಕ್ತಸ್ವಾತಂತ್ರ್ಯವಿದ್ದಾಗ ವೇಷ ಭಾಷೆಗಳಲ್ಲಿ ವಿದೇಷವನ್ನು ಅನುಕರಿಸಲು ಹೆಣಗುವುದು ಅಭಿಮಾನ್ಯ ಶೂನ್ಯತೆ ಹಾಗೂ ಈದೇಶಕ್ಕೆ ತೋರುವ ಅನಾದರವೇ ಎನ್ನುವುದರಲ್ಲಿ ಎರಡು ಮಾತಿಲ್ಲ ಸ್ವದೇಶದಮೇಲೆ ಅಭಿಮಾನವಿಲ್ಲದವನು ದೇಶದ್ರೋಹಿಯೇಸರಿ, ತನ್ನ ಊರು ತನ್ನದೇಶ ಹಾಗೂ ಆ ದೇಶದ ಸಂಸ್ಕೃತಿಯನ್ನು ಗೌರವಿಸುವುದರಲ್ಲೇ ಪ್ರತಿಯೊಬ್ಬ ವ್ಯಕ್ತಿಯ ಶ್ರೇಯಸ್ಸಿದೆ ಅದನ್ನು ಬಿಟ್ಟು ಆಮದು ಧರ್ಮವನ್ನು ಅನಿವಾರ್ಯವಾಗಿ ಹಿಡಿದು ಇಂದು ಅದರ ಅಂಧಾಭಿಮಾನಿಗಳಾಗಿ ಅತಿರೇಕಮಾಡುತ್ತಾ ಭಯೋತ್ಪಾದನೆ ಯಂತ ಕೃತ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವ ಯುವ ಜನತೆಗೆ ಏನು ಆಗುತ್ತಿದೆ?  ಹಾಗೂ ಅವರನ್ನು ಉತ್ತೇಜಿಸುವ  “ದೇಶದ್ರೋಹಿ” ರಾಜಕೀಯ ಕುಟುಂಬದ  ರಾಜಕೀಯ ಮಿತಿಮೀರಿರುವಾಗ ಬುದ್ದಿಹೇಳುವ ಕೆಲಸವನ್ನು ಅವರದೇ ಸಮಾಜದ ಪ್ರಜ್ಞಾವಂತರು ಮಾಡದಿದ್ದರೆ ಮುಂದೆ ಈ ದೇಶ ಹಾಗೂ ಎಲ್ಲಾಸಮಾಜಗಳೂ ಅದಕ್ಕೆ ಅತಿಯಾದ ಬೆಲೆಯನ್ನೇ ಕೊಡಬೇಕಾಗುತ್ತದೆ. ಇವೆಲ್ಲಾಸರಿಯಾಗಲು ಜಾತಿ ಆಧಾರಿತ ತುಷ್ಟೀಕರಣ ಧರ್ಮ ಆಧಾರಿತ ತುಷ್ಟೀಕರಣ ನಿಲ್ಲ ಬೇಕು ಅದು ನಿಲ್ಲಬೇಕಾದರೆ ಕುಟುಂಬರಾಜಕಾರಣದ ಕಪಿಮುಷ್ಟಿಯಲ್ಲಿರುವ ದೇಶವನ್ನು ಅಧೋಗತಿ ಹಾಗೂ ಅಶಾಂತಿಗೆ ದೂಡುತ್ತಿರುವ ವಿದೇಶೀ ಮತಾವಲಂಬಿಗಳ ತುಷ್ಠೀಕರಣದ ಅನಿಷ್ಟ ರಾಜಕೀಯ ಪಕ್ಷ ನಾಶವಾಗಬೇಕು. ದೇಶದ ಎಲ್ಲಾಪ್ರಜೆಗಳಿಗಳನ್ನೂ ಸಮಾನವಾಗಿ ನೋಡುವ ರಾಜಕೀಯ ನಾಯಕರು ದೇಶವನ್ನು ಆಳಬೇಕು ಹಾಗಾಗಲು ಮಹತ್ವಾಕಾಂಕ್ಷೆಹೊಂದಿದ ಕೆಚ್ಚೆದೆಯ ಭ್ರಷ್ಟಾಚಾರ ರಹಿತ ವಾಜಪೇಯಿ, ಮೋದಿ ಇವರಂತಹ ನಿಸ್ವಾರ್ಥ ದೇಶಪ್ರೇಮಿ ನಾಯಕರು ನಿರಂತರ ಪ್ರಧಾನಿಯಾಗಬೇಕು. ಎಲ್ಲರೂ ಸಾಮರಸ್ಯದ ಹಿಂದೂಸ್ಥಾನಕ್ಕಾಗಿ ಇಂತಹ ಶ್ರೇಷ್ಠನಾಯಕರನ್ನು  ಬೆಂಬಲಿಸೋಣ ವಿಶ್ವ ಶಾಂತಿಗಾಗಿ ಎಲ್ಲಾಧರ್ಮದವರ ಮನ ಒಲಿಸಲು ಪ್ರಯತ್ನಿಸೋಣ. ಹಿಂದೂ ವಿರೋಧಿ ಅಲ್ಪಸಂಖ್ಯಾತ ಜಿಹಾದಿ ಬೆಂಬಲಿಗ ರಾಜಕೀಯ ಪಕ್ಷವನ್ನು ದೇಶದಿಂದ ತೊಲಗಿಸೋಣ.

-ಶ್ರೀಜಿ