ಹಿಂದುಸ್ಥಾನ ಎಂದರೆ ಯಾವುದು? ಹಿಂದೂ ಧರ್ಮದಲ್ಲಿ ಗುರುತಿಸಿಕೊಳ್ಳಲು ನಾವು ಯಾಕೆ ಹೆಮ್ಮೆ ಪಡಬೇಕು?

ಹಿಮಾಲಯದಿಂದ ದಕ್ಷಿಣತುದಿ ಹಿಂದೂ ಮಹಾಸಾಗರದವರೆಗೂ. ದಕ್ಷಣಸಮುದ್ರದಿಂದ ಉತ್ತರಕ್ಕೆ  ಹಿಮಾಲಯದವರೆಗೂ ಇರುವ ಭೂಭಾಗದಲ್ಲಿ ವಾಸಿಸುತ್ತಿರುವ ಜನಗಳೇ ಹಿಂದೂಗಳಾಗಿದ್ದಾರೆ, ಈ ಪ್ರದೇಶವನ್ನೇ ಹಿಂದೂಸ್ಥಾನ ಎಂಬುದಾಗಿ ಹೇಳಲಾಗಿದೆ ಹೇಳಲಾಗುತ್ತಿದೆ. ಆರ್ಯದ್ರಾವಿಡ ವಾದ, ಸಿಂಧುಪದದ ಅಪಭ್ರಂಶ ರೂಪ ಸಕಾರ ಉಚ್ಚಾರವಾಗದೆ ವಿದೇಶಿಯರು ಸಿಂಧುವನ್ನು ಹಿಂದುವೆಂದು ಕರೆದರು ಎನ್ನುವ ಮಾತೆಲ್ಲಾ ಹಿಂದೂಗಳನ್ನು ನಿರಭಿಮಾನಿಗಳನ್ನಾಗಿಸಲು ಬ್ರಿಟಿಶರು ಕಟ್ಟಿದ ಕಟ್ಟುಕಥೆಯಾಗಿದ್ದು ತಿರುಚಿದ ಇತಿಹಾಸದ ಪಳೆಯುಳಿಕೆಗಳಾಗಿದೆ. ಅವುಗಳನ್ನು ನಾವು ನಂಬಬೇಕಿಲ್ಲ, ಇವೆಲ್ಲವೂ ವಿಕೃತವಾದಿ ಬುದ್ದಿಜೀವಿಗಳ ಸೆಕ್ಯುಲರ್ ದೇಶದ್ರೋಹಿಗಳಿಂದ ರಚಿತವಾದ ಇತಿಹಾಸ ಪಠ್ಯವಾಗಿವೆ. ಹೀನಗುಣಗಳಿಂದ ದೂರವಿರುವವನೇ ಹಿಂದುವಾಗಿದ್ದಾನೆ. ಹಿಂದುಸ್ಥಾನವನ್ನು ಬ್ರಿಟಿಶರು ಒಂದುಗೂಡಿಸಿದರು ಹಿಂದುಗಳಿಗೆ ರಾಷ್ಟ್ರದ ಕಲ್ಪನೆ ಇರಲಿಲ್ಲ ಎಂದು  ಅವಿವೇಕಿಗಳು ಇತಿಹಾಸ ಬೊಧಿಸುತ್ತಾರೆ. ಆದರೆ ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ಎನ್ನುವುದಾಗಿ ಇಡೀ ಭಾರತದ ಉದ್ದಗಲದ ನದಿಗಳನ್ನೂ ಹಿಂದುವಾದವನು ಸ್ನಾನಮಾಡುವ ಮೊದಲು ಸ್ಮರಿಸುತ್ತಾನೆ ಪೂಜೆಗೆ ಕಲಶಕ್ಕೆ ನೀರು ತುಂಬುವಮೊದಲು ಸ್ಮರಿಸುತ್ತಾನೆ ತಾನು ಇಡೀದೇಶಕ್ಕೆ ಸೇರಿದವನೆಂದೂ ಇಡೀ ದೇಶ ತನ್ನದೆಂದು ತಾನು ಒಂದು ಪ್ರಾಂತ್ಯಕ್ಕೆ ಸೀಮಿತನಾಗಿಲ್ಲ ಎಂಬುದಾಗಿ ನೆನಪಿಸಿಕೊಳ್ಳುತ್ತಾನೆ ಹೀಗೆ ಹಿಂದುಗಳು ಇಡೀ ಹಿಂದೂಸ್ಥಾನವನ್ನು ತಮ್ಮದೆಂದು ರಕ್ಷಿಸಿಕೊಂಡು ಬಂದವರಾಗಿದ್ದಾರೆ.

ಹಿಂದೂ ಧರ್ಮದಲ್ಲಿ ಗುರುತಿಸಿಕೊಳ್ಳಲು ನಾವು ಯಾಕೆ ಹೆಮ್ಮೆ ಪಡಬೇಕು?

ಧರ್ಮಕ್ಕೆ ವಿಶಾಲ ಅರ್ಥವಿದೆ ಧರ್ಮವು ಮತಗಳಂತೆ ಸಂಕುಚಿತ ಅರ್ಥ ಹೊಂದಿಲ್ಲ ಆದುದರಿಂದಲೇ ಹಿಂದೂ ಧರ್ಮ ಎನ್ನುತ್ತೇವೆಯೇ ಹೊರತು ಹಿಂದೂ ಮತ ಎನ್ನುವುದಿಲ್ಲ, ಅದೇ ಪಾಶ್ಚಾತ್ಯ ಮತಾವಲಂಬಿಗಳನ್ನು  ಕ್ರಿಶ್ಚಿಯನ್ ಮತ  , ಇಸ್ಲಾಂ ಮತ ಎನ್ನುತ್ತೇವೆಯೇ ಹೊರತು ಧರ್ಮ ಎನ್ನುವುದಿಲ್ಲ. ಧರ್ಮ ಎನ್ನುವುದು ಶ್ರೇಷ್ಠ ಜೀವನ ಪದ್ದತಿ ಅದು ಯಾವುದೋ ಒಬ್ಬನ ಮತಿಗೆ ಗೋಚರಿಸುವ ವಿಷಯವಲ್ಲ ಹೀಗೆ ಒಬ್ಬ ಪ್ರವಾದಿ ಅಥವಾ ವಕ್ತಾರನ ವಿಚಾರ ಹಾಗೂ ಭೋಧನೆಗಳು ಮತವೆಂದು ಪ್ರಚಾರ ವಾಯಿತು. ಆದರೆ ಆದಿಯೇ ಇಲ್ಲದ ಯಾವುದೇ ಒಬ್ಬನ ಬುದ್ದಿಗೆ ಮಾತ್ರ ಸೀಮಿತವಲ್ಲದೆ ಸಾವಿರಾರು ಶ್ರೇಷ್ಠ ಋಷಿಮುನಿ ಮಹಾತ್ಮರಿಂದ ಶೋಧಿಸಿ ವಿಮರ್ಷಿಸಿ ಒರೆಗೆ ಹಚ್ಚಿ ಕಡೆಯಲ್ಪಟ್ಟ ಶ್ರೇಷ್ಟ ಜೀವನ ವಿಧಾನದ, ಜ್ಞಾನದ, ಮುಕ್ತಿಯ, ಯೋಗದ ದಾರಿ ತೋರುವ ಜ್ಞಾನರಾಶಿಯೇ ಹಿಂದೂ ಧರ್ಮ ವಾಗಿದೆ ಇದರ ಮೂಲರೂಪದ ಸಾಹಿತ್ಯ ವಿಶ್ವದ ಅತಿ ಪುರಾತನ ಸಾಹಿತ್ಯ ಎನಿಸಿಕೊಂಡ ವೇದಗಳಾಗಿವೆ.

ಕ್ರೈಸ್ಥ ಮತ ಎರಡುಸಾವಿರ ವರುಷ ಹಾಗೂ ಇಸ್ಲಾಂ ಸಾವಿರದ ನಾನೂರು ವರುಷದ ಇತಿಹಾಸ ಹೊಂದಿದ್ದರೆ ಹಿಂದೂಧರ್ಮ, ಜಗತ್ತಿನ ಸೃಷ್ಟಿಯೊಂದಿಗೇ ಉದಿಸಿದೆ, ಇದಕ್ಕೆ ಸಂಸ್ಥಾಪಕ ಭಗವಂತನೇ ಅವನ ಸತ್ಯದ ಅರಿವನ್ನು ಕಂಡುಕೊಂಡವರೇ ಋಷಿಮುನಿಗಳು ಆದ್ದರಿಂದಲೇ ವೇದಗಳನ್ನು ಅಪೌರುಷೇಯ ಎನ್ನುತ್ತಾರೆ. ವೇದಗಳು ಕೇವಲ ಒಬ್ಬ ಲೌಕಿಕ ಮನುಷ್ಯನಿಂದ ಹೇಳಲ್ಪಟ್ಟಿದ್ದಲ್ಲ ಇದು ಭಗವಂತನ ಜ್ಞಾನ ಹಾಗೂ ಸಾವಿರಾರು ಜನರ ತಪಸ್ಸಿನ ಫಲ ವಾಗಿದೆ ಆದ್ದರಿಂದಲೇ ಹಿಂದೂ ಧರ್ಮ ಅಥವಾ ಸನಾತನ ಧರ್ಮ ವಿಶ್ವಧರ್ಮವಾಗಿದ್ದು. ಇದರಿಂದಾಗಿಯೇ ಭಾರತ ವಿಶ್ವಗುರು ಎನಿಸಿತ್ತು , ಭಾರತದಿಂದ ಜಗತ್ತು ಕಂಡ ಜ್ಞಾನದ ಬೆಳಕನ್ನು ವಿಶ್ವದ ಇನ್ನಾವುದೇ ದೇಶ ನೀಡಿಲ್ಲ, ಇಂದು ವಿಶ್ವವೇ ಜ್ಞಾನ ಕ್ಕಾಗಿ ಭಾರತದತ್ತ ಮುಖಮಾಡಿದೆ, ಧಾರಯತಿ ಇತಿ ಧರ್ಮಃ ಎಂದಿದ್ದಾರೆ , ಅಂದರೆ ಜೀವನ ಮೌಲ್ಯ ಗಳನ್ನು ಧರಿಸಿರುವುದೇ ಧರ್ಮ ಇದು ಹಿಂದೂ ಧರ್ಮ ಮಾತ್ರವಾಗಿದೆ, ಅಂತಹ ಮೌಲ್ಯಗಳ ಅರಿವಿಗಾಗಿ ಇದರ ತಿಳುವಳಿಕೆಗಾಗಿ ಸಾತ್ವಿಕ ಜ್ಞಾನ ಜಾಗ್ರತಿಗಾಗಿ ಹಿರಿಯರು ಸಾಕಷ್ಟು ವಿಧಾನಗಳನ್ನು ಸೂಚಿಸಿದ್ದಾರೆ. ಇವೇ ಇಂದು ಸಂಪ್ರದಾಯ ಶಾಸ್ತ್ರ ಎಂದು ಆಚರಣೆಯಲ್ಲಿದೆ, ಧ್ಯಾನ ಯೋಗ ಯಜ್ಞ ಪೂಜೆ ಭಜನೆ ಅಧ್ಯಯನ ಪ್ರವಚನ ಇವೇಮೊದಲಾದುವು ಈ ಸಾಧನಗಳಾಗಿವೆ,

ಯಾವುದರಿಂದ ಇಹ ಪರವು ಉಜ್ವಲವಾಗುವುದೋ ಉದ್ದಾರವಾಗುವುದೋ ಅದೇ ಧರ್ಮ ಎಂದು ಸಮೀಕರಿಸ ಬಹುದು, ಭಾರತದ ಪ್ರಾಚೀನ ಸಂಸ್ಕೃತಿ ಸಾಹಿತ್ಯಗಳು, ವೇದಗಳು, ಪುರಾಣಗಳು, ಉಪನಿಷತ್ತುಗಳು, ಇತಿಹಾಸ ಮಹಾಕಾವ್ಯಗಳು ಹಾಗೂ ಸ್ಮೃತಿಗಳನ್ನು ಅವಲಂಬಿಸಿವೆ. ಇವುಭಾರತದ ಜೀವನದ ಕ್ರಮಬದ್ದ ಮಾರ್ಗಸೂಚಿಗಳಾಗಿದ್ದವು. ಇವುಗಳ ಆಧಾರದಮೇಲೆಯೇ ಹಿಂದಿನ ಜನಜೀವನ ನಡೆಯುತ್ತಿತ್ತು, ಹಿಂದೆ ಸಮಾಜ ಮತ್ತು ಧರ್ಮಗಳು ಒಂದು ರೆಂಬೆಯ ಎರಡು ಕೊಂಬೆಗಳಂತಿದ್ದವು, ಮಾನವನ ಎರಡು ಕಣ್ಣುಗಳಿದ್ದಂತೆ ಒಂದನ್ನೊಂದುಬಿಟ್ಟು ಇರುತ್ತಿರಲಿಲ್ಲ. ಹೀಗಾಗಿ ಇವು ಸಮಾಜದ ಅವಿಚ್ಚಿನ್ನ ಭಾಗವಾಗಿದ್ದವು. ಇವು ಜನರ ಜೀವನವನ್ನು ಪ್ರತಿಬಿಂಬಿಸುತ್ತಿದ್ದಂತೆ ರಾಷ್ಟ್ರದ ಕೈಗನ್ನಡಿಯೂ ಆಗಿದ್ದವು. ರಾಷ್ಟ್ರದ ನೈತಿಕಬಲವನ್ನು ಒಗ್ಗೂಡಿಸುವುದರಲ್ಲೂ ಸಹಾಯಕ ವಾಗುತ್ತಿತ್ತು. ಇದರಿಂದ ಅಖಂಡ ಭಾರತದ ಭಾರತೀಯತೆ ಶತ ಶತಮಾನಗಳಿಂದಲೂ ಇಂದಿಗೂ ಉಳಿದುಬರಲು ಸಹಾಯಕ ವಾಯಿತು, ಮಾರಕವಾದ ವಿದೇಶೀ ಕ್ರೌರ್ಯತಮ ಧಾಳಿಗಳನ್ನೂ ಎದುರಿಸುವಷ್ಟು ಮಾನಸಿಕ ಶಕ್ತಿಯನ್ನು ಇವುನೀಡಿದವು. ಪರಿಣಾಮವಾಗಿ ಭಾರತೀಯ ಪರಂಪರೆ ಇಂದಿಗೂ ಜೀವಂತವಾಗಿ ಉಳಿದಿದೆ.

ಇಂದಿನ ಸಮಾಜಕ್ಕೆ ಇವುಗಳಲ್ಲಿನ ಕೆಲವೊಂದು ಅಂಶಗಳು ಹೊಂದಿಕೊಳ್ಳುವುದಿಲ್ಲ ಅದನ್ನುಹೊರತಾದ ಎಷ್ಟೋ ನೀತಿ ನಿಯಮಗಳು ಇಂದಿಗೂ ನೈತಿಕ ಸಮಾಜ ನಿರ್ಮಾಣಕ್ಕೆ ಬಹಳ ಯೋಗ್ಯವಾಗಿವೆ. ಇಂದಿನ ಹೊಲಸು ಜಾತಿರಾಜಕೀಯದಿಂದ ಸ್ಮೃತಿಗಳಿಗೆ ಪುರೋಹಿತಶಾಹಿಯ ಪ್ರತೀಕವೆಂಬ ಹಣೆಪಟ್ಟಿಕಟ್ಟಿ ದೂರ ಇಡುವ ಪ್ರಯತ್ನ ನಡೆದು ಸಮಾಜ ಆಮದು ಧರ್ಮಗಳ ಅನುಸರಣೆಯಿಂದ ನೈತಿಕ ಅದಃಪತನದತ್ತ ಸಾಗುತ್ತಿದೆ. ಜನರಿಗೆ ಧರ್ಮದ ಭಯ ಅತವಾ ಪ್ರಜ್ಞೆ ಇಲ್ಲದೆ ಮನಬಂದಂತೆ ಬದುಕುವ ಹಂತ ತಲುಪಿದೆ. ಭಾರತೀಯ ಸಮಾಜದಲ್ಲಿ ಮೊದಲು ಜಾತಿಗೆ ಪ್ರಾಮುಖ್ಯತೆ ಇರಲಿಲ್ಲ ಭಾರತಕ್ಕೆ ಆಂಗ್ಲರ ಪ್ರವೇಶದ ನಂತರವೇ ಒಡೆದು ಆಳುವ ನೀತಿಯ ಜಾತೀವಾದವನ್ನು ಅವರು ತಂದಿದ್ದು. ಭಾರತಕ್ಕೆ ಬಂದು ನೆಲೆಸಿದವಿದೇಶಿಯರೆಲ್ಲರೂ ಒಂದೆರಡು ಶತಮಾನ ನಂತರ ಭಾರತೀಯರೇ ಆಗಿಹೋದರು, ಅದು ಈಮಣ್ಣಿನ ಗುಣ ಒಡೆದು ಆಳುವ ಆಂಗ್ಲರು ಭಾರತೀಯರ ಒಗ್ಗಟ್ಟನ್ನು ಮುರಿಯುವುದಕ್ಕಾಗಿ ಈರೀತಿಯ ತಂತ್ರಗಾರಿಕೆಯನ್ನು ಮಾಡಿದರು. ಸ್ವಚ್ಚ ಮನಸ್ಸಿನ ಭಾರತೀಯರು ಕುತಂತ್ರ ಅರಿಯದೆ ಈ ಮೋಸದ ಬಲೆಗೆ ತುತ್ತಾದರು. ಈಮೋಸದ ಬಲೆಯ ಒಂದು ಗಾಳವೇ ಪುರೋಹಿತ ಶಾಹಿ ಎಂಬ ಪದ. ಸ್ಮೃತಿಗಳಲ್ಲಿ ಪುರೋಹಿತ ಶಾಹಿ ಎನ್ನುವ ಪದಕ್ಕೆ ಅರ್ಥವೇ ಇಲ್ಲ. ಸಮಾಜವೆಲ್ಲಾ ಒಂದೇ ಎನ್ನುವ ಭಾವನೆಯಿಂದ ಅವುಗಳು ನಿರ್ಮಾಣ ವಾದುವು.  ದೇವಸ್ಥಾನ ಗಳುಹುಟ್ಟಿಕೊಂದ ನಂತರ ಅದರ ಅರ್ಚಕರನ್ನು ಪುರೋಹಿತರು ಎಂದು ಈವರ್ಗವನ್ನು ಪುರೋಹಿತ ಶಾಹಿಗಳೆಂದು ಕರೆದರು. ಸ್ವಾತಂತ್ರದ ನಂತರ ಆಳಿದ ಕಾಂಗ್ರೇಸ್ ಓಟಿಗಾಗಿ ದೇಶ ಧರ್ಮ ಜಾತಿಗಳನ್ನು ಒಡೆಯತೊಡಗಿತು. ಇದರ ಅತಿರೇಕ ಎನ್ನುವಂತ ಹೊಲಸು ಆಡಳಿತಮಾಡಿ ಸಾವಿರಾರು ಜಾತಿಗಳನ್ನು ವಿಂಗಡಿಸಿ ಅಹಿಂದದ ಓಲೈಕೆ ಮಾಡುತ್ತಾ ಒಬ್ಬರ ವಿರುದ್ದ ಒಬ್ಬರು ಕಚ್ಚಾಡುವಂತೆ ಮಾಡಿತು. ಸರಕಾರಿ ಉದ್ಯೋಗ ದಿಂದ ಶಾಲೆ ಅಪ್ಲಿಕೇಶನ್ನಿನ ವರೆಗೆ ಜಾತಿ ಕಾಲಂ ಮಾಡಿತು. ಹಾಗೂ ಜಾತ್ಯಾತೀತ ಎನ್ನುತ್ತಾ ಜಾತಿಗಳಲ್ಲಿ ಸಮಾಜವನ್ನು ಒಡೆಯಿತು. ಇಂದು ಪುನಃ ಎಲ್ಲರೂ ಧರ್ಮದ ನೆಲೆಯಲ್ಲಿ ಒಂದಾಗುವ ಅವಶ್ಯಕತೆ ಈ ದೇಶಕ್ಕೆ ಇದೆ. ಇಲ್ಲವಾದಲ್ಲಿ ಈ ದೇಶವನ್ನು ಕಾಂಗ್ರೇಸಿಗರು ಪಾಕಿಸ್ಥಾನಕ್ಕೆ ದಾನಕೊಟ್ಟರೂ ಆಶ್ಚರ್ಯವಿಲ್ಲ. ಇಲ್ಲವೇ ಹಿಂದೂಗಳನ್ನೆಲ್ಲಾ ಈ ದೇಶದಿಂದ ಓಡಿಸಿದರೂ ಆಶ್ಚರ್ಯವಿಲ್ಲ. ವಿಶ್ವದಲ್ಲಿ ಅಲ್ಪಸಂಖ್ಯಾತರಾದ ಹಿಂದುಗಳಿಗೆ ಅವರದ್ದೇ ಆದ ಒಂದು ದೇಶವಿಲ್ಲದ ಪರಿಸ್ಥಿತಿಗೆ ಬಂದಿದೆ ಬಹುಸಂಖ್ಯಾತರಾದ ಹಿಂದುಗಳೇ ಇಂದು ಹಿಂದುಸ್ಥಾನದಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಹಿಂದೂ ಧರ್ಮನಾಶಕ್ಕಾಗಿಯೇ ವಿಶ್ವದ ತುಂಬೆಲ್ಲಾ ಆವರಿಸಿರುವ ಆಕ್ರಮಣಕಾರೀ ಮತಾಂಧರ ಮತಗಳು ಹಾಗೂ ವಿದೇಶೀ ಶಕ್ತಿಗಳು ಇಂದು ಪಣತೊಟ್ಟಿವೆ. ಮತಾಂತರ ಭಯೋತ್ಪಾದನೆ, ಹಿಂದೂಗಳ ನಂಬಿಕೆಯ ಅವಹೇಳನ ವ್ಯವಸ್ಥಿತವಾಗಿ ನಡೆಯುತ್ತಿದೆ. ಇವರೆಲ್ಲರಿಂದ ದೇಶಹಾಗೂ ಧರ್ಮವನ್ನು ನಾವು ರಕ್ಷಿಸಬೇಕಾಗಿದೆ. ಇದಕ್ಕಾಗಿ ನಾವು ಸಂಘಟಿತರಾಗ ಬೇಕಾಗಿದೆ.  ಅದಕ್ಕೆ ನಮಗೆ ಧಾರ್ಮಿಕ ತಿಳುವಳಿಕೆಯ ಅಗತ್ಯ ಇದೆ. ಸ್ಮೃತಿ ಗಳಲ್ಲಿ ತಿಳಿಸಿರುವ ಮಕ್ಕಳ ಲಾಲನೆ ಪಾಲನೆ, ಗಂಡು ಹೆಣ್ಣಿನ ಸಂಬಂಧ, ಹಿರಿಯ ಕಿರಿಯರ ಕರ್ತವ್ಯ, ಸ್ವಚ್ಚತೆಯ ಜೀವನಕ್ಕೆ ಹತೋಟಿ, ಆಯುರ್ವೇದ , ಯೋಗ,  ಹಿರಿಯ ಕಿರಿಯರ ಜವಾಬ್ದಾರಿಗಳು ಇವುಗಳನ್ನು ಇಂದಿಗೂ ತಪ್ಪದೆ ಆಚಿರಿಸಬೇಕು ಹಾಗಾದಲ್ಲಿ ಹಿಂದು ದೇಶ ನಂದನ ವನ ವಾಗುವುದರಲ್ಲಿ ಸಂಶಯವಿಲ್ಲ.

-ಶ್ರೀಜಿ