ಸನಾತನ ಧರ್ಮ ಹಿಂದೂ ಧರ್ಮ ಬೇಳೆದುಬಂದ ಬಗೆ ಹೇಗೆ?

ಹಿಂದೂ ಧರ್ಮದಲ್ಲಿ ಲಕ್ಷಾಂತರ ವರ್ಷಗಳ ಕಾಲಮಾನ ಹೇಳಲ್ಪಟ್ಟಿದೆ ಆದರೆ ಅದನ್ನು ಸಾಕ್ಷ ಸಮೇತ ನಿರೂಪಿಸುವುದು ಕಷ್ಠ ಆದರೂ ಆಧುನಿಕ ಕಾಲದಲ್ಲಿ ಭಾರತೀಯ ಇತಿಹಾಸವು ಲಭ್ಯ ಆಧಾರದ ಅಧ್ಯಯನದಂತೆ ಸುಮಾರು ಐದು ಸಾವಿರ ವರುಷಗಳಿಗಿಂತಲೂ ಹಿಂದಿನ ಹಿನ್ನೆಲೆಯನ್ನು ಹೊಂದಿದೆ, ವೇದಗಳ ರಚನಾಕಾಲವು ಸ್ಪಷ್ಠವಿಲ್ಲದಿದ್ದರೂ ಕ್ರಿ. ಪೂರ್ವ ಮೂರನೇ ಶತಮಾನಕ್ಕಿಂತಲೂ ಹಿಂದಿನದೆನ್ನಲಾಗುತ್ತದೆ. ಅದಕ್ಕಿಂತಲೂ ಸಾವಿರಾರುವರುಷಗಳ ಹಿಂದಿನಿಂದಲೂ ಶೃತಿ ಸ್ಮೃತಿ ಮುಖಾಂತರ ಗುರು ಶಿಶ್ಯ ಪರಂಪರೆಯಲ್ಲಿ ಅನಾದಿಕಾಲದಿಂದ ವೇದವು ಹರಿದು ಬಂದಿದೆ, ಮಾನವನ ವಿಕಾಸವಾದಂತೆ ಸಂಸ್ಕೃತಿಯ ವಿಕಾಸವೂ ಆಯಿತು ಹೀಗೆ ವಿಕಾಸವಾದ ಸಂಸ್ಕೃತಿಯನ್ನೇ ನಾಗರೀಕತೆ ಎನ್ನುತ್ತೇವೆ ಅನಾಗರೀಕತೆಯಿಂದ ಮನುಶ್ಯ ನಾಗರೀಕತೆಗೆ ಬದಲಾಗುತ್ತಾಬರುವಾಗ ಮನುಷ್ಯನು ಧರ್ಮ ಹಾಗೂ ಅಧರ್ಮದ ವ್ಯತ್ಯಾಸವನ್ನು ಕಂಡುಕೊಳ್ಳುತ್ತಾನೆ. ಅದರಲ್ಲಿ ಬುದ್ದಿವಂತನಾದ ಮನುಷ್ಯನು ಸೃಷ್ಠಿಯ ಅನಿವಾರ್ಯತೆಯನ್ನು ಅರ್ಥ ಮಾಡಿಕೊಂಡು ಪ್ರಕೃತಿಯನ್ನು ಸಂರಕ್ಷಿಸಿಕೊಂಡು ಸಕಲ ಜೀವಜಂತುಗಳಿಗೂ ಬದುಕಲು ಅವಕಾಶಮಾಡಿಕೊಟ್ಟು ಸಜ್ಜನರು ಹಾಗೂ ನಿರುಪದ್ರವಿಗಳಿಗೆ  ಹಾನಿ ಆಗದಂತೆ ಸಾಧ್ಯವಾದಲ್ಲಿ ಸಹಾಯವಾಗುವಂತೆ ಬದುಕುವುದೇ ಧರ್ಮ ಎಂದು ಕರೆದನು. ಇದಕ್ಕೆ ವಿರುದ್ಧವಾಗಿ ಬದುಕುವುದೇ ಅಧರ್ಮವಾಗಿದೆ. ಇಂತಹ ಸದ್ಗುಣಗಳನ್ನು ಹಿಂದೂ ಸನಾತನ ಋಷಿಮುನಿಗಳು ತಮ್ಮ ತಪಸ್ಸಿನಿಂದ ಯೋಗದಿಂದ ಹಾಗೂ ಧ್ಯಾನದಿಂದ ಅನುಭವದಿಂದ ಸಾವಿರಾರು ವರುಷಗಳ ಸಾಧನೆಯಿಂದ ಶೋಧಿಸಿ ಅದನ್ನು ವಿರ್ಮಿರ್ಷಿಸಿ ಅನುಸರಿಸಲು ಯೋಗ್ಯವಾಗುವಂತೆ ಉತ್ತಮ ಸಂಸ್ಕಾರ ರೂಪದಲ್ಲಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಿದರು. ಇದಕ್ಕಾಗಿ ಸಂಸ್ಕೃತಭಾಷೆಯಲ್ಲಿ ವೇದಗಳನ್ನು ರಚಿಸಿದರು. ಜಗತ್ತಿನಲ್ಲಿ ಇಂದಿಗೂ ಸಂಸ್ಕೃತದಷ್ಟು ಶ್ರೇಷ್ಠ ಭಾಷೆ ಇನ್ನೊಂದು ಶೋಧಿಸಲ್ಪಟ್ಟಿಲ್ಲ. ಹೀಗೆ ಹಸ್ತಾಂತರಿಸಲು ಕಷ್ಟವಾದ ಇಂತಹ ಗಹನ ವಿಚಾರಗಳನ್ನು ತಿಳಿಯಲು ವಿಶೇಷ ಬೌದ್ಧಿಕ ಶಕ್ತಿ ಹಾಗೂ ಶಾಸ್ತ್ರದ ಅಧ್ಯಯನದ ಹಿನ್ನಲೆ ತಾರ್ಕಿಕ ಬಲ ಮುಂತಾದುವೆಲ್ಲಾ ಅಗತ್ಯವಾದುದರಿಂದ ಇದು ಜನಸಾಮಾನ್ಯರಿಗೆ ಎಲ್ಲರಿಗೂ ತಿಳಿಯಲು ಅರ್ಥಮಾಡಿಕೊಳ್ಳಲು ಕಷ್ಟವಾದುದರಿಂದ ತಾವುಕಂಡುಕೊಂಡ ಸತ್ಯವನ್ನು, ಶೋಧಿಸಿದ ಧರ್ಮ ರಹಸ್ಯಗಳನ್ನು ಸಾಮಾನ್ಯಜನರಿಗೆ ಅರಿಯಲು ಅನುಕೂಲವಾಗುವಂತೆ ಹಲವು ವಿಧಾನಗಳನ್ನು ಬಳಸಿದರು. ಇದುವೇ ಸಂಸ್ಕೃತಿಯಾಗಿ ಬೆಳೆಯಿತು,  ಇಂತಹ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದೇ ಕಲಿಸಿಕೊಡುವುದೇ ಸಂಸ್ಕಾರವಾಗಿದೆ. ಸಂಸ್ಕಾರವು ಮನೆಯಲ್ಲಿ ತಂದೆತಾಯಿಗಳಿಂದಲೂ ನಂತರದಲ್ಲಿ ಗುರುಗಳಿಂದಲೂ ನಂತರ ಸಂಪರ್ಕಕ್ಕೆ ಬರುವ  ವಿಷೇಶ ಅಥಿತಿ ಗಳಿಂದಲೂ ಕಲಿಸಲ್ಪಡುತ್ತಿತ್ತು. ಆದುದರಿಂದಲೇ ಇವರನ್ನು ದೇವರೆಂದು ಕರೆಯಲಾಗಿದೆ, ಮಾತೃದೇವೋ ಭವ , ಪಿತೃದೇವೋಭವ, ಆಚಾರ್ಯದೇವೋ ಭವ, ಅಥಿತಿ ದೇವೋ ಭವ ಎನ್ನುವುದು ನಮ್ಮ ಸಂಸ್ಕೃತಿಯಾಗಿದೆ. ಆದರೆ ಇಂದು ಭೋಗಮತದ ಪ್ರಭಾವದಿಂದ ಎಲ್ಲವೂ ವ್ಯಾಪಾರವಾಗಿದೆ. ಶಿಕ್ಷಣವೂ ವ್ಯಾಪಾರವಾಗಿದೆ. ಅಥಿತಿ ಸತ್ಕಾರವೂ ವ್ಯಾಪಾರವಾಗಿದೆ.

ಸನಾತನ ಋಷಿಮುನಿಗಳು ಹಾಕಿಕೊಟ್ಟ ನೈತಿಕ ಶಿಕ್ಷಣ ಪದ್ದತಿಯನ್ನು ಭೋಗಮತಾರಾಧಕರ ಅನಿಷ್ಟ ಪದ್ದತಿ ನಾಶಮಾಡಿ ಶಾಲೆಗಳಲ್ಲಿ ಅವಿವೇಕಿಗಳನ್ನು ಸೃಷ್ಟಿಸುತ್ತಿದೆ. ಸನಾತನ ಋಷಿಮುನಿಗಳು ಸೃಷ್ಟಿಯಬಗೆಗೆ ಸಂಶೋಧನೆಯನ್ನು ಕೈಗೊಂಡರು ಸತ್ಯ ಶೋಧನೆಗೆ ತೊಡಗಿದರು. ಜಗತ್ತಿನ ರಹಸ್ಯವನ್ನು ಅರಿಯುವ ಪ್ರಯತ್ನಮಾಡಿದರು. ಇವುಗಳ ಸಾರಾಂಶಗಳನ್ನು ವೇದಗಳಲ್ಲಿ ಸಂಗ್ರಹಿಸಿದರು ವೇದ ಎಂದರೆ ಜ್ಞಾನ ಎಂಬುದಾಗಿ ಅರ್ಥ. ಅದನ್ನು ಶುದ್ಧರೂಪದಲ್ಲಿ ಉಳಿಸಲು ಹಲವು ಕಾಲಗಳವರೆಗೆ ಶೃತಿ ಸ್ಮೃತಿಗಳಲ್ಲಿ ರಕ್ಷಿಸಿದರು. ನಂತರದಲ್ಲಿ ಲಿಪಿಯನ್ನು ವ್ಯಾಕರಣವನ್ನು ಕಂಡುಹಿಡಿದರು. ವಿಶ್ವದ ಪ್ರಾಚೀನವೂ ಅತ್ಯುನ್ನತವೂ ಆದ ಸಂಸ್ಕೃತಭಾಷೆಯನ್ನು ಶೋಧಿಸಿದರು. ದೇವನಾಗರೀ ಲಿಪಿಯನ್ನು ಶೋಧಿಸಿದರು. ವೇದಗಳು ಬಹುವಿಸ್ತಾರವಾಗಿ ಇದ್ದುದರಿಂದ ಇವುಗಳ ಸಾರಾಂಶರೂಪದಲ್ಲಿ ಉಪನಿಷತ್ತುಗಳನ್ನು ರೂಪಿಸಿದರು ಉಪನಿಷತ್ತುಗಳನ್ನು ಅರ್ಥ ಮಾಡಿಕೊಳ್ಳಲು ಸುಲಭ ವಾಗುವಂತೆ ಬ್ರಹ್ಮ ಸೂತ್ರಗಳನ್ನು ರಚಿಸಿದರು, ಇವೆಲ್ಲದರ ಸಾರಾಂಶದ ಪೂರ್ಣ ರೂಪವನ್ನು ಶ್ರೀಕೃಷ್ಣನ ಬಾಯಿಯಿಂದ ವೇದವ್ಯಾಸರು ಸರಳವಾಗಿ ಭಗವದ್ಗೀತೆಯಲ್ಲಿ ತಿಳಿಸಿ ಕೊಟ್ಟರು. ಅನೇಕ ಮಹನೀಯರು ಇವುಗಳಿಗೆ ಭಾಷ್ಯಗಳನ್ನು ಬರೆದಿದ್ದಾರೆ.

ಸನಾತನ ಭಾರತದ ಋಷಿಮುನಿಗಳು ತಮ್ಮ ತಪಸ್ಸಿನಿಂದ ಶೋಧಿಸಿದ ಸತ್ಯಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಿದರು. ಇವರು ಸೃಷ್ಟಿಯ ರಹಸ್ಯವನ್ನು ಬೇಧಿಸುವ ಪ್ರಯತ್ನ ಮಾಡಿದರು ತಮ್ಮ ಈ ಪ್ರಯತ್ನಕ್ಕೆ ತರ್ಕವನ್ನು ಆಧಾರವಾಗಿ ಬಳಸಿದರು. ತರ್ಕದಿಂದ ಉತ್ತರವನ್ನು ಹುಡುಕುತ್ತಾ ಹೋದರು ಹೀಗೆ ಹುಡುಕುತ್ತಾಹೋದಂತೆ ಅವರಿಗೆ ಒಂದೊಂದೇ ವಿಚಾರ ಸ್ಪಷ್ಟವಾಗುತ್ತಾ ಹೋಯಿತು. ಹೀಗೆ ಸ್ಪಷ್ಟವಾಗುತ್ತಾ ಹೋದಂತೆ ಅದನ್ನು ಶಿಷ್ಯಂದಿರಿಗೆ ಹೇಳುತ್ತಾ ಬಂದರು ಅವರು ಅದನ್ನು ಕೇಳಿ ಅದನ್ನು ಮನದಲ್ಲಿ ಸಂಗ್ರಹಿಸಿ ಉಳಿಸಿದರು. ಹೀಗೆ ಸೃಷ್ಟಿಯ ಮೂಲವನ್ನು ಶೋಧಿಸುವಾಗ ಋಷಿಮುನಿಗಳಿಗೆ ಎದುರಾದ ಪ್ರಶ್ನೆಯೇ ಈ ಸೃಷ್ಟಿಯ ಹುಟ್ಟು ಹೇಗಾಯಿತು? ಹಾಗೂ ಇದಕ್ಕೆ ಕಾರಣ ಯಾರು? ಎನ್ನುವ ಪ್ರಶ್ನೆ. ಸೃಷ್ಟಿ ಇದ್ದಮೇಲೆ ಅದನ್ನು ನಿರ್ಮಿಸಿದವನೂ ಇರಬೇಕು ಎನ್ನುವ ತರ್ಕದಿಂದ ಸೃಷ್ಟಿಕರ್ತನ ಅಸ್ಥಿತ್ವವನ್ನು ಕಂಡುಕೊಂಡರು. ಇಂತಹ ಮಹಾನ್ ಚೇತನಕ್ಕೆ ಪರಮಾತ್ಮ ಅಥವಾ ಭಗವಂತ ಎಂದು ಹೆಸರಿಟ್ಟರು. ದೇವರು ಎನ್ನುವುದು ಒಂದು ವಿಷೇಶ ಶಕ್ತಿಯಾಗಿದೆ ಎಂದು ಮನಗಂಡರು. ಈ ಪರಮಾತ್ಮನನ್ನು ಸರ್ವಗುಣ ಸಂಪನ್ನ ಸರ್ವಶಕ್ತ ಸರ್ವಾಂತರ್ಯಾಮಿ ನಿರ್ಗುಣ ನಿರಾಕಾರ ಸಚ್ಚಿದಾನಂದ ಸ್ವರೂಪಿ ಎಂತೆಲ್ಲಾ ಕರೆದರು ಆತನ ಶಕ್ತಿಯ  ಅಥವಾ ಸೃಷ್ಠಿಯ ಕಾರ್ಯದ ಮುಖ್ಯ ಮೂರುಗುಣಗಳಿಂದಾಗಿ ಆತನನ್ನು ಸೃಷ್ಟಿ ಸ್ಥಿತಿ ಲಯ ಕರ್ತ ಎಂದೆಲ್ಲಾ ವರ್ಣಿಸಿದ್ದಾರೆ. ಹಿಂದೂಗಳು ವಿವರಿಸಿದ ಪರಮಾತ್ನನನ್ನೇ ಇಂಗ್ಲೀಷಿನಲ್ಲಿ GOD ಎನ್ನುತ್ತಾರೆ ಅಂದರೆ ಜನರೇಟರ್ ಆಪರೇಟರ್ ಡೆಸ್ಟ್ರಾಯರ್ ಎನ್ನುವ ಅರ್ಥದಲ್ಲಿ. ಇದು ಭಾರತೀಯರ ತ್ರಿಮೂರ್ತಿಗಳ ನಕಲೇ ಆಗಿದೆ. ಇದೇ ಅಪಾರ್ಥವಾದರೆ ಉಲ್ಟಾ ಆದರೆ DOG ಆಗುತ್ತದೆ. ತಿನ್ನುವುದು ತಿರುಗುವುದು ಕಂಡಲ್ಲಿ ಮಲಗುವುದು ಎದುರು ಬಂದವರಿಗೆಲ್ಲಾ ಬೊಗಳುವುದು. ಇಂದಿನ ಬುದ್ದಿಜೀವಿಗಳ ಪರಿಸ್ಥಿತಿ. ನಮ್ಮ ಹಿರಿಯರು ಪರಮಾತ್ಮನ ಸೃಷ್ಟಿಯಲ್ಲಿ ಆತನ ಗುಣಗಳಲ್ಲಿ ಎರಡು ಮುಖ್ಯ ವ್ಯತ್ಯಾಸವನ್ನು ಕಂಡುಕೊಂಡರು ಅದು ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳು ಇದನ್ನು ಬೆಳಕು ಹಾಗೂ ಕತ್ತಲೆಗೆ ಹೋಲಿಸಬಹುದು. ಹೀಗೆ ಪರಮಾತ್ಮನ ಸಕಾರಾತ್ಮಕ ಗುಣಗಳಿಗೆ ರೂಪಕೊಟ್ಟು ಇಂತಹ ಗುಣಗಳನ್ನು ಅತಿಹೆಚ್ಚು ಪ್ರಮಾಣದಲ್ಲಿ ಹೊಂದಿದವರನ್ನು ಅಥವಾ ಪ್ರತಿಫಲಿಸಿದವರನ್ನು ಅಥವಾ ಬದುಕಿನಲ್ಲಿ ಅಳವಡಿಸಿಕೊಂಡು ಮಾದರಿಯಾಗಿ ಬದುಕಿದವರನ್ನು ಸುರರು ಅಥವಾ ದೇವರು ದೇವತೆಗಳು ಮಹಾತ್ಮರು ಅವತಾರಪುರುಷರು ಎಂದೆಲ್ಲಾ ಕರೆದರು ಅದಕ್ಕೆ ವಿರುದ್ಧವಾಗಿ ನಕಾರಾತ್ಮಕ ಗುಣಗಳನ್ನು ಅಳವಡಿಸಿಕೊಂಡು ನಕಾರಾತ್ಮಕವಾಗಿ ಬದುಕಿದವರನ್ನು ಅಸುರರು ಅಥವಾ ರಾಕ್ಷಸರು ನೀಚರು ಎಂದು ಕರೆದರು. ಈ ಎರಡು ಗುಣಗಳ ತಾಕಲಾಟವನ್ನು ಪುರಾಣಗಳಲ್ಲಿ ವರ್ಣಿಸಿದರು. ಅಂತಿಮವಾಗಿ ಸದ್ಗುಣಗಳೇ ಜಯಿಸುತ್ತವೆ ಎಂದು ಸಾರಿ ಉತ್ತಮ ಸ್ವಸ್ಥ ಸಮಾಜಕ್ಕೆ ಮಾರ್ಗದರ್ಷನ ಮಾಡಿದರು. ಹೀಗೆ ಭಗವಂತನ ಸೃಷ್ಟಿಯಲ್ಲಿ ಪ್ರತಿಯೊಂದೂ ಭಗವಂತನ ಕೊಡುಗೆ ಆತನ ಸ್ವರೂಪ ಆತನು ಎಲ್ಲೆಲ್ಲಿಯೂ ಸೃಷ್ಟಿಯ ರೂಪದಲ್ಲಿ ಆವರಿಸಿದ್ದಾನೆ ಎಂದು ಅರಿತು ಜನರಿಗೆ ಬೋಧೀಸಿದರು.

ಹಿಂದೂ ಧರ್ಮದ ಸಂಸ್ಕೃತಿಯಲ್ಲಿ ಇಂದಿನ ಜನರಿಗೆ ಗೊಂದಲ ಉಂಟುಮಾಡುವ ಅನೇಕ ಆಚರಣೆಗಳು ಬೆಳೆದು ಬಂದಿವೆ. ಇದಕ್ಕೆ ಸಮರ್ಪಕವಾದ ಉತ್ತರ ಕೊಡುವವರು ವಿರಳವಾಗಿ ಧರ್ಮಾವಲಂಬಿಗಳು ಮೌಢ್ಯದಿಂದ ಧರ್ಮಾಭಿಮಾನವನ್ನು ಕಳೆದುಕೊಳ್ಳುವ ಹಂತಕ್ಕೆ ಹೋಗಿದ್ದಾರೆ. ಇದರ ದುರುಪಯೋಗವನ್ನು ಅನಿಷ್ಟಮತಾವಲಂಬಿಗಳು ಬಳಸಿಕೊಂಡು ಮತಾಂತರದಂತಹ ನೀಚಕೃತ್ಯದಲ್ಲಿ ತೊಡಗಿಸಿಕೊಂಡು ಹಿಂದೂಗಳನ್ನು ಅಸುರ ಮತಕ್ಕೆ ಆಕರ್ಷಿಸುತ್ತಿದ್ದಾರೆ. ಇಂತಹ ಗೊಂದಲಗಳಿಂದ ಸಮಾಜವನ್ನು ವಿಮುಕ್ತಿಗೊಳಿಸಿ ಸೂಕ್ತಮಾರ್ಗದರ್ಷನ ನೀಡುವುದು ಇಂದಿನ ಹಿಂದೂ ಧರ್ಮ ಪ್ರಚಾರಕರ ಪ್ರಮುಖ ಆದ್ಯತೆಯಾಗಬೇಕು. ಇಂದು ಹಿಂದೂ ಧರ್ಮ ಪ್ರಚಾರಕರು ಪರಿಪೂರ್ಣ ಮಾರ್ಗದಲ್ಲಿ ಚಲಿಸುತ್ತಿಲ್ಲ ಇವರೆಲ್ಲರೂ ಅವರವರ ಮತದ ಸಂಕುಚಿತತೆಯಲ್ಲಿ ಮುಳುಗಿ ಧರ್ಮದ ಅದಃಪತನಕ್ಕೆ ಕಾರಣ ರಾಗುತ್ತಿದ್ದಾರೆ. ಇಂದು ಶುದ್ಧ ಮನಸ್ಸಿನ ಧರ್ಮಪ್ರಚಾರಕರನ್ನು ತರಬೇತಿ ಗೊಳಿಸಿ ಸಮಾಜದಲ್ಲಿ ಧರ್ಮವನ್ನು ಪುನಃ ಪ್ರತಿಷ್ಠೆಗೊಳಿಸಬೇಕಾದುದೂ ನಮ್ಮ ಆದ್ಯತೆ ಯಾಗಬೇಕು. ಹಿಂದೂ ಧರ್ಮ ಪರಿಷತ್ತು ಈವಿಚಾರವಾಗಿಯೇ ಕಾರ್ಯಮಾಡುತ್ತಿದೆ. ನೀವು ತನು ಮನ ಧನಗಳೊಂದಿಗೆ ಧರ್ಮರಕ್ಷಣೆ ಹಾಗೂ ಪ್ರಚಾರಕಾರ್ಯದಲ್ಲಿ ಭಾಗಿಗಳಾಗಿ. ಜೈ ಸನಾತನ.

-ಶ್ರೀಜಿ