ಬಹುದೇವತಾರಾಧನೆ ಹೇಗೆ ಆರಂಭ ವಾಯಿತು?
ಮೇಲೆ ಹೇಳಿದಂತೆ ಹಿಂದೂ ಸಮಾಜ ಅಡ್ಡದಾರಿ ಹಿಡಿದಾಗ ವೇದ ಉಪನಿಷತ್ತುಗಳನ್ನು ಅಧ್ಯಯನ ಮಾಡುವವರು ಕಡಿಮೆಯಾದಾಗ ಬೌದ್ಧ ಹಾಗೂ ಜೈನರ ಪ್ರಭಾವ ಹೆಚ್ಚಾಗಿ ವೈದಿಕ ಧರ್ಮಕ್ಕೆ ರಾಜಾಶ್ರಯ ಸಿಗದೆ ಯಜ್ಞ ಯಾಗಾದಿಗಳು ಅವನತಿಯ ಹಾದಿ ಹಿಡಿದಾಗ ಹಿಂದೂ ಧರ್ಮ ಸೂಕ್ಷ್ಮಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಕಥೆಗಳ ಮೂಲಕ ತಿಳಿಸಲು ಪುರಾಣಗಳು ರಚಿಸಲ್ಪಟ್ಟವು, ಇವುಗಳ ಉದ್ದೇಶ ಜನರನ್ನು ಧಾರ್ಮಿಕ ವಿಚಾರಗಳಲ್ಲಿ ತೊಡಗಿಕೊಳ್ಳು ವಂತೆ ಮಾಡುವುದೇ ಆಗಿತ್ತು, ಜೈನ ಹಾಗೂ ಬೌದ್ಧರಿಂದ ಸನಾತನ ವಿಚಾರ ಧಾರೆ ನಾಶವಾಗದಂತೆ ತಡೆಯಲು ಪುರಾಣಗಳನ್ನುರಚಿಸಿ ಅಲ್ಲಿ ಸದ್ಗುಣ ಗಳನ್ನು ಸುರರು ಅಥವಾ ದೇವತೆಗಳಿಗೂ ದುರ್ಗುಣಗಳನ್ನು ಅಸುರರು ಅಥವಾ ರಾಕ್ಷಸರಿಗೂ ಅರೋಪಿಸಿ ಕಥೆ ಬರೆದು ಅದನ್ನು ಸಾಮಾನ್ಯ ಜನ ಅನುಸರಿಸುವಂತೆ ಅನುಕರಿಸುವಂತೆ ಮಾಡಿದರು. ಪುರಾಣಗಳ ರಚನೆ ಯಾವಾಗ ಆಗಿದೆ ಎನ್ನುವುದಕ್ಕೆ ನಿಖರ ಕಾಲಮಾನನಿಗದಿ ಆಗಿಲ್ಲ. ವ್ಯಾಸರು ಬರೆದರೆಂದು ಪ್ರತೀತಿ ಇದ್ದರೂ ಎಲ್ಲಾಪುರಾಣಗಳನ್ನೂ ಅವರೇಬರೆದಿದ್ದಾರೆಂದರೆ ನಂಬುವುದು ಕಷ್ಟ. ವ್ಯಾಸರ ಹೆಸರಿನಲ್ಲಿ ಹಲವರು ಬರೆದಿರಬಹುದು. ಮುಂದೆ ಈ ಪುರಾಣ ಪಾತ್ರಧಾರಿಗಳನ್ನೇ ಅಲ್ಲಿನ ಗುಣಕ್ಕನುಗುಣವಾಗಿ ವರ್ಣನೆಯಂತೆ ಕಲಾವಿದರು ಶಿಲ್ಪದಲ್ಲಿ ಕೆತ್ತಿದರು. ಅದನ್ನೇ ದೇವಾಲಯಗಳಲ್ಲಿ ಪ್ರತಿಷ್ಟಾಪಿಸಿ ಪೂಜಿಸಲು ಆರಂಭಿಸಿದರು. ಹೀಗೆ ಬಹುದೇವತಾರಾಧನೆ ಹಾಗೂ ವಿಗ್ರಹಾರಾಧನೆಗಳು ಆಚರಣೆಗೆ ಬಂದುವು. ಮುಂದೆ ಹಲವು ದೇವರ ಹೆಸರಿನಲ್ಲಿ ಹಲವು ಪಂಗಡಗಳು ಹುಟ್ಟಿಕೊಂಡು ಬೇರೆ ಬೇರೆ ದೇವರುಗಳು ವೈಭವೀಕರಿಸಲ್ಪಟ್ಟವು, ಹೀಗೆ ವಿಭಿನ್ನ ಸಂಪ್ರದಾಯಗಳು ಬೆಳೆದುವು, ಮುಂದೆ ಶಂಕರಾಚಾರ್ಯರು ಹೀಗೆ ಭಿನ್ನ ಪಂಗಡಗಳಲ್ಲಿ ಒಡೆದಿದ್ದ ಪರಸ್ಪರ ದೇವರ ಹೆಸರಿನಲ್ಲಿ ಹೊಡೆದಾಡುತ್ತಿದ್ದ ವಿಭಜಿತ ಸಮಾಜದಿಂದ ಆಗುವ ಧಾರ್ಮಿಕ ಹಾನಿಯನ್ನು ಮನಗೊಂಡು ಅವರನ್ನೆಲ್ಲಾ ಒಗ್ಗೂಡಿಸಿದರು ಹಾಗೂ ಪಂಚಾಯತನ ಪೂಜಾಪದ್ದತಿಯನ್ನು ಪರಿಚಯಿಸಿ ಹಲವು ದೇವರ ಬದಲಿಗೆ ಪ್ರಮುಖ ಐದುದೇವರನ್ನು ಒಟ್ಟಿಗೆ ಎಲ್ಲರೂ ಪೂಜಿಸುವ ಪರಸ್ಪರದ್ವೇಶಿಸದಂತೆ ತಡೆದರು ಸಮಾಜದಲ್ಲಿ ಸಾಮರಸ್ಯ ಮೂಡಿಸಿದರು. ಎಲ್ಲರೂ ಅದನ್ನು ಅನುಸರಿಸುವಂತೆ ಮನಒಲಿಸಿ ಹಿಂದೂಗಳನ್ನು ಏಕೀಕರಣ ಗೊಳಿಸಿದರು ಬೌದ್ಧ ಜೈನ ಪಂಡಿತರನ್ನು ವಾದದಲ್ಲಿ ಸೋಲಿಸಿ ತಮ್ಮ ಶಿಶ್ಯರನ್ನಾಗಿಸಿಕೊಂಡು ಅವರು ಪುನಃ ವೈದಿಕ ಧರ್ಮಾನುಯಾಯಿಗಳಾಗುವಂತೆ ಮಾಡಿದರು. ಹೀಗೆ ಬಹುದೇವತಾರಾಧನೆ ಬೆಳೆದು ಬಂದಿತು ಬೌದ್ಧ ಜೈನರ ಅಹಿಂಸಾವಾದ ಹಾಗೂ ವೈದಿಕ ಧರ್ಮದ ತಿರಸ್ಕಾರದಿಂದ ಯಜ್ಞ ಯಾಗ ಹೋಮ ಹವನ ಇವುಗಳು ನಿಲ್ಲಿಸಲ್ಪಟ್ಟವು ಹಾಗೆಯೇ ಅಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿ ಮುಂತಾದ ಅನಿಷ್ಟ ಪದ್ದತಿಗಳು ನಿಂತಾಗ ವೈದಿಕ ಧರ್ಮದ ಉಳಿವಿಗಾಗಿ ಪರ್ಯಾಯ ಮಾರ್ಗವಾಗಿ ದೇವಾಲಯಗಳು ರೂಪುಗೊಳ್ಳಲಾರಂಭಿಸಿದವು, ವೈಷ್ಣವ ದೇವಾಲಯಗಳು ಶೈವಾಲಯಗಳು ದೇವಿ ದೇವಾಲಯಗಳು ಹೀಗೆ ಹಲವು ಆಯಾಮಗಳಲ್ಲಿ ದೇವಾಲಯಗಳು ನಿರ್ಮಾಣಗೊಂಡವು. ದೇವಾಲಯಗಳಲ್ಲಿ ನೈವೇದ್ಯ ರೂಪದಲ್ಲಿ ಶಾಖಾಹಾರ ಪರಿಪಾಠ ಬೆಳೆದುಬಂದುದರಿಂದ ಮಾಂಸಾಹಾರಿಗಳು ಇಲ್ಲಿ ಪ್ರವೇಶ ನಿರಾಕರಿಸಲ್ಲಪಟ್ಟರು ಅಂತಹ ಸಂದರ್ಭದಲ್ಲಿ ಅವರುಗಳು ದೇವಗಣಗಳನ್ನು ದೇವಾಲಯದ ಹೊರಬಾಗದಲ್ಲಿ ತಾವು ಅರ್ಚಿಸಲಾರಂಭಿಸಿದರು ಅವುಗಳಿಗೆ ತಮ್ಮ ಆಹಾರವನ್ನೇ ನೈವೇದ್ಯವಾಗಿ ನೀಡುವ ಪರಿಪಾಠ ಬೆಳೆಸಿಕೊಂಡು ಕುರಿ ಕೋಳಿಗಳನ್ನ ಬಲಿಕೊಡುವ ಕ್ರಮವನ್ನು ಜಾರಿಗೆ ತಂದರು ಇವುಗಳೇ ದೇವಗಣಗಳು ದೇವತಾಪರಿವಾರಗಳು ಎಂತಾಗಿ ಭೂತ ಚೌಡಿ ಯಕ್ಷ ಮಂತಾದ ಹೆಸರಿನಲ್ಲಿ ನಡಾವಳಯಲ್ಲಿ ಬೆಳೆದುಬಂದಿದೆ. ಮುಂದೆ ಹಲವು ಜಾನಪದ ಕಥೆಗಳು ಹುಟ್ಟಿಕೊಂಡು ಅವುಗಳಂತೆಯೂ ದೇವಾಲಯಗಳು ಸ್ಥಾಪಿತವಾದುವು. ಹಲವು ದೇವಾಲಯಗಳಲ್ಲಿ ದೇವಾಲಯದ ಪ್ರಸಿದ್ಧಿಗಾಗಿ ಸ್ಥಳ ಪುರಾಣಗಳು ರಚಿಸಲ್ಲಪಟ್ಟು ಅವು ನಂಬಿಕೆ ನಡಾವಳಿಗಳಾಗಿ ಮುಂದುವರಿದುಕೊಂಡು ಬಂದುವು ಹೀಗೆ ಬಹುವಿಸ್ತಾರವಾಗಿ ಭಾರತೀಯರಲ್ಲಿ ಬಹುದೇವತಾರಾಧನೆ ಹಾಸುಹೊಕ್ಕಿದ್ದು ಜೀವನದ ಅವಿಬಾಜ್ಯ ಅಂಗವಾಗಿದೆ,
- ಶ್ರೀಜಿ