ಪುರಾಣಗಳಲ್ಲಿ ಬಹು ದೇವರ ಕಲ್ಪನೆ ಹೇಗೆ ಆರಂಭವಾಯಿತು? ಪರಮಾತ್ಮನಿಗೂ ದೇವರಿಗೂ ಇರುವ ವ್ಯತ್ಯಾಸ ಏನು? ಹಿಂದೂಗಳ ಪ್ರಮುಖ ದೇವರುಗಳು ಯಾರು?
ಪರಮಾತ್ಮ ಸರ್ವಗುಣ ಸಂಪನ್ನ ನಾದರೆ ದೇವರುಗಳು ಭಗವಂತನ ಪ್ರಧಾನ ಗುಣ ಪ್ರತಿನಿಧಿಗಳಾಗಿದ್ದಾರೆ. ಅವುಗಳಲ್ಲಿ ಅತೀ ಮುಖ್ಯವಾದ ಸೃಷ್ಟಿ, ಸ್ಥಿತಿ, ಲಯ ಮೂರುಗುಣಗಳಿಂದ ತ್ರಿಮೂರ್ತಿಗಳ ಉದಯ ವಾಯಿತು. ಹೀಗೆ ಗುಣಕ್ಕೆ ರೂಪಕೊಡುವ ಮೂಲಕ ಪುರಾಣ ಕಥೆಗಳ ಪಾತ್ರಗಳು ಸೃಷ್ಟಿಯಾದುವು. ಸೃಷ್ಟಿಕರ್ತ ಪರಮಾತ್ಮನಲ್ಲಿರುವ ಸದ್ಗುಣಗಳಲ್ಲಿ ಮುಖ್ಯವಾದ ಮೂರುಗುಣಗಳನ್ನು ಪರಿಗಣಿಸಿ ಇವುಗಳನ್ನು ಪ್ರತಿನಿಧಿಸುವ ಮೂರು ದೇವರುಗಳ ಪೌರಾಣಿಕ ಕಲ್ಪನೆಯಲ್ಲಿ ಪಾತ್ರಗಳನ್ನು ಸೃಷ್ಠಿಸಿ ಪುರಾಣಗಳನ್ನು ರಚಿಸಿದರು, ಈ ಮೂರುಗುಣಗಳೇ ತ್ರಿಗುಣಗಳಾದ ಸಾತ್ವಿಕ, ರಾಜಸ, ತಾಮಸ, ಗುಣಗಳು. ಕೆಲಸ ಸೃಷ್ಠಿ, ಸ್ಥಿತಿ, ಲಯ. ಭಗವಂತನ ಈ ಮೂರು ಗುಣಗಳ ಪ್ರಕಟಿತ ರೂಪವೇ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರ, ಇವರೇ ಹಿಂದೂ ಸಂಸ್ಕೃತಿಯ ಪ್ರಧಾನವಾದ ದೇವರು ಗಳಾಗಿದ್ದಾರೆ. ಸಂಸ್ಕೃತಿಗೆ ಆಧಾರ ಸ್ಥಂಭ ವಾಗಿದ್ದಾರೆ. ಈ ಕಲ್ಪನೆಯನ್ನೇ ಆಂಗ್ಲರು GOD ಎಂದು ಕರೆದಿದ್ದಾರೆ ಹಿಂದೂ ಸಂಸ್ಕೃತಿಯಿಂದ ಪ್ರೇರಣೆ ಪಡೆದವರಾಗಿದ್ದಾರೆ. ಅವರು ರೂಪವನ್ನು ಅನುಕರಿಸಿಲ್ಲ ಆದರೆ ತ್ರಿಮೂರ್ತಿಗಳ ಗುಣಗಳನ್ನು ಒಪ್ಪಿದ್ದಾರೆ. ಇದುವೇ generator operator and destroyer = GOD ಆಗಿದೆ.
ಸೃಷ್ಠಿ ಸ್ಥಿತಿ ಹಾಗೂ ಲಯ ಈ ಮೂರು ಕ್ರಿಯೆಗಳು ಪ್ರಕೃತಿಯಲ್ಲಿ ನಿರಂತರ ನಡೆಯುವ ಪ್ರಕ್ರಿಯೆಗಳು ಪರಮಾತ್ಮನ ಕೆಲಸಗಳು ಅಥವಾ ಗುಣಗಳು. ಈಗುಣಗಳಿಗೆ ಆಕಾರ ರೂಪ ಕೊಟ್ಟಾಗ ಬ್ರಹ್ಮ ವಿಷ್ಣು ಮಹೇಶ್ವರರು ರೂಪುಗೊಂಡರು. ಇವರಲ್ಲಿ ಯಾರು ಹೆಚ್ಚು ಯಾರುಕಡಿಮೆ ಎಂಬುದಿಲ್ಲ. ಈ ಮೂರರಲ್ಲಿ ಯಾವಗುಣ ಕೊರತೆಯಾದರೂ ಸೃಷ್ಟಿ ಮುಂದುವರಿಯುವುದಿಲ್ಲ. ಹುಟ್ಟು ನಿಂತರೂ ಅಥವಾ ಹುಟ್ಟಿದವರು ಸಾಯದೇ ಇದ್ದರೂ ಅಥವಾ ಹುಟ್ಟುವುದು ಸಾಯುವುದು ಎರಡರ ನಡುವೆ ಬದುಕಿಗೆ ಅವಕಾಶವಿಲ್ಲದಿದ್ದರೂ ಈ ಜೀವ ಜಗತ್ತು ನಡೆಯಲಾರದು. ಆದುದರಿಂದ ಭಗವಂತನ ಈ ನಿರಂತರ ಪ್ರಕ್ರಿಯೆಯ ಪ್ರತಿನಿಧಿಗಳೇ ಬ್ರಹ್ಮ ವಿಷ್ಣು ಮಹೇಶ್ವರ ರಾಗಿದ್ದಾರೆ, ಹಾಗೂ ಮೂವರೂ ಪ್ರಧಾನರೇ ಆಗಿದ್ದಾರೆ ಮೂವರೂ ಎಂದರೆ ಮೂರು ಕಾರ್ಯಗಳು ಹಾಗೂ ಮೂರು ಶಕ್ತಿರೂಪಗಳೆಂದು ಪರಿಗಣಿಸಬೇಕೇ ಹೊರತು ಮೂರು ಭಿನ್ನ ವ್ಯಕ್ತಿಗಳೆಂದುದಾಗಿ ಪರಿಗಣಿಸುವುದು ತಪ್ಪಾಗುವುದು. ಇವರಲ್ಲಿ ಹೆಚ್ಚುಕಮ್ಮಿ ಎನ್ನುದಕ್ಕೆ ಅವಕಾಶ ಇಲ್ಲ. ಒಬ್ಬ ಕಲಾವಿದ ಹಲವು ಪಾತ್ರಗಳನ್ನು ಮಾಡಿದಂತೆ.
ಕೇವಲ ಮೂರು ಪಾತ್ರಗಳಿಂದಷ್ಟೇ ಹೇಳಬೇಕಾಗಿದ್ದನ್ನೆಲ್ಲಾ ಹೇಳುವುದಕ್ಕಾಗುವುದಿಲ್ಲ ವಾದ್ದರಿಂದ ಭಗವಂತನ ಒಂದೊಂದು ವಿಭಿನ್ನ ಗುಣಗಳನ್ನೂ ಹೇಳಲು ಒಂದೊಂದು ಪಾತ್ರಗಳ ಸೃಷ್ಠಿಆಯಿತು. ಇಲ್ಲವೇ ಭಗವಂತನ ವಿಶೇಷಗುಣಗಳನ್ನು ತಮ್ಮ ಜೀವನದಲ್ಲಿ ಪ್ರಕಟಿಸಿದವರನ್ನು ದೇವರು ಎಂದು ಕರೆಯಲಾಯಿತು. ಸಾಮಾನ್ಯ ಮನುಷ್ಯರಿಗೆ ಅರ್ಥವಾಗಬೇಕಿದ್ದಲ್ಲಿ ಅವರ ಜೀವನ ಅನುಭವಕ್ಕೆ ಅನುಕೂಲವಾಗುವ ರೀತಿಯಲ್ಲಿ ಧರ್ಮಸೂಕ್ಷ್ಮಗಳನ್ನು ಹೇಳಬೇಕು ಹಾಗೂ ಬದುಕಿಗೆ ಪ್ರೇರಣೆ ಸಿಗಬೇಕು ಎನ್ನುವ ದೃಷ್ಟಿಯಿಂದ ಜನಸಾಮಾನ್ಯರಿಗೆ ಅರ್ಥವಾಗುವಂತೆಯೂ ಅನುಕರಣೆಗೆ ಯೋಗ್ಯವಾಗಿಯೂ ಇರಬೇಕೆಂದು ಈ ದೇವರುಗಳಿಗೂ ನಮ್ಮಂತೆಯೇ ಜೀವಿಸುವ ಕಲ್ಪನೆ ಕೊಡಲಾಯಿತು. ಅವರಿಗೂ ಹೆಂಡತಿ ಮಕ್ಕಳು ವಿವಾಹಸಂಸಾರ ಎಲ್ಲವನ್ನೂ ಕಲ್ಪಸಲಾಯಿತು ಎಲ್ಲರಿಗೂ ಒಂದೊಂದು ಹೆಸರು ಕೊಡಲಾಯಿತು ದೇವರ ಪರಿವಾರಗಳನ್ನು ದೇವತೆಗಳೆಂದು ಕರೆದರು. ಪ್ರತಿಯೊಂದು ದೇವರುಗಳೂ ದೇವತೆಗಳೂ ಒಂದೊಂದು ವಿಶೇಷ ಗುಣಗಳನ್ನು ಹೊಂದಿದ್ದು ಅವುಗಳ ಪ್ರತಿನಿಧಿಗಳೆನಿಸಿಕೊಂಡರು. ಮುಂದೆ ಭಕ್ತರು ಇಂತಹ ದೇವರುಗಳಲ್ಲಿಯೇ ವಿಶೇಷಗುಣದೊಂದಿಗೆ ಸರ್ವಗುಣಗಳನ್ನೂ ಕಾಣತೊಡಗಿದರು. ಹೀಗೆ ಒಂದೊಂದು ದೇವರುಗಳೂ ವಿವಿಧ ರೂಪಗಳನ್ನು ಪಡೆದರು. ಹೀಗೆ ದೇವರ ವಿಧಗುಣಗಳ ಆಧಾರದ ಮೇಲೆ ಸಹಸ್ರನಾಮಾವಳಿಗಳ ರಚನೆ ಆಯಿತು. ದೇವರ ಹೆಂಡತಿಯರಿಗೆ ದೇವಿ ಎಂದು ಕರೆದರೆ ಪರಿವಾರದವರಿಗೆ ದೇವತೆಗಳು, ಗಣಗಳು, ಎಂದು ಕರೆದರು ದೇವರ ಕಾರ್ಯಕ್ಕೆ ಸಹಾಯಮಾಡುವ ಕೆಲಸವನ್ನು ದೇವತೆಗಳಿಗೆ ಕಲ್ಪಿಸಿದರು. ಹೀಗೆ ಪರಮಾತ್ಮವ ವಿವಿಧ ಗುಣಗಳು ವಿವಿಧರೂಪ ಪಡೆದು ಬಹುದೇವತಾರಾಧನೆ ಆರಂಭವಾಯಿತು ಮತ್ತು ಅಂತಹ ದೇವರುಗಳನ್ನೂ ಪುನಃ ಬಹುರೂಪ ದಲ್ಲಿ ನೋಡಲಾಗಿ ಸಂಸ್ಕೃತಿ ವಿಸ್ಥಾರ ವಾಯಿತು. ಹೀಗೆ ಇಂದು ನಾವು ಪೂಜಿಸುವ ಆರಾಧಿಸುವ ಎಲ್ಲಾ ದೇವ ದೇವತೆಗಳ ಕಲ್ಪನೆಯ ಮೂಲ ಒಬ್ಬನೇ ಪರಮಾತ್ಮನಾಗಿದ್ದಾನೆ. ಅಥವಾ ಒಂದೇ ಶಕ್ತಿ ಕೇಂದ್ರವಾಗಿದೆ. ಹಾಗೂ ದೇವರು ದೇವತೆಗಳೆಲ್ಲಾ ಆತನ ಗುಣದ ಪ್ರತೀಕಗಳಾಗಿದ್ದಾರೆ. ಇವರೆಲ್ಲಾ ಬೇರೆ ಬೇರೆ ಇವರಲ್ಲಿ ವಿಷ್ಣು ಹೆಚ್ಚು ಉಳಿದವರು ಕಡಿಮೆ ಎನ್ನುವ ದ್ವೈತ ಸಿದ್ದಾಂತ ವಿದೆ. ಶಿವನೇ ಹೆಚ್ಚೆನ್ನುವ ಶೈವ ಸಿದ್ದಾಂತ ವಿದೆ ಇದು ವಿಭಾಜಕ ಸಿದ್ಧಾಂತ ವಾಗಿದ್ದು ಸಮಾಜದ ಹಾಗೂ ಸಮಾಜದ ಸಮಷ್ಠಿಯ ಏಕತೆಗೆ ಧಕ್ಕೆತರುತ್ತದೆ. ತಾರತಮ್ಯದಿಂದ ಏಕತೆಯ ನಾಶವೇ ಹೊರತು ಹಿಂದೂಗಳು ಒಗ್ಗಟ್ಟು ಹೊಂದುವುದು ಸಾದ್ಯವಿಲ್ಲ. ಆದುದರಿಂದ ಬೇಧ ಸಿಧ್ಧಾಂತವನ್ನು ವಿದ್ವಜ್ಜನರು ತಮ್ಮ ವ್ಯಾಪ್ತಿಯೊಳಗೆ ಚರ್ಚಿಸಬೇಕೇ ಹೊರತು ಸಾರ್ವಜನಿಕವಾಗಿ ಪ್ರಚಾರಕ್ಕಿಳಿಯುವುದರಿಂದ ಸಮಾಜಕ್ಕೆ ಹಾನಿಯುಂಟಾಗುವುದು. ಸಾಮರಸ್ಯಕ್ಕೆ ಧಕ್ಕೆ ಉಂಟಾಗುವುದು.
ಹಾಗೆಯೇ ಜಗತ್ತಿನ ಗುಣಗಳಲ್ಲಿ ಸಕಾರಾತ್ಮಕದಂತೆಯೇ ನಕಾರಾತ್ಮಕವೂ ಇದೆ ಇದರಮೂಲವೂ ಭಗವಂತನೇ ಎಂದು ತಿಳಿಯಬೇಕು ಸರ್ವಶಕ್ತಿಮೂಲವೂ ಆತನೇ ಆಗಿದ್ದಾನೆ. ಈ ನಕಾರಾತ್ಮಕ ಅಂಶಗಳನ್ನು ಪ್ರತಿನಿಧಿಸಿದವರನ್ನು ಅಸುರರು, ರಾಕ್ಷಸರು ಎಂಬುದಾಗಿ ರೂಪಕೊಟ್ಟು ಅವರ ನಾಶಕ್ಕೆ ದೇವರುಗಳು ಮಾರ್ಗದರ್ಷನ ಮಾಡುವಂತೆ ಪ್ರೇರಣೆಯಾಗುವಂತೆ ಪುರಾಣಗಳನ್ನು ಸೃಷ್ಟಿಸಿದ್ದಾರೆ. ಈ ಪುರಾಣಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳನಡುವಿನ ಹೋರಾಟದ ಮಾದರಿಯಾಗಿದ್ದು ಜನರನ್ನು ಸಕಾರಾತ್ಮಕ ಗುಣದಲ್ಲಿ ಬದುಕಲು ಪ್ರೇರಣೆ ಕೊಡುವ ಹಾಗೂ ಮಾರ್ಗದರ್ಷನ ನೀಡುವ ಮಹಾನ್ ಸಾಹಿತ್ಯಗಳಾಗಿವೆ. ಅವುಗಳಲ್ಲಿ ನಮ್ಮ ಜೀವನದ ಉನ್ನತಿಗೆ ಬೇಕಾದ ಅಂಶಗಳನ್ನು ಪಡೆದು ಕೊಂಡು ಅನಗತ್ಯವಾದುದನ್ನು ನಿರ್ಲಕ್ಷಿಸಬೇಕಾದುದು ಬುದ್ದಿವಂತರ ಹಾಗೂ ವಿವೇಕಿಗಳ ಲಕ್ಷಣವಾಗಿದೆ. ಅದನ್ನುಬಿಟ್ಟು ಮೌಢ್ಯದಿಂದ ವಿತಂಡ ವಾದಮಾಡುವುದು, ಪುರಾಣದಲ್ಲಿರುವುದನ್ನೆಲ್ಲಾ ಸತ್ಯವೆಂದು ಸಾಧಿಸುತ್ತೇನೆಂದು ವಾದಮಾಡುವುದು, ಪ್ರತಿಪಾದಿಸಲು ಹೆಣಗಿ ಅಪಹಾಸ್ಯಕ್ಕೀಡಾಗುವುದು ಇವೆಲ್ಲಾ ಮೂರ್ಖತನದ ಪರಮಾವಧಿಯಾಗಿದೆ. ಯಾವುದೇ ಪುರಾಣಗಳನ್ನು ನಡೆದ ಘಟನೆ ಎಂದು ನಿರೂಪಿಸಲು ಸಾಕ್ಷ ಒದಗಿಸಲು ನಮ್ಮಿಂದ ಸಾಧ್ಯಇಲ್ಲ ಎನ್ನುವ ಅರಿವು ನಮಗೆ ಇರಬೇಕಾದುದು ಅಗತ್ಯ. ಅದು ನಂಬಿಕೆಯ ವಿಷಯವಾಗಿದೆ, ಪುರಾಣಗಳಲ್ಲಿ ಬರುವ ಅತಿಮಾನುಷ ಕಥೆಗಳನ್ನು ಅದರ ತತ್ವಗಳ ಆಧಾರದಮೇಲೆ ಸ್ವೀಕರಿಸುವುದು ಸೂಕ್ತವೇ ಹೊರತು ಕಥೆ ಇದ್ದಹಾಗೇ ಘಟನೆ ಘಟಿಸಿದೆ ಎಂದು ವಾದಿಸುವುದು ನಿರೂಪಿಸಲಾಗದ ವ್ಯರ್ಥ ವಾದವಾದೀತು. ಆದರೂ ಅದರಲ್ಲಿನ ಅನೇಕ ವಿಷಯಗಳು ಸಮಾಜದ ಹಲವು ವಿಷಯಗಳನ್ನು ಒಳಗೊಂಡಿದ್ದು ಹಲವು ವಿಚಾರಗಳು ಕಾಲ್ಪನಿಕ ರೋಚಕತೆಯಿಂದ ಲೂಕೂಡಿದೆ ಎನ್ನುವುದನ್ನು ನಾವು ಒಪ್ಪಬಹುದು. ಎಲ್ಲವೂ ಕಲ್ಪನೆಯಲ್ಲ ಎಲ್ಲವೂ ವಾಸ್ತವವೂ ಅಲ್ಲ ಎನ್ನುವುದೇ ಸತ್ಯ ಇಲ್ಲಿ ನಮ್ಮ ಬುದ್ದಿಯಿಂದ ವಿವೇಚಿಸಿ ನಾವು ಸತ್ಯವನ್ನು ಅರಿತು ಮೌಢ್ಯವನ್ನು ಕಡೆಗಣಿಸಬೇಕು. ಎಲ್ಲಕ್ಕಿಂತ ಹೆಚ್ಚು ಇವುಗಳಲ್ಲಿಯ ಮೌಲ್ಯಗಳನ್ನು ಅರಿತು ಅಳವಢಿಸಿಕೊಂಡು ಬದುಕೋಣ. ದೇವರೆಂದರೆ ಜೀವನ ಮೌಲ್ಯಗಳು ಎನ್ನಬಹುದು. ಅಥವಾ ಮೌಲ್ಯಗಳ ಬೀಜಾಂಕುರ ವಾಗಿದೆ.
ಹಿಂದು ಸಂಸ್ಕೃತಿಯ ಭಾಗವಾದ ಮೂವರು ಮುಖ್ಯ ದೇವರುಗಳಾದ ಬ್ರಹ್ಮ ವಿಷ್ಣು ಹಾಗೂ ಶಿವ ಇವರು ಪುರಾಣಗಳಲ್ಲಿ ಮೂಲ ಶಕ್ತಿಯಿಂದ ಜನ್ಮಪಡೆಯುತ್ತಾರೆ. ಇವರ ಕಾರ್ಯ ಸೃಷ್ಠಿ ಸ್ಥಿತಿ ಲಯ, ಇವರಿಗೆ ಅನುಕ್ರಮವಾಗಿ ಸರಸ್ವತಿ ಲಕ್ಷ್ಮಿ ಹಾಗೂ ಪಾರ್ವತಿ ಯರು ಪತ್ನಿಯರು, ಇವರು ಪ್ರತಿನಿಧಿಸುವ ಮುಖ್ಯ ಗುಣಗಳು ವಿದ್ಯೆ ಸಂಪತ್ತು ಹಾಗೂ ಸೌಭಾಗ್ಯ ಮುಂದೆಲ್ಲಾ ಇವರಿಂದಲೇ ಸೃಷ್ಠಿಯ ಕಥೆ ಹೆಣೆಯಲ್ಪಡುತ್ತದೆ. ಹಾಗೂ ಸಂಸಾರ ಪರಿವಾರ ಬೆಳೆದು ಲೆಕ್ಕ ಇಲ್ಲದಷ್ಟು ದೇವ ತೇವತೆಗಳು ರೂಪುಗೊಳ್ಳುತ್ತಾ ಹೋಗುವುದು ನಮ್ಮ ಸಂಸ್ಕೃತಿಯ ಭಾಗ ಹಾಗೂ ಈಗಿನ ಗೊಂದಲದ ಮೂಲವಾಗಿದೆ.
ಈ ತ್ರಿಮೂರ್ತಿಗಳಲ್ಲಿ ವಿಷ್ಣು ಹಾಗೂ ಶಿವ ಇವರಿಗೆ ಅತಿ ಹೆಚ್ಚು ಮಹತ್ವ ಕೊಡಲಾಗಿದ್ದು ಎಲ್ಲೆಡೆ ದೇವಾಲಯ ಗಳು ಪೂಜೆ ಉತ್ಸವಗಳು ಇದ್ದು ಬ್ರಹ್ಮನನ್ನು ಕಡೆಗಣಿಸಲಾಗಿದೆ ಏಕೆ? ಎನ್ನುವ ಸಂಶಯಬರಬಹುದು ಮನುಷ್ಯನು ಯಾವಾಗಲೂ ಸ್ವಾರ್ಥಚಿಂತಕ ನಾಗಿದ್ದಾನೆ. ಹಿರಿಯರು ಎಷ್ಟೇ ಹೇಳಿದರೂ ಮನಸ್ಸು ತ್ಯಾಗದತ್ತ ಹೊರಳುವುದು ವಿರಳ. ನಮಗೆ ಉಪಯೋಗವಿಲ್ಲ ಎಂದು ತಿಳಿದರೆ ಅಂತಹವರನ್ನು ನಾವು ಅನಾದರ ಮಾಡುತ್ತೇವೆ ಅವರು ನಮಗೆ ಮಾಡಿದ ಉಪಕಾರವನ್ನು ಮರೆತು ಮುಂದೆ ಯಾರಿಂದ ಲಾಭ ಇದೆ ಅವರನ್ನು ಒಲೈಸುವುದು ನಮ್ಮ ಸಹಜ ಸ್ವಭಾವವಾಗಿದೆ. ಇದೇ ಗುಣ ಈ ದೇವರ ವಿಚಾರದಲ್ಲಿಯೂ ವ್ಯಕ್ತವಾಗಿದೆ ಎಂದು ತರ್ಕಿಸಿದರೆ ತಪ್ಪಾಗಲಾರದು. ಬ್ರಹ್ಮನ ಕೆಲಸ ಸೃಷ್ಠಿ ಅಂದರೆ ನಮ್ಮ ಜನ್ಮ ಆದಾಗಲೇ ಬ್ರಹ್ಮನ ಕೆಲಸ ಮುಗಿದಿದೆ. ನಮಗೆ ಬುದ್ದಿಬರುವಾಗ ನಾವು ಆಲೋಚಿಸುವುದು ಇನ್ನು ಬದುಕುವುದು ಹೇಗೆ ಹಾಗೂ ಸಾವಿನಿಂದ ತಪ್ಪಿಸಿಕೊಳ್ಳುವುದು ಹೇಗೆಂಬ ಚಿಂತೆ ಈ ಎಡೂ ಕ್ರಿಯೆಯಲ್ಲಿಯೂ ಬ್ರಹ್ಮನ ಕೆಲಸ ಇಲ್ಲ ಆದುದರಿಂದ ಬ್ರಹ್ಮನನ್ನು ಮರೆತು ವಿಷ್ಣು ಹಾಗೂ ಶಿವರನ್ನು ಮೆಚ್ಚಿಸಲು ಓಲೈಸಲು ಮನುಷ್ಯ ಮುಂದಾಗಿದ್ದಾನೆ. ಇದರ ರೂಪವಾಗಿಯೇ ಇದಕ್ಕೆ ಪೂರಕವಾಗಿಯೇ ಮನುಷ್ಯನ ಅಪೇಕ್ಷೆಗೆ ತಕ್ಕಂತೆ ಸಂಸ್ಕೃತಿಯ ವಿಕಸನ ವಾಗಿದೆ. ಸರ್ವಜಗತ್ತನ್ನು ಸೃಷ್ಠಿಸಿದವನು ಪರಮಾತ್ಮನಾದರೆ ಪರಮಾತ್ಮನ ಬಹುರೂಪಗಳನ್ನು ಸೃಷ್ಠಿಸಿದವರು ನಾವುಗಳೇ ಆಗಿದ್ದೇವೆ, ಈಜನ್ಮದಲ್ಲಿ ಪುನಃ ಹುಟ್ಟುವ ಅವಕಾಶವಿಲ್ಲದುದರಿಂದ ಬ್ರಹ್ಮನ ದೇವಾಲಯಕ್ಕೆ ಪ್ರಾಮುಖ್ಯತೆ ಬಂದಿಲ್ಲ ಆದರೆ ವಿದ್ಯೆಬೇಕಿರುವುದರಿಂದ ಬ್ರಹ್ಮನ ಪತ್ನಿ ಸರಸ್ವತಿಯ ದೇವಾಲಯ ಎಲ್ಲಾಕಡೆಯೂ ಇದೆ. ಲಾಭ ಇದ್ದರೆ ಮಾತ್ರ ಪೂಜೆ ಅಲ್ಲವೇ? ಹಾಗೆಯೇ ಸಂಸ್ಕೃತಿ ಬೆಳೆದಂತೆ ಸಮಾದಲ್ಲಿ ಗುಂಪುಗಾರಿಕೆ ಆರಂಭವಾಯಿತು ಇದರಿಂದಾಗಿ ವಿಷ್ಣುವಿನ ಆರಾಧಕರು ಶೈವಾರಾಧಕರು ಎಂಬುದಾಗಿ ಎರಡು ಪಂಗಡ ವಾಗಿ ಅವರವರಲ್ಲಿ ತಾನು ಮೇಲು ತಾನು ಮೇಲು ಎಂಬುದಾಗಿ ವಾಗ್ವಾದ ಆರಂಭವಾಯಿತು. ಆರಂಭದಲ್ಲಿ ಶಿವನ ಆರಾಧನೆ ಭಾರತದಾದ್ಯಂತ ಹೆಚ್ಚು ಪ್ರಚಲಿತದಲ್ಲಿತ್ತು ಲಿಂಗಾರಾಧನೆ ಮೂರ್ತಿಗಳು ಸೃಷ್ಠಿಯಾಗುವ ಮೊದಲೇ ಇದ್ದಂತಹ ಆರಾಧನಾ ಪದ್ದತಿ. ಯಜ್ಞಯಾಗಾದಿಗಳ ನಂತರದ ಹಂತ ಲಿಂಗಾರಾಧನೆ ಮುಂದೆ ವೈಷ್ಣವ ಪರಂಪರೆಯಿಂದ ಮೂರ್ತಿಗಳು ಹೆಚ್ಚು ಪ್ರಚಲಿತಕ್ಕೆ ಬಂದುವು. ಆಗ ಹೀಗೆ ಭಿನ್ನ ಪಂಗಡಗಳು ತಮ್ಮ ತಮ್ಮ ದೇವರನ್ನು ಶ್ರೇಷ್ಠ ಎಂದು ಸಾಧಿಸಲು ಪುರಾಣ ಗಳನ್ನು ಸೃಷ್ಠಿಸಿದರು, ಹೀಗೆ ಹದಿನೆಂಟು ಪುರಾಣಗಳು ಸೃಷ್ಠಿಯಾಗಿವೆ ಇವುಗಳನ್ನೆಲ್ಲಾ ವ್ಯಾಸರೆ ಬರೆದಿದ್ದಾರೆ ಎನ್ನುತ್ತಾರೆ ಆದರೆ ಇವುಗಳು ಆಯಾ ಗುಂಪುಗಳ ಪಂಡಿತರುಗಳಿಂದ ವ್ಯಾಸರ ಹೆಸರಿನಲ್ಲಿ ಬರೆಯಲ್ಪಟ್ಟಿವೆ ಎನ್ನಬಹುದು, ಎಲ್ಲಾಪುರಾಣಗಳೂ ಅಲ್ಲಿಯ ಕಥಾನಾಯಕನಿಂದಲೇ ವಿಶ್ವಸೃಷ್ಠಿ ಎಂದು ಪ್ರತಿಪಾದಿಸುತ್ತವೆ. ಹೀಗೆ ಗಾಣಪತ್ಯ, ಶಾಕ್ತ, ಕಾಪಾಲಿ, ಮುಂತಾದ ಪಂಗಡಗಳೂ ಹುಟ್ಟಿಕೊಂಡವು. ವೈಷ್ಠವರಿಂದ ಭಾಗವತ ಸೃಷ್ಠಿಯಾಗಿ ದಶಾವತಾರದ ಸೃಷ್ಠಿಯಾಯಿತು. ಉತ್ತಮ ಆದರ್ಷ ಬದುಕನ್ನು ಬದುಕಿ ದೈವತ್ವಕ್ಕೇರಿದ ಶ್ರೀರಾಮ ಶ್ರೀಕೃಷ್ಣ ರನ್ನು ವಿಷ್ಣುವಿನ ಅವತಾರ ಎಂಬುದಾಗಿ ಪರಿಗಣಿಸಲಾಯಿತು. ಅವರ ಬದುಕಿನ ಆದರ್ಷಗಳೇ ಭಾರತೀಯ ಸಂಸ್ಕೃತಿಯ ಬೆಳವಣಿಗೆಗೆ ಮುಖ್ಯ ಆಧಾರವಾಗಿದೆ. ಮುಂದೆ ಬೌದ್ಧ ಮತ ಪ್ರಚಾರಕ್ಕೆ ಬಂದು ಸನಾತನ ಸಂಸ್ಕೃತಿ ವಿನಾಶದತ್ತ ಜಾರಲು ಆರಂಭವಾದಾಗ ಅಪಾಯವನ್ನು ಅರಿತ ಅಂದಿನ ಜ್ಞಾನಿಗಳು ಹಿಂದೂಗಳ ಏಕತೆಗಾಗಿ ಬುದ್ಧನನ್ನು ವಿಷ್ಣುವಿನ ಒಂಬತ್ತನೇ ಅವತಾರವೆಂಬುದಾಗಿ ಬಿಂಬಿಸಿ ಜನರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದರು. ಇಂದಿಗೂ ದಶಾವತಾರದಲ್ಲಿ ಬೌದ್ಧಾವತಾರವನ್ನು ವೈಷ್ಣವರು ಎಲ್ಲಿಯೂ ವಿಷ್ಣುವಿಗೆ ಸರಿಸಮನಾಗಿ ಪರಿಗಣಿಸದಿರುವುದನ್ನು ಪೂಜಿಸದಿರುವುದನ್ನು ನಾವು ನೋಡತ್ತೇವೆ ಇದೊಂದು Damage controle ಉಪಕ್ರಮವೆಂಬುದಾಗಿ ನಾವು ಅರಿಯಬಹುದಾಗಿದೆ.
ಹೀಗೆ ಕಾಲದ ಅಗತ್ಯದಂತೆ ಪುರಾಣಗಳು ಅವುಗಳ ಪಾತ್ರದಾರಿಗಳೂ ದೇವರು ದೇವತೆಗಳೆಂದು ಗರುತಿಸಲ್ಪಟ್ಟು ಅವರುಗಳ ವಿಗ್ರಹಗಳು ಗುಡಿಗಳು ಸ್ಥಾಪಿತವಾಗಿ ಪೂಜೆಗೊಳ್ಳಲಾರಂಭಿಸಿದವು ಇದುವೇ ಬಹುದೇವತಾರಾಧನೆ, ವಿಗ್ರಹಾರಾಧನೆ ಇವುಗಳಿಗೆಲ್ಲಾ ಕಾರಣ ವಾಯಿತು, ಇಲ್ಲೆಲ್ಲಾ ಪೂಜಿಸಲ್ಪಡುವ ರೂಪ ಹಾಗೂ ದೇವರುಗಳೆಲ್ಲಾ ಭಗವಂತನ ತತ್ವ ರೂಪಗಳಾಗಿದ್ದು ಒಂದೇಮೂಲವನ್ನು ಪ್ರತಿನಿಧಿಸುತ್ತವೆ ಎನ್ನುವುದನ್ನು ಸ್ಪಷ್ಠವಾಗಿ ಅರಿಯಬೇಕು. ಹೇಗೆ ಮೂಲ ಹಾಲು –ಕೆನೆ, ಕೋವಾ, ಬೆಣ್ಣೆ, ತುಪ್ಪ, ಮೊಸರು, ಮಜ್ಜಿಗೆ, ಮುಂತಾಗಿ ವಿವಿಧ ರೂಪಗಳಲ್ಲಿ ವಿಭಿನ್ನ ರುಚಿಯನ್ನು ಗುಣವನ್ನು ಪ್ರದರ್ಷಿಸುತ್ತದೆಯೋ ಅಂತೆಯೇ ಭಗವಂತನ ಹಲವು ರೂಪಗಳು ಹಲವು ಗುಣಗಳೆಂಬುದು ಗೊಂದಲವಿಲ್ಲದೆ ತಿಳಿಯಬೇಕಾದ ಸತ್ಯವಾಗಿದೆ. ಭಗವಂತ ನಿರ್ಗುಣ ನಿರಾಕಾರ ಎಂದು ವೇದಗಳು ಹೇಳಿದ್ದರೂ ಅವನಿಗೆ ಗುಣ ಆಕಾರಗಳಲ್ಲಿ ಪೂಜಿಸುವುದು ನಮ್ಮ ಕಲ್ಪನೆ ಹಾಗೂ ಸಂಸ್ಕೃತಿಯ ಭಾಗವಾಗಿದೆ ಸಂಸ್ಕೃತಿಯೇ ಧರ್ಮದ ಜೀವಾಳವಾಗಿದೆ ಇದು ಧರ್ಮದ ರಕ್ಷಣೆಗೆ ಅನಿವಾರ್ಯವೂಆಗಿದೆ ದುರ್ಬಲ ಸಂಸ್ಕೃತಿಯ ನಾಗರೀಕಥೆಗಳೆಲ್ಲವೂ ಅನ್ಯಪಂಥಗಳ ಆಕ್ರಮಣದಿಂದ ನಾಶವಾಗಿದ್ದರೆ ಬಹುಸ್ಥರದ ವಿಶಾಲ ಭಾರತೀಯ ಸಂಸ್ಕೃತಿ ಸಾವಿರ ವರಷಗಳ ಪರಕೀಯರ ಆಕ್ರಮಣದಿಂದಲೂ ಇಂದಿಗೂ ಜೀವಂತವಾಗಿರುವುದು ನಮ್ಮ ಹಿರಿಯರು ರೂಪಿಸಿದ ಇಂತಹ ಶ್ರೀಮಂತ ಸಂಸ್ಕೃತಿಯಿಂದಾಗಿಯೇ ಸಾಧ್ಯವಾಗಿದೆ, ಇದರಬಗ್ಗೆ ನಾವು ಅಭಿಮಾನ ವನ್ನು ಹೊಂದ ಬೇಕು ಹಾಗೂ ಈ ಸಂಸ್ಕೃತಿ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕು ಅಜ್ಞಾನ ಅಂಧ ಶ್ರಧ್ಧೆಯನ್ನು ತೊರೆದು ಅಭಿಮಾನದಿಂದ ನಮ್ಮ ಸಂಸ್ಕೃತಿಯನ್ನು ರಕ್ಷಸಬೇಕಿದೆ ನಮ್ಮ ಸಂಸ್ಕೃತಿಯ ನಾಶಕ್ಕೆ ಹೊರಟಿರುವ ಜಾತ್ಯಾತೀತ ಎಡಬಿಡಂಗಿ ರಾಜಕಾರಣವನ್ನು ದೇಶಮುಕ್ತ ಗೊಳಿಸಬೇಕಿದೆ. ಹಿಂದೂ ವಿರೋಧೀ ಗಂಜಿಗಿರಾಕಿ ಬುದ್ದಿಜೀವಿಗಳನ್ನು ಮೂಲೆ ಸೇರಿಸಬೇಕಿದೆ ಹಾಗೂ ಧರ್ಮರಾಜ್ಯವನ್ನು ಸ್ಥಾಪಿಸಬೇಕಿದೆ.
- ಶ್ರೀಜಿ