ದೇವರು ಎಂದರೇನು? ದೇವರ ಕೆಲಸವೇನು? ಎಷ್ಟು ಜನ ದೇವರಿದ್ದಾರೆ ? ದೇವರಿಗೆ ಆಕಾರ ರೂಪ ಇದೆಯೇ?

ದೇವರು ಇದೊಂದು ಬಗೆಹರಿಯದ ನಿಗೂಢ ಪ್ರಶ್ನೆ ಇದರ ಉತ್ತರ ಹುಡುಕುವಲ್ಲಿ ಶ್ರಮಿಸಿದವರೆಷ್ಟೋ? ಸೋತವರೆಷ್ಟೋ? ದೇವರ ಹೆಸರಿನಲ್ಲಿಯೇ ಜಗತ್ತಿನಲ್ಲಿ ಎಷ್ಟೋ ಕದನ ಕೋಲಾಹಲಗಳು ನಡೆದಿವೆ ನಡೆಯುತ್ತಿವೆ. ಹಾಗಾದರೆ ದೇವರು ಎಂದರೆ ಏನು ದೇವರು ಇದ್ದಾನೆಯೇ? ಇದ್ದರೆ ಎಲ್ಲಿದ್ದಾನೆ ? ಹೇಗಿದ್ದಾನೆ ? ಅವನ ಕೆಲಸವೇನು ? ಹಲವು ದೇವರಿದ್ದಾರೆಯೇ? ಒಬ್ಬನೇ ದೇವರೇ? ಮುಂತಾಗಿ ಹಲವು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಉದ್ಭವ ವಾಗುತ್ತವೆ. ಗೊಂದಲಗಳೇರ್ಪಡುತ್ತವೆ. ಅದಕ್ಕೆ ಸಮಾದಾನದ ಪರಿಹಾರ ಕಂಡುಕೊಳ್ಳುವುದು ವಿಶ್ವಶಾಂತಿಗೆ ಅತೀ ಅಗತ್ಯ ವಾಗಿದೆ.

ದೇವರನ್ನು ಸಾಮಾನ್ಯ ಮನುಷ್ಯ ಆತನ ಸಾಮಾನ್ಯ ಜ್ಞಾನದಿಂದ ತಿಳಿಯುವುದು ಅಸಾಧ್ಯವೇ ಸರಿ. ಇದೊಂದು ಬಗೆಹರಿಸಲಾಗದ ಸಮಸ್ಯೆ. ದೇವರನ್ನು ಸಾಮಾನ್ಯರು ನೋಡಿಯೋ ಮುಟ್ಟಿಯೋ ತಿಳಿಯುವುದು ಅಸಾಧ್ಯ. ದೇವರು ಬಾಹ್ಯ ಅನುಭವಕ್ಕೆ ಸಿಗಲಾರನು. ದೇವರ ಅಸ್ಥಿತ್ವವನ್ನು ಅನುಭವದ ಸಾಧನೆಯಿಂದ ಮಾತ್ರವೇ ಅರಿಯಬಹುದು. ಅಪರಿಮಿತ ಸಾಧನೆಯಿಂದ ಅನುಭವಿಸಬಹುದು ಎನ್ನುವುದು ಸಾಧಕರ ಮಾತು. ಆದುದರಿಂದಲೇ ಜಗತ್ತಿನಲ್ಲಿ ಆಸ್ತಿಕ, ನಾಸ್ತಿಕ ಎನ್ನುವ ಎರಡು ದೊಡ್ಡ ವರ್ಗ ಇದೆ. ಆಸ್ತಿಕರೆಂದರೆ ಸಾಧಕರ ಮೇಲೆ ವಿಶ್ವಾಸವಿಟ್ಟು ಅವರ ಮಾತನ್ನು ನಂಬಿ ನಡೆಯುವವರು. ಪ್ರತಿಯೊಂದು ಜೀವಿಯ ಆತ್ಮದಲ್ಲಿಯೂ ಪರಮಾತ್ಮನಿದ್ದಾನೆ ವಿಶೇಷ ಚೈತನ್ಯವಿದೆ ಅದು ಅಮರವಾಗಿದೆ. ಎನ್ನುವುದು ಆಸ್ತಿಕರ ಮನಸ್ಥಿತಿ. ನಾಸ್ತಿಕರೆಂದರೆ ತಮ್ಮ ಅನುಭವಕ್ಕೆ ಬಂದಿದ್ದು ಮಾತ್ರ ಸತ್ಯ ತಮ್ಮ ಬುದ್ದಿಕೆ ನಿಲುಕುವಷ್ಟು ಮಾತ್ರ ವಾಸ್ತವ ಎನ್ನುವ ಕೂಪ ಮಂಡೂಕಗಳು. ಇವರು ಮೂರ್ಖರು ಆಗಿರುತ್ತಾರೆ ಎಲ್ಲದಕ್ಕೂ ವೈಜ್ಞಾನಿಕ ಕಾರಣವನ್ನು ದುರ್ಬಿನಿನಲ್ಲಿ ಹುಡುಕುತ್ತಾರೆ ಹಾಗೂ ತಮ್ಮ ಪ್ರಯತ್ನದಲ್ಲಿ ಸೋಲುತ್ತಾರೆ. ಇವರ ಯಾವ ಸೂಕ್ಷಮದರ್ಷಕವೂ ಇದುವರೆಗೆ ಜೀವವನ್ನು ಹುಡುಕಿಲ್ಲ ಈ ಪ್ರಶ್ನೆಗೆ ವಿಚಾರವಾದಿಗಳಲ್ಲಿ ಉತ್ತರ ಇಲ್ಲ. ತಮ್ಮ ಕಣ್ಣಿಗೆ ಕಾಣದ್ದೆಲ್ಲಾ ಮೂಢನಂಬಿಕೆ ಎನ್ನುತ್ತಾ ತಿರುಗುವ ಇವರು ಇಂತಹ ಉತ್ತರಿಸಲಾಗದ ಸನ್ನಿವೇಶದಲ್ಲಿ ಪಲಾಯನ ಮಾಡುತ್ತಾರೆ.

ವಿಶ್ವದಲ್ಲಿ ಒಂದು ಚಾಲಕಶಕ್ತಿ ಇದೆ ಎನ್ನುವುದು ಎಲ್ಲರೂ ನಂಬುವ ವಿಷಯ ಈ ಶಕ್ತಿಯ ಮೂಲವೇ ದೇವರು ಎನ್ನುವುದು ಸಾಮಾನ್ಯ ಅನುಭವ. ಆ ಶಕ್ತಿಗೆ ಮನುಷ್ಯರು ಒಬ್ಬೊಬ್ಬರು ಒಂದೊಂದು ಹೆಸರನ್ನು ಒಂದೊಂದು ರೂಪವನ್ನು ಒಂದೊಂದು ಗುಣವನ್ನು ಕಲ್ಪಿಸಿದ್ದರಿಂದ ನಿರಾಕಾರನಾದ ಭಗವಂತನು ವಿಶ್ವಾದ್ಯಂತ ಬಹುರೂಪಿಯಾಗಿ ವ್ಯಾಪಿಸಿದ್ದಾನೆ. ಸರ್ವಶಕ್ತಿಯ ಮೂಲಶಕ್ತಿಯೇ ದೇವರಾಗಿದ್ದಾರೆ. ಸೃಷ್ಟಿಯ ಮೂಲ ಕಣವೇ ದೇವರಾಗಿದ್ದಾರೆ. ಸಮಗ್ರ ಸೃಷ್ಟಿಯೇ ದೇವರಾಗಿದ್ದಾರೆ. ಸೃಷ್ಟಿ ಹಾಗೂ ದೇವರ ಸಂಬಂಧ ಆತ್ಮ ಹಾಗೂ ದೇಹದ ಸಂಬಂಧದಂತಿದೆ. ಸಮಗ್ರಸೃಸ್ಟಿಯಲ್ಲಿ ದೇವರು ವ್ಯಾಪಿಸಿದ್ದಾನೆ. ಸೃಸ್ಟಿ ದೇವರ ದೇಹವಾದರೆ ಶಕ್ತಿದೇವರ ಆತ್ಮವಾಗಿದೆ. ದೇಹ ಜಡವಾದರೆ ಆತ್ಮ ಚೇತನವಾಗಿದೆ. ಜಡ ರೂಪಾಂತರ ವಾಗಬಹುದು ಆದರೆ ಚೇತನ ನಿರಾಕಾರ ಶಾಶ್ವತ ಅದು ನಿರಂತರ ಆದುದರಿಂದಲೇ ದೇವರನ್ನು ಬ್ರಹ್ಮ ಎಂದು ಕರೆಯಲಾಗಿದೆ  ದೇವರು ಆದಿ ಅಂತ್ಯಗಳಿಲ್ಲದ ನಿರಂತರ ಚೇತನಾಶಕ್ತಿಯಾಗಿದೆ. ದೇವರಿಗೆ ಸರಿಸಾಟಿ ಇರುವಂತಹುದು ಜಗತ್ತಿನಲ್ಲಿ ಬೇರೆ ಇಲ್ಲ ದೇವರಶಕ್ತಿಯನ್ನು ಇನ್ನೊಂದರೊಂದಿಗೆ ಹೋಲಿಕೆ ಆಡುವುದು ಅಸಾದ್ಯ. ದೇವರನ್ನು ಸನಾತನ ಸಂಸ್ಕೃತಿ ವಿಸ್ಥಾರವಾಗಿ ವರ್ಣಿಸಿದೆ. ಒಂದು ಬೀಜ ಮರವಾಗಿ ಮರದಲ್ಲಿ ನೂರಾರು ಹಣ್ಣಾಗಿ ಅವುಗಳೆಲ್ಲವೂ ಮರವಾಗಿ ಸಾವಿರಾರು  ಮರಗಳ ಕಾಡಾದಂತೆ ಬೀಜರೂಪಿ ದೇವರೇ ಬ್ರಹ್ಮಾಂಡ ಸ್ವರೂಪ ತಾಳಿದ್ದಾನೆ. ಅವನನ್ನು ತಿಳಿಯುವುದು ತಿಳಿಸುವುದು ಪಾಮರರರಿಗೆ ಅಸಾಧ್ಯ. ನಾವು ದೇವರನ್ನು ವಿಮರ್ಷಿಸುವುದು ಒಂದು ಇರುವೆ ಆನೆಯನ್ನು ಅರಿತಂತಾಗಬಲ್ಲುದು. ದೇವರನ್ನು ಆತ್ಮವನ್ನು ಅರಿತಿದ್ದೇನೆನ್ನುವುದು ಮೂರ್ಖತನದ ಪರಮಾವಧಿಯೇಸರಿ. ಆದುದರಿಂದಲೇ ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಆಧ್ಯಾತ್ಮ ಚಿಂತಕರು ನಾನು ಆತ್ಮವನ್ನು ತಿಳಿದಿದ್ದೇನೆನ್ನುವವನು ಏನೂ ತಿಳಿಯದ ಮೂರ್ಖನಾಗಿದ್ದಾನೆ. ನಾನು ಏನೂ ತಿಳಿದಿಲ್ಲ ಎನ್ನುವವನು ತಿಳಿದವನಾಗಿದ್ದಾನೆ. ಎಂದು ತಿಳಿಸಿದ್ದಾರೆ. ದೇವರನ್ನು ಅರ್ಥಮಾಡಿಕೊಳ್ಳುವುದು ಅಸಂಭವವಾಗಿದೆ.

ವಿಶ್ವದಲ್ಲಿ ಒಂದು ಅತಿಂದ್ರಿಯ ಶಕ್ತಿ ಕೆಲಸಮಾಡುವುದನ್ನು ನಾವು ಹಲವುಸಂದರ್ಭದಲ್ಲಿ ಅನುಭವಿಸಿರುತ್ತೇವೆ ಈ ಅನುಭವವೇ ನಮಗೆ ದೇವರ ಅಸ್ಥಿತ್ವಕ್ಕೆ ಸಾಕ್ಷಿ ಒದಗಿಸುತ್ತದೆ. ಹಲವುಬಾರಿ ಹಲವರ ಪ್ರಾರ್ಥನೆ ಕಾಕತಾಳಿಯರೀತಿಯಲ್ಲಿ ಫಲನೀಡುವುದನ್ನು ಕಾಣುತ್ತೇವೆ. ಹಲವು ಕಷ್ಠಗಳು ಹಲವು ಪೂಜೆ ಪ್ರಾರ್ಥನೆ ಗಳಿಂದ ದೂರಾದ ಅನುಭವ ವಾಗುತ್ತವೆ.

ಇವುಗಳಿಂದ ನಾವು ತಿಳಿಯಬಹುದೇನೆಂದರೆ ಸೃಷ್ಟಿಯ ಒಬ್ಬ ಮೂಲಪುರುಷನಿದ್ದಾನೆ ಆತನು ಸರ್ವ ಶಕ್ತಿಯ ಸರ್ವ ರೂಪದ ಸರ್ವಗುಣದ ಮೂಲಪುರುಷನಾಗಿದ್ದು ಬೀಜರೂಪಿಯಾಗಿರುವ ಪರಮಾತ್ಮನಾಗಿದ್ದಾನೆ. ಸನಾತನ ದರ್ಷನ ಶಾಸ್ತ್ರಗಳು ದೇವರನ್ನು ನಿರ್ಗುಣ, ನಿರಾಕಾರ, ಸಚ್ಚಿದಾನಂದ, ಸ್ವರೂಪ, ಪರಭ್ರಹ್ಮ, ಎಂದೆಲ್ಲಾ ವರ್ಣಿಸಿವೆ. ಇದರಿಂದ ನಾವು ವಿಶ್ವಾಸವಿಡಬೇಕಾದುದು. ಹಾಗೂ ಗೊಂದಲ ರಹಿತ ಮನಸ್ಥಿತಿ ಹೊಂದಬೇಕಾದದಾರಿ ಯಾವುದೆಂದರೆ ನಮಗೆ ದೇವರಲ್ಲಿ ಸ್ಪಷ್ಟ ಪರಿಕಲ್ಪನೆ ಇರಬೇಕು.

ದೇವರು ಒಬ್ಬನೇ ಇದ್ದಾನೆ ಅಖಿಲಾಂಡಕೋಟಿ ಭ್ರಹ್ಮಾಂಡನಾಯಕನಾದ ದೇವರು ಭಿನ್ನ ಜನರಿಂದ ಭಿನ್ನ ಹೆಸರಿನಿಂದ ಭಿನ್ನರೂಪದಲ್ಲಿ ಆರಾಧಿಸಲ್ಪಡುತ್ತಿದ್ದಾನೆ. ದೇವರು ನಿರ್ಗುಣ ನಿರಾಕಾರ ರೂಪದಲ್ಲಿ ವಿಶ್ವವ್ಯಾಪಿಯಾಗಿದ್ದಾನೆ. ಇದರರ್ಥ ಆತನಿಗೆ ನಿರ್ಧಿಷ್ಠ ಆಕಾರವಿಲ್ಲ ಆದರೆ ಎಲ್ಲಾ ಆಕಾರಗಳಲ್ಲೂ ಆತನಿದ್ದಾನೆ ಅವನಿಲ್ಲದ ಸ್ಥಳ ಇಲ್ಲ. ಆತನಿಗೆ ನಿರ್ಧಿಷ್ಠ ಗುಣ ಇಲ್ಲ ಆದರೆ ಎಲ್ಲಗುಣಗಳೂ ಆತನದೇ ಆಗಿದೆ. ಹೀಗೆ ದೇವರು ಅಣುವಿಗಿಂತ ಚಿಕ್ಕವನೂ ಬ್ರಹ್ಮಾಂಡಕ್ಕಿಂತ ಮಿಗಿಲೂ ಆಗಿರುವನು.

ಆಕಾಶಾತ್ ಪತಿತಂ ತೋಯಂ ಯಥಾ ಗಚ್ಚತಿ ಸಾಗರಂ, ಸರ್ವದೇವಃ ನಮಸ್ಕಾರಃ ಕೇಶವಂ ಪ್ರತಿ ಗಚ್ಚತಿ ಎನ್ನುವ ಶ್ಲೋಕದಲ್ಲಿ ವಿಭಿನ್ನ ಜನರ ಪ್ರಾರ್ಥನೆಯನ್ನು ಮಳೆಯನೀರಿನ ಉದಾಹರಣೆಯೊಂದಿಗೆ ತಿಳಿಸಲಾಗಿದೆ. ಹೇಗೆ ಆಕಾಶದಿಂದ ಬಿದ್ದನೀರು ನದಿ ಕೊಳ್ಳ ಕಣಿವೆ ಮುಂತಾಗಿ ಹಲವು ವಿಭಾಗದಲ್ಲಿ ಹರಿದರೂ ಅಂತಿಮವಾಗಿ ಅದು ಸಮುದ್ರವನ್ನೇ ಸೇರುತ್ತದೋ ಹಾಗೆಯೇ ಯಾವುದೇ ಹೆಸರಿನಿಂದ ಯಾವುದೇ ರೂಪದಿಂದ ಯಾವುದೇ ವಿಧಾನದಿಂದ ಯಾವುದೇ ಮತ ಸಂಪ್ರದಾಯದಿಂದ ಶುದ್ಧ ಮನಸ್ಸು ಹಾಗೂ ಪರಿಪೂರ್ಣ ಭಕ್ತಿಯಿಂದ ಭಗವಂತನನ್ನು ಅರ್ಚಿಸಿದರೂ ಅದು ಅಂತಿಮವಾಗಿ ಒಬ್ಬನೇ ಪರಬ್ರಹ್ಮನನ್ನು ಸೇರುತ್ತದೆ.ಏಕಂ ಸತ್ ವಿಪ್ರಾಃ ಬಹುದಾ ವದಂತಿ ಎನ್ನುವ ಮಾತಿನಲ್ಲಿಯೂ ಇದನ್ನೇ ಹೇಳಲಾಗಿದೆ ಒಬ್ಬನೇ ಪರಮಾತ್ಮನನ್ನು ತಿಳಿದವರು ಬಹುವಿಧವಾಗಿ ಹೇಳುತ್ತಾರೆ.

ಈ ಹಿನ್ನೆಲೆಯಲ್ಲಿ ನಾವು ಬರಬೇಕಾದ ನಿಲುವೇನೆಂದರೆ ದೇವರು ಇದ್ದಾನೆ ಆತನು ಒಬ್ಬನೇ ಆಗಿದ್ದಾನೆ, ಆತನು ಸೃಸ್ಟಿಕರ್ತನೂ ಜಗತ್ತಿನ ಮೂಲಪುರುಷನೂ ಆಗಿದ್ದು ಆದಿ ಅಂತ್ಯಗಳಿಲ್ಲದ ಅಪರಿಮಿತ ಗುಣ ಸಂಪನ್ನನೂ ಶಕ್ತಿ ಸಂಪನ್ನನ್ನೂ ಕರುಣಾಮಯಿಯೂ ಆಗಿದ್ದು. ರೂಪರಹಿತನಾಗಿದ್ದು ಸರ್ವರೂಪಗಳಲ್ಲಿಯೂ ಇದ್ದಾನೆ. ಆತನೇ ಜಗತ್ತಿನ ಜೀವವಾಗಿದ್ದಾನೆ ಚಾಲಕ ಶಕ್ತಿಯಾಗಿದ್ದಾನೆ ಹಾಗೂ ಸರ್ವರ ರಕ್ಷಕನೂ ಆಗಿದ್ದು ಭಿನ್ನಜನರಿಂದ ಭಿನ್ನ ಹೆಸರಿನಿಂದ ಭಿನ್ನರೂಪಗಳಿಂದ ವಿಭಿನ್ನ ಸ್ಥಳಗಳಲ್ಲಿ ಆರಾಧಿಸಲ್ಪಡುತ್ತಿದ್ದಾನೆ. ನಾವು ಯಾವುದೇ ಹೆಸರಿನಲ್ಲಿ ಯಾವುದೇ ರೂಪದಲ್ಲಿ ಭಗವಂತನ ಆರಾಧನೆ ಮಾಡಿದರೂ ಅದುಒಬ್ಬನೇ ಪರಭ್ರಹ್ಮನನ್ನು ತಲುಪುತ್ತದೆ. ಈ ನಂಬಿಕೆ ನಮ್ಮಲ್ಲಿ ಬಲಗೊಂಡಾಗ ನಮ್ಮ ಗೊಂದಲ ನಿವಾರಣೆ ಯಾಗುವುದು.

ದೇವರ ಕೆಲಸವೇನು ?

ದೇವರ ಮುಖ್ಯ ಮೂರು ಕೆಲಸಗಳು ಸೃಸ್ಟಿ ಸ್ಥಿತಿ ಲಯ ಅಂದರೆ ಜನ್ಮ ನೀಡುವುದು ಕಾಪಾಡುವುದು ಹಾಗೂ ಅಂತಿಮವಾಗಿ ಮರಣ ನೀಡುವುದು ಇದು ನಿರಂತರ ಪ್ರಕ್ರಿಯೆ ಯಾಗಿದೆ. ಈ ಕ್ರಿಯೆ ಪ್ರಾಣಿ ಪಕ್ಷಿ ಕ್ರಿಮಿ ಕೀಟ ಸಸ್ಯಗಳಲ್ಲಿಯೂ ನಡೆಯುವ ಕ್ರಿಯೆ ಆಗಿದೆ. ಈ ಮೂರು ದೇವರ ಕೆಲಸಗಳಿಗೆ ನಮ್ಮ ಪರಂಪರೆಯಲ್ಲಿ ಮೂರು ವಿಭಿನ್ನ ರೂಪನೀಡಿ ಅವರನ್ನು ತ್ರಿಮೂರ್ತಿಗಳೆಂದು ಕರೆದರು. ಅವರೇ ಭ್ರಹ್ಮ ವಿಷ್ಣು ಮಹೇಶ್ವರ ರಾಗಿದ್ದಾರೆ ಮುಂದೆ ಇದುವೇ ಬಹುದೇವತಾರಾಧನೆಗೆ ಮೂಲವಾಯಿತು ಇದನ್ನೇ ಅನುಕರಿಸಿದ ಆಂಗ್ಲರು ದೇವರನ್ನು ಅವರ ಭಾಷೆಯಲ್ಲಿ ಸಂಕ್ಷಿಪ್ತವಾಗಿ GOD ಎಂದು ಕರೆದಿದ್ದಾರೆ ಇದರ್ಥ generator operator destroyer ಎಬುದೇ ಆಗಿದೆ. ನಮ್ಮ ತ್ರಿಮೂರ್ತಿ ರೂಪವೇ ಆಂಗ್ಲರಲ್ಲಿ GOD. ಆಗಿದೆ. ಇನ್ನು ಅನೇಕರು ಅವರವರ ಭಾಷೆಗನುಗುಣವಾಗಿ ಅನೇಕ ಹೆಸರಿನಿಂದ ದೇವರನ್ನು ಕರೆದಿದ್ದಾರೆ.

ದೇವರೊಬ್ಬನೇ ಎಂದು ಹೇಳಿದಾಗ ನಮ್ಮ ಬಹುದೇವತಾರಾಧನೆಗೆ ಧಕ್ಕೆ ಬರುವುದಿಲ್ಲವೇ ನಮ್ಮ ಪುರಾಣಗಳೆಲ್ಲಾ ಸುಳ್ಳೇ? ದೇವಸ್ಥಾನಗಳೆಲ್ಲಾ ಯಾಕೆ? ಎನ್ನುವ ವಿಷಯ ಉದ್ಭವವಾಗುವುದು ಹಾಗೂ ಜನರಲ್ಲಿ ಗೊಂದಲ ಉಂಟಾಗುವುದು. ಈ ವಿಷಯವನ್ನಿಟ್ಟುಕೊಂಡು ಇತರ ದುರ್ಮತ ವಾದಿಗಳು ಜನಸಾಮಾನ್ಯ ಹಿಂದುಗಳ ಮನಕೆಡಿಸಬಹುದು ಆದುದರಿಂದ ಈ ಬಹು ದೇವತಾರಾಧನೆಯನ್ನು ಅರಿಯಲು ನಾವು ಭಾರತೀಯ ಸಂಸ್ಕೃತಿಯನ್ನು ಅಧ್ಯಯನ ಮಾಡಬೇಕಾಗುವುದು. ದೇವರನ್ನು ನಮ್ಮಕಲ್ಪನೆಯ ರೂಪದಲ್ಲಿ ಪೂಜಿಸುವ ಆರಾಧಿಸುವ ಸ್ವಾತಂತ್ರಯವು ಹಿಂದೂ ಧರ್ಮದಲ್ಲಿ ಮಾತ್ರವೇ ಇದೆ  ಆದುದರಿಂದಲೇ ಸನಾತನ ಸಂಸ್ಕೃತಿ ವಿಶ್ವದ ಅತೀ ಶ್ರೇಷ್ಠ ಶ್ರೀಮಂತ ಪ್ರಾಚೀನ ಬಹುಸ್ಥರದ ಸಂಸ್ಕೃತಿಯಾಗಿ ಬೆಳೆದುಬಂದಿದ್ದು ಇಂದು ಇಡೀ ಜಗತ್ತು ಹಿಂದೂ ಸಂಸ್ಕೃತಿಯತ್ತ ಆಕರ್ಷಿತವಾಗುತ್ತಿದೆ. ನಮ್ಮ ಬಹುದೇವತಾರಾಧನೆ ಯಿಂದಾಗಿಯೇ ಸಂಗೀತಶಾಸ್ತ್ರ  ನೃತ್ಯಶಾಸ್ತ್ರ ಶಿಲ್ಪ ಶಾಸ್ತ್ರ ಜ್ಯೋತಿಷ ಶಾಸ್ತ್ರ , ವಾಸ್ತು ಶಾಸ್ತ್ರ ಎಲ್ಲವೂ  ಬೆಳೆದುಬಂದಿದೆ. ಹಾಗೂ ಜಾನಪದ ಸಂಸ್ಕೃತಿ ಶ್ರೀಮಂತವಾಗಿದೆ. ಇದಕ್ಕೆ ಪೂರಕವಾಗಿ ಅನೇಕ ಹಬ್ಬಗಳು ಉತ್ಸವಗಳು ಜಾತ್ರೆಗಳು ನಡೆಯುತ್ತವೆ. ಇವುಗಳಿಂದಾಗಿಯೇ ಪುಣ್ಯ ಸ್ಥಳಗಳು ತೀರ್ಥಕ್ಷೇತ್ರಗಳು ಉದ್ಭವಿಸಿವೆ ಅಖಂಡ ಭಾರತ ಸಾಂಸ್ಕೃತಿಕವಾಗಿ ಒಂದಾಗಿದೆ. ಇದುವೇ ಹಿಂದೂಸ್ಥಾನದ ಜೀವಾಳವಾಗಿದೆ. ಬಹುದೇವತಾರಾದನೆ ನಮ್ಮ ಸಂಸ್ಕೃತಿಯ ಭಾಗವಾಗಿದೆ ಇದು ನಮಗೆ ಅನಿವಾರ್ಯವೂ ಆಗಿದೆ ಆದರೂ ಇಲ್ಲಿ ನಾವು ದೇವರನ್ನು ವಿವಿಧರೂಪದಲ್ಲಿಯೂ ಏಕಭಾವದಿಂದ ಆರಾಧಿಸಿದರೆ ಅದುವೇ ಹೆಚ್ಚು ಹಿತವಾಗಿರುವುದು. ಹಾಗೂ ಗೊಂದಲ ರಹಿತ ತೃಪ್ತಿ ನೀಡುವುದು. ಎನ್ನುತ್ತಾ ವಿಶ್ವನಾಯಕನಾದ ಆ ಪರಭ್ರಹ್ಮ ಶಕ್ತಿಗೆ ನಮಿಸೋಣ.

ದೇವರ ಕುರಿತಾದ ಕೆಲವು ಸಾಮಾನ್ಯ ಪ್ರಶ್ನೆಗಳು

ಹಿಂದೂ ಧರ್ಮದ ಮೂಲ ಸ್ವರೂಪಗಳಲ್ಲಿ ಒಂದು ಅಂಶ ದೇವರ ಅಸ್ಥಿತ್ವ ದಲ್ಲಿನಂಬಿಕೆ ಇಡುವುದು.  ಇಲ್ಲಿ ದೇವರು ಎನ್ನುವ ವಿಚಾರ ಬಂದಾಗ ದೇವರು ಯಾರು ಎನ್ನುವುದನ್ನು ತಿಳಿದುಕೊಳ್ಳುವ ಅಗತ್ಯ ಬರುತ್ತದೆ. ಇಲ್ಲಿ ಹಲವು ಪ್ರಶ್ನೆಗಳು ಹಲವು ಗೊಂದಲಗಳು ಉಂಟಾಗುತ್ತವೆ, ಒಂದೊಂದು ಮತದವರು ಒಬ್ಬೊಬ್ಬರನ್ನು ದೇವರೆಂದು ಕರೆದರೆ ನಿಜವಾದ ದೇವರು ಯಾರು? ದೇವರು ಎಷ್ಟುಜನ? ಬಹುದೇವತಾರಾಧನೆಯ ಔಚಿತ್ಯವೇನು ಇವೆಲ್ಲಾ ನಮಗೆ ಮೂಡುವ ಗೊಂದಲಗಲಾಗಿವೆ. ಹಾಗೆಯೇ ಹೆಚ್ಚಿನ ಎಲ್ಲರಿಗೂ ಇವು ಪ್ರಶ್ನೆಗಳೇ ಆಗಿವೆ,

ಈಗ ಪ್ರಶ್ನೆ ಹಾಗೂ ಉತ್ತರದ ಮೂಲಕ ಸನಾತನ ಸಂಸ್ಕೃತಿಯಲ್ಲಿ ಹಿನ್ನೆಲೆಯಲ್ಲಿ ದೇವರನ್ನು ಅರಿಯೋಣ

  • ದೇವರು ಇದ್ದಾನೆಯೇ? ಹೌದು ಇದ್ದಾನೆ.
  • ಎಲ್ಲಿ ಇದ್ದಾನೆ? ಅವನು ಸಮಸ್ಥ ಭ್ರಹ್ಮಾಂಡದಲ್ಲಿ ಎಲ್ಲೆಡೆಯೂ ಇದ್ದಾನೆ ಅಣುರೇಣು ತೃಣ ಕಾಷ್ಠ ಗಳಲ್ಲಿಯೂ ದೇವರಿದ್ದಾನೆ.
  • ಅವನನ್ನು ಸ್ಥೂಲವಾಗಿ ನೋಡಲು ಸಾಧ್ಯವೇ? ಸ್ಥೂಲವಾಗಿ ನೋಡಲು ಸಾದ್ಯವಿಲ್ಲ ಆದರೆ ಅಂತರಂಗದಲ್ಲಿ ದೇವರನ್ನು ನೋಡಲು ಸಾಧ್ಯವಿದೆ ಎಂಬುದು ಸಾಧಕರ ಹಾಗೂ ದಾರ್ಷನಿಕರ ಮಾತು,
  • ಅವನು ಹೇಗಿದ್ದಾನೆ ? ಯಾವ ರೂಪದಿಂದ ಅವನು ಸಾಧಕರಿಗೆ ಗೋಚರನಾಗುತ್ತಾನೆ? ಯದ್ಭಾವಂ ತದ್ ಭವತಿ ನೀವು ಹೇಗೆ ಅವನನ್ನು ಭಾವಿಸಿಕೊಳ್ಳುತ್ತೀರೋ ಹಾಗೆ ಅವನಿದ್ದಾನೆ, ಅವರವರ ಭಾವಕ್ಕೆ ಅವರವರ ಭಕುತಿಗೆ ಭಗವಂತನ ಅನುಭವ ಆಗುವುದು.
  • ದೇವರೆನ್ನುವ ಸೃಷ್ಠಿಯ ವಿಶೇಷ ಶಕ್ತಿಯನ್ನು ಏನೆಂದು ಕರೆಯುತ್ತಾರೆ? ಸೃಷ್ಠಿಕರ್ತ , ಪರಮಾತ್ಮ, ಪರಮೇಶ್ವರ, ಪರಬ್ರಹ್ಮ, ಮುಂತಾಗಿ ಸಂಸ್ಕೃತದಲ್ಲಿಯೂ ಇಂಗ್ಲೀಷಿನಲ್ಲಿ GOD ಎಂಬುದಾಗಿಯೂ ಅರೇಬಿಯಲ್ಲಿ ಅಲ್ಲಾಹ ಎಂಬುದಾಗಿಯೂ ಕರೆಯುತ್ತಾರೆ, ಕನ್ನಡದಲ್ಲಿ ದೇವರು ಎನ್ನುತ್ತಾರೆ ಹೀಗೆ ವಿವಿಧ ಭಾಷೆಗಳಲ್ಲಿ ವಿವಿಧ ಜನಾಂಗಗಳಲ್ಲಿ ವಿಭಿನ್ನ ಹೆಸರುಗಳಿಂದ ಕರೆಯುತ್ತಾರೆ, ಇವೆಲ್ಲವೂ ಒಬ್ಬನೇ ದೇವರನ್ನು ಸೂಚಿಸುವ ವಿವಿಧ ಧ್ವನಿ ಸಮೂಹವಾಗಿದೆ, ಇಲ್ಲಿ ಶಬ್ಧ ಭಿನ್ನವಾಗಿರುತ್ತಿದ್ದರೂ ಸಹ ಶಬ್ಧ ಪ್ರಧಾನವಲ್ಲ ಅದು ಆಯಾ ದೇಶ ಸ್ಥಳ ಸಂಪ್ರದಾಯ ಜನಾಂಗದಿಂದ ಭಿನ್ನವಿದೆ ಆದರೆ ಇಲ್ಲಿ ಪ್ರಧಾನವಾಗುವುದು ಆರಾಧಿಸುವವನ ಭಾವವಾಗಿದೆ ಭಾವದಲ್ಲಿ ದೋಷಇದ್ದಲ್ಲಿ ಅದು ಭಗವಂತನಿಗೆ ಸಲ್ಲುವುದಿಲ್ಲ. ಅದು ವ್ಯರ್ಧ ಪ್ರಲಾಪ ಅಥವಾ ರೊದನ ಅಥವಾ ಬೊಬ್ಬೆಯಾಗುವುದು.
  • ದೇವರ ಕೆಲಸವೇನು ? ಸೃಷ್ಠಿ ಸ್ಥಿತಿ ಲಯ ಇವು ದೇವರ ಕೆಲಸ ವಾಗಿದೆ. GOD ಎಂದರೂ ಇದೇ ಆಗಿದೆ generator , operator, destroyer,
  • ವೇದವು ದೇವರನ್ನು ಹೇಗೆ ವರ್ಣಿಸಿದೆ? ನಿರ್ಗುಣ, ನಿರಾಕಾರ, ಸಚ್ಚಿದಾನಂದ ಸ್ವರೂಪಿ, ಸರ್ವಜ್ಞ, ಸರ್ವ ಶಕ್ತ, ಬ್ರಹ್ಮ, ಅನಂತ, ಮುಂತಾಗಿ ವರ್ಣಿಸಿದೆ.
  • ನಿರ್ಗುಣ ಎಂದರೆ ಗುಣ ಇಲ್ಲದವನು ಆಕಾರ ಇಲ್ಲದವನು ಎಂದರ್ಥವೇ? ಖಂಡಿತಾ ಅದೊಂದೇ ಅರ್ಥಮಾಡುವಂತಿಲ್ಲ ಭಗವಂತನಿಗೆ ನಿರ್ದಿಷ್ಠ ಆಕಾರವಿಲ್ಲ ಆದರೂ ಎಲ್ಲಾ ಆಕಾರಗಳಲ್ಲಿಯೂ ಅವನಿದ್ದಾನೆ, ಅಣುರೇಣು ತೃಣ ಕಾಷ್ಠಗಳಲ್ಲಿಯೂ ಇದ್ದಾನೆ ಹಾಗೆಯೇ ನಿರ್ದಿಷ್ಠ ಗುಣ ಇಲ್ಲ ಸರ್ಗುಣಗಳಿಗೂ ಆತನೇ ಅಧಿಪತಿಯಾಗಿದ್ದಾನೆ ಯಾವುದೇ ಲಿಂಗವಿಲ್ಲ ಎಲ್ಲಲಿಂಗಗಳಲ್ಲೂ ಅವನಿದ್ದಾನೆ ಸಚ್ಚಿದಾನಂದ ಎಂದರೆ ಯಾವುದೇ ಗೋಚರ ಜಗತ್ತಿನ ಆಗುಹೋಗುಗಳ ಭಾಧೆ ಅವನನ್ನು ಬಾಧಿಸುವುದಿಲ್ಲ ಸಮಚಿತ್ತನಾಗಿ ನಿತ್ಯ ಆನಂದ ಭರಿತನಾಗಿ ಅವನು ಇರುತ್ತಾನೆ.
  • ದೇವರನ್ನು ಜನ ಸಾಮಾನ್ಯರು ನೋಡುವ ಬಗೆಹೇಗೆ? ಮನುಷ್ಯನ ಜೀವ ದೇಹವನ್ನು ಆಧರಿಸಿರುವಂತೆ ಭಗವಂತನ ಸ್ವರೂಪ ಸೃಷ್ಠಿಯನ್ನು ಆಧರಿಸಿದೆ ಸೃಷ್ಠಿಯೇ ದೇವರ ಶರೀರ ಎನ್ನುವುದು ಆಸ್ಥಿಕರ ನಂಬಿಕೆ ದೇವರು ಜೈತನ್ಯ ಸ್ವರೂಪನಾದರೆ ಸೃಷ್ಠಿಯು ಜಡಸ್ವರೂಪವಾಗಿದೆ ಜಡವು ಭಗವಂತನ ಅಸ್ಥಿತ್ವದಿಂದ ಚೈತನ್ಯವನ್ನು ಶಕ್ತಿಯನ್ನು ಪಡೆದಿರುತ್ತದೆ ಆದುದರಿಂದ ಹಿಂದುಗಳಲ್ಲಿನ ಆಸ್ಥಿಕರು ಎಲ್ಲಾಕಡೆಯೂ ಮುಖ್ಯವಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳಲು ನೆರವಾಗುವ ಎಲ್ಲಾಜೀವರಾಷಿಗಳಲ್ಲೂ, ಪ್ರಕೃತಿಯಲ್ಲಿಯೂ, ಮಹಾತ್ಮರಲ್ಲಿಯೂ, ತಂದೆತಾಯಿಗಳಲ್ಲಿಯೂ, ಗುರುಗಳಲ್ಲಿಯೂ, ಪರೋಪಕಾರಿಗಳಲ್ಲಿಯೂ, ಕಷ್ಟದಲ್ಲಿ ಸಹಾಯಮಾಡಿದವರಲ್ಲಿಯೂ ದೇವರನ್ನು ಕಾಣಲು ಸಮರ್ಥರಾಗಿದ್ದಾರೆ ಯಾವುದೂ ದೋಷವಲ್ಲ. ಇದರಿಂದಾಗಿಯೇ ರಾಮಕೃಷ್ಣ ಪರಮಹಂಸರು ಸಾಧಕರಿದ್ದಷ್ಟು ಸಾಧನಾಮಾರ್ಗ ಭಕ್ತರಿದ್ದಷ್ಟು ಭಗವದ್ ಸ್ವರೂಪ  ಎಂದಿದ್ದಾರೆ. ಆದರೆ ಅಜ್ಞಾನದಿಂದ ಕೂಡಿದ ಮೂಢರಿಗೆ, ಮತಾಂಧರಿಗೆ ಹಾಗೂ ನಾಸ್ತಿಕರಿಗೆ, ಭೋಗವಾದಿಗಳಿಗೆ, ಅಸುರ ಮತಾರಾಧಕರಿಗೆ, ಬುದ್ದಿಜೀವಿಗಳೆಂಬ ಗಂಜಿ ಗಿರಾಕಿಗಳಿಗೆ, ಜಾತ್ಯಾತೀತರಂಬ ಎಡಬಿಡಂಗಿಗಳಿಗೆ, ಎಲ್ಲಿಯೂ ದೇವರು ಕಾಣುವುದಿಲ್ಲ. ಸನಾತನ ಹಿಂದೂಧರ್ಮದವರಿಗೆ ಸಜ್ಜನರನ್ನು ದೈವಸ್ವರೂಪದಲ್ಲಿ ನೋಡುವ ಗುಣ ಇರುವುದರಿಂದ ಉತ್ತಮ ಬದುಕು ಬದುಕಲು ಅವರೇ ಮಾದರಿಯಾಗಿದ್ದಾರೆ.  ಈ ನೆಲದಲ್ಲಿ ಜನ್ಮಿಸಿದ ಅನೇಕ ದೈವಾಂಶ ಸಂಭೂತ ಮಹಾಪುರುಷರ ಬದುಕು ನಮಗೆ ಆದರ್ಷವಾಗಿದೆ. ಆದರೆ ವಿದೇಶೀ ಮತದವರಿಗೆ ಇಂತಹ ಸಂಸ್ಕಾರ ಇಲ್ಲದುದರಿಂದ, ಅಸುರಪ್ರವೃತ್ತಿ ಜಾಗ್ರತವಾಗಿ ಹಿಂಸಾಮಾರ್ಗ ಹಿಡಿದು ವಿಶ್ವಶಾಂತಿಗೆ ಅಪಾಯ ಒಡ್ಡುತ್ತಿದ್ದಾರೆ ಇವರಿಗೆ ಸಜ್ಜನ ಸ್ವರೂಪಿ ಮಾದರಿ ವ್ಯಕ್ತಿಗಳು ಬದುಕಿಗೆ ಆದರ್ಷವಾಗಿಲ್ಲ. ಇಂತಹ ದುಷ್ಠ ಮತಿಗಳು ಅಳಿಯಬೇಕಿದೆ. ಅವರಿಗೆ ಸತ್ಯದ ಸುಧರ್ಮದ ದಾರಿಯನ್ನು ತೋರುವ ಶಕ್ತಿ ಕೇವಲ ಹಿಂದುಗಳಿಗೆ ಮಾತ್ರ ಇದೆ. ಈ ಕಾರ್ಯವನ್ನು ನಾವು ವಿಶ್ವಾದ್ಯಂತ ಮಾಡಬೇಕಿದೆ.   ಸಂಘೇ ಶಕ್ತಿ ಕಲಿಯುಗೇ ಎಂಬಂತೆ ಧರ್ಮ ಪ್ರಚಾರಕ್ಕಾಗಿ ಏಕಭಾವದಿಂದ ಕೆಲಸ ಮಾಡೋಣ                                                                                                                                                                                                                                                                                                                                                                                                                                                        –  ಶ್ರೀಜಿ

Comments are closed.