ಧಾರ್ಮಿಕ ಸ್ವಾತಂತ್ರ್ಯ ಮತ್ತು ಧರ್ಮ
ಧರ್ಮವು ವಿಶಾಲ ದೃಷ್ಟಿಕೋನದ ತಳಹದಿಯನ್ನು ಹೊಂದಿರುವುದು. ಆದರೆ ಧರ್ಮದ ಹೆಸರಿನಲ್ಲಿ ಕಾರ್ಯಾಚರಿಸುವ ವಿದೇಶೀ ಮತಗಳು ಸಂಕುಚಿತ ಮನೋಭಾವದಿಂದ ಕೂಡಿದ್ದು ಅವುಗಳು ಸೀಮಿತ ನಂಬಿಕೆಯ ಸಿದ್ಧಾಂತಗಳನ್ನು ಜನರಮೇಲೆ ಹೇರುತ್ತವೆ. ಮತಗಳು ನಂಬಿಕೆಯ ಧಾರದಮೇಲೆ ನಿಂತಿವೆ ಆದರೆ ಧರ್ಮವು ಅನ್ವೇಷಣೆಯ ಅಂತಿಮ ಫಲಿತಾಂಶವಾಗಿದೆ. ಆದುದರಿಂದಲೇ ಭಾರತೀಯ ಸಂಸ್ಕೃತಿಯಲ್ಲಿ ಮಾತ್ರ ಅನಿವಾರ್ಯವಾಗಿ ಹೇರಲ್ಪಡುವ ನಿರ್ದಿಷ್ಟ ಕಟ್ಟು ಪಾಡುಗಳಿಲ್ಲ. ಇಲ್ಲಿ ಅನ್ವೇಷಣೆಗೆ ಸತ್ಯ ಶೋಧನೆಗೆ ಅವಕಾಶವಿದೆ. ಭಾರತೀಯರಲ್ಲಿ ಧರ್ಮವು ಪ್ರಶ್ನಾತೀತವಲ್ಲ. ಆದುದರಿಂದಲೇ ಇಲ್ಲಿ ಅನೇಕ ಜನ ತತ್ವಜ್ಞಾನಿಗಳು ಹುಟ್ಟಿ ಬೆಳೆದು ಪ್ರಸಿದ್ಧರಾಗಿದ್ದಾರೆ. ಯಾವುದೇ ವ್ಯಕ್ತಿಯ ನಂಬಿಕೆಯನ್ನು ಪ್ರಶ್ನಿಸುವವರನ್ನು ಯೋಗ್ಯ ಚರ್ಚೆಗಳ ಮುಖಾಂತರ ಎದುರಿಸುವ ಪರಂಪರೆ ಹಿಂದುಗಳದ್ದಾಗಿದೆ. ಕಾರಣದಿಂದಲೇ ತರ್ಕ ಎನ್ನುವ ಅಭ್ಯಾಸ ವಿಷಯವಿದೆ. ಸ್ವತಂತ್ರ ವಿಚಾರಗಳಿಗೆ ಟೀಕೆ ಟಿಪ್ಪಣಿಗಳಿಗೆ ಸ್ವಾಗತ ಇದೆ. ಆಧ್ಯಾತ್ಮ ಹಾಗೂ ಸಾಮಾಜಿಕ ಉನ್ನತಿಯೇ ಧರ್ಮದ ಉದ್ದೇಶವಾಗಿದೆ. ಆಧ್ಯಾತ್ಮಿಕ ಎನ್ನುವುದು ವೈಯುಕ್ತಿಕ ಸ್ತರದ ಸಾಧನೆ ಹಾಗೂ ಉನ್ನತಿಯ ದಾರಿಯನ್ನು ತೋರಿಸುವ ಮಾರ್ಗ ವಾದರೆ, ಧಾರ್ಮಿಕ ಎನ್ನುವುದು ಸಮಾಜದ ಉನ್ನತಿಗಾಗಿ ಬದುಕಬೇಕಾದ ಮಾರ್ಗದರ್ಶಕ ವಾಗುವ ಆದರ್ಶಮಾರ್ಗ ವಾಗಿದೆ. ಆಧ್ಯಾತ್ಮವು ಅಂತರಂಗದಿಂದ ಕ್ರಮಿಸುವ ಸದಾಚಾರವೇ ಹೊರತು ಬೇರೆಯವರಿಂದ ಕೊಡಲ್ಪಡುವುದು. ಉಪದೇಶಿಸುವುದು ಅಥವಾ ಬೋಧಿಸುವುದರಿಂದ ಸಿಗುವಂತಹುದಲ್ಲ. ಆದುದರಿಂದ ಗುರು ಆಧ್ಯಾತ್ಮಿಕ ದಾರಿ ತೋರಿಸಿ ಮಾರ್ಗದರ್ಶನ ನೀಡಬಲ್ಲನೇ ಹೊರತು ಆತ ಗುರಿಮುಟ್ಟಿಸಲಾರನು. ಅದು ಸ್ವಯಂ ಗಮ್ಯ ಮಾರ್ಗವಾಗಿದೆ. ಅಲ್ಲಿ ನಾವೇ ಸಾಗಬೇಕು ಇದಕ್ಕೆ ಯಾವುದೇ ಸುಲಭ ಮಾರ್ಗ (Short cut) ಇಲ್ಲ . ಆಧ್ಯಾತ್ಮದಉನ್ನತಿ ಸಾಧನೆಯಿಂದಲೇ ಅರಿಯ ಬೇಕಾದ ಪ್ರಕ್ರಿಯೆ. ಹಾಗೂ ಸಾಧನೆ ಮಾತ್ರದಿಂದಲೇ ಕ್ರಮಿಸಬೇಕಾದ ದಾರಿ ಯಾಗಿದೆ. ಆದುದರಿಂದ ಹಿಂದೂ ಧರ್ಮಕ್ಕೆ ಒಂದು ಕೇಂದ್ರ ಸ್ಥಾನವಾಗಲಿ ಅಥವಾ ಒಂದು ಧಾರ್ಮಿಕ ಚೌಕಟ್ಟಾಗಲೀ ಅಥವಾ ಅಧಿಕಾರ ವ್ಯವಸ್ಥೆ ಯಾಗಲೀ ಇಲ್ಲ. ಇದು ಸ್ವತಂತ್ರ ಚಿಂತನೆಗೆ ದಾರಿಮಾಡಿಕೊಡುತ್ತದೆ. ಅದಕ್ಕೆ ಪೂರಕವಾದ ಜ್ಞಾನ ಒದಗಿಸುವ ಕೆಲಸ ಸಂಸ್ಕೃತಿ ಮಾಡುತ್ತದೆ. ಏಕೆಂದರೆ ಪ್ರತಿಯೊಬ್ಬರ ಆಲೋಚನೆ, ಸಧನಾಮಾರ್ಗ, ಜ್ಞಾನದ ಅನುಭವ ಇವೆಲ್ಲವೂ ಭಿನ್ನವಾಗಿರುವುದರಿಂದ. ಇದನ್ನು ಒಂದು ಪುಸ್ತಕದಿಂದಲೋ ಒಂದು ಪ್ರವಾದಿಯ ಸಿದ್ಧಾಂತದಿಂದಲೋ ಅಥವಾ ಒಂದು ಸೀಮಿತ ನಂಬಿಕೆಯ ಚೌಕಟ್ಟಿನೊಳಗೆ ಬಂಧಿಸಿಡಲು ಸಾಧ್ಯವಿಲ್ಲ. ಬದಲಾವಣೆ ಜಗದನಿಯಮ. ಕಾಲಕಾಲಕ್ಕೆ ಬದುಕಿನ ರೀತಿ ನೀತಿಗಳು ಬದಲಾಗುತ್ತದೆ ಅದಕ್ಕನುಗುಣವಾಗಿ ಬದಲಾಗದ ಮತ ಸಿದ್ಧಾಂತ ಸಮಾಜದಲ್ಲಿ ಅಪ್ರಸ್ತುತವಾಗಿ ವಿನಾಶ ಹೊಂದುತ್ತದೆ. ಒಂದು ವೇಳೆ ಯಾವುದೋ ಒಂದು ನಂಬಿಕೆಯನ್ನು ಬಲಾತ್ಕಾರದಿಂದ, ಕಾನೂನಿನಿಂದ, ಅಜ್ಞಾನದ ಭಯದಿಂದ. ಬಂಧಿಸಿಟ್ಟರೂ ಅದು ಬಹುಕಾಲ ಬಂದನದೊಳಗೆ ಉಳಿಯುವುದಿಲ್ಲ. ಯಾಕೆಂದರೆ ಆಧ್ಯಾತ್ಮದ ಅರಿವಿನ ಫಲಿತಾಂಶ ಎಲ್ಲರಲ್ಲಿಯೂ ಒಂದೇ ರೀತಿ ಇರುವುದಿಲ್ಲ. ಆದುದರಿಂದಲೇ ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬರ ಸ್ವತಂತ್ರ ಆಚರಣೆ ಅನುಭವ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶವಿದೆ. ಹಾಗೂ ಸ್ವಾತಂತ್ರ್ಯವಿದೆ. ಮತ್ತು ಎಲ್ಲರ ಅಭಿಪ್ರಾಯವೂ ಗೌರವಿಸಲ್ಪಡುತ್ತದೆ. ಭಿನ್ನ ಭಿನ್ನ ಮಾರ್ಗದಲ್ಲಿಯೂ ಆಧ್ಯಾತ್ಮ ಉನ್ನತಿಯನ್ನು ಸಾಧಿಸಬಹುದಾಗಿದೆ. ಹಲವು ಮಾರ್ಗಗಳಲ್ಲಿ ಕ್ರಮಿಸಿ ಒಂದೇ ಗುರಿಯನ್ನು ಸೇರುವ ಅವಕಾಶ ಹೀಂದೂ ಸಂಸ್ಕೃತಿಯ ವಿಶೇಷತೆಗಳಲ್ಲೊಂದಾಗಿದೆ. ಇದನ್ನೇ ರಾಮಕೃಷ್ಣ ಪರಮ ಹಂಸರು ಸಾಧಕರಿದ್ದಷ್ಟು ಸಾಧನಾ ಮಾರ್ಗ ಭಕ್ತರಿದ್ದಷ್ಟು ಭಗವದ್ ರೂಪ ಎಂದಿದ್ದಾರೆ.
ಇದನ್ನು ಕ್ರೈಸ್ತ ಮತಾವಲಂಬಿ ಪಾಶ್ಚಾತ್ಯರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಏಕೆಂದರೆ ಅವರದ್ದು ಮತವಾಗಿದೆ (Religion) ಆ ನೆಲೆಯಲ್ಲಿ ಪಾಶ್ಚಾತ್ಯರು ಸನಾತನ ಧರ್ಮವನ್ನು ಹಿಂದು ಸಂಸ್ಕೃತಿಯನ್ನು ವಿಮರ್ಶೆ ಮಾಡಲು ಹೋಗಿ ಸೋಲುತ್ತಾರೆ. ಪಾಶ್ಚಾತ್ಯ ಕ್ರೈಸ್ತನಂಬಿಕೆಯ ಜನರು ಹೋಲಿಕೆಮಾಡಲು ಸಾಧ್ಯವಿರುವುದು ಭಾರತದಲ್ಲಿ ಉದ್ಭವವಾದ ಮತಗಳನ್ನುಮಾತ್ರ. ಪ್ರಯತ್ನಿಸಿದರೆ ಅವರಿಗೆ ಬೌದ್ಧ, ಜೈನ, ಅದ್ವೈತ, ದ್ವೈತ, ಸಿಖ್, ಮುಂತಾದ ಮತಗಳಲ್ಲಿ ಹೊಂದಾಣಿಕೆ ಹುಡುಕ ಬಹುದೇ ಹೊರತು ಇವೆಲ್ಲದರ ಹೃದಯ ಭಾಗವಾದ ಸನಾತನ ಧರ್ಮವನ್ನು ಅರಿಯುವುದು ಪಾಶ್ಚಾತ್ಯರಿಗೆ ಸಾಧ್ಯವಿಲ್ಲ. ಏಕೆಂದರೆ ಅವರು ಅರಿತಿರುವ Religion ನಮ್ಮ ಧರ್ಮ ಅಲ್ಲ. ರಿಲಿಜಿಯನ್ ನಲ್ಲಿ ಆಡಳಿತ ವ್ಯವಸ್ಥೆ ಇರುತ್ತದೆ. ಹಾಗೂ ಸಮಾಜದ ಮೇಲೆ ನಿಯಂತ್ರಣ ಇರುತ್ತದೆ ಆದರೆ ಧರ್ಮದಲ್ಲಿ ಈ ವ್ಯವಸ್ಥೆ ಇರುವುದಿಲ್ಲ. ಆದರೂ ಎಲ್ಲರಲ್ಲೂ ಅಲೌಕಿಕವಾಗಿ ಧರ್ಮವು ಹೃದಯದಿಂದ ಬೆಸೆಯಲ್ಪಟ್ಟಿರುತ್ತದೆ. ಒಂದು ಅಗೋಚರ ಆತ್ಮದ ಬಂಧನದಲ್ಲಿ ಸನಾತನ ಧರ್ಮ ನಿಂತಿದೆ. ಅದು ಜೀವನ ಧರ್ಮವಾಗಿದೆ. ಇದರ ಚೇತನ ರೂಪವೇ ನಮ್ಮ ಭಾರತೀಯ ಸಂಸ್ಕೃತಿ ಯಾಗಿದೆ.
ಮತ ಹಾಗೂ ಧರ್ಮದ ವ್ಯತ್ಯಾಸದ ಸ್ಪಷ್ಟಅರಿವು ಜಗತ್ತಿಗೆ ಆದಾಗ ಮತಗಳು ನಾಶವಾಗಿ ಧರ್ಮವು ನೆಲೆ ನಿಲ್ಲುತ್ತದೆ. ಅದಕ್ಕೇ ಎಲ್ಲರಿಗೂ ಜ್ಞಾನದ ಅವಶ್ಯಕತೆ ಇದೆ. ಇಂದು ಅಜ್ಞಾನದಿಂದ ಹಾಗೂ ಅಲ್ಪ ಜ್ಞಾನದಿಮದ ಕೂಡಿದ ವಿವಿಧ ಮತಗಳು ಜನರಮೇಲೆ ಪ್ರಭಾವ ಬೀರುತ್ತಿವೆ, ಮತಗಳಿಂದ ಮತಾಂಧತೆ ಬೆಳೆಯುತ್ತದೆ. ಮತಾಂಧತೆಯಿಂದ ಎಂದಿಗೂ ಮನಶ್ಯಾಂತಿ ಲಭಿಸಲಾರದು. ಸಮಾಜವು ಸಾತ್ವಿಕತೆಯತ್ತ ನಡೆಯಲಾರದು. ಉತ್ತಮ ಸಮಾಜಕ್ಕೆ ಧರ್ಮದ ಅವಶ್ಯಕತೆ ಇದೆ. ಧರ್ಮ ನೆಲೆಸಬೇಕಾದಲ್ಲಿ ಮತ ಅಳಿಯಬೇಕಾಗುತ್ತದೆ. ಇಲ್ಲವೇ ಮತ ಉದಾರಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಮತಗಳ ದುಷ್ಪರಿಣಾಮ ಅತಿಯಾದಾಗ ಜನರು ಮತಗಳಿಂದ ಹೊರಬರುತ್ತಾರೆ, ಯುರೋಪಿನಲ್ಲಿ ಹೆಚ್ಚಿನ ಜನ ಚರ್ಚುಗಳಿಂದ ದೂರವಾಗುತ್ತಿದ್ದಾರೆ. ಇಸ್ಲಾಮಿಕ್ ದೇಶಗಳಲ್ಲಿಯೂ ದೇವಾಲಯಗಳು ಪುನಃ ತಲೆಎತ್ತಲಾರಂಭಿಸಿವೆ. ಹೀಗೆ ಹೊರಬಂದವರು ಸೂಕ್ತ ಮಾರ್ಗದರ್ಶನ ದೊರೆತಾಗ ಧರ್ಮದ ಸರಪಣಿಯೊಂದಿಗೆ ತಮ್ಮನ್ನು ಬೆಸೆದುಕೊಳ್ಳಲು ಆರಂಭಿಸುತ್ತಾರೆ. ಆಗ ಪುನಃ ಜಗತ್ತು ಶಾಂತಿಯತ್ತ ಹೊರಳುತ್ತದೆ. ಹಿಂದೂ ಧರ್ಮ ಜಗತ್ತನ್ನು ಆಳುತ್ತದೆ. ವಿಶ್ವ ವ್ಯಾಪಿಯಾಗುತ್ತದೆ.
ಜೀವಿಸಲು ಸ್ವಾತಂತ್ತ್ರ್ಯ, ಯೋಚಿಸಲು ಸ್ವಾತಂತ್ರ್ಯ, ಪೂಜಿಸಲು ಸ್ವಾತಂತ್ರ್ಯ, ಅನುಸರಿಸಲು ಸ್ವಾತಂತ್ರ ಇದೇ ಸನಾತನ ಧರ್ಮದ ವಿಶೇಷ. ಇಂತಹ ಸ್ವತಂತ್ರ ಆರಾಧನಾ ಸಂಸ್ಕೃತಿಯ ಸಹಜ ಧರ್ಮವನ್ನು ಕೆಲವು ಮತಾಂಧರು ತಮ್ಮ ಮತಗ್ರಂಥದ ಪಾಶದಲ್ಲಿ ಬಿಗಿದಿಟ್ಟು ಅದನ್ನು ಅಜ್ಞಾನಿ ಸಜ್ಜನರ ಕುತ್ತಿಗೆಗೆ ಬಿಗಿಯುತ್ತಿದ್ದಾರೆ, ಹಾಗೂ ತಮ್ಮ ಕುಮತ ಪ್ರಚಾರದಿಂದ ಹಾಗೂ ಮತಾಂಧತೆಯ ಪಾಶದಿಂದ ಅಮಾಯಕರನ್ನು ಬಂಧಿಸಿ ಇಂತಹ ಸಜ್ಜನರನಂಬಿಕೆಯನ್ನು ಹತ್ಯೆಮಾಡಿ ಬಲಾತ್ಕಾರ, ಆಮಿಶ, ಸೇವೆ ಮುಂತಾದ ವಂಚಕ ಮಾರ್ಗಗಳಿಂದ ಹಾದಿತಪ್ಪಿಸಿ ಮತಾಂತರಿಸುತ್ತ ಇದ್ದಾರೆ. ಹಾಗೂ ಅವರ ಜೀವನ ನಾಶಮಾಡುತ್ತಿದ್ದಾರೆ. ಇಂತಹ ಮತಾಂತರಿ ಹಾಗೂ ಭಯೋತ್ಪಾದಕ ದುರ್ಮತಿಗಳಿಂದ ಮಾನವ ಧರ್ಮವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆ ಮೂಲಕ ಮತಾಂತರಗೊಂಡು ಮನೆ ತೊರೆದ ನಮ್ಮ ಸಹೋದರ ಸಹೋದರಿಯರಿಗೆ ಮರಳಿಮನೆಯ ದಾರಿತೋರಿಸುವ ಅಗತ್ಯವಿದೆ. ತಮಸೋಮಾ ಜ್ಯೋತಿರ್ಗಮಯ ಎನ್ನುವ ಋಷಿ ವಾಣಿ ದುರ್ಮತಗಳ ಮತಾಂಧತೆಯಿಂದ ಸನಾತನ ಧರ್ಮಕ್ಕೆ ಮರಳಿ ಬನ್ನಿ ಎನ್ನುವ ಕರೆಗೆ ಪೂರಕವಾಗಿದೆ. ಹಿಂದೂ ಧರ್ಮದಲ್ಲಿ ಮಾತ್ರ ಧಾರ್ಮಿಕ ಸ್ವಾತಂತ್ರ್ಯವಿದೆ ಇಂತಹ ಶ್ರೇಷ್ಠಧರ್ಮಮಾರ್ಗದಲ್ಲಿ ಧರ್ಮ ಯೋಧರಂತೆ ನಡೆಯೋಣ. ಮುಂದಿನ ಪೀಳಿಗೆಯನ್ನು ಗುರಿಇಲ್ಲದ ದುರ್ಬಲ ಮನಸ್ಥಿತಿಯ ವಿದೇಶೀ ಮೋಹದ ಮತಜಾಲದಲ್ಲಿ ಬೀಳದಂತೆ ಬೆಳೆಸಿ ಭವ್ಯ ಭಾರತೀಯ ಸನಾತನ ಧರ್ಮ ಹಾಗೂ ಮೌಲ್ಯ ವನ್ನು ಅವರ ಜೀವನದಲ್ಲಿ ಅಳವಡಿಸಿಕೊಳ್ಳಲು ದಾರಿತೋರಿಸಿ ಪ್ರೇರೇಪಿಸೋಣ.
ಧರ್ಮ
ಭಾರತೀಯ ತತ್ವಶಾಸ್ತ್ರದಲ್ಲಿ ಧರ್ಮಕ್ಕೆ ವಿಶೇಷವಾದ ಅರ್ಥವನ್ನು ಕೊಡಲಾಗಿದೆ, ಯಾವುದೇ ಒಬ್ಬ ವ್ಯಕ್ತಿಗೆ ಆತನ ಜ್ಞಾನದಿಂದ ಉತ್ತಮವಾದುದನ್ನು ತಿಳಿಯುವ, ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಹಿಂದೂ ಧರ್ಮದಲ್ಲಿದೆ. ಸ್ವಧರ್ಮೇ ನಿಧನಂ ಶ್ರೇಯಃ ಎಂದು ಗೀತೆಯಲ್ಲಿ ಹೇಳಿದೆ. ಹಿಂದೆ ಪರಮತಿಯರ ದುರಾಕ್ರಮಣದ ಸಮಯದಲ್ಲಿ ಮತಾಂಧ ಮುಸ್ಲಿಮರಿಂದ, ಕ್ರಿಶ್ಚಿಯನ್ನರಿಂದ ಧರ್ಮತ್ಯಜಿಸುವ ಅನಿವಾರ್ಯತೆ ಬಂದಾಗ ದುರ್ಮತ ಸಹವಾಸಕ್ಕಿಂತ ಸಾವೇ ಮೇಲೆಂದು ಸ್ವಧರ್ಮದಲ್ಲೇ ಸಾಯಲುಸಿದ್ಧರಾಗಿ ಲಕ್ಷಾಂತರ ಜನರು ಧರ್ಮಕ್ಕಾಗಿ ಪ್ರಾಣವನ್ನು ಅರ್ಪಿಸಿದರು. ಆ ಸಮಯದಲ್ಲಿ ಸಾವಿಗೆ ಹೆದರಿದವರು ಮತಾಂತರವಾಗಿ ಜೀವ ಉಳಿಸಿಕೊಳ್ಳ ಬೇಕಾಯಿತು. ಅಂದು ಅನಿವಾರ್ಯವಾಗಿ ಅನ್ಯಮತವನ್ನು ಅನುಸರಿಸಿದವರಿಗೆ ಬೇರೆದಾರಿ ಇಲ್ಲದೆ ಪ್ರಾಣ ಭಯದಿಂದ ಧರ್ಮ ತೊರೆದು ಮತಾಂತರ ಗೊಂಡು ವಿದೇಶೀಮತಾನುಯಾಯಿಗಳಾದರು. ಅಂದು ಜೀವಕ್ಕೆ ಹೆದರಿದ ಹಿಂದೂಗಳೇ ಇಂದು ಭಾರತದಲ್ಲಿರುವ ಮುಸಲ್ಮಾನರಾಗಿದ್ದಾರೆ. ಬ್ರಿಟಿಷರ ಕಾಲದಲ್ಲಿ ಕ್ರೈಸ್ತಮತಾವಲಂಬಿಗಳಿಗೆ ವಿಶೇಷ ಅಧಿಕಾರದ ಅವಕಾಶಇತ್ತು, ಅಂದು ಅಧಿಕಾರ ಹಾಗೂ ಸಂಪತ್ತಿನ ಆಸೆಯಿಂದ ಹಾಗೂ ಸರಕಾರದ ದೌರ್ಜನ್ಯದಿಂದ ಮತಾಂತರವಾದ ಹಿಂದುಗಳೇ ಇಂದು ಕ್ರಿಶ್ಚಿಯನ್ನರಾಗಿದ್ದಾರೆ. ಅಂತಹವರಿಗೆ ಇಂದು ಪುನಃ ಸರಿದಾರಿಗೆ ತಮ್ಮ ಮೂಲಧರ್ಮವಾದ ಹಿಂದೂ ಧರ್ಮಕ್ಕೆ ಬರುವ ಅವಕಾಶವಿದೆ. ಇಂದು ಮಾಧ್ಯಮವು ಜನ ಸಾಮಾನ್ಯರ ಕೈಯಲ್ಲಿರುವುದರಿಂದ ಯಾವುದು ಉತ್ತಮ ಸಂಸ್ಕೃತಿ ಯಾವುದು ಅಸುರ ಸಂಸ್ಕೃತಿ ಎಂದು ತಿಳಿಯುವ ಮುಕ್ತ ಅವಕಾಶ ಎಲ್ಲರಿಗೂ ಇದೆ. ಆದ್ದರಿಂದ ಆಮದು ಸಂಸ್ಕೃತಿ ಹಾಗೂ ಭಾರತೀಯ ಸಂಸ್ಕೃತಿಯಲ್ಲಿನ ವ್ಯತ್ಯಾಸ ಇವುಗಳ ಶ್ರೇಷ್ಠತೆಯನ್ನು ತುಲನೆ ಮಾಡಿ ತಾವು ತಮ್ಮ ಹಾಗೂ ದೇಶದ ಭವಿಷ್ಯದ ಉನ್ನತಿಗಾಗಿ ಮಾತ್ರೃಧರ್ಮಕ್ಕೆ ಮರಳುವ ಅವಕಾಶವನ್ನು ಬಳಸಿಕೊಂಡಲ್ಲಿ ವಿಶ್ವಶಾಂತಿಗೆ ದೊಡ್ಡ ಕೊಡುಗೆ ಕೊಟ್ಟಂತಾಗುವುದು. ಭಾರತವನ್ನು ವಿಶ್ವ ಸಂಸ್ಕೃತಿಯ ಮ್ಯೂಸಿಯಂ ಎನ್ನಲಾಗುವುದು. ಇಂತಹ ವಿಶಿಷ್ಟ ಬಹುಸಂಸ್ಕೃತಿಯ ದೇಶ ಇಡೀಭೂಮಂಡಲದಲ್ಲಿ ಇನ್ನೊಂದಿಲ್ಲ. ಅಂತಹ ವಿಶಾಲ ಮನೋಭಾವದ ವೈವಿಧ್ಯತೆಯ ಜನರಿಂದಕೂಡಿಯೂ! ಶಾಂತಿ ನೆಮ್ಮದಿಯಿಂದ ಸಾಮರಸ್ಯದಿಂದ ಇರುವ ಮನಸ್ಥಿತಿಗೆ ಭಾರತೀಯ ಸನಾತನ ಧರ್ಮದ ಮೌಲ್ಯಗಳೇ ಕಾರಣವಾಗಿದೆ. ಆದರೆ ಕುತಂತ್ರಿಗಳು ಅಸಹಿಷ್ಣುಗಳೂ, ಅಜ್ಞಾನಿಗಳೂ, ಮತಾಂಧರೂ, ವಿಸ್ತರಣಾವಾದಿಗಳೂ, ಆದಂತಹ ವಿದೇಶೀ ಕುಮತಿಗಳು ಇಂತಹ ಶ್ರೇಷ್ಠ ಧರ್ಮವನ್ನು ಅವಹೇಳನ ಮಾಡುವ ಹಾಗೂ ಜನರಿಂದ ದೂರಮಾಡುವ ಷಡ್ಯಂತ್ರಗಳನ್ನು ಧರ್ಮದ್ರೋಹೀ ಹಾಗೂ ಆಮದು ಮತಾವಲಂಬೀ ಒಡೆತನದ ಜಾತ್ಯಾತೀತ ಎನ್ನುವ ಎಡಬಿಡಂಗಿ ರಾಜಕೀಯ ಪಕ್ಷಗಳಸಹಾಯದಿಂದ ನಿರಂತರವಾಗಿ ಮಾಡುತ್ತಾಬಂದಿದ್ದು. ಕೆಲವು ಗುಲಾಮೀ ಮನಸ್ಥಿತಿಯ ಜನರಿಂದ ಕುಟಿಲ ಬುದ್ದಿಯ ಕುಟುಂಬ ಕೇಂದ್ರಿತ ರಾಜಕೀಯ ಹಾಗೂ ಅವರ ಸ್ವಾರ್ಥ ಭ್ರಷ್ಟ ಆಡಳಿತದಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ. ಅಲ್ಲದೆ ಮೂರೂಬಿಟ್ಟ ಜಾತ್ಯಾತೀತರು ತಮ್ಮ ಅಧಿಕಾರ ವ್ಯಾಮೋಹಕ್ಕಾಗಿ ಭಾರತೀಯರ ಮನಸ್ಸಿನಲ್ಲಿ ಒಡಕನ್ನು ಬಿತ್ತಿ ಪೋಷಿಸುತ್ತಿದ್ದಾರೆ, ಜಾತಿ ಜಾತಿ ಗಳ ಮಧ್ಯೆ ಧರ್ಮ ಧರ್ಮಗಳ ಮಧ್ಯೆ ವಿಷಬಿತ್ತುತ್ತಿದ್ದಾರೆ, ಅಲ್ಪಸಂಖ್ಯಾತರನ್ನು ಅತಿಯಾಗಿ ಓಲೈಸುತ್ತಾ ಬಹುಸಂಖ್ಯಾತರ ಮೇಲೆ ದೌರ್ಜನ್ಯ ಮಾಡುತ್ತಾ ಹಿಂದುಳಿದವರನ್ನು ಮೇಲ್ವರ್ಗದ ವಿರುದ್ದ ಎತ್ತಿಕಟ್ಟುತ್ತಾ ಸಮಾಜ ಒಡೆಯುವ ಕೆಲಸವನ್ನು ವಿದೇಶೀ ಮಿಷನರಿಗಳು ಹಾಗೂ ಬಹುರಾಷ್ಟ್ರೀಯ ಕಂಪೆನಿಗಳ ನೆರವಿನಿಂದ ನಿರಂತರ ವಾಗಿ ಮಾಡಲಾಗುತ್ತಿದೆ. ಇದರಿಂದ ದೇಶ ಛಿದ್ರವಾಗುತ್ತಿದೆ ಶಿಕ್ಷಣದಲ್ಲಿ ಪಾಶ್ಚಾತ್ಯ ಸಂಸ್ಕೃತಿ, ಮಾಧ್ಯಮಗಳಲ್ಲಿ ಅಶ್ಲೀಲತೆ, ಅನೈತಿಕತೆ, ಇವುಗಳನ್ನೇ ಸಂಸ್ಕೃತಿ ಎಂಬಂತೆ ಬಿಂಬಿಸಲಾಗುತ್ತಿದೆ. ಸನಾತನ ಧರ್ಮದ ನೈತಿಕ ಗುರುಕುಲ ಶಿಕ್ಷಣದಿಂದ ಯುವ ಜನಾಂಗವನ್ನು ವಂಚಿಸಲಾಗುತ್ತಿದೆ. ಇದರದುಷ್ಪರಿಣಾಮ ಇಂದು ಸಮಾಜದಲ್ಲಿ ಗೋಚರವಾಗುತ್ತಿದೆ ಅಸುರಮತದ ಶಿಕ್ಷಣದ ಅನುಕರಣೆಯಿಂದ ಅಸುರ ಸಂಸ್ಕೃತಿ ರಾರಾಜಿಸುತ್ತಿದೆ, ಅತ್ಯಾಚಾರ, ದರೋಡೆ, ಲಂಚ, ಭ್ರಷ್ಟತೆ ಇವೆಲ್ಲಾ ಈ ಅನೀತಿಯ ವಿದೇಶಿ ಮಿಷನರಿ ಶಿಕ್ಷಣ ಹಾಗೂ ವಿದೇಶೀ ಮತದ ಕುಸಂಸ್ಕೃತಿಯ ಬಳುವಳಿಯಾಗಿದೆ, ಅಶ್ಲೀಲತೆ, ಸ್ವಚ್ಛಂದ ಕಾಮ, ಕ್ರೌರ್ಯ, ಹಿಂಸೆ, ಆಕ್ರಮಣ, ಮತಾಂತರ ಮುಂತಾದ ಅನಿಷ್ಟಗಳೆಲ್ಲಾ ಆಮದು ಮತಗಳಲ್ಲಿ ಹುಲುಸಾಗಿ ಹುದುಗಿ ಕೊಂಡಿದೆ. ಇದರಿಂದ ಈ ದೇಶ ಮೊದಲಿನಂತೆ ಇನ್ನೂ ಸಾವಿರಾರು ವರುಷ ಬಾಳಬೇಕಾದರೆ ಸನಾತನ ಧರ್ಮದ ಮೌಲ್ಯಗಳು ಎಲ್ಲಾಜನರಲ್ಲೂ ಬರಬೇಕು, ಪ್ರತಿಯೊಬ್ಬಭಾರತೀಯ ಸ್ವದೇಶ ಹಾಗೂ ಸ್ವಧರ್ಮಪ್ರೇಮವನ್ನು ಹೊಂದಿ ಆಚರಿಸಬೇಕು. ಆಮದು ಮತದಲ್ಲಿ ಬಲವಂತದಿಂದ ಹೋದವರು ಅದೇ ಪರಮಧರ್ಮ ಎಂದು ಕುರುಡರಾಗದೆ ಅದರಲ್ಲಿಯ ಒಳ್ಳೆಯಗುಣಗಳೊಂದಿಗೆ ಮೂಲಧರ್ಮವಾದ ಸ್ವಧರ್ಮದ ಮೌಲ್ಯ, ಆಚಾರ, ವಿಚಾರಗಳನ್ನೂ ಗೌರವಿಸುವ ಕ್ರಮಗಳನ್ನು ಅನುಸರಿಸಿಕೊಂಡರೆ ಸಾಮಾಜಿಕ ಸಾಮರಸ್ಯಕ್ಕೆ ಹೇತುವಾದೀತು. ಪ್ರತ್ಯೇಕತೆಯನ್ನು ತೋರಿಸುತ್ತಾ, ಬೇರೆಯಾಗಿ ಗುರುತಿಸಿಕೊಳ್ಳುತ್ತಾ, ಪ್ರತ್ಯೇಕತೆಗೆ ಜೋತುಬಿದ್ದರೆ ಪುನಃ ಈದೇಶ ಸಾಮರಸ್ಯರಹಿತವಾಗಿ ಅಶಾಂತಿಯ ಕೊಂಪೆಯಾದೀತು, ಭಾರತವನ್ನು ಮತದ ಆಧಾರದಲ್ಲಿ ಒಡೆದುಕೊಂಡು ಹೋದ ಪಾಕಿಸ್ತಾನ ಇಂದು ವಿಶ್ವಭೂಪಟದಲ್ಲಿ ಭಯೋತ್ಪಾದನೆಯ ಜನ್ಮಭೂಮಿಯಾಗಿ. ಭಿಕಾರಿ ದೇಶವಾಗಿ ಏಕಾಂಗಿಯಾಗಿದೆ. ಅಜ್ಞಾನದ ಮತಾಂಧರಿಂದ ಕೂಡಿದ್ದು ದಿವಾಳಿಯಾಗಿ ಬೇರೆಯವರಲ್ಲಿ ಬಿಕ್ಷಬೇಡುವ ಪರಿಸ್ಥಿತಿಗೆ ಬಂದಿದೆ. ಯಾರು ಯಾವುದೇ ಮತವನ್ನೂ ಆಚರಿಸಲು ಈ ದೇಶದಲ್ಲಿ ಮುಕ್ತಸ್ವಾತಂತ್ರ್ಯ ವಿದ್ದಾಗ ವೇಷ, ಭಾಷೆಗಳಲ್ಲಿ ವಿದೇಷವನ್ನು ಅನುಕರಿಸಲು ಹೆಣಗುವುದು ಅಭಿಮಾನ್ಯ ಶೂನ್ಯತೆ ಹಾಗೂ ಈದೇಶಕ್ಕೆ ತೋರುವ ಅನಾದರವೇಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸ್ವದೇಶದ ಮೇಲೆ ಅಭಿಮಾನವಿಲ್ಲದವನು ದೇಶದ್ರೋಹಿಯೇ ಸರಿ, ತನ್ನ ಊರು ತನ್ನದೇಶ ಹಾಗೂ ಆ ದೇಶದ ಸಂಸ್ಕೃತಿಯನ್ನು ಗೌರವಿಸುವುದರಲ್ಲೇ ಪ್ರತಿಯೊಬ್ಬ ವ್ಯಕ್ತಿಯ ಶ್ರೇಯಸ್ಸಿದೆ. ಅದನ್ನು ಬಿಟ್ಟು ವಿದೇಶೀ ಆಮದು ಮತವನ್ನು ಅನಿವಾರ್ಯವಾಗಿ ಹಿಡಿದು ಇಂದು ಅದರ ಅಂಧಾಭಿಮಾನಿಗಳಾಗಿ ಅತಿರೇಕ ಮಾಡುತ್ತಾ ಭಯೋತ್ಪಾದನೆ ಯಂತಹ ಕೃತ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವ ಮೂರ್ಖ ಮತಾಂಧ ಯುವ ಜನತೆಗೆ ಇಂದು ಏನು ಆಗುತ್ತಿದೆ? ಹಾಗೂ ಅವರನ್ನು ಉತ್ತೇಜಿಸುವ “ದೇಶದ್ರೋಹಿ” ಪರಂಪರೆಯ ಒಂದು ಪ್ರಮುಖ ರಾಜಕೀಯ ಕುಟುಂಬದ ಓಲೈಕೆಯ ರಾಜಕೀಯ ಮಿತಿಮೀರಿರುವಾಗ ಬುದ್ದಿಹೇಳುವ ಕೆಲಸವನ್ನು ಅವರದೇ ಸಮಾಜದ ಪ್ರಜ್ಞಾವಂತರು ಮಾಡದಿದ್ದರೆ ಮುಂದೆ ಈ ದೇಶ ಹಾಗೂ ಎಲ್ಲಾ ಸಮಾಜಗಳೂ ಅವನತಿಗೆ ಅತಿಯಾದ ಬೆಲೆಯನ್ನೇ ಕೊಡಬೇಕಾಗುತ್ತದೆ. ಇವೆಲ್ಲಾ ಸರಿಯಾಗಲು ಜಾತಿ ಆಧಾರಿತ ತುಷ್ಟೀಕರಣ ಹಾಗೂ ಧರ್ಮ ಆಧಾರಿತ ತುಷ್ಟೀಕರಣ ನಿಲ್ಲ ಬೇಕು. ಅದು ನಿಲ್ಲಬೇಕಾದರೆ ಮೂರ್ಖರಾದವರ ಕುಟುಂಬದ ರಾಜಕಾರಣದ ಕಪಿಮುಷ್ಟಿಯಲ್ಲಿರುವ ಈ ದೇಶವನ್ನು ಇವರಿಂದ ಮುಕ್ತಗೊಳಿಸಬೇಕು. ಇಂತಹ ಮೂರ್ಖರಿಂದ ಅಧೋಗತಿ ಹಾಗೂ ಅಶಾಂತಿಗೆ ದೇಶವನ್ನು ದೂಡುತ್ತಿರುವ ವಿದೇಶೀ ಮತಾವಲಂಬಿ ದೇಶದ್ರೋಹಿಗಳು ಪ್ರಭಾವೀ ಸ್ಥಾನ ಹೊಂದುವುದನ್ನು ತಪ್ಪಿಸಬೇಕು. ವಿದೇಶೀ ದುರ್ಮತಿಗಳ ತುಷ್ಟೀಕರಣದ ಅನಿಷ್ಟ ರಾಜಕೀಯ ಪಕ್ಷ ನಾಶವಾಗಬೇಕು. ದೇಶದ ಎಲ್ಲಾ ಪ್ರಜೆಗಳಿಗಳನ್ನೂ ಸಮಾನವಾಗಿ ನೋಡುವ ರಾಜಕೀಯ ನಾಯಕರು ದೇಶವನ್ನು ಆಳಬೇಕು. ಹಾಗಾಗಲು ಮಹತ್ವಾಕಾಂಕ್ಷೆಹೊಂದಿದ ಕೆಚ್ಚೆದೆಯ ಭ್ರಷ್ಟಾಚಾರ ರಹಿತ ವಾಜಪೇಯಿ, ಮೋದಿ ಇವರಂತಹ ನಿಸ್ವಾರ್ಥ ದೇಶಪ್ರೇಮಿ ನಾಯಕರು ನಿರಂತರ ಪ್ರಧಾನಿಯಾಗಬೇಕು. ಎಲ್ಲರೂ ಸಾಮರಸ್ಯದ ಸ್ವಾಭಿಮಾನದ ಹಿಂದುಸ್ಥಾನಕ್ಕಾಗಿ ಇಂತಹ ಶ್ರೇಷ್ಠನಾಯಕರನ್ನು ಬೆಂಬಲಿಸೋಣ. ವಿಶ್ವ ಶಾಂತಿಗಾಗಿ ಎಲ್ಲಾಧರ್ಮದವರ ಮನ ಒಲಿಸಲು ಪ್ರಯತ್ನಿಸೋಣ. ಹಿಂದೂ ವಿರೋಧಿ, ಅಲ್ಪಸಂಖ್ಯಾತ ಜಿಹಾದಿ ಬೆಂಬಲಿಗ ರಾಜಕೀಯ ಪಕ್ಷವನ್ನು ದೇಶದಿಂದ ತೊಲಗಿಸೋಣ.
–ಶ್ರೀಜಿ
ಜೈ ಹಿಂದ್ ಜೈ ಭಾರತಮಾತಾ
