ಇಂದು ಸಾಮಾನ್ಯ ಜನರಿಗೆ ಧರ್ಮ ಹಾಗೂ ಮತದ ವ್ಯತ್ಯಾಸದ ಅರಿವಿಲ್ಲ. ಸಾಮಾನ್ಯರಲ್ಲದೆ ಪಂಡಿತರೆನಿಕೊಂಡವರಿಗೂ ಈ ವ್ಯತ್ಯಾಸ ತಿಳಿದಿಲ್ಲ ಮತವನ್ನೇ ಧರ್ಮವೆಂದು ತಿಳಿದವರೇ ಹೆಚ್ಚಿನವರಾಗಿದ್ದಾರೆ. ಮತ ಎನ್ನುವುದು ವಿಶಾಲವಾದ ಧರ್ಮದ ಕೆಲವೇ ಅಂಶಗಳನ್ನು ಕೆಲವು ಮತಾಚಾರ್ಯರುಗಳು ಬಳಸಿಕೊಂಡು ಅದನ್ನೇ ವೈಭವೀಕರಿಸಿ ಪ್ರಚಾರಮಾಡಿಕೊಂಡು ಬೆಳೆಸಿದ ಏಕವ್ಯಕ್ತಿಯ ಸೀಮಿತ ಜ್ಞಾನದ ವ್ಯವಸ್ಥೆ ಯಾಗಿದೆ. ಜಗತ್ತಿನಲ್ಲಿ ಹಲವಾರು ಮತಗಳಿವೆ ಹೆಚ್ಚಿನವುಗಳ ಮೂಲ ಉದ್ದೇಶ ಧರ್ಮ ಮಾರ್ಗದಲ್ಲಿ ನಡೆಯುವುದೇ ಆಗಿದ್ದರೂ ಅವುಗಳ ದಾರಿ ಸ್ಪಷ್ಠ ಹಾಗೂ ನಿಖರವಾಗಿಲ್ಲ, ಅಂದು ಮತಾಚಾರ್ಯರು ಪ್ರತಿಪಾದಿಸಿದ ತತ್ವಗಳನ್ನು ಇಂದು ಅವರ ಮತಾಂಧ ಅನುಯಾಯಿಗಳು ವಿಕೃತಾರ್ಥದಲ್ಲಿ ಬಳಸಿಕೊಂಡು ಮತಾಚಾರ್ಯರ ಉದ್ದೇಶದಿಂದ ಸಂಪೂರ್ಣವಿಮುಖವಾಗಿ ಅಧರ್ಮದ ಹಾದಿಯನ್ನು ಹಿಡಿದು ವಿಜೃಂಬಿಸುತ್ತಿರುವುದನ್ನು ನಾವು ನೋಡಬಹುದಾಗಿದೆ. ಮತಗ್ರಂಥ ಅಥವಾ ಮತಾಚಾರ್ಯರ ಬದುಕು ಮತಾನುಯಾಯಿಗಳಿಗೆ ಆದರ್ಷವಾಗಿರುತ್ತದೆ, ಮತಾಚಾರ್ಯರು ಹೇಗೆ ಬದುಕಿದ್ದರು ಎನ್ನುವುದೇ ಮತದ ಮುಂದಿನ ನಡೆಯನ್ನು ನಿರ್ಧರಿಸುತ್ತದೆ. ಇದರಿಂದ ಮತಗಳನ್ನು ಸಾತ್ವಿಕ ರಾಜಸ ತಾಮಸ ಗುಣಗಳಲ್ಲಿ ವಿಂಗಡಿಸಬಹುದಾಗಿದೆ.
ಧರ್ಮವು ಸೂರ್ಯನಂತೆ ಸ್ವಯಂ ಪ್ರಕಾಶಿಸಿದರೆ ಮತಗಳು ಸೂರ್ಯನ ನೆರಳನ್ನು ಪ್ರತಿಫಲಿಸುವ ಚಂದ್ರನಂತೆ ಎನ್ನಬಹುದು. ಮತಗಳು ಧರ್ಮದ ಕೆಲವೇ ವಿಚಾರಗಳನ್ನು ಹಿಡಿದುಕೊಂಡು ನೇತಾಡುತ್ತಿರುತ್ತವೆ. ಮತಗಳ ಪ್ರಮುಖ ಲಕ್ಷಣಗಳನ್ನು ಕೊನೆಯಲ್ಲಿ ವಿವರಿಸಲಾಗಿದೆ.
ಧರ್ಮ
ಧರ್ಮ ಎನ್ನುವುದು ದೇವರಿಗೆ ಪ್ರೀಯವಾಗುವಂತೆ ಬದುಕುವುದಾಗಿದೆ. ಅಂದರೆ ಸದಾಚಾರವೇ ಧರ್ಮ ವಾಗಿದೆ. ಸೃಷ್ಠಿಯನ್ನು ಭೋಗಕ್ಕೋಸ್ಕರವೇ ಎಂದು ಭಾವಿಸದೆ ಅದನ್ನು ಅಗತ್ಯಕ್ಕನುಗುಣವಾಗಿ ಬಳಸಿಕೊಂಡು ಬೆಳೆಸಿಕೊಂಡು ರಕ್ಷಿಸಿಕೊಂಖಡು ಹೋಗುವುದೇ ಧರ್ಮವಾಗಿದೆ. ಧರ್ಮಕ್ಕೆ ಆದಿ ಅಂತ್ಯಗಳಿಲ್ಲ. ಅದು ಸನಾತನವಾಗಿದ್ದು ದೇವರಿರುವವರೆಗೆ ಸೂರ್ಯಚಂದ್ರರಿರುವವರೆಗೆ ಭ್ರಹ್ಮಾಂಡ ಇರುವವರೆಗೂ ಧರ್ಮ ಇರುತ್ತದೆ. ಮತ್ತು ಜಗತ್ತಿನ ಉಳಿವಿಗೆ ಧರ್ಮ ಅನಿವಾರ್ಯವಾಗಿದೆ. ಧರ್ಮದ ನಾಶ ಜಗತ್ತಿನ ನಾಶವಾಗಿದೆ. ಧರ್ಮದ ಅರಿವನ್ನು ಜ್ಞಾನವನ್ನು ಜಗತ್ತಿಗೆ ಅತ್ಯುನ್ನತ ಆದರ್ಷದಿಂದ ಸ್ಪಷ್ಠವಾಗಿ ಬೋಧಿಸಿದ, ಮಾರ್ಗದರ್ಷನ ಮಾಡಿದ ದೇಶ ಭಾರತವಾಗಿದೆ, ಹಾಗೆಯೇ ಅಂತಹ ಜ್ಞಾನರಾಶಿಯಿಂದ ಕೂಡಿದ ಸಾಹಿತ್ಯ ವೇದ ಉಪನಿಷತ್ತುಗಳಾಗಿವೆ. ಇಂತಹ ಧರ್ಮದ ಆದರ್ಷದಲ್ಲಿ ಹುಟ್ಟಿದ ಬೆಳೆದ ಹಿಂದುಗಳು ಧನ್ಯರಾಗಿದ್ದು ಪುಣ್ಯವಂತರಾಗಿದ್ದಾರೆ.
ಧರ್ಮ ಎನ್ನುವ ಶಬ್ಧಕ್ಕೆ ವಿಶಾಲವಾದ ಅರ್ಥ ಇದೆ. ಈ ಶಬ್ಧಕ್ಕೆ ಪರ್ಯಾಯವಾದ ಶಬ್ಧ ಆಂಗ್ಲ ಭಾಷೆಯಲ್ಲಿ ಇಲ್ಲ ಆದುದರಿಂದ ಇಂಗ್ಲಿಷಿನ ರಿಲಿಜಿಯನ್ ಶಬ್ಧಕ್ಕೆ ಧರ್ಮ ಎನ್ನುವ ತಪ್ಪು ಅರ್ಥವನ್ನು ಹೇಳಿ ಧರ್ಮ ಎಂದರೆ ರಿಲಿಜಿಯನ್ ಎನ್ನುವಂತೆ ಪ್ರಚಾರ ಮಾಡಲಾಗಿದೆ. ನಿಜವಾಗಿ ಧರ್ಮದ ಅರ್ಥಸ್ವರೂಪ ಬೇರೆ ಹಾಗೂ ರಿಲಿಜಿಯನ್ ಶಬ್ಧದ ಅರ್ಥ ಸ್ವರೂಪ ಬೇರೆಯಾಗಿದೆ. ಯಾಕೆ ಈಮಾತನ್ನು ಹೇಳ ಬೇಕಾಗಿ ಬಂತೆಂದರೆ ಜಗತ್ತಿನ ಹೆಚ್ಚಿನ ಜನರಿಗೆ ಧರ್ಮದ ಅರಿವು ಇಲ್ಲ ಇವರೆಲ್ಲಾ ರಿಲಿಜಿಯನ್ನನ್ನೇ ಧರ್ಮ ಎಂದು ತಿಳಿದು ತಪ್ಪುದಾರಿಯಲ್ಲಿ ನಡೆಯುತ್ತಿದ್ದಾರೆ. ನಾವು ಹಿಂದೂಗಳೂ ಇದೇ ತಪ್ಪನ್ನೇ ಸರಿ ಎಂದು ಭ್ರಮಿಸುತ್ತೇವೆ. ಕಾರಣ ಬ್ರಿಟಿಶ್ ಪ್ರೇರಿತ ನಮ್ಮ ಶಿಕ್ಷಣ ವ್ಯವಸ್ಥೆ ಹೀಗೆ ಮಾಡಿದೆ. ಇದರ ದುಷ್ಪರಿಣಾಮದ ಬಗ್ಗೆ ಎಚ್ಚರದಿಂದಿರುವುದು ಮುಖ್ಯ. ಇಂದಿನ ಬುದ್ದಿಜೀವಿಗಳೆಂಬ ಗಂಜಿಗಿರಾಕಿಗಳು, ಜಾತ್ಯಾತೀತರೆಂಬ ವಿಕೃತವಾದಿಗಳೆಲ್ಲಾ ರಿಲೀಜಿಯನ್ನಿನ ಕಳೆಗಳೇ ಹೊರತು ಧರ್ಮದ ಬೆಳೆಗಳಲ್ಲ. ಇವರ ದುಷ್ಟಚಿಂತನೆಯ ಮೂಲವನ್ನು ಬೇರು ಸಮೇತ ಕಿತ್ತು ನಾಶಮಾಡುವ ಅಗತ್ಯ ಪ್ರಸ್ತುತ ಜಗತ್ತಿನ ಶಾಂತಿಗೆ ಅನಿವಾರ್ಯವಾಗಿದೆ.
ಸಂಸ್ಕೃತದಲ್ಲಿ ಧರ್ಮ ಎನ್ನುವ ಶಬ್ಧ ದೃ ಧಾತುವಿನಿಂದ ಉತ್ಪನ್ನವಾಗಿದೆ. “ಧಾರಯತಿ ಇತಿ ಧರ್ಮಃ” ಅಂದರೆ ಧರಿಸಿರುವುದೇ ಧರ್ಮ ಎನ್ನುವ ಅರ್ಥ ಇದೆ. ಅಂದರೆ ಇಡೀ ವಿಶ್ವವನ್ನು ಧರ್ಮ ಆವರಿಸಿ ಆಧರಿಸಿದೆ ಎಲ್ಲಿ ಧರ್ಮದ ನಾಶವಾಗುವುದೋ ಅಲ್ಲಿ ಸರ್ವವೂ ನಾಶವಾಗಿ ಕ್ಷೋಭೆ ಉಂಟಾಗುವುದು. ಕ್ಷೋಭೆಯಿಂದ ಜಗತ್ತಿನ ನಾಶವಾಗುವುದು. ಜಗತ್ತು ಉಳಿಯಬೇಕಿದ್ದರೆ ಧರ್ಮವೂ ಉಳಿಯಬೇಕು. ಹಾಗೂ ಜನರು ಧರ್ಮದಿಂದ ಬದುಕಬೇಕು. ಆದುದರಿಂದಲೇ “ಧರ್ಮೋ ರಕ್ಷತಿ ರಕ್ಷಿತಃ” ಎಂದು ಸನಾತನ ಧರ್ಮ ಹೇಳುತ್ತದೆ. ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮವು ರಕ್ಷಿಸುತ್ತದೆ. ಅಂದರೆ ವಿಶ್ವದಲ್ಲಿ ಹಲವು ಧರ್ಮಗಳಿರುವಾಗ ನಾವು ಯಾವ ಧರ್ಮವನ್ನು ರಕ್ಷಿಸಬೇಕು? ಎನ್ನುವ ಗೊಂದಲಮೂಡಿದರೆ ಅದು ಅಜ್ಞಾನ, ಹಾಗೂ ನಮ್ಮ ಬೌಧ್ಧಿಕ ಧಾರಿದ್ರ್ಯ. ಧರ್ಮದಲ್ಲಿ ಹಲವಿರಲು ಸಾಧ್ಯವಿಲ್ಲ, ಧರ್ಮ ಎನ್ನುವುದು ಇಡೀ ಮನುಕುಲದ ಆದರ್ಷವಾಗಿದ್ದು ಅದು ಎಲ್ಲಾಕಾಲದಲ್ಲಿಯೂ ಎಲ್ಲಾದೇಶದಲ್ಲಿಯೂ ಎಲ್ಲಾ ಜನರಿಗೂ ಅನ್ವಯಿಸುವ ಆದರ್ಷ ವ್ಯವಸ್ಥೆಯಾಗಿದೆ. ಮನುಷ್ಯ ಹೇಗೆ ಸರ್ವರೊಂದಿಗೂ ಆದರ್ಷವಾಗಿ ಬದುಕಬೇಕೆನ್ನುವುದನ್ನೇ ಧರ್ಮ ತಿಳಿಸುತ್ತದೆ. ಕೇವಲ ತನ್ನ ಮತ ತನ್ನ ಜಾತಿ ತನ್ನ ಸಮುದಾಯದೊಂದಿಗೆ ಮಾತ್ರ ಆದರ್ಷವಾಗಿ ಬದುಕುತ್ತೇನೆನ್ನುವುದು ಸ್ವಾರ್ಥ ಹಾಗೂ ಸಂಕುಚಿತ ಮನಸ್ಥಿತಿ. ಇದು ಅಜ್ಞಾನದ ಪರಮಾವಧಿ ಇದು ಅಧರ್ಮವೇ ಆಗಿದೆ. ಹಾಗೆಯೇ ದುಷ್ಟರು ನೀಚರು ಕಪಟಿಗಳೊಂದಿಗೂ ಆದರ್ಷದಿಂದ ಬದುಕುತ್ತೇನೆನ್ನುವುದು ಆತ್ಮಹತ್ಯೆ ಎನ್ನಬಹುದು, ಇದು ಮೂರ್ಖತನದ ಗಾಂಧೀತತ್ವ ಎನ್ನಬಹುದು. ಇದನ್ನು ಧರ್ಮ ಎಂದು ಸ್ವೀಕರಿಸಲಾಗದು. ಸಜ್ಜನ ಹಾಗೂ ನಿರುಪದ್ರವಿಗಳೊಂದಿಗೆ ಆದರ್ಷವಾಗಿ ಬದುಕುವುದು ಧರ್ಮ. ಸಮಸ್ಥ ಜಗತ್ತಿನ ನಿರುಪದ್ರವೀ ಜೀವಜಂತು ಪ್ರಕೃತಿಯ ಹಿತಚಿಂತನೆ ಮಾಡಿ ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ಹಾಗೂ ಅದಕ್ಕೆಪೂರಕವಾಗಿ ಬದುಕುವುದೇ ಧರ್ಮಾಚರಣೆಯ ವಿಧಾನ ವಾಗಿದೆ. ತಾನೇನು ಬಯಸುತ್ತೇನೆಯೋ ಇಚ್ಚಿಸುತ್ತೇನೆಯೋ ಅದರಂತೆ ಪರರೂಚಿಂತಿಸುತ್ತಾರೆ. ಅವರೂ ತನ್ನಂತೆಯೇ ಮನುಷ್ಯರು ಎಂದು ಅರಿತು ಆತ್ಮಸಾಕ್ಷಿಯಂತೆ ಬದುಕುವುದೇ ಧರ್ಮವಾಗಿದೆ. ಧರ್ಮ ಎನ್ನುವುದು ಸಂಸ್ಕೃತ ಪದ ವಾಗಿದೆ ಈ ಶಬ್ಧದ ಉದಯ ವಾಗಿರುವುದು ಭಾರತ ದೇಶದಲ್ಲಿ, ವಿದೇಶದಲ್ಲಿ ರಿಲಿಜಿಯನ್ ಎನ್ನುವ ಶಬ್ಧ ಧರ್ಮಕ್ಕೆ ಪರ್ಯಾಯ ಶಬ್ಧವಲ್ಲ ರಿಲಿಜಿಯನ್ನಿಗೆ ಪರ್ಯಾಯ ಶಬ್ಧ ಮತ ಎನ್ನಬಹುದು, ಅಥವಾ ಪಂಥ ಎನ್ನಬಹುದು.
ಎಲ್ಲಾ ಸದ್ವಿಚಾರದ ಮತಗಳ ಮೂಲ ಧರ್ಮವೇ ಆಗಿದೆ. ಧರ್ಮದಿಂದ ಒಂದೊಂದು ಕವಲುಗಳಾಗಿ ಟಿಸಿಲೊಡೆದು ಬೆಳೆದವುಗಳೇ ಮತಗಳು, ಧರ್ಮ ಪರಿಪೂರ್ಣ ವಾದದ್ದು, ಹಾಗೂ ಮತಗಳು ಅಪೂರ್ಣ ವಾಗಿರುವ ಕವಲುಗಳು, ಸರ್ವಕ್ಕೂ ಮೂಲ ಸನಾತನ ಧರ್ಮವೇ ಆಗಿದೆ, ಎಲ್ಲಾ ಮತಗಳ ಗುರಿ ಧರ್ಮ ರಕ್ಷಣೆಯೇ ಆಗಿರಬೇಕು. ಆದರೆ ಇಂದು ಮತಗಳು ಅಲ್ಪಜ್ಞಾನದಿಂದ, ಅಜ್ಞಾನದಿಂದ ಅಧರ್ಮದ ಹಾದಿಯಲ್ಲಿ ಚಲಿಸುತ್ತಿರುವುದು ವಿಶ್ವದ ಜೀವ ಸಂಕುಲದ ದುರಂತವಾಗಿದೆ. ಇಂದು ಮತಗಳು ಪ್ರಚಾರಕ್ಕಾಗಿ ಪ್ರಾಬಲ್ಯಕ್ಕಾಗಿ ಧರ್ಮದ ಹೆಸರಿನಲ್ಲಿ ಮಾಡಬಾರದ ಅನಾಚಾರಗಳನ್ನು ಮಾಡುತ್ತಿದ್ದು ಜಗತ್ತಿನ ವಿನಾಶಕ್ಕೆ ಮನ್ನುಡಿ ಬರೆಯುತ್ತಿವೆ. “ಧರ್ಮೋ ರಕ್ಷತಿ ರಕ್ಷಿತಃ” ಇದರ ಅರ್ಥ ಧರ್ಮ ಇರುವಲ್ಲಿ ಮಾತ್ರ ಮನುಶ್ಯ ಹಾಗೂ ಪ್ರಾಣಿ ಸಂಕುಲ ಇವೆಲ್ಲ ಬದುಕಲು ಸಾಧ್ಯ ಧರ್ಮ ನಾಶವಾದಲ್ಲಿ ಸರ್ವವೂ ನಾಶವಾಗುವುದು. ಎಂದು ಅರ್ಥ ನಾವು ಕ್ಷೇಮದಿಂದ ಬದುಕಲು ಧರ್ಮಾಚರಣೆ ಮಾಡುವುದು ಹಾಗೂ ಧರ್ಮ ರಕ್ಷಣೆ ಮಾಡುವುದು ಅನಿವಾರ್ಯವಾಗಿದೆ. ಇಂದು ಜಗತ್ತಿನಲ್ಲಿ ಅನೇಕ ತಾಮಸ ಮತಗಳು ಉದಯಿಸಿ ಅಂತಹ ಮತಾಂಧರಿಂದ ಧರ್ಮದ ನಾಶ ಆಗಿದೆ. ಹಾಗೂ ಆಗುತ್ತಿದೆ. ಹಿಂಸೆ ವ್ಯಭಿಚಾರ ಹತ್ಯೆಗಳಿಗೆಲ್ಲಾ ಇಂತಹಾ ಅವಿವೇಕಿ ಮತಗಳ ಕೊಡುಗೆ ಅಧಿಕವಾಗಿದೆ ಹಾಗೂ ಅಜ್ಞಾನಿಗಳಾದ ಇಂತಹ ಮತಾಭಿಮಾನಿಗಳು ತಮ್ಮೆಲ್ಲಾ ಅನಾಚಾರಗಳಿಗೂ ಧರ್ಮದ ಪರದೆಯನ್ನು ಹೊದೆಸುತ್ತಿರುವುದು ದುರಂತವಾಗಿದೆ. ಹಾಗೂ ಜಗತ್ತಿನ ಅತಿಹೆಚ್ಚು ಪ್ರದೇಶಗಳನ್ನು ಇಂತಹ ಅಜ್ಞಾನದ ಕೂಪವಾದ ದೋಶಪೂರಿತ ಮತಗಳು ಆವರಿಸಿವೆ. ಇಂತಹ ಮತಗಳನ್ನು ಆಂಗ್ಲಭಾಷೆಯಲ್ಲಿ ರಿಲಿಜಿಯನ್ ಎನ್ನ ಲಾಗುತ್ತದೆ. ಮತಾಂತರದ ಮುಖಾಂತರ ವಿಶ್ವ ಸಂಸ್ಕೃತಿಯನ್ನು ಕಬಳಿಸುತ್ತಿರುವ ವಿಶ್ವಶಾಂತಿಗೆ ಬೆದರಿಕೆ ಒಡ್ಡುತ್ತಿರುವ ಎರಡು ಮುಖ್ಯ ಮತಗಳು ಕ್ರಿಶ್ಚಿಯನ್ ಹಾಗೂ ಇಸ್ಲಾಮ್ ಆಗಿದೆ. ಇವು ಧರ್ಮವಾಗಿರದೆ ಕೇವಲ ಮತಗಳಾಗಿದ್ದು ತಮ್ಮ ಮತಪ್ರಚಾರಕ್ಕಾಗಿ ಯಾವ ಕನಿಷ್ಠ ಮಟ್ಟಕ್ಕೂ ಇಳಿಯಲು ಹೇಸದ ಮತಪ್ರಚಾರಕರಿಂದ ಕೂಡಿವೆ. ಇಂತಹ ಮತಪ್ರಚಾರಕರಿಗೆ ಧರ್ಮ ಎಂದರೆ ಏನೆಂಬುದರ ಅರಿವೂ ಇಲ್ಲವಾಗಿದೆ ಅರಿವು ಇದ್ದರೂ ಇಂತಹವರಿಗೆ ಧರ್ಮಾಚರಣೆಗಿಂತಲೂ ಮತಪ್ರಚಾರವೇ ಮೂಖ್ಯವಾಗಿರುವುದುರಿಂದ ಮತಪ್ರಚಾರಕ್ಕಾಗಿ ಅಧರ್ಮ ಮಾರ್ಗವಾದ ಮತಾಂತರ ಭಯೋತ್ಪಾದನೆ ಆಮಿಷ ಬೆದರಿಕೆ ಹಿಂಸೆ ಕ್ರೌರ್ಯ ಮುಂತಾದ ಎಲ್ಲಾ ರೀತಿಯ ಅನಿಷ್ಠ ಮಾರ್ಗಗಳನ್ನೂ ಅನುಸರಿಸುತ್ತಿವೆ. ಇಂತಹಾ ಮತಾಂಧರಿಂದ ಧರ್ಮದ ಸಂರಕ್ಷಣೆ ಮಾಡುವ ಜವಾಬ್ದಾರಿ ಹಾಗೂ ಹೊಣೆಗಾರಿಗೆ ಇಂದು ಸನಾತನ ಧರ್ಮದ ಅನುಯಾಯಿಗಳಾದ ಭಾರತೀಯರ ಮೇಲಿದೆ. ಧರ್ಮ ಎಂದರೆ ಏನೆಂದು ವಿಶ್ವಕ್ಕೆ ಸಾರಿದವರು ಭಾರತೀಯರಾಗಿದ್ದಾರೆ, ವಿಶ್ವವೇ ಒಂದು ಕುಟುಂಬ “ವಸುದೈವ ಕುಟುಂಬಕಂ” “ಲೋಕಾಃ ಸಮಸ್ಥಾಃ ಸುಖಿನೋ ಭವಂತು” ಎಂಬುದು ಭಾರತೀಯರ ಕಲ್ಪನೆ. ಇಡೀ ವಿಶ್ವದಲ್ಲಿ ಭಾರತೀಯ ಧರ್ಮವನ್ನು ತಿಳಿಸಿ ಪ್ರಚಾರ ಮಾಡುವ ಅಗತ್ಯ ಇಂದು ವಿಶ್ವಶಾಂತಿಗೆ ಅಗತ್ಯವಾಗಿದೆ. ಇದನ್ನು ಮಾಡುವ ತಾಕತ್ತು ಇರುವುದು ಕೇವಲ ಹಿಂದುಗಳಿಗೆ ಮಾತ್ರ ಯಾಕೆಂದರೆ ಧರ್ಮದ ಅರ್ಥ ತಿಳಿದವರು ಹಿಂದುಗಳು ಮಾತ್ರ ಆಗಿದ್ದಾರೆ. ಅದನ್ನು ತಿಳಿಸಿದವರು ನಮ್ಮ ಹಿರಿಯರಾದ ಋಷಿಮುನಿಗಳೆ ಆಗಿದ್ದಾರೆ. ತಮ್ಮ ತಪಸ್ಸಿನಿಂದ ಅನುಭವದಿಂದ ಧರ್ಮ ಸೂಕ್ಷ್ಮಗಳನ್ನು ಗ್ರಂಥಗಳ ಮೂಲಕ ಕಥೆಗಳ ಮೂಲಕ ಸುಭಾಷಿತಗಳ ಮೂಲಕ ಸಮಾಜಕ್ಕೆ ಸಾವಿರಾರುವರುಷಗಳ ಹಿಂದೆಯೇ ನೀಡಿದ್ದಾರೆ. ಧರ್ಮದಲ್ಲಿ ಬದುಕಿ ತೋರಿಸಿದ್ದಾರೆ. ಆದರೆ ದುರಂತವೆಂದರೆ ಇಂದು ಭಾರತದಲ್ಲಿಯೂ ಅಜ್ಞಾನಿ ಹಾಗೂ ಅಲ್ಪಜ್ಞಾನಿಗಳನೇಕರು ಧರ್ಮದಿಂದ ವಿಮುಖರಾಗಿ ಅನೇಕ ಮತಗಳನ್ನು ಹಿಡಿದುಕೊಂಡು ನೇತಾಡುತ್ತಾ ಪರಸ್ಪರರನ್ನು ದೂಷಿಸುತ್ತಾ ಹಿಂದೂ ಸಮಾಜದಲ್ಲಿ ಧರ್ಮ ನಾಶಕ್ಕೆ ದೊಡ್ಡ ಕೊಡುಗೆಯನ್ನೇ ನೀಡುತ್ತಿದ್ದಾರೆಂದರೆ ಸುಳ್ಳಾಗಲಾರದು. ಇಂತಹ ಮತಗಳನ್ನು, ಶೈವ, ವೈಷ್ಣವ, ಶಾಕ್ತ, ಬೌದ್ಧ, ಸಿಖ್, ಜೈನ, ಲಿಂಗಾಯತ, ವೀರಶೈವ, ದ್ವೈತ, ಅದ್ವೈತ, ವಿಷಿಷ್ಠ ಅದ್ವೈತ, ನಾಸ್ಥಿಕ, ಮುಂತಾಗಿ ನೋಡಬಹುದಾಗಿದೆ.
ಧರ್ಮ ಎನ್ನುವುದು ಜಗತ್ತಿನ ಉಳಿವಿಗಾಗಿ ಒಳಿತಿಗಾಗಿ ಉತ್ತಮವಾಗಿ ಬದುಕಲು ಮಾನವನು ರೂಪಿಸಿಕೊಂಡ ಜೀವನ ವಿಧಾನವಾಗಿದೆ. ಇದು ದೇವ ನಿಯಾಮಕ ವಾಗಿದೆ. ಧರ್ಮಕ್ಕೆ ವಿರುದ್ಧವಾಗಿ ಬದುಕುವುದು ಅಥವಾ ನಡೆಯುವುದು ಅಧರ್ಮವೇ ಆಗಿದೆ. ಸನಾತನ ಧರ್ಮವು ಒಂದು ಶ್ರೇಷ್ಠ ಜೀವನ ವಿಧಾನವನ್ನು ಜಗತ್ತಿಗೆ ಅನುಗ್ರಹಿಸಿದ ಪರಿಪೂರ್ಣ ಧರ್ಮವಾಗಿದೆ. ಇದು ಹೆಸರೇ ಹೇಳುವಂತೆ ಪ್ರಾಚೀನ ವಾದ ಧರ್ಮವಾಗಿದ್ದು ವಿಶ್ವ ವ್ಯಾಪಿ ತನ್ನ ಪ್ರಭಾವವನ್ನು ಬೀರಿತ್ತು ಹಾಗೂ ಭಾರತದ ಕೀರ್ತಿ ವಿಶ್ವ ವ್ಯಾಪಿಯಾಗಿತ್ತು. ಅಲ್ಲದೆ ವಿಶ್ವಾಧ್ಯಂತ ಜ್ಞಾನಾರ್ಜನೆಗಾಗಿ ಭಾರತವನ್ನು ಆಶ್ರಯಿಸಿ ಜನರು ಕಲಿಯಲು ಬರುತ್ತಿದ್ದರು. ಇದು ನಮ್ಮ ದೇಷದಲ್ಲಿ ಪ್ರಚಲಿತದಲ್ಲಿದ್ದ ಧರ್ಮದ ಮಹತ್ವ ವನ್ನು ತೋರಿಸುತ್ತದೆ. ಹಾಗೂ ಇಲ್ಲಿನ ಸಂಸ್ಕೃತಿ ವಿಶ್ವಾದ್ಯಂತ ಆಚರಣೆ ಗೊಂಡು ಆದರ್ಷಪ್ರಾಯವಾಗಿತ್ತು.
ಧರ್ಮ (ಸನಾತನ) ಎನ್ನುವುದು ಎಂದಿಗೂ ಬದಲಾಗುವುದಿಲ್ಲ ಅದು ನಿತ್ಯ ನೂತನ ಹಾಗೂ ಚಿರಂತನ ವಾಗಿದೆ. ಧರ್ಮ ಎಂದಿಗೂ ಕೆಟ್ಟದ್ದನ್ನು ಪ್ರೋತ್ಸಾಹಿಸುವುದಿಲ್ಲ. ಧರ್ಮ ಎಂದಿಗೂ ಸಜ್ಜನರನ್ನು ಹಿಂಸಿಸುವುದಿಲ್ಲ. ಹಾಗೂ ದುರ್ಜನರನ್ನು ಸಹಿಸುವುದೂ ಇಲ್ಲ. ದುಷ್ಟ ಶಿಕ್ಷಣ ಶಿಷ್ಟ ರಕ್ಷಣ ಧರ್ಮದ ಕಾರ್ಯವಾಗಿದೆ. ಪ್ರತಿಯೊಬ್ಬ ಮನುಷ್ಯನ ಪ್ರಥಮ ಕರ್ತವ್ಯ ಧರ್ಮ ರಕ್ಷಣೆಯಾಗಿದೆ. ಧರ್ಮ ನಾಶವಾದರೆ ಇನ್ನಾವುದೂ ನಮ್ಮನ್ನು ರಕ್ಷಿಸಲಾರದು. ಇದನ್ನು ನಾವು ಇಸ್ಲಾಮಿಕ್ ದೇಶಗಳಲ್ಲಿ ನೋಡಬಹುದು ಧರ್ಮದ ಜ್ಞಾನವಿಲ್ಲದ ಅಧಮರು ನರಹಂತಕರಾಗಿ ಪ್ರಜಾಪೀಡಕರಾಗಿ ಅಮಾಯಕರನ್ನು ಕೊಲ್ಲುತ್ತಾ ಮಾನವೀಯತೆ ಮರೆತ ರಾಕ್ಷಸರಾಗಿ ವಿಜೃಂಬಿಸುತ್ತಿದ್ದಾರೆ. ಇಂತಹ ಹತ್ಯೆಯನ್ನೇ ಧರ್ಮ ಎನ್ನುತ್ತಿದ್ದಾರೆ ಆದರೆ ಇದು ಸ್ಪಷ್ಟವಾಗಿ ಅಸುರಧರ್ಮ ವಾಗಿದೆ. ನೈಜ ಧರ್ಮ ನೈತಿಕತೆಯನ್ನು ಕಲಿಸುತ್ತದೆ. ದಯೆ ಪ್ರೀತಿ ಸ್ನೇಹ ಸಹನೆ ಯನ್ನು ಕಲಿಸುತ್ತದೆ. ಅದನ್ನು ತೊರೆದು ತಾವು ಮಾಡುವ ಕೆಲಸವೇ ಸರಿ ಎಂದು ಅದಕ್ಕೆ ಸಮರ್ಥನೆ ಹುಡುಕುವುದೇ ಅಧರ್ಮದ ಮೂಲವಾಗಿದೆ. ಹಾಗೂ ಇಂತಹ ಮನಸ್ಥಿತಿಯೇ ದುಷ್ಠತನದ ಬೀಜಾಂಕುರ ವಾಗಿದೆ. ತನ್ನದೇ ಸರಿಎನ್ನುವುದು ಅಹಂಕಾರ ಮತ್ತು ಅಜ್ಞಾನದ ಪರಮಾವಧಿಯಾಗಿದೆ. ಹಿಂದೂ (ಸನಾತನ) ಧರ್ಮದ ಮಾರ್ಗದರ್ಷಿ ಎನಿಸಿದ ವೇದಗಳು ಎಲ್ಲಿಯೂ ಯಾರಮೇಲೂ ಅಭಿಪ್ರಾಯವನ್ನು ಹೇರುವುದಿಲ್ಲ. ವಿಮರ್ಷೆಗೆ ಒಡ್ಡುತ್ತವೆ. ಆತ್ಮಸಾಕ್ಷಿಯಂತೆ ಬದುಕಲು ಸೂಚಿಸುತ್ತವೆ. ಸರ್ವಕಡೆಗಳಿಂದಲೂ ಉತ್ತಮವಾದುದು ತನ್ನತ್ತಬರಲಿ ಎಂದು ಮುಕ್ತವಾಗಿ ಸ್ವೀಕರಿಸುತ್ತವೆ, ವಸುದೈವಕುಟುಂಬಕಂ ಎಂಬಂತೆ ವಿಶ್ವವೇ ಒಂದು ಕುಟುಂಬ ಎಂದು ಸಾರುತ್ತದೆ, ಅದು ಕೇವಲಮನುಷ್ಯರ ಕುರಿತಾಗಿ ಅಲ್ಲ. ಸರ್ವ ಪಶುಪಕ್ಷಿ ಪ್ರಾಣಿ ವೃಕ್ಷಸಹಿತ ಪ್ರಕೃತಿಯೇ ಕುಟುಂಬದ ಭಾಗ ವಾಗಿದೆ. ಕತ್ತಲೆಯೆಂದ ಬೆಳಕಿನೆಡೆಗೆ ನಡೆಸೆಂದು ಬಂಗವಂತನಲ್ಲಿ ಮೊರೆ ಇಡುತ್ತದೆ. ಸರ್ವೇ ಜನಾಃ ಸುಖಿನೋ ಭವಂತು ಎಂದು ಎಂದು ಸಾರುತ್ತದೆ. ಇಂತಹ ಬದುಕನ್ನು ಮಾರ್ಗದರ್ಷನ ಮಾಡಿದ ಇತಿಹಾಸದ ಭಾಗವೇ ಸನಾತನ ಹಿಂದೂ ಧರ್ಮವಾಗಿದೆ. ವಿವೇಕ ವಿಮರ್ಷೆಗೆ ಮುಕ್ತ ಸ್ವಾತಂತ್ರ ನೀಡಿದ ಧರ್ಮ ಹಿಂದೂ ಧರ್ಮವಾಗಿದೆ. ಸ್ತ್ರೀಯರಲ್ಲಿ ದೇವತೆಗಳನ್ನು ಕಂಡ ಧರ್ಮ ಹಿಂದೂ ಧರ್ಮವಾಗಿದೆ. ಹಿಂದೂ ಧರ್ಮ ಎಂದರೆ ಸರ್ವ ಆದರ್ಷಗಳ ಒಟ್ಟು ರೂಪವಾಗಿದೆ. ಇದರ ಕವಲುಗಳಾದ ಮತಗಳು ಅಲ್ಪ ಜ್ಞಾನದ ಒಂದೊಂದು ಶಾಖೆಗಳಾಗಿವೆ ಅವೆಂದಿಗೂ ಪರಿಪೂರ್ಣ ಧರ್ಮದ ಪರಿಕಲ್ಪನೆಯನ್ನು ನೀಡಲಾರವು, ಇಂತಹ ಮತಗಳ ಮಧ್ಯದಲ್ಲಿರುವ ಜಾತಿಗಳು ಧರ್ಮವೆಂಬ ವೃಕ್ಷದ ರೋಗಪೀಡಿತ ಎಲೆಗಳಾಗಿವೆ. ಅವುಗಳು ಒಂದು ದಿನ ಉದುರಿಹೋಗಿ ಹೊಸ ರೋಗರಹಿತ ಎಲೆಗಳಿಂದ ಕೂಡಿದ ಭಿನ್ನತೆ ಇಲ್ಲದ ಕೊಂಬೆಗಳಿಂದ ಕೂಡಿದ ಸುಂದರ ಹಿಂದೂ “ಧರ್ಮ ವೃಕ್ಷ” ಆಗುವ ಸಮಯದಲ್ಲಿ ಭಾರತ ದೇಶ “ವಿಶ್ವಗುರು” ಆಗುವುದು.
ಧರ್ಮದ ಮೂಲ ಲಕ್ಷಣಗಳನ್ನು ನೋಡೋಣ.
- ಧರ್ಮವು ಭೂತ, ವರ್ತಮಾನ ಹಾಗೂ ಭವಿಷ್ಯತ್ ಕಾಲದಲ್ಲಿಯೂ ಸಜ್ಜನರಿಗೆ ತೊಂದರೆಯನ್ನು ಉಂಟು ಮಾಡದಂತಿರಬೇಕು.
- ಧರ್ಮಕ್ಕೆ ಆದಿ ಅಂತ್ಯ ಎಂಬುದಿಲ್ಲ ಹುಟ್ಟು ಸಾವುಗಳಿಲ್ಲ.
- ಸರ್ವರ ಶ್ರೇಯಸಸನ್ನು ಬಯಸುವುದು ಧರ್ಮ ತಮ್ಮಹಿತಾಸಕ್ತಿಯನ್ನಷ್ಟೇ ಆಲೋಚಿಸುವುದು ಧರ್ಮವಲ್ಲ ಅದು ಮತ.
- ಧರ್ಮಕ್ಕೆ ಹುಟ್ಟುಸಾವು ಆದಿ ಅಂತ್ಯಗಳಿಲ್ಲ ಅದು ಸನಾತನ ವಾಗಿದೆ.
- ಮತವನ್ನೇ ಧರ್ಮ ಎನ್ನುವುದು ಅಜ್ಞಾನಿಗಳ ತಪ್ಪು ತಿಳುವಳಿಕೆ, ಮತಾಚಾರ್ಯರಿಂದ ಹುಟ್ಟಿರುವ ಮತಗಳಿಗೆ ಸಾವೂ ನಿಶ್ಚಿತ ವಾಗಿದೆ.
- ಬದಲಾವಣೆಗೆ ಒಳಗಾಗುವುದು ಧರ್ಮ ಅಲ್ಲ ಅದನ್ನು ಮತ ಅತವಾ ಮತಾಂತರ ಎನ್ನಬಹುದು. ಇದೆಂದೂ ಶಾಶ್ವತ ಅಲ್ಲ.
- ಮತಾವಲಂಬನೆ ಅಧವಾ ಮತಾಂಧತೆ ಅದು ಧರ್ಮಕ್ಕೆ ಹಾಗೂ ಪರಮಾತ್ಮನಿಗೆ ಮಾಡಿದ ಘೋರ ಪಾಪವಾಗಿರುತ್ತದೆ.
- ಧರ್ಮವು ಎಂದೂ ಸಜ್ಜನರ ಪೀಡನೆಗೆ ಬಳಕೆಯಾಗಬಾರದು.ಹಾಗು ದುರ್ಜನರನ್ನು ರಕ್ಷಿಸಬಾರದು
- ಧರ್ಮವು ದೇವರ ಸೃಷ್ಟಿಯಲ್ಲಿನ ಎಲ್ಲಾ ನಿರುಪದ್ರವಿ ಜೀವರಾಶಿಗಳನ್ನೂ ಗೌರವಿಸುವ ಪ್ರೀತಿಸುವ ಗುಣವನ್ನು ಹೊಂದಿರಬೇಕು.
- ಧರ್ಮದ ನೈಜ ಲಕ್ಷಣ ತ್ಯಾಗವೇ ಹೊರತು ಭೋಗ ಅಲ್ಲ ಭೋಗವನ್ನೇ ಧರ್ಮವಾಗಿ ಸ್ವೀಕರಿಸಿದವರನ್ನು ಅಸುರರು ಎನ್ನುತ್ತೇವೆ.
- ಮನುಷ್ಯನು ಬದುಕಿನಲ್ಲಿ ತನಗೆ ಸಹಾಯಕವಾಗುವ ಸೃಷ್ಟಿಯ ಪ್ರತಿಯೊಂದು ಅಂಶಗಳಿಗೂ ಕೃತಜ್ಞತೆ ಸಲ್ಲಿಸುವ ಗುಣವನ್ನು ಹೊಂದಿರಬೇಕು.
- ದೈವಿಕ ಸಾತ್ವಿಕ ಗುಣಗಳನ್ನು ನಾವು ಅಳವಡಿಸಿಕೊಳ್ಳಬೇಕು ಹಾಗೂ ದೈವಿಕ ಗುಣ ಹೊಂದಿರುವ ಮಹಾತ್ಮರನ್ನು ಜೀವ ಜಂತುಗಳನ್ನು ಗೌರವಿಸಬೇಕು.
- ದೇವರ ಅಸ್ತಿತ್ವವನ್ನು ಒಪ್ಪಬೇಕು.
- ದೇವರೊಬ್ಬನೇ ಇದ್ದು ನಾಮ ರೂಪಗಳು ಹಲವು ಎನ್ನುವುದು ತತ್ವಶಾಸ್ತ್ರದ ಸಾರ ಹಲವು ದೇವರಿವೆ ಅವರಲ್ಲಿ ತಮ್ಮ ದೇವರೇ ಸರ್ವಶ್ರೇಷ್ಟ ಎನ್ನುವುದು ಅಜ್ಞಾನ ಹಾಗೂ ಅಹಂಕಾರ.
- ದೈವಿಕ ಸಾತ್ವಿಕ ಗುಣಗಳು ಯಾವುವೆಂದರೆ :- ಜ್ಞಾನ , ನ್ಯಾಯ, ನೀತಿ , ಶುದ್ಧತೆ, ಪರಿಶ್ರಮ, ಶೀಲ, ಸತ್ಯ, ತ್ಯಾಗ , ದಯೆ , ಕರುಣೆ , ಕ್ಷಮೆ, ಸಹನೆ, ಸಂಯಮ, , ಸ್ನೇಹ, ಪ್ರೀತಿ , ಪರೋಪಕಾರ , ಕೃತಜ್ಞತೆ, ಶೌರ್ಯ ,ಧೈರ್ಯ, ಶಕ್ತಿ, ಯುಕ್ತಿ, ವಿದ್ಯೆ, ಬುದ್ದಿ, ಇವೇಮುಂತಾದುವಾಗಿವೆ. ಈ ಎಲ್ಲಾಗುಣಗಳನ್ನು ಹೊಂದಿರುವ ಹಾಗೂ ಬೋಧಿಸಿರುವ ಅಲ್ಲದೆ ಜಗತ್ತಿಗೆ ಮಾರ್ಗದರ್ಷನ ನೀಡಿರುವ ಒಂದೇ ಒಂದು ಜಗತ್ತಿನ ಶ್ರೇಷ್ಠ ಜೀವನ ವಿಧಾನ ಅಥವಾ ಸಂಸ್ಕೃತಿ ಅದುವೇ ಸನಾತನ ಹಿಂದೂ ಧರ್ಮವಾಗಿದೆ.
ದಯವೇ ಧರ್ಮದ ಮೂಲವಯ್ಯ, ಸತ್ಯಮೇವ ಜಯತೆ, ಕಾಯಕವೇ ಕೈಲಾಸ, ಧರ್ಮೋರಕ್ಷತಿ ರಕ್ಷಿತಃ, ವಸುದೈವ ಕುಟುಂಬಕಂ, ನಿಷ್ಕಾಮ ಕರ್ಮ , ಮುಂತಾದುವು ಹಿಂದು ತತ್ವ ಶಾಸ್ತ್ರದ ಪ್ರಸಿದ್ಧ ಉಕ್ತಿಗಳಾಗಿದ್ದು ಧರ್ಮಾಚರಣೆಗೆ ಸೂಕ್ತ ಮಾರ್ಗದರ್ಷನ ನೀಡುತ್ತಿವೆ.
ಅಂತಿಮವಾಗಿ ಧರ್ಮವನ್ನು ಗುರತಿಸುವುದು ಅರಿಯುವುದು ಹೇಗೆಂದರೆ ಅದು ಹೃದಯವಂತರಿಗೆ ಮಾತ್ರ ಸಾಧ್ಯ ಯಾವುದೇ ವ್ಯಕ್ತಿಯು ತಾನು ಮಾಡಿದ ಕಾರ್ಯದ ಫಲದಿಂದ ಆತನ ಹಾಗೂ ಆತನ ಸಂಪರ್ಕಕ್ಕೆ ಬರುವ ಸಜ್ಜನರ ಹಗೂ ಸಾಧುಪ್ರಾಣಿಗಳ ಹೃದಯ ತುಂಬಿಬರುವಂತಿದ್ದರೆ ಇದರಿಂದ ಹೃದಯ ಸಂತೃಪ್ತಿಯನ್ನು ಹೊಂದಿದರೆ ಅದಕ್ಕನುಗುಣ ವಾಗಿ ನಡೆದುಕೊಳ್ಳುವುದು, ಅಥವಾ ಹಾಗೆ ಬದುಕುವುದೇ ಧರ್ಮ ವಾಗಿದೆ. ಆತ್ಮ ಸಂತೃಪ್ತಿಗಾಗಿ ಮಾಡುವ ನಿಸ್ವಾರ್ಥ ಹಾಗೂ ಪರಹಿತ ಕಾರ್ಯವೇ ಧರ್ಮವಾಗಿದೆ, ಇದನ್ನೇ ಶ್ರೀ ಕೃಷ್ಣ ಗೀತೆಯಲ್ಲಿ ಕರ್ಮಣ್ಯೇವಾಧಿಕಾರಸ್ಥೇ ಮಾ ಫಲೇಷು ಕದಾಚನ ಎಂಬುದಾಗಿ ಹೇಳಿದ್ದಾನೆ. ಫಲಾಪೇಕ್ಷೆ ಇಲ್ಲದೆ ಸಜ್ಜನರ ರಕ್ಷಣೆ ಹಾಗೂ ದುರ್ಜನರ ನಾಶಕ್ಕಾಗಿ ಮಾಡುವ ಕಾರ್ಯವೇ ಧರ್ಮವಾಗಿದೆ, ಇಂತಹ ಚಿಂತನೆಯ ಸಗುಣ ರಾಶಿಯ ಪ್ರತಿನಿಧಿಯನ್ನೇ ದೇವರು ಪರಮಾತ್ಮ ಸಚ್ಚಿದಾನಂದ ಎಂಬುದಾಗಿ ಹಲವು ನಾಮಗಳಿಂದ ನಾವು ಕರೆಯುತ್ತೇವೆ.
ದೇವರಿಗೆ ಮಾಡುವ ಪೂಜೆ ಪ್ರಾರ್ಥನೆ ಗುಡಿಕಟ್ಟುವುದು ಉತ್ಸವ ಮಾಡುವುದು ಯಾತ್ರೆ ಮಾಡುವುದು ಇದುವೇ ಧರ್ಮಾಚರಣೆಯ ಲಕ್ಷಣವೇ?
ಇಂತಹ ಬಾಹ್ಯ ಆಡಂಬರದ ಆಚರಣೆಗಳನ್ನೇ ಧರ್ಮಾಚರಣೆಯ ಲಕ್ಷಣವೆನ್ನಲಾಗುವುದಿಲ್ಲ. ಇದು ಧರ್ಮಾಚರಣೆಗೆ ಪೂರಕವಾಗುವ ಮನಸ್ಥಿತಿಯನ್ನು ಪಡೆಯಲು ಸಹಾಯಮಾಡುವ ಒಂದು ಸಾಂಸ್ಕೃತಿಕ ಆಚರಣೆಯಾಗಿದೆ. ಇಂತಹ ಸಾತ್ವಿಕ ಸಂಸ್ಕೃತಿಯ ಪ್ರಭಾವಕ್ಕೊಳಗಾದವರಲ್ಲಿ ಧರ್ಮಾಚರಣೆಯು ಹೆಚ್ಚು ಪರಿಪಕ್ವವೂ ಪರಿಣಾಮಕಾರಿಯೂ ಸ್ಪಂದನ ಶಿಲವೂ ಆಗಿರುವುದು. ಹಾಗೂ ಅಂತಹವರಲ್ಲಿ ಧರ್ಮಾಚರಣೆಯ ಪ್ರಮಾಣ ಹೆಚ್ಚುಕ್ರಿಯಾಶೀಲ ವಾಗಿರುವುದು. ಈ ಯಾವುದೇ ಆಚರಣೆಯನ್ನು ಮಾಡದ ವ್ಯಕ್ತಿಯೂ ಧರ್ಮಾಚರಣೆಯನ್ನು ಮಾಡಬಹುದು, ಧಾರ್ಮಿಕ ವ್ಯಕ್ತಿಯಾಗಿರಬಹುದು, ಧರ್ಮಾಚರಣೆಯು ಪ್ರದರ್ಷನದ ಕ್ರಿಯೆಯಲ್ಲ ಅದು ನೈಜ ಬದುಕಾಗಿದೆ. ಧಾರ್ಮಿಕತೆಯ ಪ್ರದರ್ಷನವು ಮನೋರಂಜನೆಯ ಕ್ರಿಯೆಯಾಗಿದ್ದು ಇದು ಸಂಸ್ಕೃತಿಯ ಭಾಗವಾಗಿದ್ದರೆ, ಧರ್ಮಾಚರಣೆಯು ಮನಷ್ಯಾಂತಿಯ ಪ್ರಕ್ರಿಯೆ ಯಾಗಿದೆ, ಮತ್ತು ಇಡೀ ಜೀವನದ ಭಾಗವಾಗಿದೆ. ಪ್ರದರ್ಷನ ಕೃತಕವಾಗಿರುತ್ತದೆ. ಜೀವನ ನೈಜ ನಿರಂತರ ವಾಗಿರುತ್ತದೆ. ಧಾರ್ಮಿಕತೆಯ ಪ್ರದರ್ಷನಮಾಡುವವರಿಗಿಂತಲೂ ಧರ್ಮದಿಂದ ಬದುಕುವುದು ಹೆಚ್ಚು ಅರ್ಥಪೂರ್ಣವೂ ಸನ್ಮಾನ ಯೋಗ್ಯವೂ ಆಗಿದೆ. ದೇವರು ದೇವಸ್ಥಾನ ದೇವರ ಪೂಜೆ ಭಜನೆ ಇವುಗಳೆಲ್ಲಾ ಧರ್ಮಾಚರಣೆಗೆ ಪ್ರೇರಣೆಯನ್ನು ಒದಗಿಸುವ ಕ್ರಿಯೆಯ ಭಾಗವೇ ಹೊರತು ಇದನ್ನೇ ಧರ್ಮ. ಇದೇ ಮುಕ್ತಿಗೆ ಮಾರ್ಗ ಎನ್ನುವುದು ಮೂಢರ ಉಪದೇಶ. ಲೌಕಿಕ ಜಗತ್ತಿನಿಂದ ಸಾತ್ವಿಕತೆಗೆ ಮನಸ್ಸನ್ನು ತಿರುಗಿಸಲು ಇವುಗಳು ಪ್ರೇರಣೆಯನ್ನು ಒದಗಿಸತ್ತವೆ, ನಮ್ಮ ಜೀವನದ ಕಾರ್ಯಕ್ಷೇತ್ರವೇ ಧರ್ಮಾಚರಣೆಯ ಯೋಗ್ಯ ಸ್ಥಳ. ದೇವಾಲಯಗಳು ಪ್ರೇರಕ ಸ್ಥಾನಗಳು ಹಾಗೂ ಮಾರ್ಗ ದರ್ಷಕ ಸ್ಥಾನಗಳಾಗಿ ಕೆಲಸ ಮಾಡುತ್ತವೆ ಅಷ್ಟೆ, ಆದರೆ ಇಂದು ದೇವಸ್ಥಾನದಲ್ಲಿ ಧಾರ್ಮಿಕ ಮಾರ್ಗದರ್ಷನಕ್ಕೆ ಹೊರತಾದ ಉಳಿದೆಲ್ಲವೂ ದೊರೆಯುತ್ತವೆ. ಇಂದು ದೇವಸ್ಥಾನಗಳು ಧಾರ್ಮಿಕ ಮನಸ್ಥಿತಿಯವರನ್ನು ಹಾಳುಮಾಡುವ ವಿಲಾಸೀ ಕ್ಷೇತ್ರಗಳಾಗಿ ವ್ಯಾಪಾರೀತಾಣಗಳಾಗಿ ಪ್ರವಾಸಿಗರ ಮೋಜಿನ ತಾಣಗಳಾಗಿ ಬದಲಾಗುತ್ತಿರುವುದು ಈ ಕಾಲದ ದುರಂತ ವಾಗಿದೆ. ಇಂದಿನ ಆಧುನಿಕ ದೇವಾಲಯಗಳಲ್ಲಿ ಹವಾನಿಯಂತ್ರಿತ ಕೊಠಡಿಗಳು ದೊರೆಯುತ್ತದೆ, ಆದರೆ ಧಾರ್ಮಿಕ ಗ್ರಂಥಾಲಯ ಇರುವುದಿಲ್ಲ, ಸೇವಾ ವಿವರ ಗಳು ಲಭ್ಯವಿರುತ್ತವೆ, ಧಾರ್ಮಿಕ ಜಿಜ್ಞಾಸುಗಳಿಗೆ ಉತ್ತರಕೊಡುವ ಪಂಡಿತರು ಯಾರೂ ಇರುವುದಿಲ್ಲ, ಹಣಇದ್ದವನಿಗೆ ವಿಶೇಷ ದರ್ಷನ ಹಾಗೂ ಉಪಚಾರ ನಡೆಯುತ್ತದೆ ಬಡ ಭಕ್ತನನ್ನು ಕೇಳುವವರಿರುವುದಿಲ್ಲ. ಇದು ನಮ್ಮ ಹಿಂದುಗಳ ದುರಂತ ಹಾಗೂ ನಮ್ಮ ಜನರ ಅಜ್ಞಾನದ ಪ್ರತೀಕ ವಾಗಿದೆ.
ಅಧರ್ಮ
ದೈವಿಕ ಸಾತ್ವಿಕ ಗುಣಗಳಿಗೆ ವಿರುದ್ಧವಾದ ಗುಣಗಳನ್ನು ಹೊಂದುವುದು ಅಧರ್ಮವಾಗಿದೆ. ತಾಮಸ ಗುಣ ಅಥವಾ ಅಸುರಗುಣಾರಾಧಕರಾಗುವುದು ಅಧರ್ಮವಾಗಿದೆ. ಜಗತ್ತಿನಲ್ಲಿ ಧರ್ಮದ ಕೆಲವು ಸೀಮಿತ ಅಂಶಗಳನ್ನು ಮಾತ್ರ ಅಳವಡಿಸಿಕೊಂಡು ಪ್ರಚಾರದಿಂದ ಪ್ರಸಿದ್ಧವಾಗಿರುವ ಹಲವು ಮತಗಳಿವೆ. ಇವುಗಳು ಪರಿಶುದ್ಧವಾದ ಧರ್ಮಾಚರಣೆಯನ್ನು ಮಾಡುತ್ತಿಲ್ಲ. ಇವುಗಳು ಮತಾಂಧತೆಯಿಂದ ಕೂಡಿದ್ದು ಧರ್ಮದ ಅಫೀಮು ಸೇವಿಸಿದ್ದು ಸತ್ಯಜಗತ್ತಿಗೆ ಕುರುಡಾಗಿದ್ದು ಪ್ರಜಾಕಂಟಕವಾಗಿ ವಿಶ್ವವನ್ನು ವ್ಯಾಪಿಸಿವೆ. ಇಂತಹ ವಿದೇಶೀ ದುಷ್ಟ ಮತಗಳ ಅಜ್ಞಾನದ ಮತಾಂಧತೆ ನಾಶವಾಗದೆ ಜಗತ್ತಿಗೆ ಶಾಂತಿ ಅಥವಾ ನೆಮ್ಮದಿ ಸಿಗಲು ಸಾಧ್ಯವಿಲ್ಲ. ಇಂತಹಾ ಅಜ್ಞಾನದ ಕೂಪದಲ್ಲಿ ಬಿದ್ದಿರುವ ಹಾಗೂ ಬೀಳುತ್ತಿರುವ ಅಲ್ಪಜ್ಞಾನಿಗಳಿಗೆ ಧರ್ಮದ ಸತ್ಯದ ದಾರಿಯನ್ನು ತೋರಿಸುವ ಜವಾಬ್ದಾರಿ ಇಂದು ಹಿಂದುಗಳಮೇಲಿದೆ. ಈ ಕೆಲಸಕ್ಕಾಗಿಯೇ ಹಿಂದೂ ಧರ್ಮ ಪರಿಷತ್ತು ಜನ್ಮತಾಳಿದೆ. ಹಾಗೂ ಕಾರ್ಯೋನ್ಮುಖವಾಗಿದೆ.
ಧಾರಯತಿ ಇತಿ ಧರ್ಮಃ ಎನ್ನುವ ಉಕ್ತಿಯಂತೆ ಇಡೀಜಗತ್ತು ಧರ್ಮದ ತಳಹದಿಯಮೇಲೆ ನಿಂತಿದೆ. ಯಾವಾಗ ಯಾವ ಸ್ಥಳದಲ್ಲಿ ಧರ್ಮ ಶಿಥಿಲವಾಗುತ್ತದೆಯೋ ಆಜಾಗದಲ್ಲಿ ಅನಾಚಾರ ಅತ್ಯಾಚಾರ ಹಿಂಸೆ ಕೊಲೆ ಯುದ್ಧಗಳು ನಡೆಯುತ್ತವೆ. ಎಲ್ಲಾ ಯುಗಗಳಲ್ಲಿಯೂ ಎಲ್ಲಾ ದೇಶಗಳಲ್ಲಿಯೂ ಧರ್ಮ ಹಾಗೂ ಅಧರ್ಮದ ಮಧ್ಯೆ ಹೋರಾಟನಡೆಯುತ್ತಲೇ ಬಂದಿದೆ ಅಂತಿಮವಾಗಿ ಧರ್ಮಕ್ಕೇ ಜಯವಾಗುವುದು, ಇತಿಹಾಸವಾಗಿದೆ ಹಾಗೂ ನಮ್ಮ ಪುರಾಣಗಳೂ ಇವನ್ನೇ ಸಾರುತ್ತಿವೆ. ಆದುದರಿಂದ ಇಂದು ಇಡೀ ವಿಶ್ವಕ್ಕೆ, ವಿಶ್ವ ಶಾಂತಿಗೆ ಸನಾತನ ಧರ್ಮವೊಂದೇ ಪರಿಹಾರವಾಗಿದೆ. ಆದುದರಿಂದ ಸನಾತನ ಧರ್ಮವನ್ನು ಅರಿತು ಆಚರಿಸಿ ಜನರಿಗೆ ಬೋಧಿಸಿ ವಿಶ್ವ ಶಾಂತಿ ಸ್ಥಾಪಿಸೋಣ. ನಮ್ಮೊಂದಿಗೆ ಕೈ ಜೋಡಿಸಿರಿ. ಅಧರ್ಮವನ್ನು ನಿರ್ಮೂಲನ ಮಾಡೋಣ. ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ ಮೃತ್ಯೋರ್ಮಾ ಅಮೃತಂ ಗಮಯಾ. ಎನ್ನುವ ಋಷಿವಾಣಿಯನ್ನು ಸತ್ಯವಾಗಿಸೋಣ. ತಾನು ಕರೆಯುವ ಹೆಸರಿನಲ್ಲಿ ಆರಾಧಿಸುವವನು ಮಾತ್ರವೇ ದೇವರು ಎನ್ನುವ ಅವಿವೇಕಿಗಳಿಗೆ ತಿಳಿಹೇಳೋಣ. ದೇವರೊಬ್ಬ ನಾಮಹಲವು ಎನ್ನುವ ಸತ್ಯವನ್ನು ಜಗತ್ತಿಗೆ ತಿಳಿಸೋಣ.
ಸನಾತನ ಧರ್ಮ (ಹಿಂದೂ ಧರ್ಮ)
ಜ್ಞಾನಪ್ರಸಾರದಿಂದ ವಿಶ್ವವನ್ನು ವ್ಯಾಪಿಸಿದ ಹಾಗೂ ಸಂಸ್ಕೃತಿಯಿಂದ ಜಗತ್ತನ್ನು ಗೆದ್ದ ಒಂದೇ ಒಂದು ಧರ್ಮ ಇದ್ದರೆ ಅದು ಸನಾತನ ಹಿಂದೂ ಧರ್ಮವಾಗಿದೆ. ವಿದೇಶೀಮೂಲದ ಪ್ರಮುಖ ಮತಗಳಾದ ಇಸ್ಲಾಂ ಹಾಗೂ ಕ್ರಿಶ್ಚಿಯನ್ ಮತಗಳು ಕತ್ತಿಯಿಂದ ಬಂದೂಕಿನ ಗುಂಡಿನಿಂದ ಜನರ ನತ್ತೆರುಹರಿಸಿ ಬಲಾತ್ಕಾರದಿಂದ ವಿಶ್ವಕ್ಕೆ ವ್ಯಾಪಿಸಿ ಇಂದೂ ಅನ್ಯಾಯ ಹಾಗೂ ಅತ್ಯಾಚಾರದಿಂದ ವಿಶ್ವ ಶಾಂತಿಯನ್ನು ಕೆಡಿಸುತ್ತಿರುವುದನ್ನು ನಾವೆಲ್ಲಾ ನೋಡಬಹುದು. ಪಾಶ್ಚಾತ್ಯ ಜಗತ್ತಿನಲ್ಲಿ ವಿಜ್ಞಾನ ಬೆಳೆದಂತೆ ಮೌಢ್ಯಮರೆಯಾಗುತ್ತಾ ಚರ್ಚುಗಳು ಸಮಾಜದ ಮೇಲಿನ ಹಿಡಿತವನ್ನು ಕಳೆದುಕೊಳ್ಳ ತೊಡಗಿವೆ. ಹೀಗೆ ಜನರಿಂದ ತಿರಸ್ಕೃತ ಗೊಂಡವರು ಹಣಬಲದಿಂದ ಹಿಂದುಳಿದ ದೇಶಗಳಲ್ಲಿನ್ನ ಮುಗ್ಧಬಡಜನರನ್ನು ವಂಚಿಸಿ ಮತಾಂತರ ಮಾಡುವ ಕೆಲಸದಲ್ಲಿ ತೊಡಗಿವೆ. ಆದರೆ ಇಸ್ಲಾಂ ದೇಶಗಳು ಇಂದು ಅಜ್ಞಾನದಿಂದ ಹಾಗು ಹಣದ ಶ್ರೀಮಂತಿಕೆಯಿಂದ ಮತಿಭ್ರಮಣೆಯಾದಂತೆ ವರ್ತಿಸುತ್ತಿದ್ದು ಭಯೋತ್ಪಾದನೆಯಿಂದ ಜಗತ್ತಿನಲ್ಲಿ ರಕ್ತಚೆಲ್ಲುತ್ತಿವೆ. ನರಹತ್ಯೆಯನ್ನು ನಿರ್ದಯವಾಗಿ ಮಾಡುತ್ತಿವೆ. ಇಂತಹ ಪಾಶವೀ ಮತದವರಿಗೆ ಸತ್ಯಜ್ಞಾನ ನೀಡಿ ಸಂಸ್ಕಾರದ ಹಾದಿಗೆ ತರುವ ಅವಶ್ಯಕತೆ ಹಾಗೂ ಜವಾಬ್ದಾರಿ ಹಿಂದುಗಳ ಮೇಲಿದೆ. ಸಾವಿರ ವರುಷದ ದಾಸ್ಯದಿಂದ ಮುಕ್ತವಾದ ಹಿಂದೂ ಸಮಾಜ ಇಂದು ಸ್ವಾಭಿಮಾನಿಯಾಗಿದ್ದು ಹಿಂದೂ ಯುವಜನ ಸಮೂಹ ತಮ್ಮ ಅಗಾಧವಾದ ಜ್ಞಾನದಿಂದ ಪ್ರತಿಭೆಯಿಂದ ವಿಶ್ವಮನ್ನಣೆ ಗಳಿಸಲಾರಂಭಿಸಿದ್ದು. ಭಾರತ ವಿಶ್ವಗುರುವಾಗುವತ್ತ ಧಾಪುಗಾಲಿಡುತ್ತಿರುವ ಸುಸಮಯದಲ್ಲಿ ಸಂಧಿಕಾಲದಲ್ಲಿ ನಾವು ಜನಿಸಿದ್ದಕ್ಕೆ ಹೆಮ್ಮೆ ಪಡೋಣ ಹಾಗೂ ಧರ್ಮರಕ್ಷಣೆಗಾಗಿ ಜಾತಿಬೇಧಮರೆತು ಹಿಂದೂ ಐಕ್ಯವೇದಿಕೆಯಲ್ಲಿ ಒಂದಾಗೋಣ. ಧರ್ಮದ ಹಾದಿತೊರೆದು ಕತ್ತಿ ಹಾಗೂ ಆಮಿಷದ ಬಲೆಯಲ್ಲಿ ಧರ್ಮ ತೊರೆದು ಮತಾಂತರವಾದ ನಮ್ಮದೇ ದೇಶದ ಒಂದುಕಾಲದ ನಮ್ಮದೇ ಸಂಸ್ಕೃತಿಯಲ್ಲಿ ಪೂರ್ವಜರನ್ನು ಹೊಂದಿದ್ದ ಕಾಲದ ಭರ್ಬರತೆಗೆ ಸಾಕ್ಷೀರೂಪವಾಗಿರುವ ಯಾವುದೋ ಸಮಯದಲ್ಲಿ ಮತಾಂತರ ಗೊಂಡು ವಿದೇಶೀ ಸಂಸ್ಕೃತಿಯ ಬೆನ್ನು ಹಿಡಿದು ದೀಪದ ಹುಳುಗಳಂತೆ ಸುಜ್ಞಾನದಿಂದ ವಿಮುಖರಾಗಿ ಭೋಗದಲ್ಲಿ ಬಯಕೆ ಉಳ್ಳವರಾಗಿ ಅಜ್ಞಾನ ಹಾಗೂ ಭಯದಿಂದ ಕತ್ತಲೆಯಲ್ಲಿ ನಡೆಯುತ್ತಿರುವ ಮುಸಲ್ಮಾನ ಹಾಗೂ ಕ್ರಿಶ್ಚಿಯನ್ನರಿಗೆ ಬೆಳಕಿನ ದಾರಿಯನ್ನು ತೋರಿಸೋಣ. ಅದರಂತೆಯೇ ಹಿಂದೂ ಗಳಾಗಿಯೇ ಇದ್ದು ಅನಕ್ಷರತೆ ಹಾಗೂ ಬಡತನದಿಂದ ಸಂಸ್ಕೃತಿಯಿಂದ ವಿಮುಖರಾಗಿ ಮುಗ್ಧರಾಗಿ ಅಂಧಾನುಕರಣೆಯಿಂದ ಬದುಕುತ್ತಾ ಜೀವನದಲ್ಲಿ ಕಷ್ಟನಷ್ಟಗಳನ್ನು ಅನುಸರಿಸುತ್ತಾ ಸ್ವ ಹಿತಾಸಕ್ತಿಯ ಜನರಿಂದ ವಂಚನೆ ಹಾಗೂ ಷೋಷಣೆಗೆ ಒಳಗಾಗುತ್ತಿರುವ ಇದರಿಂದ ಮತಾಂತರವಾಗುತ್ತಿರುವ ಅಮಾಯಕರನ್ನೂ ಸಮಾಜದ ಮುಖ್ಯವಾಹಿನಿಗೆ ತಂದು ಮೇಲೆ ಎತ್ತೋಣ ಇದಕ್ಕಾಗಿ ಜಾತಿ ಬೇಧ ಮರೆತು ಒಂದಾಗಿದುಡಿಯಲು ನಾವೆಲ್ಲಾ ಕೈಜೋಡಿಸೋಣ.
ಧರ್ಮದಲ್ಲಿ ಎರಡು ಮುಖ್ಯ ವಿಭಾಗ ಮಾಡಬಹುದು
- ಧರ್ಮ
- ಅಧರ್ಮ ,
ಧರ್ಮವು ದೇವ ನಿಯಾಮಕವಾದರೆ ಅಧರ್ಮವು ಅಸುರ ನಿಯಾಮಕ ವಾಗಿದೆ ಧರ್ಮಕ್ಕೆ ವಿರುಧ್ಧವಾದ ಆಚರಣೆಯನ್ನು ಮಾಡುವುದೆಲ್ಲಾ ಅಧರ್ಮ ಎಂದೇ ಕರೆಯಲ್ಪಡುತ್ತದೆ. ಧರ್ಮ ಬೋಧನೆಯನ್ನು ವಿಶ್ವಕ್ಕೆ ಸಾರಿದ ಕೀರ್ತಿ ಸನಾತನ ಹಿಂದೂ ಧರ್ಮದ ಮಹತ್ವವಾಗಿದೆ. ಅತಿ ಪ್ರಾಚೀನ ಸಂಸ್ಕೃತಿ ಸಾಹಿತ್ಯ ಇತಿಹಾಸವನ್ನು ಹೊಂದಿರುವ ಭಾರತವೇ ವಿಶ್ವದ ನಾಗರೀಕತೆಯ ಗುರುವಾಗಿದೆ. ಭಾಷೆ ಗಣಿತ ವಿಜ್ಞಾನ ಆಧ್ಯಾತ್ಮ, ಕಲೆ, ಸಂಸ್ಕೃತಿ ಇವೆಲ್ಲವೂ ಭಾರತದಿಂದಲೇ ವಿಶ್ವಾದ್ಯಂತ ಪ್ರಸರಿಸಿದೆ. ಇಂತಹ ಸುಸಂಸ್ಕೃತ ಸಮೃಧ್ಧ ಹಿಂದೂ ಧರ್ಮವು ಕಾಲಾನಂತರದಲ್ಲಿ ಹುಟ್ಟಿಕೊಂಡ ಕೆಲವು ಮತಪಂಡಿತರ ಉದಯದಿಂದ ಹಾಗೂ ಅವರ ಸೀಮಿತ ವಿಚಾರದಿಂದ ಅಲ್ಲದೆ ಅವರ ಮತಾಂಧ ಶಿಷ್ಯರಿಂದ ಶಿಥಿಲವಾಗುತ್ತಾ ಬಂದು ವಿಘಟನೆಯತ್ತಲೂ ಅವನತಿಯತ್ತಲೂ ಮುಖ ಮಾಡಿ ಜನರ ಅನಾದರ ಅವಕೃಪೆಗೆ ಒಳಗಾಯಿತು. ವಿದೇಶದಲ್ಲಿ ಮತಾಂಧರಿಂದ ಅಧರ್ಮದ ಆರಂಭ ಅಥವಾ ಪ್ರಚಾರವು ಪ್ರಾರಂಭವಾಯಿತು. ಅಧರ್ಮದ ಮೊದಲ ಮೆಟ್ಟಿಲು ಭೋಗ ಮತ ಹಾಗೂ ಅಂತಿಮ ಮೆಟ್ಟಿಲು ರಾಕ್ಷಸ ಮತ ವಾಗಿದೆ. ಅಧರ್ಮದ ಬಹುದೊಡ್ಡ ಪೋಷಕರು ಆಧುನಿಕ ಯುಗದಲ್ಲಿ ಭೋಗ ಹಾಗೂ ಅಸರ ಮತಾರಾಧಕರಾಗಿದ್ದಾರೆ.
ಮತ (religion) ಎಂದರೆ ಏನು? ಇದರ ಲಕ್ಷಣಗಳೇನು?
ಮತ ಎನ್ನುವುದು ವಿಶಾಲವಾದ ಧರ್ಮದ ಕೆಲವೇ ಅಂಶಗಳನ್ನು ಕೆಲವು ಮತಾಚಾರ್ಯರುಗಳು ಬಳಸಿಕೊಂಡು ಅದನ್ನೇ ವೈಭವೀಕರಿಸಿ ಪ್ರಚಾರಮಾಡಿಕೊಂಡು ಬೆಳೆಸಿದ ಏಕವ್ಯಕ್ತಿಯ ಸೀಮಿತ ಜ್ಞಾನದ ವ್ಯವಸ್ಥೆ ಯಾಗಿದೆ. ಜಗತ್ತಿನಲ್ಲಿ ಹಲವಾರು ಮತಗಳಿವೆ ಹೆಚ್ಚಿನವುಗಳ ಮೂಲ ಉದ್ದೇಶ ಧರ್ಮ ಮಾರ್ಗದಲ್ಲಿ ನಡೆಯುವುದೇ ಆಗಿದ್ದರೂ ಅವುಗಳ ದಾರಿ ಸ್ಪಷ್ಠ ಹಾಗೂ ನಿಖರವಾಗಿಲ್ಲ, ಅಂದು ಮತಾಚಾರ್ಯರು ಪ್ರತಿಪಾದಿಸಿದ ತತ್ವಗಳನ್ನು ಇಂದು ಅವರ ಮತಾಂಧ ಅನುಯಾಯಿಗಳು ವಿಕೃತಾರ್ಥದಲ್ಲಿ ಬಳಸಿಕೊಂಡು ಮತಾಚಾರ್ಯರ ಉದ್ದೇಶದಿಂದ ಸಂಪೂರ್ಣವಿಮುಖವಾಗಿ ಅಧರ್ಮದ ಹಾದಿಯನ್ನು ಹಿಡಿದು ವಿಜೃಂಬಿಸುತ್ತಿರುವುದನ್ನು ನಾವು ನೋಡಬಹುದಾಗಿದೆ. ಮತಗ್ರಂಥ ಅಥವಾ ಮತಾಚಾರ್ಯರ ಬದುಕು ಮತಾನುಯಾಯಿಗಳಿಗೆ ಆದರ್ಷವಾಗಿರುತ್ತದೆ, ಮತಾಚಾರ್ಯರು ಹೇಗೆ ಬದುಕಿದ್ದರು ಎನ್ನುವುದೇ ಮತದ ಮುಂದಿನ ನಡೆಯನ್ನು ನಿರ್ಧರಿಸುತ್ತದೆ. ಇದರಿಂದ ಮತಗಳನ್ನು ಸಾತ್ವಿಕ ರಾಜಸ ತಾಮಸ ಗುಣಗಳಲ್ಲಿ ವಿಂಗಡಿಸಬಹುದಾಗಿದೆ. ಧರ್ಮವು ಸೂರ್ಯನಂತೆ ಸ್ವಯಂ ಪ್ರಕಾಶಿಸಿದರೆ ಮತಗಳು ಸೂರ್ಯನ ನೆರಳನ್ನು ಪ್ರತಿಫಲಿಸುವ ಚಂದ್ರನಂತೆ ಎನ್ನಬಹುದು. ಮತಗಳು ಧರ್ಮದ ಕೆಲವೇ ವಿಚಾರಗಳನ್ನು ಹಿಡಿದುಕೊಂಡು ನೇತಾಡುತ್ತಿರುತ್ತವೆ.
ಮತಗಳ ಪ್ರಮುಖ ಲಕ್ಷಣಗಳು
- ಮತಗಳಿಗೆ ಒಬ್ಬ ಮತಾಚಾರ್ಯ ನಿರುತ್ತಾನೆ
- ಮತಗಳಿಗೆ ಒಂದು ಮತಗ್ರಂಥ ವಿರುತ್ತದೆ.
- ಮತಗಳು ಅಶಾಶ್ವತ ಒಂದು ದಿನ ಮತ ಬೆಂಬಲ ಕಳೆದುಕೊಂಡು ಧರ್ಮದಲ್ಲಿ ಲೀನವಾಗುತ್ತದೆ.
- ಮತಗಳು ಕೆಲವು ಸಂಕೀರ್ಣ ಕಾಲಘಟ್ಟದಲ್ಲಿ ಮತಾಚಾರ್ಯರಿಂದ ಹುಟ್ಟಿವೆ. ಹುಟ್ಟಿದವು ಸಾಯಲೇಬೇಕು. ಹುಟ್ಟು ಇದೆ ಅಂದರೆ ಆದಿ ಇದೆ. ಆದಿ ಇದ್ದಮೇಲೆ ಅದಕ್ಕೊಂದು ಅಂತ್ಯವೂ ಇರಲೇಬೇಕು.
- ಧರ್ಮ ಶಾಶ್ವತ ಮತ್ತು ಅಮರ ಮತ್ತು ಪರಿಪೂರ್ಣ. ಮತ ಅಶಾಶ್ವತ ಅಪರಿಪೂರ್ಣ
- ಮತಾಚಾರ್ಯರ ಮತಿಗೆ ಸೀಮಿತವಾದ ಜ್ಞಾನವೇ ಮತ
- ಮತಗಳು ಸಂಕುಚಿತ ಮನೋಧರ್ಮವನ್ನು ಹೊಂದಿರುತ್ತವೆ
- ಮತಗಳು ತಾವು ಹೇಳಿದ್ದೇಸರಿ ಎಂಬುದಾಗಿ ಸಾಧಿಸಲು ಮತಾಂಧವಾಗಿರುತ್ತವೆ
- ಮತಗಳ ಮುಖ್ಯ ಧ್ಯೇಯ ಮತಪ್ರಚಾರವಾಗಿರುತ್ತದೆ
- ಮತಪ್ರಚಾರಕ್ಕಾಗಿ ಮತಾಂಧರು ಯಾವುದೇ ಅಧರ್ಮದ ಕಾರ್ಯ ಮಾಡಲೂ ಹೇಸವುದಿಲ್ಲ.
- ಮತದ ಬೆಳವಣಿಗೆಗಾಗಿ ಮತಾಂತರ ಮಾಡಲಾಗುತ್ತದೆ.
- ಮತಗಳು ವಿಮರ್ಷೆಗೆ ಟೀಕೆಗೆ ಅವಕಾಶ ಕೊಡುವುದಿಲ್ಲ
- ಮತಗಳು ಅಸಹಿಷ್ಣುತೆಯನ್ನು ಹೊಂದಿರುತ್ತವೆ
- ಮತಗಳು ಸ್ವಾರ್ಥಹಾಗೂ ಸ್ವಮತ ಹಿತಾಸಕ್ತಿಯನ್ನು ಮಾತ್ರ ಪ್ರತಿಪಾದಿಸುತ್ತವೆ
- ಮತಗಳು ಸೀಮಿತ ಜ್ಞಾನದ ಪರಿಧಿಯಲ್ಲಿ ವಿಹರಿಸುತ್ತವೆ,
- ಸನಾತನ ಧರ್ಮವನ್ನು ಜ್ಞಾನದ ಸಮುದ್ರಕ್ಕೆ ಹೋಲಿಸಿದರೆ ಮತಗಳನ್ನು ಚಿಕ್ಕ ಸರೂವರ ಅಥವಾ ಕೆರೆ, ಅಥವಾ ತೋಡಿನ ನೀರಿಗೋ ಅಥವಾ ಬಾವಿಗೋ ಹೋಲಿಸಬಹುದಷ್ಠೆ,
- ಸ್ವಾಮಿ ವಿವೇಕಾನಂದರು ವಿಶ್ವ ಸಮ್ಮೇಳನದಲ್ಲಿ ಬಾವಿ ಕಪ್ಪೆಯ ಕಥೆಯನ್ನು ವಿಶ್ವದ ಅನ್ಯ ಮತದ ಪಂಡಿತರಿಗೆ ಹೇಳಿದ್ದನ್ನು ನಾವು ಸ್ಮರಿಸಬಹುದಾಗಿದೆ.
- ಮತಗಳ ದೊಡ್ಡ ಸಮಸ್ಯೆ ಎಂದರೆ ಅಲ್ಪ ಜ್ಞಾನ ಹಾಗೂ ಮತಾಂಧತೆ ಆಗಿದೆ.
ಧರ್ಮಕ್ಕೂ ಮತಕ್ಕೂ ಇರುವ ಕೆಲವು ವ್ಯತ್ಯಾಸಗಳು
- ಧರ್ಮವು ಯಾವುದೇ ಒಬ್ಬ ಪ್ರವಾದಿಯಿಂದ ನಿರೂಪಿಸಲ್ಪಟ್ಟಿಲ್ಲ ಉದಾ ಹಿಂದೂ ಧರ್ಮ. ಆದರೆ ಎಲ್ಲಾಮತಗಳಿಗೂ ಒಬ್ಬೊಬ್ಬ ಮೂಲ ಪುರುಷನಿದ್ದಾನೆ ಧರ್ಮಗುರು ಇದ್ದಾನೆ.
- ದೇವರಿಂದ ನಿರೂಪಿಸಲ್ಪಟ್ಟಿದ್ದು ಧರ್ಮ ಮತಾಚಾರ್ಯರ ಮತಿಯಿಂದ ಹೇಳಲ್ಪಟ್ಟಿರುವುದು ಮತ
- ಧರ್ಮವು ಜೀವನಾನುಭವದ ಸಾರವಾಗಿದೆ ಮತವು ಮತಗ್ರಂಥದ ಸಾರವಾಗಿದೆ.
- ಧರ್ಮವು ಯಾವುದೇ ಒಂದು ಗ್ರಂಥದ ಆಧಾರದಮೇಲೆ ಅವಲಂಬಿತವಾಗಿಲ್ಲ ಮತಗಳು ಮತಗ್ರಂಥದ ಆಧಾರದಮೇಲೆ ರೂಪುಗೊಂಡಿವೆ.
- ಧರ್ಮವು ವಿಶಾಲ ತಳಹದಿಯಮೇಲೆ ನಿಂತಿದೆ ಮತಗಳು ಸಂಕುಚಿತ ಮನೋಭಾವದ ನೆಲೆಗಟ್ಟಿನ ಮೇಲೆ ನಿಂತಿವೆ.
- ಧರ್ಮಕ್ಕೆ ವಿಶಾಲ ಅರ್ಥ ಇದೆ ಮತಗಳು ಧರ್ಮದ ಕೆಲವು ಅಂಶಗಳನ್ನು ಅಳವಡಿಸಿಕೊಂಡು ಅದೇ ಅಂತಿಮ ಎಂದು ವಾದಿಸ ತೊಡಗುತ್ತವೆ.
- ಧರ್ಮದಲ್ಲಿ ಪ್ರತಿಯೊಬ್ಬರಿಗೂ ಸ್ವತಂತ್ರವಾಗಿ ವಿಚಾರಮಾಡುವ ಅರಿಯುವ ಅಥವಾ ವಿಮರ್ಷಿಸುವ ತನ್ನಮನಸ್ಸಿಗೆ ಅಂತರಂಗಕ್ಕೆ ಸರಿಎನಿಸಿದಾಗ ಮಾತ್ರ ಒಪ್ಪುವ ಸ್ವಾತಂತ್ರ ಇದೆ. ಮತಗಳಲ್ಲಿ ಮತಾಚಾರ್ಯನ ಮಾತನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಪ್ರಶ್ನಿಸುವವರನ್ನು ಮತಾಂದರು ಒಪ್ಪುವುದಿಲ್ಲ ಇವು ಅಂಧ ಶ್ರಧ್ಧೆಯನ್ನು ಬಿತ್ತುತ್ತದೆ.
- ಧರ್ಮ ವಿಮರ್ಷೆಗೆ ಮುಕ್ತವಾಗಿದೆ ಮತಗಳು ಕುರುಡುನಂಬಿಕೆಯನ್ನು ಹೇರುತ್ತವೆ.
- ಧರ್ಮವು ಸಹಿಷ್ಣುವಾಗಿದ್ದು ಎಲ್ಲರನ್ನೂ ಗೌರವಿಸುವ ಗುಣ ಹೊಂದಿದ್ದರೆ ಮತಗಳು ಅಸಹಿಷ್ಣುತೆಯಿಂದ ಕೂಡಿರುತ್ತವೆ ಮತ್ತು ತಾವು ಮಾತ್ರ ಸರಿ ಎಂದು ನಂಬುವ ಅಜ್ಞಾನಿಗಳ ಕೂಪವಾಗಿದ್ದು ಇತರರಬಗ್ಗೆ ಅಸಹಿಷ್ಣುತೆ ಹೊಂದಿರುತ್ತವೆ,
- ಧರ್ಮವು ಹೊಸವಿಷಯಗಳು ಜ್ಞಾನ ರೂಪದಲ್ಲಿ ಅರಿವಿಗೆ ಬಂದಾಗ ಅದು ಅನುಕರಣೆಗೆ ಯೋಗ್ಯವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಲು ಅವಕಾಶಮಾಡಿಕೊಡುತ್ತದೆ, ಮತಗಳು ಹೊಸವಿಚಾರದ ಅಳವಡಿಕೆಗೆ ಅವಕಾಶ ನೀಡುವುದಿಲ್ಲ. ಸಂಕುಚಿತ ವಾಗಿರುತ್ತವೆ. ಏನೇ ಅಳವಡಿಸಿಕೊಂಡರೂ ಅದರಲ್ಲಿ ಸಾರ್ವತ್ರಿಕ ಹಿತಕ್ಕಿಂತ ಸ್ವಮತ ಪ್ರಚಾರದ ಸ್ವಾರ್ಥ ಮನೆಮಾಡಿರುತ್ತದೆ,
- ಧರ್ಮದಲ್ಲಿ ವೇಶ ಭೂಷಣಗಳಿಗೆ ಮಹತ್ವ ಇರುವುದಿಲ್ಲ ಮತಗಳು ಇಂತಹ ಲಕ್ಷಣಗಳನ್ನು ಪ್ರತಿಫಲಿಸುತ್ತವೆ.
- ಧರ್ಮವು ಆಂತರಿಕ ಸಂಸ್ಕಾರ ಸಾಧನೆಯನ್ನು ಪ್ರೋತ್ಸಾಹಿಸುತ್ತದೆ ಮತಗಳು ಬಾಹ್ಯ ಪ್ರದರ್ಷನಕ್ಕೆ ಮಹತ್ವ ಕೊಡುತ್ತವೆ.
- ಧರ್ಮವು ಸಭ್ಯ ಕಲೆ ಸಂಸ್ಕೃತಿಯನ್ನು ಬೆಳೆಸಿ ಪ್ರೋತ್ಸಾಹಿಸುತ್ತದೆ ಮತಗಳು ಕಲೆ ಸಂಸ್ಕೃತಿಗಳನ್ನು ನಾಶ ಮಾಡುತ್ತವೆ.
- ಮೇಲಿನ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಜಗತ್ತಿನ ಏಕೈಕ ಧರ್ಮ ಹಿಂದೂ ಧರ್ಮ ವಾಗಿದೆ. ಹಾಗೂ ವಿದೇಶಿ ದುಷ್ಟ ಮತಗಳು ಹಿಂದೂ ಧರ್ಮದ ಮೇಲೆ ಆಕ್ರಮಣ ಮಾಡಿ ಹತ್ಯೆ ಅತ್ಯಾಚಾರ ಲೂಟಿ ಆಮಿಷ ಹಾಗೂ ಬೆದರಿಕೆಗಳಿಂದ ಇಲ್ಲಿನ ಸಾಮಾನ್ಯಜನರನ್ನು ಮತಾಂತರ ಮಾಡಿವೆ ಹಾಗೂ ಈಗಲೂ ಇದನ್ನೇ ಮುಂದುವರೆಸಿಕೊಂಡು ಹಿಂಧೂಸ್ಥಾನವನ್ನು ಹಾಳುಮಾಡಲು ಹೊಂಚುಹಾಕುತ್ತಿವೆ, ಇಂತಹ ಅಧರ್ಮದ ಪ್ರಚಾರಕರಾದ ದುಷ್ಟಮತೀಯರಿಂದ ಹಿಂದುಗಳನ್ನು ಹಿಂದೂ ಸಂಸ್ಕೃತಿಯನ್ನು ರಕ್ಷಿಸುವ ಕೆಲಸ ನಮ್ಮಿಂದ ಆಗಬೇಕಿದೆ. ದೇಶವನ್ನು ಧರ್ಮವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಂದಿನ ಧರ್ಮಭ್ರಷ್ಟ ಜಾತ್ಯಾತೀತ ರಾಷ್ಟ್ರವನ್ನು ಮುಂದೆ ಧರ್ಮಾಧಾರಿತ ಹಿಂದೂ ರಾಷ್ಟ್ರವೆಂದು ಘೋಷಿಸಬೇಕಿದೆ.
- ಧರ್ಮವು ಸ್ವಾಭಾವಿಕ ಅರಣ್ಯದಂತಿದ್ದು ಎಲ್ಲರಿಗೂ ಬದುಕುವ ಅವಕಾಶ ಕಲ್ಪಿಸಿದರೆ ಮತವು ನೆಟ್ಟುಬೆಳೆಸಿದ ಒಂದೇ ಜಾತಿಯ ಮರಗಳ ಕೃತಕ ತೋಟದಂತಿರುತ್ತದೆ. ಇಲ್ಲಿ ಬೇರಾವುದೇ ಸಸ್ಯ ಪ್ರಾಣಿ ಸಂಕುಲ ಸ್ವಚ್ಚಂದವಾಗಿ ಬದುಕುವುದು ಅಸಾಧ್ಯವಾಗಿರುತ್ತದೆ. ಅಂದರೆ ಇತರ ಮತಗಳನ್ನು ಭಿನ್ನಾಭಿಪ್ರಾಯಗಳನ್ನು ಹೊಸಕಿ ಹಾಕಲಾಗುತ್ತದೆ. ವಿದೇಶೀ ದುರ್ಮತಗಳಲ್ಲಿ ಇವುಗಳನ್ನು ಕಾಣಬಹುದು. ಇವರು ಬೇರೆಸಂಸ್ಕೃತಿಯನ್ನು ಹೊಸಕಿಹಾಕುವ ಕೆಲಸ ಮಾಡುತ್ತಾರೆ. ಧರ್ಮ ಅಧರ್ಮದ ವ್ಯತ್ಯಾಸ ಅರಿದು ದುರ್ಮತಿಗಳನ್ನು ತಿದ್ದಿ ಧರ್ಮರಾಜ್ಯವನ್ನು ಸ್ಥಾಪಿಸಲು ಕೈಜೋಡಿಸಿ ಹೋರಾಡೋಣ ಎನ್ನುತ್ತಾ ಧರ್ಮೋರಕ್ಷತಿ ರಕ್ಷಿತಃ ಎನ್ನುತ್ತಾ ಜಾಗ್ರತರಾಗೋಣ. –ಶ್ರೀಜಿ