ಹಿಂದು ಎಂದರೆ ಯಾರು? ಅಥವಾ ಹಿಂದೂ ಸ್ಥಾನ ಎಂದರೆ ಯಾವುದು? ಹಿಂದೂ ಧರ್ಮ ಏಕೆ ವಿಶ್ವ ಶ್ರೇಷ್ಠವಾಗಿದೆ?ಹಿಂದುವೆಂದರೆ ಯಾರು?
ಹಿಂದು ಎಂದರೆ ಅವಿನಾಶಿ, ಹಿಂದು ಎಂದರೆ ಸನಾತನ, ಹಿಂದು ಎಂದರೆ ಹೆಮ್ಮೆ, ಹಿಂದುವೆಂದರೆ ಪರಂಪರೆ, ಹಿಂದುವೆಂದರೆ ಇತಿಹಾಸ, ಹಿಂದುವೆಂದರೆ ಜ್ಞಾನ, ಹಿಂದುವೆಂದರೆ ವಿದ್ಯೆ, ಹಿಂದುವೆಂದರೆ ವಿಜ್ಞಾನ, ಹಿಂದುವೆಂದರೆ ವೇದ, ಹಿಂದುವೆಂದರೆ ಆಧ್ಯಾತ್ಮ, ಹಿಂದುವೆಂದರೆ ಯೋಗ, ಹಿಂದುವೆಂದರೆ ಸಾಮ್ರಾಟ, ಹಿಂದುವೆಂದರೆ ಸನ್ಯಾಸಿ, ಹಿಂದುವೆಂದರೆ ಸಂಸ್ಕೃತಿ, ಹಿಂದುವೆಂದರೆ ಸಂಸ್ಕಾರ, ಹಿಂದುವೆಂದರೆ, ಕಲೆ, ಹಿಂದುವೆಂದರೆ ಸಂಗೀತ, ಹಿಂದುವೆಂದರೆ ಜ್ಯೋತಿಷ್ಯ, ಹಿಂದುವೆಂದರೆ ವಾಸ್ತುಶಾಸ್ತ್ರ, ಹಿಂದುವೆಂದರೆ ಆಯುರ್ವೇದ, ಹಿಂದುವೆಂದರೆ, ಧ್ಯಾನ, ಹಿಂದುವೆಂದರೆ ಶಕ್ತಿ, ಹಿಂದುವೆಂದರೆ ಯುಕ್ತಿ, ಹಿಂದುವೆಂದರೆ ಪ್ರೀತಿ, ಹಿಂದುವೆಂದರೆ ಕರುಣೆ, ಹಿಂದುವೆಂದರೆ ಸ್ನೇಹ, ಹಿಂದುವೆಂದರೆ ಸತ್ಕಾರ, ಹಿಂದುವೆಂದರೆ ಗೌರವ, ಹಿಂದುವೆಂದರೆ ತ್ಯಾಗ, ಹಿಂದುವೆಂದರೆ ಶೌರ್ಯ, ಹಿಂದು ವೆಂದರೆ ರಾಮ, ಹಿಂದುವೆಂದರೆ ಕೃಷ್ಣ, ಹಿಂದುವೆಂದರೆ ವಿವೇಕಾನಂದ, ಹಿಂದುವನ್ನು ವರ್ಣಿಸಲು ಶಬ್ಧಗಳೇ ಇಲ್ಲ. ಇಷ್ಟು ಶ್ರೀಮಂತ ಪರಂಪರೆ ಹಿಂದುಗಳದ್ದಾಗಿದೆ.
ಹಿಮಾಲಯದಿಂದ ದಕ್ಷಿಣತುದಿ ಹಿಂದೂ ಮಹಾಸಾಗರದವರೆಗೂ. ದಕ್ಷಣಸಮುದ್ರದಿಂದ ಉತ್ತರಕ್ಕೆ ಹಿಮಾಲಯದವರೆಗೂ ಇರುವ ಭೂಭಾಗದಲ್ಲಿ ವಾಸಿಸುತ್ತಿರುವ ಜನಗಳೇ ಹಿಂದೂಗಳಾಗಿದ್ದಾರೆ, ಈ ಪ್ರದೇಶವನ್ನೇ ಹಿಂದೂಸ್ಥಾನ ಎಂಬುದಾಗಿ ಹೇಳಲಾಗಿದೆ ಹೇಳಲಾಗುತ್ತಿದೆ. ಆರ್ಯದ್ರಾವಿಡ ವಾದ, ಸಿಂಧುಪದದ ಅಪಭ್ರಂಶ ರೂಪ ಸಕಾರ ಉಚ್ಚಾರವಾಗದೆ ವಿದೇಶಿಯರು ಸಿಂಧುವನ್ನು ಹಿಂದುವೆಂದು ಕರೆದರು ಎನ್ನುವ ಮಾತೆಲ್ಲಾ ಹಿಂದೂಗಳನ್ನು ನಿರಭಿಮಾನಿಗಳನ್ನಾಗಿಸಲು ಬ್ರಿಟಿಶರು ಕಟ್ಟಿದ ಕಟ್ಟುಕಥೆಯಾಗಿದ್ದು ತಿರುಚಿದ ಇತಿಹಾಸದ ಪಳೆಯುಳಿಕೆಗಳಾಗಿದೆ. ಅವುಗಳನ್ನು ನಾವು ನಂಬಬೇಕಿಲ್ಲ, ಇವೆಲ್ಲವೂ ವಿಕೃತವಾದಿ ಬುದ್ದಿಜೀವಿಗಳ ಸೆಕ್ಯುಲರ್ ದೇಶದ್ರೋಹಿಗಳ ಇತಿಹಾಸ ಪಠ್ಯವಾಗಿವೆ. ಹೀನಗುಣಗಳಿಂದ ದೂರವಿರುವವನೇ ಹಿಂದೂವಾಗಿದ್ದಾನೆ. ಹಿಂದೂ ಶಬ್ಧ ವಿದೇಶೀ ದಾಳಿಕೋರರಿಗಿಂತ ಹಲವು ನೂರುವರುಷಗಳ ಹಿಂದೆಯೇ ಹೇಳಲ್ಪಟ್ಟಿದೆ ಉಲ್ಲೇಖಿಸಲ್ಪಟ್ಟಿದೆ.
- ಹಿಂದೂಗಳ ಸಂಸ್ಕೃತಿಯ ಸರಳ ಲಕ್ಷಣಗಳೇನು? ಇದು ಏಕೆ ವಿಶ್ವಶ್ರೇಷ್ಟ ?
ಹಿಂದೂಗಳು ಪ್ರಕೃತಿ ಪ್ರಿಯರು, ಪ್ರಕೃತಿ ಆರಾಧಕರು, ಭಗವಂತನಿಗೆ ಕೃತಜ್ಞತೆಯನ್ನು ಸಲ್ಲಿಸಲು ಭಗವಂತನ ಸೃಷ್ಟಿಯ ಪ್ರತಿಯೊಂದು ವಸ್ತುವನ್ನೂ ಕೃತಜ್ಞತಾ ಭಾವದಿಂದ ಗೌರವಿಸುವ ಗುಣವನ್ನು ಹೊಂದಿದ ಮನೋಭಾವ ಹಿಂದೂಗಳದ್ದು ಮಾತ್ರವೇ ಆಗಿದೆ, ಸೃಷ್ಟಿ ಕರ್ತನನ್ನು ಸೃಷ್ಟಿಯಲ್ಲಿ ಕಾಣುತ್ತಿರುವ ಏಕೈಕ ಸಂಸ್ಕೃತಿ ಭಾರತೀಯ ಸಂಸ್ಕೃತಿ ಅದುವೇ ಹಿಂದೂ ಧರ್ಮ ಮಾತ್ರ. ಹಿಂದುಗಳು ಭಗವಂತ ಸರ್ವವ್ಯಾಪಕತ್ವವನ್ನು ಒಪ್ಪಿದವರಾಗಿದ್ದಾರೆ. ದೇವರು ಎಲ್ಲಾಕಡೆಯೂ ಇದ್ದಾನೆ ಅಣುಅಣುವಿನಲ್ಲೂ ಇದ್ದಾನೆ ಕಣಕಣದಲ್ಲೂ ಇದ್ದಾನೆ ಎಂದು ಸಾರಿದ ವಿಶಾಲ ಮಾನವ ಧರ್ಮ ಹಿಂದೂ ಧರ್ಮವಾಗಿದೆ. ಭಗವಂತನ ಸರ್ವವ್ಯಾಪಕತ್ವವನ್ನು ತಿಳಿಸಲೋಸುಗವೇ ಪ್ರಹಲ್ಲಾದನ ಕಥೆ ಇದೆ. ಭಗವಂತನನ್ನು ನಿರಾಕಾರ ನಿರ್ಗುಣ ಸಚ್ಚಿದಾನಂದ ಸ್ವರೂಪ ಎಂದು ಹೇಳಿದ ವಿಶ್ವದ ಪ್ರಾಚೀನ ಧರ್ಮ ಹಿಂದೂ ಧರ್ಮ. ಭಗವಂತನ ಸೃಷ್ಠಿಕೇವಲ ಮಾನವನ ಭೋಗಕ್ಕಾಗಿ ನಿರ್ಮಿತವಾಗಿದ್ದಲ್ಲ ಇದು ಇಲ್ಲಿಯ ಪ್ರತಿಯೊಂದು ಜೀವರಾಶಿಗಳಿಗೂ ಜಡಗಳಿಗೂ ಅಗತ್ಯವಾಗಿದ್ದು ಪ್ರಕೃತಿಯನ್ನು ಹಾಳುಮಾಡದೆ ಅದನ್ನು ದೇವರ ವರಪ್ರಸಾದ ಎಂದು ಭಾವಿಸಿ ಕೃತಜ್ಞತೆಯಿಂದ ಅದನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡು ಅದನ್ನು ಶುದ್ಧರೂಪದಲ್ಲಿ ಉಳಿಸಿಕೊಳ್ಳಬೇಕೆಂಬ ಪ್ರಜ್ಞೆಯನ್ನು ವಿಶ್ವಕ್ಕೆ ಸಾರಿದ, ಮಾದರಿಯನ್ನಾಗಿಸಿದ ತ್ಯಾಗದ ಧರ್ಮ ಹಿಂದೂ ಧರ್ಮ ಮಾತ್ರವೇ ಆಗಿದೆ. ಪಾಶ್ಚಾತ್ಯರ ಭೋಗ ಹಾಗೂ ಮರುಭೂಮಿಯ ಕ್ರೌರ್ಯ ಮತಗಳು ಪ್ರಕೃತಿಯ ಭೋಗ ಜೀವನವನ್ನು ಸಾರಿದೆ. ಆದರೆ ಹಿಂದೂ ಧರ್ಮ ಮಾತ್ರ ಮಾನವನಿಗೆ ತ್ಯಾಗ ಜೀವನವನ್ನು ಶ್ರೇಷ್ಠ ಎಂದು ಬೋಧಿಸಿದೆ. ಭೋಗದಿಂದ ಜೀವಿ ಅದಃಪತನವನ್ನು ಹೊಂದುತ್ತಾನೆ ತ್ಯಾಗ ಮಾರ್ಗದಿಂದ ಮುಕ್ತಿಯನ್ನು ಹೊಂದುತ್ತಾನೆ ಎಂದು ಹಿಂದೂ ಧರ್ಮ ಪ್ರಬಲವಾಗಿ ಪ್ರತಿಪಾದಿಸುತ್ತದೆ. ಬಾಹ್ಯ ಸುಖಗಳಿಗೆ ಭೌತಿಕ ವಾದಕ್ಕೆ ಹಿಂದೂಗಳು ಮಹತ್ವ ಕೊಟ್ಟಿಲ್ಲ ನಮ್ಮ ಋಷಿಮುನಿಗಳು ಸಂಪತ್ತನ್ನು ಬಯಸದೆ ಭೋಗಿಸದೆ ಅಂತ್ಯಕಾಲವನ್ನು ವನಗಳಲ್ಲಿ ಆಶ್ರಮಗಳಲ್ಲಿ ಬದುಕಿ ಮಾದರಿಯಾಗಿದ್ದರು. ಬ್ರಹ್ಮಚಾರಿ ಗೃಹಸ್ಥ ವಾನಪ್ರಸ್ತ ಹಾಗೂ ಸನ್ಯಾಸ ಎಂಬ ನಾಲ್ಕು ಆಶ್ರಮಧರ್ಮವನ್ನು ತಿಳಿಸಿದ್ದಾರೆ. ಜ್ಞಾನದ ಉನ್ನತಿಯನ್ನು ಸಾಧಿಸುತ್ತಾಬಂದಂತೆ ಹಿಂಸೆಯನ್ನು ತ್ಯಜಿಸಿ ಸಸ್ಯಾಹಾರ ಶ್ರೇಷ್ಠ ಎಂದು ಸಾರಿದರು. ತಿನ್ನುವ ಆಹಾರ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಶೋಧಿಸಿ ಸಾತ್ವಿಕ ಜೀವನಕ್ಕೆ ಸಾತ್ವಿಕ ಆಹಾರವನ್ನೇ ಸೂಚಿಸಿದ್ದಾರೆ. ಜಿಹ್ವಾಚಾಪಲ್ಯವನ್ನು ನಿಗ್ರಹಿಸಿಕೊಂಡು ಸಾತ್ವಿಕಬದುಕನ್ನು ಬದುಕಲು ಮಾರ್ಗದರ್ಷನ ಮಾಡಿದ್ದಾರೆ. ಭೌತಿಕ ಭೋಗಗಳನ್ನು ತ್ಯಜಿಸಿ ಮನೋನಿಗ್ರಹ ಮಾಡಲು ಬೋಧಿಸಿ ಅದಕ್ಕೆ ಯೋಗಮಾರ್ಗವನ್ನು ಜಗತ್ತಿಗೆ ನೀಡಿದ್ದಾರೆ. ಅವರ ಈ ಮಾರ್ಗ ಎಷ್ಟು ಯೋಗ್ಯ ಹಾಗೂ ಆಧುನಿಕ ಜಗತ್ತಿನಲ್ಲಿ ಎಷ್ಟು ಅವಶ್ಯ ಎನ್ನುವುದು ಇಂದು ಜಗತ್ತಿನ ಅರಿವಿಗೆ ಬರುತ್ತಿದ್ದು ನರೇಂದ್ರ ಮೋದಿಯವರ ಪ್ರಯತ್ನದಿಂದ ವಿಶ್ವಸಂಸ್ಥೆ ಈಗ ಜೂನ್ 21 ನ್ನು ಅಂತಾರಾಷ್ಟ್ರಿಯ ಯೋಗ ದಿನವೆಂದು ಘೋಷಿಸಿದೆ ಹಾಗೂ 180 ದೇಶಗಳು ಇದನ್ನು ಅನುಮೋದಿಸಿದೆ. ಮನಸ್ಸು ಬುದ್ದಿ ಹಾಗೂ ದೇಹದ ಮೇಲಿನ ಸಮತೋಲಿತ ನಿಯಂತ್ರಣ ಹಾಗೂ ನಿಗ್ರವೇ ಯೋಗದ ತಾಕತ್ತು.
ತಾನು ಬದುಕಲು ಉಪಯುಕ್ತವಾದ ಪ್ರತಿಯೊಂದು ವಸ್ತುವನ್ನೂ ಕೃತಜ್ಞತೆಯಿಂದ ನೋಡುವುದು ದೈವ ಭಾವದಿಂದ ಪೂಜಿಸುವುದು ಗೌರವಿಸುವುದು ಹಾಗೂ ಜೀವನ ಪರ್ಯಂತ ಉಪಕಾರಮಾಡಿದವರಿಗೆ ಕೃತಜ್ಞರಾಗಿರುವುದು ಹಿಂದೂಗಳ ಶ್ರೇಷ್ಠ ಗುಣವಾಗಿದೆ, ಊಟಮಾಡುವ ಮೊದಲು ಅಡಿಗೆಯನ್ನು ದೇವರಿಗೆ ಅರ್ಪಿಸುತ್ತೇವೆ ಅನ್ನವನ್ನು ಪೂಜಿಸುತ್ತೇವೆ, ಅನ್ನ ಬೇಯಿಸಲು ನೆರವಾಗುವ ಅಗ್ನಿಯನ್ನು ಪೂಜಿಸುತ್ತೇವೆ ಜೀವನಾವಶ್ಯಕವಾದ ಗಾಳಿ ನೀರು ಭೂಮಿ ಎಲ್ಲವನ್ನೂ ಪೂಜಿಸುತ್ತೇವೆ, ಬೆಳೆದ ಧಾನ್ಯಗಳನ್ನು ಪೂಜಿಸುತ್ತೇವೆ. ಜ್ಞಾನ ನೀಡುವ ಪುಸ್ತಕವನ್ನು ಪೂಜಿಸುತ್ತೇವೆ, ರಕ್ಷಣೆಮಾಡುವ ಆಯುಧಗಳನ್ನು ಪೂಜಿಸುತ್ತೇವೆ, ವಾಹನವನ್ನೂ ಪೂಜೆಮಾಡುತ್ತೇವೆ, ಉಪಕಾರ ಮಾಡುವ ಪ್ರಾಣಿಗಳನ್ನು ಕೃತಜ್ಞತೆಯಿಂದ ನೋಡುತ್ತೇವೆ, ಹಾಲೆರೆದು ಸಾಕುವ ಹಸುವನ್ನು ತಾಯಿಯಂತೆ ಗೌರವಿಸುತ್ತೇವೆ, ಬದುಕಲು ಅಗತ್ಯವಿರುವ ಭೂಮಿ,ಮರಗಿಡ, ವನಸ್ಪತಿ, ಎಲ್ಲದರಲ್ಲಿಯೂ ಭಗವಂತನ ಅಸ್ತಿತ್ವ ಸನ್ನಿಧಾನವನ್ನು ಕಾಣುವ ಕೃತಜ್ಞತಾಭಾವದಿಂದ ಸ್ವೀಕರಿಸುವ ಆರಾಧಿಸುವ ಗೌರವಿಸುವ ಮಹಾನ್ ಧರ್ಮ ಹಿಂದೂ ಧರ್ಮವಾಗಿದೆ. ಹಾಗೂ ಹಿಂದೂ ಜೀವನ ಪದ್ದತಿಯಾಗಿದೆ. ಮಾತೃದೇವೋ ಭವ, ಪಿತೃದೇವೋ ಭವ, ಅಥಿತಿ ದೇವೋ ಭವ, ಆಚಾರ್ಯದೇವೋ ಭವ, ಎಂದು ಕಲಿಸಿದ್ದು ಧರ್ಮ ಹಿಂದೂ ಧರ್ಮವಾಗಿದೆ. ಕಲೆ, ಸಂಸ್ಕೃತಿ, ಜ್ಞಾನ, ವಿಜ್ಞಾನ, ,ವಿದ್ಯೆ, ವೈದ್ಯ , ಅಸ್ತ್ರ , ಶಸ್ತ್ರ ,ಖಗೋಳ, ಭೂಗೋಳ, ಜ್ಯೋತಿಷ್ಯ, ಸಾಹಿತ್ಯ, ಇತಿಹಾಸ, ಸತ್ಯ, ಶಾಂತಿ, ಶೌರ್ಯ ,ತ್ಯಾಗ , ಸಂಯಮ, ಶುಚಿತ್ವ, ಸಭ್ಯತೆ, ಶೀಲ, ಶಿಲ್ಪ, ಸಂಗೀತ, ಸಂಪತ್ತು ,ಶಿಸ್ತು, ಶಿಕ್ಷಣ, ಶಿಶ್ಟಾಚಾರ, ಎಲ್ಲದರಲ್ಲಿಯೂ ಅತ್ಯುನ್ನತ ಸ್ಥಿತಿಯಲ್ಲಿ ಹತ್ತಾರು ಸಾವಿರ ವರುಷಗಳ ಹಿಂದೆಯೇ ಬದುಕಿ ಜಗತ್ತಿಗೆ ತೋರಿಸಿದ ಜನ ಹಿಂದೂಗಳಾಗಿದ್ದಾರೆ. ನಮ್ಮ ಋಷಿಮುನಿಗಳಾಗಿದ್ದಾರೆ,
ಭಗವಂತನ ಸೃಷ್ಠಿಯನ್ನು ಅಂದರೆ ಪ್ರಕೃತಿಯನ್ನು ಯಾರು ಪ್ರೀತಿಸುತ್ತಾನೋ ಯಾರು ಗೌರವಿಸುತ್ತಾನೋ ಯಾರು ಪೂಜ್ಯಭಾವದಿಂದ ಆರಾಧಿಸುತ್ತಾನೋ ಯಾರು ತ್ಯಾಗಕ್ಕೆ ಮಹತ್ವ ಕೊಡುತ್ತಾನೋ ಯಾರು ಉಪಕಾರಕ್ಕೆ ಕೃತಜ್ಞತೆ ತೋರಿಸುತ್ತಾನೋ ಯಾರು ಸರ್ವ ಚರಾಚರಗಳ ಬದುಕಿಗೂ ಅವಕಾಶ ಕಲ್ಪಿಸಿಕೊಡುತ್ತಾನೋ ಯಾರು ಮನೋನಿಗ್ರಹ ಇಂದ್ರಿಯ ನಿಗ್ರಹದ ಸಾಧನೆಯಲ್ಲಿ ಕಾರ್ಯಪ್ರವೃತ್ತನಾಗುತ್ತಾನೋ ಯಾರು ದೇವರನ್ನು ನಂಬುತ್ತಾನೋ ಹಿರಿಯರನ್ನು ಗೌರವಿಸುತ್ತಾನೋ ಸ್ವಾಭಿಮಾನಿಯೂ ಶೌರ್ಯವಂತನೂ ಸತ್ಯವಂತನೂ ಕ್ಷಮಾಶೀಲನೂ ಆಗಿರುತ್ತಾನೋ ಯಾರು ಭಾರತದ ನೆಲದ ಸಂಸ್ಕೃತಿಯನ್ನು ಗೌರವಿಸುತ್ತಾನೋ ಅಂತಹವನನ್ನು ನಿಸ್ಸಂಶಯವಾಗಿ ಹಿಂದು ಅಥವಾ ಸನಾತನ ಧರ್ಮಾನುಯಾಯಿ ಎನ್ನಬಹುದು. ಪರಿಪೂರ್ಣನಾದ ಹಿಂದುವು ಕಾಯಾ ಮನಸಾ ವಾಚಾ ಪರಿಶುದ್ಧನಾಗಿರುತ್ತಾನೆ.
ಜಡದಲ್ಲಿಯೂ ದೈವತ್ವವನ್ನು ಗಂಡು ಪೂಜಿಸುವವನು ಗೌರವಿಸುವವನು ಪ್ರಾಣಿಗಳನ್ನು ಅದಕ್ಕಿಂತಲೂಹೆಚ್ಚು ಪ್ರೀತಿಸುತ್ತಾನೆ ಜೀವಿಗಳನ್ನೇ ಪ್ರೀತಿಸಿ ಪೂಜಿಸುವವನು ಮನುಷ್ಯನನ್ನು ಎಂದೂ ದ್ವೇಷಿಸಲಾರನು ಹಿಂದೂ ಗಳ ಈ ವಿಶಾಲ ಮನಸ್ಥಿತಿಯ ದುರುಪಯೋಗಪಡೆದು ಅನಿಷ್ಠಮತಗಳು ಅಪ್ರಾಮಾಣಿಕ ಬುದ್ದಿಜೀವಿಗಳೊಂದಿಗೆ ಸೇರಿಕೊಂಡು ಈ ನೆಲದಲ್ಲಿ ಅನಾಚಾರ ಮಾಡುತ್ತಿವೆ. ಅಜ್ಞಾನಬಿತ್ತುತ್ತಿವೆ. ನಮ್ಮನ್ನು ಅಜ್ಞಾನದಿಂದ ಮೇಲೆತ್ತಲು ಈದೇಶದಲ್ಲಿ ಅನೇಕ ಪುಣ್ಯಪುರುಷರ ಅವತಾರವಾಗಿದೆ. ಭಗವಾನ್ ಶ್ರೀಕೃಷ್ಣನ ಅವತಾರವಾಗಿದೆ ದುಷ್ಟಚಿಂತನೆಯನ್ನು ನಾಶಮಾಡುವ ಸುಜ್ಞಾನವನ್ನು ಜಗತ್ತಿಗೆ ಹೇಳುವ ಕಾಲಸನ್ನಿಹಿತವಾಗಿದೆ ಹಿಂದೂಗಳೇ ಸಿದ್ಧರಾಗಿ. ದುಷ್ಠರು ದಾಯಾದಿಗಳಾಗಿದ್ದರೂ ಅವರನ್ನು ನಾಶಮಾಡಬೇಕೆಂಬುದು ಕೃಷ್ಣನ ಉಪದೇಶವಾಗಿದೆ. ಈ ಮಾತೇ ಮಹಾಭಾರತ ಯುದ್ಧದ ಮುನ್ನುಡಿಯೂ ಭಗವದ್ಗೀತೆಯ ಪ್ರೇರಣೆಯೂ ಆಗಿದೆ. ಇದು ಹಿಂದುಗಳಿಗೆ ಸರಿಯಾಗಿ ಆರ್ಥವಾಗಬೇಕಿದೆ ದುರ್ಜನ ವಿರುದ್ಧ ಹೋರಾಡಲು ನಮಗೆ ಪ್ರೇರಣೆಯಾಗಲಿ. ಶಿಷ್ಟರಕ್ಷಣ ಹಾಗೂ ದುಷ್ಟ ಶಿಕ್ಷಣ ಪ್ರತಿಯೊಬ್ಬ ಹಿಂದೂವಿನ ಅಂತಃಕರಣದ ಧ್ವನಿಯಾಗಲಿ ಪ್ರತಿಜ್ಞೆಯಾಗಲಿ ಹಿಂದೂ ಸಂಸ್ಕೃತಿಯನ್ನು ವಿಶ್ವವ್ಯಾಪಿಯಾಗಿಸಿ ವಿಶ್ವಶಾಂತಿ ಸ್ಥಾಪಿಸೋಣ ಹಾಗೂ ಭಾರತವನ್ನು ವಿಶ್ವಗುರುವಾಗಿಸೋಣ.
– ಶ್ರೀಜಿ